ಸಂಗೀತ ಪ್ರಿಯರ ಆಕರ್ಷಿಸಿದ ‘ಸಾಂಸ್ಕøತಿಕ ಸೌರಭ’
ಮೈಸೂರು

ಸಂಗೀತ ಪ್ರಿಯರ ಆಕರ್ಷಿಸಿದ ‘ಸಾಂಸ್ಕøತಿಕ ಸೌರಭ’

January 10, 2019

ಮೈಸೂರು: ಮಾಗಿ ಮಾಸದ ಸುಂದರ ಇಳಿ ಸಂಜೆಯಲಿ ಸಿಂಗಾರ ಗೊಂಡಿದ್ದ ವೇದಿಕೆಯಲ್ಲಿ ಜನಪ್ರಿಯ ತಾಳವಾದ್ಯ ಸಂಗೀತ, ಹಿಂದೂಸ್ತಾನಿ ಗಜಲ್ ಗಾಯನ, ಪೂಜಾ ಕುಣಿತ, ನಗಾರಿ ವಾದನ, ಹಳೆಯ ಸುಮಧುರ ಕನ್ನಡ ಚಿತ್ರಗೀತೆಗಳ ಝೇಂಕಾರ ಕಲಾರಸಿಕರ ಮನಗೆದ್ದಿತು.

ಮೈಸೂರಿನ ಗಾಂಧಿನಗರದ ಬಸ್ ನಿಲ್ದಾಣ ಮೈದಾನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಯೋಜಿಸಿದ್ದ ‘ಸಾಂಸ್ಕøತಿಕ ಸೌರಭ’ ಕಾರ್ಯಕ್ರಮದಲ್ಲಿ ಗಾಯನ, ಕುಣಿತ, ವಾದನ, ನೃತ್ಯಗಳ ಪ್ರದರ್ಶನ ಸಂಗೀತ ಪ್ರಿಯರ ಮನತಣಿಸಿತು.

ಮೊದಲಿಗೆ ವೇದಿಕೆ ಹಂಚಿಕೊಂಡ ಕರ್ನಾಟಕ ಜಾನಪದ ಪರಿಷತ್ತಿನ ಪುಟ್ಟೆ ಗೌಡ ಮತ್ತು ತಂಡ ‘ಶಿವ ಭಜನೆ ಮಾಡೊ ಶಿವ ಶರಣರ ಕೊಂಡಾಡೊ’ ಜಾನಪದ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ‘ಮುಂಜಾನೆ ಎದ್ದು ಬಾ ಗೋವಿಂದ ಎನ್ನಿ’, ‘ಮುದ್ದು ಭೈರವ ಸ್ವಾಮಿ’, ‘ನಾಚ್ ನಾಚ್‍ಕೆ ಅಂತಾ ಕುಂತವನೆ ನನ್ ಅಳಿಯ’ ಹಾಡುಗಳನ್ನು ಹಾಡಿದರೆ, ಹಿಂದೂ ಸ್ತಾನಿ ಗಜಲ್ ಗಾಯಕ ಜಿಹಿದುಲ್ಲಾ ಖಾನ್ ‘ಚಂದ್ರ ಬಗಿನಿ ಮೆಲ್ ಹಣ್ಣಾಗಿದೆ ಹಿಂದೂ ಮುಸಿಲಿಂ ಬಾಯ್ ಬಾಯ್ ಒಂದಾಗೋಣ ಬನ್ನಿ’, ‘ಗುರು ಸೇವೆಯ ಮಾಡೋ ಜೀವವೆ’, ‘ಹುಟ್ಟುವ ಜೀವನ ಸಾಯುವ ಪಯಣ’ ಹಾಡನ್ನು ಹಾಡಿ ಕಲಾಭಿಮಾನಿಗಳನ್ನು ರಂಜಿಸಿದರು.

