ಮೈಸೂರು: ಮೈಸೂ ರಿನ ಕುವೆಂಪುನಗರದ ಉತ್ತರ ಕನ್ನಡ ಜಿಲ್ಲಾ ಸಾಂಸ್ಕøತಿಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪ.ಸು.ಭಟ್ಟ ಬಯಲು ರಂಗಮಂದಿರದ ಉದ್ಘಾಟನೆ, ಆಹಾರ ಮೇಳ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಡಿ.15ರಂದು ಹಮ್ಮಿ ಕೊಳ್ಳಲಾಗಿದೆ ಎಂದು ಸಂಘದ ಕಾರ್ಯ ದರ್ಶಿ ತೇಜಸ್ವಿ ನಾಯಕ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪುನಗರದ ಲವಕುಶ ಪಾರ್ಕ್ ಎದುರಿನ ಸಂಘದ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಿಸಿದ್ದು, ಇದರ ಉದ್ಘಾಟನೆಯನ್ನು ಅಂದು ಸಂಜೆ 5ಕ್ಕೆ ಸಂಘದ…
ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಪರಾರಿಯಾಗುತ್ತಿದ್ದ ಖದೀಮರ ಬಂಧನ
December 14, 2018ಮೈಸೂರು: ಸಾರ್ವಜನಿಕರ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಮೂವರನ್ನು ಜಯಲಕ್ಷ್ಮೀಪುರಂ ಪೊಲೀಸರು ಬಂಧಿಸಿ, 1.16 ಲಕ್ಷ ರೂ. ಮೌಲ್ಯದ 10 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ತಾಲೂಕು ಕೂರ್ಗಳ್ಳಿ ನಿವಾಸಿ ಧನುಷ್ @ ಧನು(21) ಮತ್ತು ಹೂಟಗಳ್ಳಿಯ ಎನ್.ನಾಗೇಶ್ @ಬೋಂಡಾ(22) ಹಾಗೂ ಬೆಳ ವಾಡಿ ನಿವಾಸಿ ಸಚಿನ್ @ ಸಚಿ(20) ಬಂಧಿತ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಬುಧವಾರ ಪಡುವಾರಹಳ್ಳಿಯಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ನಗರದ ವಿವಿಧೆಡೆ ಸಾರ್ವಜನಿಕರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದು ಕಿತ್ತುಕೊಂಡು…
ಭತ್ತ ಮಾರಾಟಕ್ಕೆ ರೈತರ ನೋದಣಿಗೆ ಮತ್ತಷ್ಟು ಕಾಲಾವಕಾಶ ಕಲ್ಪಿಸಲು ಆಗ್ರಹ
December 14, 2018ತಿ.ನರಸೀಪುರ: ಭತ್ತ ಖರೀದಿ ಕೇಂದ್ರದಲ್ಲಿ ಭತ್ತ ಮಾರಾಟ ಮಾಡುವ ಮುನ್ನಾ ರೈತರು ನೋಂದಣಿ ಮಾಡಿಸಲು ದಿನಾಂಕ ವಿಸ್ತರಣೆ ಮಾಡಿ ರೈತರಿಗೆ ಅಗತ್ಯ ಸವಲತ್ತು ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಕರ್ನಾಟಕ ರಾಜ್ಯ ಉಗ್ರಾಣ ನಿಗಮದಿಂದ 2018-19ನೇ ಸಾಲಿನಲ್ಲಿ ರೈತರು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿಸಲು ಮೈಸೂರು ಜಿಲ್ಲಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಅದರಂತೆ ಭತ್ತ ಮಾರಾಟ ಮಾಡಲು ರೈತರು ನಿಗಮದಲ್ಲಿ ನೊಂದಣಿ ಮಾಡಿಸಬೇಕಿತ್ತು, ಡಿ.5ರಿಂದ 15ರವರೆಗೆ ನೊಂದಣಿಗೆ ಅವಕಾಶವಿತ್ತು. ಆದರೆ ರೈತರು ನೊಂದಣಿಗೆ ಹೋದ ಸಂದರ್ಭದಲ್ಲಿ ಕಂಪ್ಯೂಟರ್…
ತಗಡೂರು 31 ಲಕ್ಷ ವೆಚ್ಚದ ಮುಖ್ಯ ರಸ್ತೆಯ ಕಾಮಗಾರಿ ಕಳಪೆ
