ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣಾ  ಸಾಕ್ಷರತೆ ಕುರಿತು ತಾಲೂಕು ಮಟ್ಟದ ವಿವಿಧ ಸ್ಪರ್ಧೆ
ಮೈಸೂರು

ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆ ಕುರಿತು ತಾಲೂಕು ಮಟ್ಟದ ವಿವಿಧ ಸ್ಪರ್ಧೆ

December 4, 2018

ಮೈಸೂರು: ಮೈಸೂರು ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚುನಾವಣಾ ಸಾಕ್ಷರತೆಗೆ ಸಂಬಂಧಿಸಿದಂತೆ ಸೋಮವಾರ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಭಾರತ ಚುನಾವಣಾ ಆಯೋಗದ ಸೂಚನೆ ಮೇರೆಗೆ ಪದವಿಪೂರ್ವ ಕಾಲೇಜುಗಳಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ (ಇಸಿಎಲ್) ಮತ್ತು ಚುನಾವಣಾ ಪಾಠಶಾಲಾ (ಇಸಿಪಿ) ಸ್ಥಾಪಿಸಿ ಭಾವಿ ಮತದಾರರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮೈಸೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಮೈಸೂ ರಿನ ಮಹಾರಾಜ ಪದವಿಪೂರ್ವ ಕಾಲೇ ಜಿನಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪೋಸ್ಟರ್ ಸಿದ್ಧಪಡಿಸುವುದು, ಕೊಲಾಜ್ ಮಾಡುವುದು, ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆಗಳು ನಡೆದವು.

ನೋಡಲ್ ಅಧಿಕಾರಿ ಮಂಗಳಾ ಮೂರ್ತಿ ಉಸ್ತುವಾರಿಯಲ್ಲಿ ನಡೆದ ಸ್ಪರ್ಧೆ ಸಂದರ್ಭ ದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ದಯಾನಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ದಲ್ಲಿ ಮಹಾರಾಜ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಉಪಸ್ಥಿತರಿದ್ದರು. ಕೊಲಾಜ್ ಮಾಡುವ ಸ್ಪರ್ಧೆಗೆ ಕೇವಲ 3 ಮಂದಿ, ಪೋಸ್ಟರ್ ಸಿದ್ಧಪಡಿಸುವ ಸ್ಪರ್ಧೆಗೆ 7 ಮಂದಿ, ಪ್ರಬಂಧ ಸ್ಪರ್ಧೆಗೆ 26 ಹಾಗೂ ರಸಪ್ರಶ್ನೆ ಸ್ಪರ್ಧೆಗೆ 22 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಇಲ್ಲಿ ವಿಜೇತರಾದವರು ಮುಂದಿನ ವಾರ ನಡೆಯಲಿರುವ ಜಿಲ್ಲಾ ಮಟ್ಟದ ಸಾಕ್ಷರತಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಜಿಲ್ಲಾ ಮಟ್ಟದ ಚುನಾವಣಾ ಸಾಕ್ಷರತಾ ಸ್ಪರ್ಧೆಗೆ ಆಯ್ಕೆ
ಪೋಸ್ಟರ್ ಸಿದ್ಧಪಡಿಸುವುದು: ನೇಹಾ ಕಾಜಲ್, ವಾಣಿ ವಿಲಾಸ ಪದವಿಪೂರ್ವ ಕಾಲೇಜು (ಪ್ರಥಮ), ಎಸ್.ದರ್ಶನ್, ಸರ್ಕಾರಿ ಪ.ಪೂ ಕಾಲೇಜು, ಮಂಚೇಗೌಡನ ಕೊಪ್ಪಲು (ದ್ವಿತೀಯ), ಎಂ.ಮನು, ಮಹಾರಾಜ ಸರ್ಕಾರಿ ಪ.ಪೂ. ಕಾಲೇಜು. (ತೃತೀಯ).
ಕೊಲಾಜ್ ಮಾಡುವುದು: ಸಯೀದಾ ಮಸೀಹಾ, ವಾಣಿವಿಲಾಸ ಪ.ಪೂ. ಕಾಲೇಜು (ಪ್ರಥಮ), ಎಂ.ಗೌರಿಶಂಕರ, ಮಹಾರಾಜ ಪ.ಪೂ. ಕಾಲೇಜು (ದ್ವಿತೀಯ), ಎಸ್.ಕುಮಾರಿ, ಮಹಾರಾಣಿ ಸರ್ಕಾರಿ ಪ.ಪೂ. ಕಾಲೇಜು (ತೃತೀಯ).