ಗಾಂಧಿನಗರದ ಚಕ್ರಪಾಣಿ ಮತ್ತು ತಂಡದ ನಗಾರಿ ವಾದನ, ಬನ್ನೂರಿನ ಕರಿ ಯಪ್ಪ ಮತ್ತು ತಂಡದ ಪೂಜಾ ಕುಣಿತಕ್ಕೆ ನೆರೆದಿದ್ದವರು ಕುಣಿದು ಕುಪ್ಪಳಿಸಿದರು. ಮೈಸೂರಿನ ಲಯವಿದ್ಯಾ ಪ್ರತಿಷ್ಠಾನದ ಹೆಚ್.ಎಲ್. ಶಿವಶಂಕರ ಸ್ವಾಮಿ ಮತ್ತು ತಂಡದ ವಿಶೇಷ ತಾಳ ವಾದ್ಯ ಕೇಳುಗರಿಗೆ ಕಿವಿ ಇಂಪಾಗಿರಿಸಿ ದರೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಭಾಗವತ ಹೆಚ್.ಸಿ.ತಮ್ಮಣ್ಣಾಚಾರ್ ಮತ್ತು ತಂಡ ಸತ್ಯಹರಿಶ್ಚಂದ್ರ ಕಥೆಯ ಸೂತ್ರದ ಗೊಂಬೆ ಪ್ರದರ್ಶನ ಎಲ್ಲರನ್ನು ನಿಬ್ಬೆರÀಗಾ ಗುವಂತೆ ಮಾಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ, ಕಲೆಯು ಆದಿಕಾಲದಿಂದಲೂ ಪ್ರಕೃತಿ ಮಾನವನಿಗೆ ನೀಡಿರುವ ಶಕ್ತಿಯಾಗಿದೆ. ಮನುಷ್ಯ ಕಲಾಜೀವಿ, ಕಲಾ ಆರಾಧಕ ನಾಗಿ ಬದುಕುತ್ತಿದ್ದಾನೆ. ಜೀವನವೆಲ್ಲಾ ಕಲೆ ಯಾಗಿದ್ದು, ಇತಿಮಿತಿ ಇಲ್ಲದೆ ನಿರಂತರ ವಾಗಿ ಕೇಳಿದರೂ ಬಯಕೆ ತಿರುವುದಿಲ್ಲ ಎಂದು ಅಭಿವ್ಯಕ್ತಪಡಿಸಿದರು.

ಮನುಷ್ಯ ಸಾವಿನ ಹೊತ್ತಿನಲ್ಲಿಯೂ ಸಂಗೀತವನ್ನು ಕೇಳಬೇಕು ಎಂದು ಬಯ ಸುತ್ತಾನೆಂದರೆ ಸಂಗೀತಕ್ಕಿರುವ ಶಕ್ತಿ ಎಷ್ಟೆಂದು ಆಲೋಚಿಸಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಚಳಿಯೆನ್ನದೆ ರಾತ್ರಿಯೆಲ್ಲಾ ಇಂತಹ ಸಂಗೀತ ಕಛೇರಿಗಳನ್ನು ಕೇಳುತ್ತಾರೆ. ಆದರೆ, ನಗರ ಪ್ರದೇಶಗಳಲ್ಲಿ ಆಧುನಿಕತೆ ಯಿಂದ ಕಲೆಯನ್ನು ಗೊಬ್ಬರದಂತೆ ನೋಡು ತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮನುಷ್ಯನನ್ನು ಮನುಷ್ಯನಾಗಿಸಲು ಕಲೆ ಬೇಕಾಗಿದೆ. ಆದ್ದರಿಂದ ಈ ನೆಲದ ಕಲೆ ಸಾಹಿತ್ಯವನ್ನು ಉಳಿಸಿ-ಬೆಳೆಸಲು ಎಲ್ಲರೂ ಒಂದಾಗಬೇಕು ಎಂದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಚನ್ನಪ್ಪ, ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವ ಸ್ವಾಮಿ, ನಗರ ಪಾಲಿಕೆ ಸದಸ್ಯೆ ಡಾ.ಅಶ್ವಿನಿ ಶರತ್, ನಗರ ಪಾಲಿಕೆ ಮಾಜಿ ಸದಸ್ಯ ಉದಯ್‍ಕುಮಾರ್, ಆರ್.ರಂಗರಾಜು, ಸಂಜೀವಯ್ಯ, ಶರತ್, ನಾಗರಾಜು, ವೆಂಕಟೇಶ್, ಗಣೇಶ್, ಸುಮಾರಾಜಕುಮಾರ್ ಉಪಸ್ಥಿತರಿದ್ದರು.

Translate »