ಜಿಲ್ಲೆಯಲ್ಲಿ ಭಾರತ್ ಬಂದ್ ವಿಫಲ
ಮಂಡ್ಯ

ಜಿಲ್ಲೆಯಲ್ಲಿ ಭಾರತ್ ಬಂದ್ ವಿಫಲ

January 10, 2019

ಮಂಡ್ಯ: ಕೇಂದ್ರದ ಕಾರ್ಮಿಕ ನೀತಿಗಳು, ರಸ್ತೆ ಸುರಕ್ಷತಾ ಕಾಯ್ದೆ ಗಳನ್ನು ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ 2ನೇ ದಿನದ ಭಾರತ್ ಬಂದ್ ಜಿಲ್ಲೆಯ ವಿಫಲವಾಯಿತು.

ನಗರದ ಪೇಟಿ ಬೀದಿ, ಜೈನರ ಬೀದಿ, ವಿ.ವಿ. ರಸ್ತೆ, ಆರ್.ಪಿ. ರಸ್ತೆ, ಗುತ್ತಲು ರಸ್ತೆ, ನೂರಡಿ ರಸ್ತೆ ಸೇರಿದಂತೆ ನಗರ ಮತ್ತು ಜಿಲ್ಲಾದ್ಯಂತ ಎಲ್ಲಾ ವರ್ಗದ ವ್ಯಾಪಾರಿ ಗಳು ತಮ್ಮ ಅಂಗಡಿ-ಮುಂಗಟ್ಟು ಗಳನ್ನು ಎಂದಿನಂತೆ ತೆರೆದು ವ್ಯಾಪಾರ ನಡೆಸಿದರು. 
ಎಂದಿನಂತೆ ಸಾರಿಗೆ ಬಸ್ ಸಂಚಾರ: ಭಾರತ್ ಬಂದ್ ಹಿನ್ನೆಲೆಯಲ್ಲಿ ಮುಂಜಾ ಗ್ರತಾ ಕ್ರಮವಾಗಿ ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳ ಸಂಚಾರ ವನ್ನು ರದ್ದುಗೊಳಿಸಿ, ನಂತರ ನಿಧಾನ ವಾಗಿ ಸಂಚಾರ ಆರಂಭಿಸಲಾಯಿತು. ಆದರೆ ಬುಧವಾರ ಮಾತ್ರ ಸಂಚಾರ ಎಂದಿನಂತಿ ದ್ದರೂ, ಬಸ್‍ಗಳ ಸಂಖ್ಯೆ ವಿರಳವಾಗಿತ್ತು. 

ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: 2ನೇ ದಿನದ ಭಾರತ್ ಬಂದ್ ಇದ್ದರೂ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿರಲಿಲ್ಲ. ಎಂದಿನಂತೆ ಶಾಲಾ-ಕಾಲೇಜುಗಳು ನಡೆದ ವಾದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದು ಕಂಡುಬಂತು. 

ಉಳಿದಂತೆ ಚಿತ್ರಮಂದಿರಗಳು, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ಕಾರ್ಯ ನಿರ್ವಹಿ ಸಿದವು. ಅಂಚೆ ಕಚೇರಿ, ಬ್ಯಾಂಕ್‍ಗಳು ಬಂದ್‍ಗೆ ಬೆಂಬಲ ನೀಡಿದ್ದರಿಂದಾಗಿ ಬ್ಯಾಂಕ್ ಗಳು ಮುಚ್ಚಲ್ಪಟ್ಟಿದ್ದರೂ. ಸರ್ಕಾರಿ ಕಚೇರಿ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. 
ಬಿಗಿ ಬಂದೋಬಸ್ತ್: ಭಾರತ್ ಬಂದ್ ಕಾರಣ ನಗರ ಸೇರಿದಂತೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರದ ಗುತ್ತಲು ರಸ್ತೆ, ಮಹಾವೀರ ವೃತ್ತ, ಜೆ.ಸಿ. ವೃತ್ತ, ಹೊಳಲು ವೃತ್ತ ಸೇರಿದಂತೆ ಹಲವು ಆಯಕಟ್ಟಿನ ವೃತ್ತ ಮತ್ತು ಪ್ರದೇಶಗಳಲ್ಲಿ ಹೆಚ್ಚಿನ ಪೆÇಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

Translate »