December 14, 2018ಜಿಪಂ ಸದಸ್ಯ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ನಂಜನಗೂಡು: ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಚಿನ್ನಂಬಳ್ಳಿಯಿಂದ ತಗಡೂರು ಜನತಾ ಪ್ರೌಢಶಾಲೆಗೆ ಸಂಪರ್ಕ ರಸ್ತೆಯ ಕಾಮಗಾರಿ ಅತ್ಯಂತ ಕಳಪೆ ಕಾಮಗಾರಿಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಜಿಪಂ ಸದಸ್ಯ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಮನವಿಗೆ ದಾವಿಸಿದ ಬಿ.ಸದಾನಂದರವರು ಪರಿಶೀಲನೆ ನಡೆಸಿ ಈ ರಸ್ತೆಗೆ 31 ಲಕ್ಷ ವೆಚ್ಚವಾಗಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿದ ನಂತರ ಗುತ್ತಿಗೆದಾರರರಿಗೆ ಬಿಲ್ ಮಾಡುವಂತೆ ಸೂಚಿಸಿದ್ದಾರೆ. ಈ…
ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಭೂಪ ಅಕ್ರಮಕ್ಕೆ ಅಧಿಕಾರಿಗಳ ಸಾಥ್ ಶಂಕೆ
December 14, 2018ಮೈಸೂರು: ಪರಿಶಿಷ್ಟ ಜಾತಿಯ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ವ್ಯಕ್ತಿಯೋರ್ವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಪಡೆದಿರುವ ಬಗ್ಗೆ ದೂರು ದಾಖಲಾಗಿದೆ. ಬೆಲವತ್ತ ಗ್ರಾಮ ಪಂಚಾಯಿತಿಯಲ್ಲಿ ವಾಟರ್‍ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ವಿ.ಮಂಜುನಾಥ್, ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಉದ್ಯೋಗ ಪಡೆದ ಆರೋಪ ಎದುರಿಸುತ್ತಿದ್ದಾರೆ. ಕಳೆದ ಸುಮಾರು 7 ವರ್ಷಗಳಿಂದ ಬೆಲವತ್ತ ಗ್ರಾಮದಲ್ಲಿ ವಾಸವಿರುವ ಈತ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು, ಅವರು ಶಾಲೆ ದಾಖಲಾತಿ ಮತ್ತು ಮಂಡ್ಯ ತಹಸೀಲ್ದಾರರು ಇವರಿಗೆ ನೀಡಿರುವ…
ಹುಲಿ ದಾಳಿಗೆ 8 ಕುರಿ ಬಲಿ
December 14, 2018ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ ಸರಗೂರು: ಹುಲಿ ದಾಳಿಗೆ 8 ಕುರಿಗಳು ಬಲಿಯಾಗಿರುವ ಘಟನೆ ಸರಗೂರು ಸಮೀಪ ನಡೆದಿದೆ. ಸರಗೂರು ಸಮೀಪದ ಗೋತಕಾಲದ ಹುಂಡಿ ಗ್ರಾಮದ ಶಿವರಾಜಶೆಟ್ಟಿ ಹಾಗೂ ಹುಚ್ಚಯ್ಯ ಅವರು, ಕಪಿಲಾ ಬಲದಂಡೆ ನಾಲೆಯ ಬಳಿ ಕುರಿಗಳನ್ನು ಮೇಯಿಸಿಕೊಂಡು ವಾಪಸ್ಸಾಗು ತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಇದನ್ನು ಕಂಡು ಭಯಭೀತರಾದ ರೈತರು, ಕೂಗಾಡಿದ್ದರಿಂದ ಹುಲಿ ಪರಾರಿಯಾಗಿದೆ. ಆದರೆ ದಾಳಿಯಲ್ಲಿ ಶಿವರಾಜಶೆಟ್ಟಿ ಅವರಿಗೆ ಸೇರಿದ 7 ಹಾಗೂ ಹುಚ್ಚಯ್ಯ ಅವರ 1 ಕುರಿ ಸಾವನ್ನಪ್ಪಿವೆ. ಜೀವನಕ್ಕೆ…
ಆಸ್ತಿ ವಿಚಾರ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
December 14, 2018ಮೈಸೂರು: ಆಸ್ತಿ ವಿಚಾರಕ್ಕೆ ಮನನೊಂದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿ ರುವ ಘಟನೆ ಅರವಿಂದನಗರದಲ್ಲಿ ಮಂಗಳವಾರ ನಡೆದಿದೆ. ಸಿದ್ದಾರ್ಥನಗರ ನಿವಾಸಿ ಅನಿಲ್ ಕುಮಾರ್(45) ಮೃತಪಟ್ಟವರು. ಇವರು 18 ವರ್ಷಗಳ ಹಿಂದೆ ಲಕ್ಷ್ಮೀ ಎಂಬುವರನ್ನು ವಿವಾಹ ವಾಗಿದ್ದು, ಪತ್ನಿಯೊಂದಿಗೆ ಸಿದ್ದಾರ್ಥನಗರದಲ್ಲಿ ವಾಸವಿದ್ದರು. ಆಸ್ತಿ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ತಾಯಿ- ಮಗನ ನಡುವೆ ಜಗಳ ನಡೆಯುತ್ತಿತ್ತು. ಮಂಗಳವಾರ ರಾತ್ರಿ ಅನಿಲ್ ಕುಮಾರ್, ಆಸ್ತಿ ಕೇಳಲು ಅರವಿಂದನಗರದ ತಾಯಿ ಮನೆಗೆ ಬಂದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ…
