ಮೈಸೂರು: ಮೈಸೂರು ಜಿಲ್ಲೆಯ 2017-18ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ 266 ಹುದ್ದೆಗಳ ಪೈಕಿ ಸಾಮಾನ್ಯ ಅರ್ಹತೆಯ 100 ಹುದ್ದೆಗಳಿಗೆ ಸೋಮವಾರ ಕೌನ್ಸಿ ಲಿಂಗ್ ಮೂಲಕ ಭರ್ತಿ ಮಾಡಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಸ್.ಮಮತಾ ನೇತೃತ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಸಭಾಂ ಗಣದಲ್ಲಿ ನಡೆದ ಕೌನ್ಸಿಲಿಂಗ್‍ನಲ್ಲಿ ಸಾಮಾನ್ಯ ಅರ್ಹತೆ ಅಭ್ಯರ್ಥಿಗಳು ಹಾಗೂ ಸಾಮಾನ್ಯ ಮಹಿಳಾ ಅಭ್ಯರ್ಥಿಗಳಿಗೆ ಅವರ ಆಯ್ಕೆಯಂತೆ ಸ್ಥಳ ನಿಯೋಜನೆ ಮಾಡಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಿದರು.
ಇಂಗ್ಲಿಷ್‍ನ 57, ವಿಜ್ಞಾನ ಮತ್ತು ಗಣಿತ 23 ಹಾಗೂ ಸಮಾಜ ವಿಜ್ಞಾನದ 20 ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡಿ ನೇಮಕಾತಿ ಆದೇಶ ಪತ್ರ ನೀಡಲಾಗಿದೆ. ಕೌನ್ಸಿಲಿಂಗ್ ಅನ್ನು ಅತ್ಯಂತ ಪಾರದರ್ಶಕ ಹಾಗೂ ಮುಕ್ತವಾಗಿ ನಡೆಸಿ, ನೇಮಕಾತಿ ಆದೇಶ ಪತ್ರಗಳನ್ನು ನೀಡಿರುವುದಾಗಿ ಡಿಡಿ ಪಿಐ ಎಸ್.ಮಮತಾ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಉಳಿದ ಹುದ್ದೆಗಳಿಗೆ ಪ್ರವರ್ಗಗಳಲ್ಲಿ ಅವರ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಅವರಿಗೆ ಆದೇಶ ಪ್ರತಿಗಳನ್ನು ನೀಡಲಾಗು ವುದು ಎಂದರು. ಈ ಸಂದರ್ಭದಲ್ಲಿ ಡಿಡಿ ಪಿಐ ಅವರೊಂದಿಗೆ ಶಿಕ್ಷಣಾಧಿಕಾರಿ ಎಂ. ಉದಯಕುಮಾರ್, ಪತ್ರಾಂಕಿತ ಸಹಾ ಯಕ ಶಶಿಧರ್, ಅಧೀಕ್ಷಕ ರಘುನಾಥನ್, ವಿಷಯ ನಿರ್ವಾಹಕ ಆನಂದ್ ಇದ್ದರು.