ಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಸೋಮವಾರ ತಮ್ಮ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ಸಂಪರ್ಕ ಸಭೆ ನಡೆಸಿದ ಸಂದರ್ಭದಲ್ಲಿ ಜನರಿಂದ ದೂರುಗಳ ಮಹಾಪೂರವೇ ಹರಿದು ಬಂದಿತು.
ಚುನಾವಣೆ ಬಳಿಕ ಉನ್ನತ ಶಿಕ್ಷಣ ಸಚಿವ ರಾಗಿ ಕಾರ್ಯ ಒತ್ತಡ, ಜೊತೆಗೆ ಇಡೀ ರಾಜ್ಯದ ಕಾಲೇಜು, ವಿಶ್ವವಿದ್ಯಾನಿಲಯ ಗಳಿಗೆ ಭೇಟಿ ಹಿನ್ನೆಲೆಯಲ್ಲಿ ಕ್ಷೇತ್ರದ ಗ್ರಾಮ ಗಳಿಗೆ ಬರಲಾಗದ್ದಕ್ಕೆ ಜನರ ಕ್ಷಮೆ ಕೇಳಿದ ಸಚಿವ ಜಿ.ಟಿ.ದೇವೇಗೌಡರು, ಈ ಕಾರಣ ಕ್ಕಾಗಿ ಇಂದು ಬಡ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಮನೆ ಬಾಗಿಲಿಗೆ ಸರ್ಕಾರ ಬಂದಿದೆ ಎಂದು ಹೇಳುವ ಮೂಲಕ ಜನ ರಿಂದ ಮತ್ತೊಮ್ಮೆ ವಿಶ್ವಾಸ ಸಂಪಾದಿಸಿದರು.
ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ತಾಪಂ ಇಓ ಲಿಂಗರಾಜಯ್ಯ, ತಹಶೀಲ್ದಾರ್ ರಮೇಶ್‍ಬಾಬು ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಯಪುರ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿದರು, ಅಹವಾಲು ಸ್ವೀಕರಿಸಿದರು. ಸ್ಥಳದಲ್ಲಿಯೇ ಅಧಿಕಾರಿಗಳಿಂದ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಿದರು. ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಚಾಲನೆ ನೀಡಿದರು. ಮೊದಲಿಗೆ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ನಾಯಕರ ಬೀದಿಯಿಂದ ಗುಜ್ಜೆಗೌಡನಪುರ ಗ್ರಾಮಕ್ಕೆ ಹೋಗುವ ಸಂಪರ್ಕ ರಸ್ತೆ 35 ಲಕ್ಷ ರೂ. ಅಂದಾಜು ವೆಚ್ಚದ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಾಣಕ್ಕೆ ಹಾಗೂ 10 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಗ್ರಾಮದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಗುಜ್ಜೆಗೌಡನಪುರದಲ್ಲಿ 69.10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಸೋಲಿಗರ ಕಾಲೋನಿಗೆ ಹೋಗುವ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿದರು. ಮದ್ದೂರು ಗ್ರಾಮದಲ್ಲಿ ಎಸ್‍ಟಿ ಕಾಲೋನಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.
ಗುಜ್ಜೆಗೌಡನಪುರ ಗ್ರಾಮದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗಳಿಲ್ಲದ ಬಗ್ಗೆ ಗ್ರಾಮಸ್ಥರು ದೂರಿದರು. ಈ ಬಗ್ಗೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳ ಗಮನಕ್ಕೆ ತಂದ ಸಚಿವರು ಕೂಡಲೇ ಗುಜ್ಜೆಗೌಡನಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅಗತ್ಯ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಗ್ರಾಮದ ಮುಖ್ಯ ರಸ್ತೆಯಲ್ಲಿ ವಾಹನಗಳು ಅತೀ ವೇಗವಾಗಿ ಚಲಿಸುವುದರಿಂದ ಅಪಘಾತಗಳಾಗುತ್ತಿದ್ದು, 2 ತಿಂಗಳ ಹಿಂದೆ ಗ್ರಾಮದ ಪ್ರಸನ್ನ ಎಂಬುವರ 4 ವರ್ಷದ ಪುತ್ರಿ ಚಿನ್ಮಯಿಗೆ ಬಸ್ ಡಿಕ್ಕಿಯಾಗಿ ಆಕೆಯ ತಲೆಗೆ ಪೆಟ್ಟು ಬಿದ್ದಿದ್ದು, ಕೈ, ಕಾಲು ಸ್ವಾಧೀನ ಕಳೆದುಕೊಂಡಿರುವುದನ್ನು ಕಂಡು ಮಮ್ಮಲ ಮರುಗಿದರು. ಸರ್ಕಾರ ಎಷ್ಟು ಪರಿಹಾರ ಕೊಡುತ್ತದೆಯೋ ಅಷ್ಟನ್ನು ತಹಶೀಲ್ದಾರ್ ಕೊಡಿಸಬೇಕು. ಉಳಿದ ಎಲ್ಲ ಚಿಕಿತ್ಸೆಯ ವೆಚ್ಚದ ಜವಾಬ್ದಾರಿಯನ್ನು ತಾವೇ ವಹಿಸಿ ಕೊಳ್ಳುವುದಾಗಿ ಪೋಷಕರಿಗೆ ಭರವಸೆ ನೀಡಿದರು. ಈ ರಸ್ತೆಯಲ್ಲಿ ಅಪಘಾತಕ್ಕೆ ಅವಕಾಶ ವಾಗದಂತೆ ವಾಹನಗಳ ನಿಯಂತ್ರಿಸಲು ಹಂಪ್ಸ್‍ಗಳನ್ನು ನಿರ್ಮಿಸಲು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ದೂರು ಹೇಳಿದರೆ ಜೋರು ಮಾಡ್ತಾರೆ: ಅಧಿಕಾರಿಗಳು ದೂರು ಹೇಳಲು ಹೋದರೆ ನಮ್ಮ ಮೇಲೇ ಜೋರು ಮಾಡುತ್ತಾರೆ ಎಂದು ಗ್ರಾಮಸ್ಥರು ದೂರಿದರು. ಅಧಿಕಾರಿಗಳ ಕಾರ್ಯ ವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು, ಖಾತೆ ಬದಲಾವಣೆ ಇನ್ನಿತರ ಕೆಲಸಗಳಿಗೆ ಕಚೇರಿಗೆ ಬರುವ ಜನರನ್ನು ಗೌರವದಿಂದ ಕೂರಿಸಿ, ಅವರ ಕೆಲಸ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋರುವ ಶಾಲೆ: ಮಂಡನಹಳ್ಳಿಯ ಶಾಲೆಯಲ್ಲಿ ಹೆಂಚುಗಳು ಒಡೆದು ಮಳೆ ಬಂದಾಗ ಸೋರುತ್ತದೆ. ಕಿಟಕಿಗಳು ಮುರಿದಿವೆ. ಹಲವು ಬಾರಿ ಅರ್ಜಿ ನೀಡಿ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಮಂಡನಹಳ್ಳಿ-ಚಾಮಳ್ಳಿ ರಸ್ತೆ ಎತ್ತಿನಗಾಡಿಗಳು ಓಡಾಡಲಾಗದ ಸ್ಥಿತಿಯಲ್ಲಿದೆ. ಬಸವೇಶ್ವರ ದೇವಸ್ಥಾನಕ್ಕೆ ಶಾಶ್ವತ ವಿದ್ಯುತ್ ಬೇಕು ಎಂದು ಗ್ರಾಮಸ್ಥರು ಸಚಿವರ ಬಳಿ ಮನವಿ ಮಾಡಿದರು.
ಮದ್ದೂರು ಹುಂಡಿ ಗ್ರಾಮದಲ್ಲಿರುವ ಸರ್ಕಾರಿ ಕಟ್ಟೆ (ಕೆರೆ) ದುರಸ್ತಿಗೆ ಸಿಎಸ್‍ಆರ್ ನಿಧಿಯಲ್ಲಿ 17 ಲಕ್ಷ ನೀಡಲಾಗಿದ್ದು, ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಅಲ್ಲದೆ ಚಿರತೆ ಕಾಟ ಇರುವ ಬಗ್ಗೆ ಸಚಿವರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಕೂಡಲೇ ಕೆರೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗೆ ತಾಕೀತು ಮಾಡಿದರು.
ಮದ್ದೂರು ಗ್ರಾಮದಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ಪ್ರೋತ್ಸಾಹ ಧನ ಇನ್ನೂ ಕೊಟ್ಟಿಲ್ಲ. ಕೆರೆ ಅಭಿವೃದ್ಧಿ ಆಗಿಲ್ಲ. ಪಂಚಾಯಿತಿಗಳಿಗೆ ಅನುದಾನ ಹೆಚ್ಚಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಗ್ರಾಮಸ್ಥರು ಸಚಿವರ ಮುಂದಿಟ್ಟರು. ಬಳಿಕ ಚುಂಚರಾಯನ ಹುಂಡಿಯಲ್ಲಿಯೂ ಸಮಸ್ಯೆಗಳನ್ನು ಆಲಿಸಿ, ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಪಂ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಪ್ರೇಮಕುಮಾರಿ, ಮಹದೇವಸ್ವಾಮಿ, ತಾಪಂ ಸದಸ್ಯೆ ರಜನಿ ನಾಗರಾಜು, ಸುರೇಶ್‍ಕುಮಾರ್, ಮಾರ್ಬಳ್ಳಿ ಕುಮಾರ್, ಗ್ರಾಪಂ ಅಧ್ಯಕ್ಷ ಬಸವಣ್ಣ, ಸದಸ್ಯರಾದ ಎಂ.ನಾಗರಾಜು, ಸಣ್ಣಸ್ವಾಮಿ, ಹೇಮಾವತಿ, ಮಂಜುನಾಥ್, ವಿಜಯಲಕ್ಷ್ಮಿ, ತಾಪಂ ಮಾಜಿ ಸದಸ್ಯರಾದ ಜವರನಾಯಕ, ಅಬ್ದುಲ್ ಮುತಾಲಿಫ್ ಇನ್ನಿತರರು ಉಪಸ್ಥಿತರಿದ್ದರು.
ಜನರ ದೂರುಗಳಿಗೆ ಸ್ಪಂದನೆ