ಮೈಸೂರು

ಯುಜಿಸಿ ವೇತನ ಶ್ರೇಣಿಗೆ ಆಗ್ರಹಿಸಿ ಮೈಸೂರು ವಿವಿ ನೌಕರರ ಪ್ರತಿಭಟನೆ
ಮೈಸೂರು

ಯುಜಿಸಿ ವೇತನ ಶ್ರೇಣಿಗೆ ಆಗ್ರಹಿಸಿ ಮೈಸೂರು ವಿವಿ ನೌಕರರ ಪ್ರತಿಭಟನೆ

January 9, 2019

ಮೈಸೂರು: ಯುಜಿಸಿ ವೇತನ ಶ್ರೇಣಿ ವಿಸ್ತರಣೆ, ಗುತ್ತಿಗೆ ಕಾರ್ಮಿ ಕರ ಖಾಯಂ ಸೇರಿದಂತೆ ವಿವಿಧ ಬೇಡಿಕೆ ಗಳ ಈಡೇರಿಕೆಗಾಗಿ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದ ಮುಂದೆ ಸಿ ಮತ್ತು ಡಿ ಗ್ರೂಪ್ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಿ ಮತ್ತು ಡಿ ಗ್ರೂಪ್ ನೌಕರರು ಹಾಗೂ ಸಂಚಿತ ವೇತನ, ಗುತ್ತಿಗೆ ಆಧಾರದ ನೌಕ ರರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿ ಶ್ರೇಯೋಭಿವೃದ್ಧಿ ಸೇರಿದಂತೆ ಎಲ್ಲಾ ವಿಷಯಗಳಲ್ಲಿಯೂ ಅಧ್ಯಾಪಕರು, ಎ ಮತ್ತು ಬಿ ದರ್ಜೆ ನೌಕರರಿಗೆ…

ವ್ಯಕ್ತಿ ಬ್ಯಾಂಕ್ ಖಾತೆಯಿಂದ 1.25 ಲಕ್ಷ ರೂ. ಹಣ ಎಗರಿಸಿದ್ದವನ ಸೆರೆ
ಮೈಸೂರು

ವ್ಯಕ್ತಿ ಬ್ಯಾಂಕ್ ಖಾತೆಯಿಂದ 1.25 ಲಕ್ಷ ರೂ. ಹಣ ಎಗರಿಸಿದ್ದವನ ಸೆರೆ

January 9, 2019

ಮೈಸೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 1,25,000 ರೂ. ನಗದು ಡ್ರಾ ಮಾಡಿ ತಲೆ ಮರೆಸಿಕೊಂಡಿದ್ದ ನಯವಂಚಕನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ವೆಸ್ಟ್ ಜಾಮ್‍ಪರಸನ್ ಜಿಲ್ಲೆ, ಅಸಾನ್ ಸೋಲ್ ನಗರದ ಯೋಗೇಂದ್ರ ಸಾಹ್ ಮಗ ಬ್ರಜ್ ಕಿಶೋರ್ ಪ್ರಸಾದ್(31) ಬಂಧಿತ ಆರೋಪಿ ಯಾಗಿದ್ದು, ಆತನಿಂದ 1,25,000 ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೂಲತಃ ವೆಸ್ಟ್‍ಜಾಮ್‍ಪರನ್ ಜಿಲ್ಲೆ, ಜಾನ್ಜಹರಿ ಗ್ರಾಮದವನಾದ ಬ್ರಜ್ ಕಿಶೋರ್ ಪ್ರಸಾದ್, 2018ರ ಅಕ್ಟೋಬರ್ 13ರಂದು ಮೈಸೂರಿನ ಎಂ.ಎಲ್. ಪರಶುರಾಮ್ ಎಂಬುವರ ಸ್ಟೇಟ್ ಬ್ಯಾಂಕ್…

ನಂಜನಗೂಡು ಪೂರ್ಣ ಬಂದ್
ಮೈಸೂರು

ನಂಜನಗೂಡು ಪೂರ್ಣ ಬಂದ್

January 9, 2019

ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಂಜನಗೂಡು: ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಾರತ್ ಬಂದ್ ಹಿನ್ನಲೆಯಲ್ಲಿ ಇಲ್ಲಿನ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿದರು. ಮೊದಲಿಗೆ ಇಲ್ಲಿನ ಕಲ್ಲಹಳ್ಳಿ ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳಿಂದ ಹೊರಟ ಸಾವಿರಾರು ಕಾರ್ಮಿಕರು ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ ರಸ್ತೆ ತಡೆ…