ನಕಲಿ ಸಹಿ ಬಳಸಿ ಲಕ್ಷಾಂತರ ರೂ.ವಂಚನೆ
December 14, 2018ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಸಹಿ, ಚೆಕ್ ಬುಕ್ ಬಳಸಿ ತನ್ನ ಖಾತೆಯಿಂದ ಲಕ್ಷಾಂತರ ರೂ. ವರ್ಗಾ ಯಿಸಿ ವಂಚಿಸಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರು ಜಯಲಕ್ಷ್ಮಿ ಪುರಂ ಠಾಣೆಗೆ ದೂರು ನೀಡಿದ್ದಾರೆ. ಡಾ.ದೇವರಾಜ್ ಎಂಬುವರು ಗಂಗೋತ್ರಿ ಬಡಾವಣೆಯ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‍ನಲ್ಲಿ ಖಾತೆಯನ್ನು ಹೊಂದಿದ್ದು, ನ.5ರಂದು ಬ್ಯಾಂಕಿಗೆ ತೆರಳಿ ಪಾಸ್ ಬುಕ್ ಎಂಟ್ರಿ ಮಾಡಿಸಿದಾಗ ಖಾತೆಯಲ್ಲಿ 1,81,91,892 ರೂ.ಗಳಿತ್ತು. ಪಾಸ್ ಬುಕ್ ಪರಿಶೀಲಿಸಲಾಗಿ ಸೆ.11ರಂದು ಚೆಕ್ ನಂ.27ರಲ್ಲಿ 8.75 ಲಕ್ಷ, ಆ.18 ರಂದು ಚೆಕ್ ನಂ.29ರಲ್ಲಿ 5…
ಸದ್ಯದಲ್ಲೇ ಇಬ್ಬರು ಶಾಸಕರ ಅಮಾನತು, ಇಬ್ಬರು ಸಚಿವರಿಗೂ ಕೊಕ್
December 13, 2018ಬೆಂಗಳೂರು: ಪಕ್ಷ ದಲ್ಲಿದ್ದುಕೊಂಡೇ ಆಪರೇಷನ್ ಕಮಲ ಚಟುವಟಿಕೆಯಲ್ಲಿ ತೊಡಗಿರುವ ಇಬ್ಬರು ಶಾಸಕರನ್ನು ಅಮಾನತು ಮಾಡಲು ನಿರ್ಧರಿಸಿರುವ ಪ್ರದೇಶ ಕಾಂಗ್ರೆಸ್, ಇದೇ ಆರೋಪದ ಹಿನ್ನೆಲೆಯಲ್ಲಿ ಸಂಪುಟದಲ್ಲಿರುವ ಇಬ್ಬರು ಸಚಿವರನ್ನೂ ಕೈಬಿಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಬೆಂಬಲ ನೀಡಿದ ಪಕ್ಷೇತರ ಸದಸ್ಯ ಹಾಗೂ ಅರಣ್ಯ ಸಚಿವ ಆರ್.ಶಂಕರ್ ಮತ್ತು ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಮಂತ್ರಿಮಂಡಲದಿಂದ ಕೈಬಿಡಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂತ್ರಿಮಂಡಲ ವನ್ನು ಡಿಸೆಂಬರ್ 22ರಂದು ವಿಸ್ತರಿಸಲು ತೀರ್ಮಾನಿಸಿದ್ದು,…
ನಮ್ಮ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು: ಆತಂಕ ಸೃಷ್ಟಿ
December 13, 2018ಬೆಂಗಳೂರು: ನಮ್ಮ ಮೆಟ್ರೋ ಪಿಲ್ಲರ್‌ವೊಂದರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ. ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯ 155ನೇ ಪಿಲ್ಲರ್‍ನಲ್ಲಿ ಬಿರುಕು ಬಿಟ್ಟಿದೆ. ಅಲ್ಲದೆ ಪಿಲ್ಲರ್‍ನ ಮೇಲ್ಭಾಗದ ಸ್ಲೈಡರ್ ಸ್ವಲ್ಪ ಮಟ್ಟಿಗೆ ಜರುಗಿದೆ. ಈ ಹಿನ್ನೆಲೆಯಲ್ಲಿ ಒಂದು ಬದಿಯ ಸಂಚಾರವನ್ನು ತಡೆದು ವಾಹನಗಳಿಗೆ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಪಿಲ್ಲರ್ ಬಳಿ ಜೇನುಗೂಡು ಕಟ್ಟಿತ್ತು. ಹೀಗಾಗಿ ಅದನ್ನು ತೆರವುಗೊಳಿಸುವ ವೇಳೆ ಹಾನಿ ಕಂಡುಬಂದಿದೆ. ಅಲ್ಲಿ ಕಬ್ಬಿಣದ ಸ್ಲೈಡರ್ ಹಾಕಿರುವುದಾಗಿ ಮೆಟ್ರೋ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ. ಪ್ರತಿನಿತ್ಯ…