ಮೈಸೂರು: ರಾಜ್ಯದಲ್ಲಿ ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಹೊಸ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ವಿಕಲ ಚೇತನರ ಹಿತ ಕಾಪಾಡಲಾಗುತ್ತಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ದಸರಾ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತ ನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ನಡೆದ `ವಿಶ್ವ ವಿಕಲಚೇ ತನರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತ ನಾಡಿದ…
ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ `ಸ್ಮಾರ್ಟ್ ಕ್ಲಾಸ್’ ತರಗತಿಗೆ ಚಾಲನೆ
December 4, 2018ಮೈಸೂರು: ಜಪಾನ್ ದೇಶದ ಬಹುತೇಕ ವಿದ್ಯಾಸಂಸ್ಥೆಗಳಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವ ರೆಗೂ `ಸ್ಮಾರ್ಟ್‍ಕ್ಲಾಸ್’ ತರಗತಿಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಬೇಕಾದ ತಂತ್ರಾಂಶವನ್ನು ಅಲ್ಲಿನ ಸರ್ಕಾರ ಒದಗಿಸಿದೆ ಎಂದು ಮಿಸ್ಟಿಬಿಸಿ ಕಂಪನಿ ಮೈಸೂರು ಘಟಕದ ವ್ಯವಸ್ಥಾಪಕ ನಿರ್ದೇಶಕ ಕವಾಮೋಟೋ ತಿಳಿಸಿದರು. ಮೈಸೂರು-ತಿ.ನರಸೀಪುರ ರಸ್ತೆಯಲ್ಲಿರುವ ಸರ್ಕಾರಿ ಬಾಲಕಿ ಯರ ಬಾಲಮಂದಿರ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸರ್ಕಾರಿ ಬಾಲಕಿಯರ ಬಾಲಮಂದಿರ ಮೈಸೂರು ಘಟಕ ಹಾಗೂ ಮಿಸ್ಟಿಬಿಸಿ ಕಂಪನಿ, ವಿದ್ವತ್ ಇನೋವೇಟಿವ್…
ತರಕಾರಿ ಅಂಗಡಿಯಲ್ಲಿ ಅಡಗಿದ್ದ ನಾಗರಹಾವು
December 4, 2018ಮೈಸೂರು: ಹಾವುಗಳು ಪೊದೆ, ಬಿಲಗಳಲ್ಲಿ ಮಾತ್ರ ಇರು ವುದಿಲ್ಲ. ಮನೆಗಳಲ್ಲಿ, ಅಂಗಡಿ ಮಳಿಗೆ ಗಳಲ್ಲೂ ಅಡಗಿರು ವುದು ಇತ್ತೀಚೆಗೆ ಬೆಳ ಕಿಗೆ ಬರುತ್ತಿದೆ. ಅದ ರಲ್ಲೂ ನಗರ ಪ್ರದೇ ಶದ ಕಾಂಕ್ರಿಟ್ ಕಾಡಿ ನಲ್ಲಿ ಹಾವುಗಳು ನೆಲೆ ಇಲ್ಲದೆ ಕಂಗೆಟ್ಟು, ಸಿಕ್ಕಸಿಕ್ಕ ಕಡೆ ಆಹಾರ ಹಾಗೂ ಆಶ್ರಯ ಪಡೆಯುತ್ತಿವೆ. ಸದಾ ಗ್ರಾಹಕ ದಟ್ಟಣೆ, ಭಾರೀ ಸದ್ದು ಇರುವಂತಹ ದೇವರಾಜ ಮಾರುಕಟ್ಟೆ ಯಲ್ಲೇ ನಾಗರ ಹಾವು ತನಗೆ ಇದೇ ಸುರಕ್ಷಿತ ಸ್ಥಾನವೆಂದು ನೆಲೆ ಕಂಡುಕೊಂಡಿತ್ತು. `ಸಂತೆಯೊಳಗೊಂದು ಮನೆಯ ಮಾಡಿ…
ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿಕಲಚೇತನರ ರ್ಯಾಲಿ
December 4, 2018ಮೈಸೂರು: ವಿಕಲಚೇತನರಿಗೆ ಪ್ರತ್ಯೇಕ ಕಾಲೋನಿ ನಿರ್ಮಿಸು ವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನಲ್ಲಿ ಸೋಮವಾರ ವಿಕಲಚೇತನರ ಅಭ್ಯುದಯ ವೇದಿಕೆಯ ಕಾರ್ಯಕರ್ತರು ತ್ರಿಚಕ್ರ ವಾಹನಗಳ ರ್ಯಾಲಿ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು. ಮೈಸೂರು ಅರಮನೆ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯಸ್ವಾಮಿ ದೇವಾ ಲಯ ಮುಂಭಾಗದಿಂದ ಇಂದು ಬೆಳಿಗ್ಗೆ ರ್ಯಾಲಿ ಆರಂಭಿಸಿದ ವಿಕಲಚೇತನರು ದೊಡ್ಡಗಡಿಯಾರ ವೃತ್ತ, ಮಹಾತ್ಮಗಾಂಧಿ ವೃತ್ತ, ಚಿಕ್ಕಗಡಿಯಾರವೃತ್ತ, ದೇವರಾಜ ಅರಸ್ ರಸ್ತೆ, ಜೆಎಲ್‍ಬಿ ರಸ್ತೆ, ವಿನೋಬ ರಸ್ತೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ…
