ಬೆಂಗಳೂರು: ಕಾರ್ಮಿಕ ಒಕ್ಕೂಟಗಳು ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿ ಸುತ್ತಿದೆ ಎಂದು ಖಂಡಿಸಿ ಕರೆ ನೀಡಿರುವ 48 ಗಂಟೆ ಗಳ ಭಾರತ ಬಂದ್‍ನ ಮೊದಲ ದಿನವಾದ ಇಂದು ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗಿಲ್ಲ.
ರಾಜಧಾನಿ ಸೇರಿದಂತೆ ರಾಜ್ಯದ ಯಾವುದೇ ನಗರ, ಪಟ್ಟಣ ಪ್ರದೇಶಗಳಲ್ಲಿ ಬಂದ್‍ಗೆ ಬೆಂಬಲ ದೊರೆಯ ಲಿಲ್ಲ. ಎಂದಿನಂತೆ ಜನಜೀವನ ಸಾಗಿತ್ತು, ಸಾರಿಗೆ ಸೇರಿದಂತೆ ರಾಜ್ಯ ಸರ್ಕಾರಿ ಸಂಸ್ಥೆಗಳ ಕಾರ್ಮಿಕ ಒಕ್ಕೂಟ ಗಳು ಮುಷ್ಕರದಲ್ಲಿ ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಬಂದ್ ವಿಫಲವಾಯಿತು. ಕೆಲವೆಡೆ ಕಾರ್ಮಿಕ ಸಂಘಟನೆಗಳಿಂದ ಬಲವಂತವಾಗಿ ಅಂಗಡಿಮುಂಗಟ್ಟು ಬಂದ್ ಮಾಡಿ ಸುವ ಪ್ರಯತ್ನ ನಡೆಯಿತು. ಅಲ್ಲದೇ ಸಂಘಟನೆಗಳ ಕಾರ್ಯಕರ್ತರು ಕೂಡು ರಸ್ತೆಗಳಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾ ಸಭೆಗಳನ್ನು ನಡೆಸಿದರು.
ಸಂಘಟನೆಗಳ ಕೂಗಿಗೆ ಬೆಂಬಲ ನೀಡದೆ ಆಟೋ, ಟ್ಯಾಕ್ಸಿ, ಸರಕು ಸಾಗಣೆ ವಾಹನಗಳು, ಸಣ್ಣ ಮತ್ತು ಬೃಹತ್ ಕೈಗಾರಿಕೆಗಳು, ವಾಣಿಜ್ಯ ಮಳಿಗೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಮುಂಜಾಗ್ರತಾ ಕ್ರಮವಾಗಿ ಕೆಲವು ಜಿಲ್ಲಾಧಿಕಾರಿಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ್ದರು, ವಿಶ್ವವಿದ್ಯಾಲಯಗಳು ಇಂದಿನ ಪರೀಕ್ಷೆ ಗಳನ್ನು ಮುಂದೂಡಿದ್ದವು. ನಾಳೆಗೆ ನಿಗದಿಯಾಗಿದ್ದ ಪರೀಕ್ಷೆಗಳನ್ನೂ ವಿವಿಗಳು ಮುಂದೂಡಿವೆ.
ಉಳಿದಂತೆ ಹೋಟೆಲ್‍ಗಳು, ಚಲನಚಿತ್ರ ಮಂದಿರ, ಒಂದೆರಡು ಬ್ಯಾಂಕ್‍ಗಳನ್ನು ಹೊರತುಪಡಿಸಿ ಉಳಿ ದೆಲ್ಲಾ ಬ್ಯಾಂಕ್‍ಗಳು ಕಾರ್ಯನಿರ್ವಹಿಸಿದವು.
ರಾಜ್ಯದ ಕೆಲವೆಡೆ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ದಲ್ಲಿ ವ್ಯತ್ಯಯವಾಗಿದ್ದರಿಂದ ಪ್ರಯಾಣಿಕರು ಪರ ದಾಡುವಂತಾಯಿತು. ಕೆಲವು ಖಾಸಗಿ ಬಸ್‍ಗಳು ಸಂಚರಿಸಿದವು, ಆಟೋ, ಟ್ಯಾಕ್ಸಿಗಳಿಗೆ ಪ್ರಯಾಣಿಕರ ಹೆಚ್ಚಿನ ಬೇಡಿಕೆ ಕಂಡುಬಂದಿತು. ನಾಳೆಯೂ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಬ್ಯಾಂಕ್, ವಿಮಾ ವಲಯ ಮತ್ತು ಅಂಚೆ ನೌಕರರು ಬಂದ್ ಬೆಂಬಲಿಸಿದ್ದಾರೆ.
ಎಐಟಿಯುಸಿ, ಸಿಐಟಿಯು, ಎಚ್‍ಎಂಎಸ್, ಎಐಯುಟಿಯುಸಿ, ಟಿಯುಸಿಸಿ, ಎಐಸಿಸಿಟಿಯು ಸೇರಿದಂತೆ 10 ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದವು.