ಮೈಸೂರು: ರಂಗಭೂಮಿ ಸಮಾಜವನ್ನು ತಿದ್ದುವುದರ ಜೊತೆಗೆ ಬದಲಾವಣೆ ತರುತ್ತದೆ ಎಂದು ಸಂತ ಶಿಶುನಾಳ ಶರೀಫರ ಹಾಗೂ ಕಳಸದ ಗುರು ಗೋವಿಂದ ಭಟ್ಟರ ಪ್ರತಿಷ್ಠಾನ ಸಂಸ್ಥಾಪಕ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಅಭಿಪ್ರಾಯಪಟ್ಟರು.
ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕನ್ನಡ ಶಾಲೆಯ ಬೇಂದ್ರೆ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಅಪ್ರವರಂಭೆ ವತಿಯಿಂದ ಏರ್ಪಡಿಸಿದ್ದ ಬೇರು-ಚಿಗುರು ರಂಗಸಂಭ್ರಮ ನಾಟಕೋ ತ್ಸವ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ರಂಗಕಲೆ ಮಕ್ಕಳಲ್ಲಿ ಸೃಜನಾತ್ಮಕ ಪ್ರತಿಭೆಯೊಂದಿಗೆ ಸಮಾಜ ದಲ್ಲಿ ಒಡನಾಟವನ್ನು ಪರಿಚಯಿಸಿ, ಉತ್ತಮ ವ್ಯಕ್ತಿಗಳಾಗಿ ರೂಪಿಸಿ ಅವರ ಬದುಕಿನಲ್ಲಿ ಹೊಸತನ ಬೆಳೆಸುತ್ತದೆ ಎಂದು ಹೇಳಿದರು.
ಹಳೆಯ ಬೇರೆ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತ, ಹೊಸ ಚಿಗುರು ಬರುತ್ತಿ ದ್ದಂತೆ, ಅದನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತದೆ. ಮನುಷ್ಯ ಕೂಡ ತನ್ನ ಸಂಸ್ಕøತಿ ಹಾಗೂ ಕಲೆಗಳನ್ನು ಗಟ್ಟಿಮಾಡಿಕೊಳ್ಳುತ್ತಾ, ಯುವಪೀಳಿಗೆ ಉಳಿಸಿ ಬೆಳೆಸುವಂತೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಎ.ವಿಶ್ವನಾಥ್ ಮತ್ತು ಅಸೋಸಿಯೇಟ್ಸ್‍ನ ಎ.ವಿಶ್ವನಾಥ್ ಮಾತನಾಡಿ, ಶಿಕ್ಷಣ ಅಥವಾ ಕಲೆಗಳ ಕಲಿಕೆಯನ್ನು ಇಷ್ಟಪಟ್ಟು ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಿ, ತಮ್ಮ ಮಕ್ಕಳನ್ನು ನಿಂದಿಸಬೇಡಿ. ಒಳ್ಳೆಯ ಗುಣ ಗಳ ಮೂಲಕ ಅವರನ್ನು ಸಮಾಜದಲ್ಲಿ ಶಕ್ತಿಯುತ ವ್ಯಕ್ತಿಯಾಗಿ ರೂಪಿಸಿ ಎಂದು ಸಲಹೆ ನೀಡಿದರು. ದಾಸ್ತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಡಿ.ತಿಮ್ಮಯ್ಯ ಮಾತನಾಡಿ, ಕಲೆ ಹಾಗೂ ಕಲಾವಿದರು ಉಳಿಯಬೇಕಾ ದರೆ ನಾವು ಇಷ್ಟ ಪಟ್ಟು ನಾಟಕಗಳನ್ನು ನೋಡಬೇಕು. ಕಲೆ ಹಾಗೂ ಕಲಾವಿದರು ಬೆಳೆದಷ್ಟು ಸಮಾಜಕ್ಕೆ ಉತ್ತಮ ಸೇವೆ ಸಿಗುತ್ತದೆ. ಸಮಾಜ ತಿದ್ದುವ ನಾಟಕಗ ಳಿಂದ ಜನರು ಪರಿವರ್ತನೆಯಾಗಿದ್ದಾರೆ ಎಂದರು.
ಇದೇ ವೇಳೆ ಹಿರಿಯ ರಂಗಕರ್ಮಿಗಳಾದ ಮೋಹನದಾಸ್, ಕೆ.ಜೆ.ನಾರಾಯಣಶೆಟ್ಟಿ, ಎಂ.ದ್ವಾರಕಾನಾಥ್, ಡಿ.ಕೃಷ್ಣಮೂರ್ತಿ, ಕೆ.ಎನ್. ಕೃಷ್ಣಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.