ಹುಣಸೂರಿನಲ್ಲಿ ಬಾಗಶಃ ಬಂದ್
ಮೈಸೂರು

ಹುಣಸೂರಿನಲ್ಲಿ ಬಾಗಶಃ ಬಂದ್

January 9, 2019

ಹುಣಸೂರು: ಸಿಪಿಐಎಂ, ರೈತ ಸಂಘ ಮತ್ತು ವಿವಿಧ ಕಾರ್ಮಿಕ ಸಂಘಟನೆಗಳು ಭಾರತ್ ಬಂದ್‍ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಬಂದ್ ವಾತಾವರಣ ಕಂಡು ಬಂದಿತು. ಸಾರಿಗೆ ಬಸ್ ಸಂಚರಿಸದೆ, ಶಾಲಾ ಕಾಲೇಜುಗಳು, ಬ್ಯಾಂಕ್, ಎಲ್‍ಐಸಿ, ಅಂಚೆ ಕಚೇರಿ, ಸಿನಿಮಾ ಮಂದಿರ ಸಹ ಬಂದ್ ಅಗಿದ್ದು, ಭಾರತ್ ಬಂದ್‍ಗೆ ಪೂರ್ಣ ಬೆಂಬಲ ವ್ಯಕ್ತವಾಗಿದೆ ಎಂದೆನಿಸಿತ್ತು. ಬೆಳಿಗ್ಗೆ 11 ಗಂಟೆ ವೇಳೆಗೆ ಹೋಟೆಲ್ ಮತ್ತು ಅಂಗಡಿಗಳು ಬಾಗಿಲು ತೆರೆದು ವಹಿವಾಟು ಪ್ರಾರಂಭಿಸಿದರೆ, ಕೆಲವು ಸಾರಿಗೆ ಬಸ್‍ಗಳು ಸಂಚಾರ ಪ್ರಾರಂಭಿಸಿದವು….

ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ
ಮೈಸೂರು

ನಾಯಕ ಸಮುದಾಯದ ಅಭಿವೃದ್ಧಿಯಲ್ಲಿ ದಿವಂಗತ ಚಿಕ್ಕಮಾದು ಅವರ ಕೊಡುಗೆ ಅಪಾರ

January 9, 2019

ಸಚಿವ ಸಾರಾ ಮಹೇಶ್ ಗುಣಗಾನ ಕೆ.ಆರ್.ನಗರ: ನಾಯಕ ಸಮುದಾಯದ ಸಂಘಟನೆ, ಹೋರಾಟ ಮತ್ತು ಅಭಿವೃದ್ಧಿಯಲ್ಲಿ ಮಾಜಿ ಶಾಸಕ ದಿ.ಚಿಕ್ಕಮಾದುರವರ ಕೊಡುಗೆ ಅಪಾರ ಎಂದು ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು. ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನದಲ್ಲಿ ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹುಟ್ಟುವಾಗ ಯಾರು ಹೆಸರು ತರುವುದಿಲ್ಲ. ಆದರೆ ಹೋಗುವಾಗ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಕೆಲಸ ಮಾಡಬೇಕು ಎಂದರು….

ಇಂದು, ನಾಳೆ ಭಾರತ್ ಬಂದ್
ಮೈಸೂರು

ಇಂದು, ನಾಳೆ ಭಾರತ್ ಬಂದ್

January 8, 2019

ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಹಾಗೂ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳು ಜನವರಿ 8 ಮತ್ತು 9ರಂದು ಹಮ್ಮಿಕೊಂಡಿರುವ ಭಾರತ್ ಬಂದ್‍ಗೆ ರಾಜ್ಯ ಸರ್ಕಾರ ತಟಸ್ಥ ಧೋರಣೆ ತಳೆದಿದೆ. ಈ ಹಿನ್ನೆಲೆಯಲ್ಲಿ ಮುಷ್ಕರದ ಎರಡು ದಿನಗಳ ಕಾಲ ರಾಜ್ಯ ಸಾರಿಗೆ ಸಂಸ್ಥೆ ಬಸ್‍ಗಳು ರಸ್ತೆಗಿಳಿಯುವುದು ಅನುಮಾನ. ಆದರೆ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ಶಾಲಾ-ಕಾಲೇಜುಗಳಿಗೆ ಪರಿಸ್ಥಿತಿ ಆಧರಿಸಿ ರಜೆ ನೀಡುವ ನಿರ್ಧಾರವನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ವಹಿಸಿದೆ. ಬಂದ್ ಸಂದರ್ಭದಲ್ಲಿ…

ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ
ಮೈಸೂರು

ಜ.15ರವರೆಗೆ ದಸರಾ ವಸ್ತುಪ್ರದರ್ಶನ ವಿಸ್ತರಣೆ

January 8, 2019

ಮೈಸೂರು: ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಏರ್ಪಡಿಸಿ ರುವ ದಸರಾ ವಸ್ತುಪ್ರದರ್ಶನವನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ. ಪೂರ್ವ ನಿಗದಿ ಪ್ರಕಾರ ಇಂದು (ಜ.7) ವಸ್ತುಪ್ರದರ್ಶನ ಮುಕ್ತಾಯವಾಗಬೇಕಿತ್ತಾ ದರೂ, ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಮುಂದುವರೆಸುವಂತೆ ನಿರ್ದೇಶನ ನೀಡಿರುವುದರಿಂದ ಜ.15ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. ಪ್ರವಾಸಿಗರು ಹಾಗೂ ಜನರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದರಿಂದ ಹಾಗೂ ಅವಧಿ ವಿಸ್ತರಿಸುವಂತೆ ಗುತ್ತಿಗೆದಾರರೂ ಮನವಿ ಮಾಡಿದ ಹಿನ್ನೆಲೆಯಲ್ಲಿ ವಸ್ತು ಪ್ರದರ್ಶನ ಅವಧಿ ವಿಸ್ತರಿಸುವಂತೆ ಜಿಲ್ಲಾ…

ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ
ಮೈಸೂರು

ಮೇಲ್ವರ್ಗದ ಬಡವರಿಗೆ ಶೇ.10ರಷ್ಟು ಮೀಸಲಾತಿ

January 8, 2019

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ಮೇಲ್ವರ್ಗದ ಜಾತಿ ಮತ್ತು ಸಮುದಾಯಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ಯನ್ನು ಮೋದಿ ಸರ್ಕಾರ ಘೋಷಿಸುವ ಮೂಲಕ ಮೇಲ್ವರ್ಗ ದವರ ಮತ ಬ್ಯಾಂಕ್‍ಗಳನ್ನು ಸೆಳೆಯಲು ಮುಂದಾಗಿದ್ದಾರೆ. ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೇಲ್ಜಾತಿ ವರ್ಗಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡಲು ಸರ್ಕಾರ ಮುಂದಾಗಿದ್ದು ,…

ಜನರಿಂದ ದೂರುಗಳ ಮಹಾಪೂರ
ಮೈಸೂರು

ಜನರಿಂದ ದೂರುಗಳ ಮಹಾಪೂರ

January 8, 2019

ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸೋಮವಾರ ತಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಜನರಿಂದ ದೂರುಗಳ ಮಹಾಪೂರವೇ ಹರಿದು ಬಂದಿತು. ಚುನಾವಣೆ ಬಳಿಕ ಉನ್ನತ ಶಿಕ್ಷಣ ಸಚಿವ ರಾಗಿ ಕಾರ್ಯ ಒತ್ತಡ, ಜೊತೆಗೆ ಇಡೀ ರಾಜ್ಯದ ಕಾಲೇಜು, ವಿಶ್ವವಿದ್ಯಾನಿಲಯ ಗಳಿಗೆ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರದ ಗ್ರಾಮ ಗಳಿಗೆ ಬರಲಾಗದ್ದಕ್ಕೆ ಜನರ ಕ್ಷಮೆ ಕೇಳಿದ ಸಚಿವ ಜಿ.ಟಿ.ದೇವೇಗೌಡರು, ಈ ಕಾರಣ…

ಇಂಧನ ತೆರಿಗೆ ಹೆಚ್ಚಳ, ಸಚಿವ ಪುಟ್ಟರಂಗಶೆಟ್ಟಿ   ರಾಜೀನಾಮೆಗೆ ಆಗ್ರಹಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ
ಮೈಸೂರು

ಇಂಧನ ತೆರಿಗೆ ಹೆಚ್ಚಳ, ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಮೈಸೂರಲ್ಲಿ ಬಿಜೆಪಿ ಪ್ರತಿಭಟನೆ

January 8, 2019

ಮೈಸೂರು: ಪೆಟ್ರೋಲ್-ಡೀಸೆಲ್ ಮೇಲೆ ರಾಜ್ಯ ಸರ್ಕಾರ ತೆರಿಗೆ ಹೆಚ್ಚಳ ಮಾಡಿರು ವುದನ್ನು ಖಂಡಿಸಿ, ಸಚಿವ ಪುಟ್ಟರಂಗಶೆಟ್ಟಿ ರಾಜೀ ನಾಮೆಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತ್ಯೇಕ ಮೂರು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಮೈಸೂರಿನ ಕೃಷ್ಣರಾಜ, ಚಾಮರಾಜ ಮತ್ತು ನರ ಸಿಂಹರಾಜ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿ ಭಟನೆ ನಡೆಸಿ, ಪೆಟ್ರೋಲ್, ಡೀಸೆಲ್ ತೆರಿಗೆ ಏರಿಕೆ ಮಾಡಿದ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ, ಕೂಡಲೇ ಜನ ಸಾಮಾನ್ಯರಿಗೆ ಹೊರೆಯಾಗುವ ಇಂಧನ ತೆರಿಗೆ ಹೆಚ್ಚಳ ಮಾಡಿರುವುದನ್ನು ಕೈ…

1 1,188 1,189 1,190 1,191 1,192 1,611
Translate »