ಹಣದಾಸೆಗೆ ಕಿಡ್ನಿ ಮಾರಲು ಯತ್ನಿಸಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ
ಮಂಡ್ಯ

ಹಣದಾಸೆಗೆ ಕಿಡ್ನಿ ಮಾರಲು ಯತ್ನಿಸಿದ್ದ ಮಹಿಳೆ ಕೆರೆಗೆ ಹಾರಿ ಆತ್ಮಹತ್ಯೆ

January 10, 2019

ಮಳವಳ್ಳಿ: ಹಣದ ಆಸೆಗೆ ಕಿಡ್ನಿ ಮಾರಲು ಮಧ್ಯವರ್ತಿಗಳಿಗೆ ಕಮಿಷನ್ ನೀಡಿ ಮೋಸ ಹೋದ ಮಹಿಳೆಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಶಂಕಾಸ್ಪದ ಘಟನೆ ನಡೆದಿದೆ.

ಪಟ್ಟಣದ ಗಂಗಾಮತ ಬೀದಿಯ ವೆಂಕಟಮ್ಮ(48) ಆತ್ಮಹತ್ಯೆಗೆ ಶರಣಾದ ಮಹಿಳೆ. ಇವರು ಸೊಪ್ಪು ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿನ ತೊಂದರೆಗಳನ್ನೆಲ್ಲಾ ತೀರಿಸಿಕೊಳ್ಳಲು ಕಿಡ್ನಿ ಮಾರುವ ನಿರ್ಧಾರಕ್ಕೆ ಬಂದಿದ್ದರು ಎನ್ನ ಲಾಗಿದೆ. ಪರಿಚಯಸ್ಥೆ ಮಹಿಳೆಯೊಬ್ಬರೂ ಕಿಡ್ನಿ ಮಾರಲು ಮುಂದಾದರೇ 30 ಲಕ್ಷ ರೂ.ಗಳನ್ನು ಕೊಡಿಸುವುದಾಗಿ ಪುಸ ಲಾಯಿಸಿ ವೆಂಕಟಮ್ಮರಿಂದ ಕಮಿಷನ್ ಹಣವಾಗಿ 3 ಲಕ್ಷ ರೂ.ಗಳನ್ನು ಪಡೆದಿದ್ದರು. ಇದಕ್ಕಾಗಿ ವೆಂಕಟಮ್ಮ ಸಾಲ ಮಾಡಿ ಕಮಿಷನ್ ನೀಡಿದ್ದರು ಎನ್ನಲಾಗಿದೆ. ಕಿಡ್ನಿ ಮಾರಾಟದ ಮಧ್ಯವರ್ತಿ ಮಹಿಳೆ ವೆಂಕಟಮ್ಮ ಅವರನ್ನು ವಂಚಿಸಿದ ಕಾರಣ ಮಾಡಿದ್ದ ಸಾಲ ಬಡ್ಡಿ ಏರಿಕೆಯಿಂದ ಬೇಸತ್ತ ವೆಂಕಟಮ್ಮ ಮಳವಳ್ಳಿ ದೊಡ್ಡ ಕೆರೆಗೆ ಬಿದ್ದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅತ್ಮಹತ್ಯೆಗೂ ಮುನ್ನ ಎರಡು ದಿನದ ಹಿಂದೆ ಬೆಂಗಳೂರಿನಲ್ಲಿರುವ ತನ್ನ ಸಹೋ ದರನ ಬಳಿ ವೆಂಕಟಮ್ಮ ಈ ವಿಚಾರ ಹೇಳಿಕೊಂಡಿದ್ದು, ಸಹೋದರ ಸಹ ಲಕ್ಷ ರೂ.ಗಳನ್ನು ನೀಡಿ, ಸಂತೈಸಿದ್ದ. ಮಳ ವಳ್ಳಿಗೆ ಬಂದು ಮತ್ತಷ್ಟು ನೆರವು ನೀಡುವು ದಾಗಿ ಭರವಸೆ ನೀಡಿದ್ದರು. ಆದರೆ ಮಾನ ಸಿಕವಾಗಿ ನೊಂದ ವೆಂಕಟಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಗಂಗಾಮತಸ್ಥರ ಬೀದಿಯ ಶಿವ ಕುಮಾರ್, ಮಳವಳ್ಳಿ ಪಟ್ಟಣದ ಪೊಲೀಸ ರಿಗೆ ಪಟ್ಟಣದ ದೊಡ್ಡಕೆರೆಯಲ್ಲಿ ಮಹಿಳೆಯ ಶವ ಒಂದು ತೇಲುತ್ತಿದೆ ಎಂದು ದೂರು ನೀಡಿದ್ದ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವ ಹೊರ ತೆಗೆದಾಗ ಈ ಮಹಿಳೆ ಗಂಗಾಮತ ಬೀದಿಯ ವೆಂಕಟಮ್ಮ ಎಂದು ತಿಳಿದಿದೆ. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Translate »