ಪ್ರಬಂಧ ಸ್ಪರ್ಧೆ (ಕನ್ನಡ ಮಾಧ್ಯಮ): ಪ್ರಥಮ ಪಿಯುಸಿಯಲ್ಲಿ ಸಂತೋಷ್, ಮಹಾರಾಜ ಪ.ಪೂ. ಕಾಲೇಜು (ಪ್ರಥಮ), ರಾಬಿಯಾ ಬಾನು, ಸರ್ಕಾರಿ ಪ.ಪೂ. ಕಾಲೇಜು, ಕಲ್ಯಾಣಗಿರಿ (ದ್ವಿತೀಯ). ದ್ವಿತೀಯ ಪಿಯುಸಿಯಲ್ಲಿ ಎಸ್.ಕಾವ್ಯ, ಮಹಾರಾಣಿ ಸರ್ಕಾರಿ ಪ.ಪೂ. ಕಾಲೇಜು (ಪ್ರಥಮ), ಸ್ಫೂರ್ತಿ ಮಹೇಶ್, ವಾಣಿವಿಲಾಸ ಪ.ಪೂ. ಕಾಲೇಜು (ದ್ವಿತೀಯ), ಎನ್.ಇ.ಲಕ್ಷ್ಮಿ, ಮಹಾರಾಣಿ ಪ.ಪೂ. ಕಾಲೇಜು (ತೃತೀಯ).

ಪ್ರಬಂಧ ಸ್ಪರ್ಧೆ(ಇಂಗ್ಲಿಷ್ ಮಾಧ್ಯಮ): ಪ್ರಥಮ ಪಿಯುಸಿಯಲ್ಲಿ ಶಾಜಿಯಾಬಾನು, ವಾಣಿವಿಲಾಸ ಪ.ಪೂ.ಕಾಲೇಜು (ಪ್ರಥಮ). ದ್ವಿತೀಯ ಪಿಯುಸಿಯಲ್ಲಿ ಪಲ್ಲವಿ, ವಾಣಿ ವಿಲಾಸ ಪ.ಪೂ. ಕಾಲೇಜು (ಪ್ರಥಮ), ತನಿಯಾ ತಾಜೀಮ್, ಮರಿಮಲ್ಲಪ್ಪ ಪ.ಪೂ. ಕಾಲೇಜು (ದ್ವಿತೀಯ), ಎಂ.ಅನನ್ಯ, ಜೆಎಸ್‍ಎಸ್ ಪ.ಪೂ.ಕಾಲೇಜು (ತೃತೀಯ).
ರಸಪ್ರಶ್ನೆ ಸ್ಪರ್ಧೆ: ಡಿ.ಹೇಮಂತಕುಮಾರ್, ಮರಿಮಲ್ಲಪ್ಪ ಪ.ಪೂ.ಕಾಲೇಜು (ಪ್ರಥಮ), ಎಚ್.ಎನ್.ದರ್ಶನ್, ಮಹಾರಾಜ ಪ.ಪೂ.ಕಾಲೇಜು (ದ್ವಿತೀಯ), ಸ್ಫೂರ್ತಿ ಮಹೇಶ್, ವಾಣಿ ವಿಲಾಸ ಪ.ಪೂ.ಕಾಲೇಜು (ತೃತೀಯ).

Translate »