ನಾಳೆಯಿಂದ ‘ಮೈ ಬಿಲ್ಡ್’ ವಸ್ತುಪ್ರದರ್ಶನ ನಿರ್ಮಾಣ ತಂತ್ರಜ್ಞಾನ ಅನಾವರಣ
December 4, 2018ಮೈಸೂರು: ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಡಿ.5ರಿಂದ 10ರವರೆಗೆ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಕಟ್ಟಡ ನಿರ್ಮಾಣ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ `ಮೈಬಿಲ್ಡ್ ವಸ್ತುಪ್ರದರ್ಶನ’ವನ್ನು ಏರ್ಪಡಿಸಲಾಗಿದೆ ಎಂದು ಮೈಬಿಲ್ಡ್ ಸಮಿತಿ ಅಧ್ಯಕ್ಷ ಕೆ.ಎಂ.ರಘುನಾಥ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಡಿ.5ರಂದು ಸಂಜೆ 5ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಮುಡಾ ಆಯುಕ್ತ ಪಿ.ಎಸ್.ಕಾಂತ ರಾಜು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ….
ಶ್ರೀ ಶಿವರಾತ್ರೀಶ್ವರ ಪ್ರಶಸ್ತಿಗೆ ಶ್ರೀ ನಿರುಪಾಧೀಶ ಸ್ವಾಮಿಗಳ `ಸಿದ್ಧರಾಮ ವಿಲಾಸ’ ಕೃತಿ ಆಯ್ಕೆ
December 4, 2018ಮೈಸೂರು: ಜೆಎಸ್‍ಎಸ್ ಮಹಾವಿದ್ಯಾ ಪೀಠದ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಕೊಡಲಾಗುವ 2017ನೇ ಸಾಲಿನ ಶ್ರೀ ಶಿವರಾತ್ರೀ ಶ್ವರ ಪ್ರಶಸ್ತಿಗೆ ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲೂಕಿನ ಮರೇಗುದ್ದಿಯ ಶ್ರೀ ನಿರುಪಾಧೀಶ ಸ್ವಾಮಿಗಳು ರಚಿಸಿರುವ ಸಿದ್ಧರಾಮ ವಿಲಾಸ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 25,000 ರೂ. ನಗದು, ಪ್ರಶಸ್ತಿ, ಸ್ವಸ್ತಿವಾಚನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಯಶಸ್ವಿಯಾಗಿ ನಡೆದ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ
December 4, 2018ಮೈಸೂರು: ಮೈಸೂರು ಜಿಲ್ಲೆಯ 2017-18ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 266 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯ 100 ಹುದ್ದೆಗಳಿಗೆ ಸೋಮವಾರ ಕೌನ್ಸಿ ಲಿಂಗ್ ಮೂಲಕ ಭರ್ತಿ ಮಾಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಸ್.ಮಮತಾ ನೇತೃತ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಸಭಾಂ ಗಣದಲ್ಲಿ ನಡೆದ ಕೌನ್ಸಿಲಿಂಗ್‍ನಲ್ಲಿ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಹಾಗೂ ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ ಅವರ ಆಯ್ಕೆಯಂತೆ ಸ್ಥಳ ನಿಯೋಜನೆ ಮಾಡಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು. ಇಂಗ್ಲಿಷ್‍ನ 57, ವಿಜ್ಞಾನ…
ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆ ಕುರಿತು ತಾಲೂಕು ಮಟ್ಟದ ವಿವಿಧ ಸ್ಪರ್ಧೆ
December 4, 2018ಮೈಸೂರು: ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆಗೆ ಸಂಬಂಧಿಸಿದಂತೆ ಸೋಮವಾರ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಭಾರತ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪದವಿಪೂರ್ವ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ (ಇಸಿಎಲ್) ಮತ್ತು ಚುನಾವಣಾ ಪಾಠಶಾಲಾ (ಇಸಿಪಿ) ಸ್ಥಾಪಿಸಿ ಭಾವಿ ಮತದಾರರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮೈಸೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂ ರಿನ ಮಹಾರಾಜ ಪದವಿಪೂರ್ವ ಕಾಲೇ ಜಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ…
ವೈಭವದ ಮಾದಪ್ಪ ರಥೋತ್ಸವ
December 4, 2018ಸುತ್ತೂರು: ನಂಜನಗೂಡು ತಾಲೂಕು ಹದಿನಾರು ಗ್ರಾಮಕ್ಕೆ ಸೇರಿದ ಬಿಳಿಕೆರೆಯಲ್ಲಿ ಮಾದಪ್ಪನ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ರಥೋತ್ಸವದ ಅಂಗವಾಗಿ ಮುಂಜಾನೆ ಯಿಂದಲೇ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ನಂತರ ಉತ್ಸವ ಮೂರ್ತಿ ಹೊತ್ತ ತೇರಿಗೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು `ಉಘೇ ಮಾದಪ್ಪ’ ಘೋಷಣೆ ಕೂಗುತ್ತಾ, ತೇರನ್ನು ಎಳೆದು ಪುನೀತ ರಾದರು. ಹರಕೆ ಹೊತ್ತಿದ್ದ ಭಕ್ತಾದಿಗಳು ತೇರಿಗೆ ಹಣ್ಣು-ದವನ ಎಸೆದು ಭಕ್ತಿ ಭಾವ ಪರವಶರಾದರು. ರಥೋತ್ಸವಕ್ಕೆ ಆಗಮಿ ಸಿದ್ದ…
ನಾಯಕತ್ವ ಗುಣ ಬೆಳವಣಿಗೆಗೆ ಎನ್‍ಎಸ್‍ಎಸ್ ಸಹಕಾರಿ
December 4, 2018ಹನಗೋಡು: ಯುವಜನರಲ್ಲಿ ನಾಯಕತ್ವ ಗುಣ ಬೆಳೆಯಲು ಎನ್‍ಎಸ್‍ಎಸ್ ಶಿಬಿರ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು. ಹನಗೋಡು ಹೋಬಳಿಯ ರಾಮೇನ ಹಳ್ಳಿಯಲ್ಲಿ ಹುಣಸೂರು ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಂದ ಶ್ರಮದಾನ, ಸ್ವಚ್ಛತೆಯ ಅರಿವು, ಸ್ವಯಂ ರಕ್ತದಾನದ ಮಹತ್ವ, ಆರೋಗ್ಯದ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಅನ್ಯಾಯದ ವಿರುದ್ಧ ಹೋರಾಟದ ಮನೋ ಭಾವ ಕಡಿಮೆಯಾಗುತ್ತಿರುವುದರಿಂದ ಸಮಾಜದಲ್ಲಿ ಸಮಾಜಘಾತುಕ ಶಕ್ತಿಗಳು ಹೆಚ್ಚಾಗುತ್ತಿವೆ….