ಮೈಸೂರು

ಇಂಗ್ಲಿಷ್ ಹೊಟ್ಟೆಪಾಡಿಗೆ, ಕನ್ನಡ ಹೃದಯ ದೀವಿಗೆ: ಪ್ರೊ.ಕೆ.ಅನಂತರಾಮು
ಮೈಸೂರು

ಇಂಗ್ಲಿಷ್ ಹೊಟ್ಟೆಪಾಡಿಗೆ, ಕನ್ನಡ ಹೃದಯ ದೀವಿಗೆ: ಪ್ರೊ.ಕೆ.ಅನಂತರಾಮು

December 1, 2018

ಮೈಸೂರು:  ದಿನ ದಿಂದ ದಿನಕ್ಕೆ ಕನ್ನಡ ಭಾಷೆಯ ಸಾರ್ವ ಭೌಮತೆಗೆ ಧಕ್ಕೆಯುಂಟಾಗುತ್ತಿದೆ. ಮಾತೃ ಭಾಷೆಯ ರಕ್ಷಣೆಗಾಗಿ ಹೊಟ್ಟೆಪಾಡಿನ ಭಾಷೆ ಯಾದ ಇಂಗ್ಲಿಷನ್ನು ಬುದ್ಧಿಗೆ ಮಾತ್ರ ಸೀಮಿತ ಗೊಳಿಸಿ. ಕನ್ನಡವನ್ನು ಹೃದಯದಲ್ಲಿಟ್ಟುಕೊಳ್ಳಿ ಎಂದು ಸಾಹಿತ್ಯ ಮತ್ತು ಸಂಸ್ಕøತಿ ಚಿಂತಕ ಪ್ರೊ.ಕೆ.ಅನಂತರಾಮು ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಕಾವೇರಿ ಸಭಾಂಗಣದಲ್ಲಿ ಶುಕ್ರ ವಾರ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂ ದಾಗಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗು…

ಪರೀಕ್ಷೆಗೆ 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಿ
ಮೈಸೂರು

ಪರೀಕ್ಷೆಗೆ 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಿ

December 1, 2018

ಮೈಸೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಮೈಸೂರು ನಗರದಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಗುರುವಾರದಿಂದ (ನ.29) ಪರೀಕ್ಷೆ ಆರಂಭ ಗೊಂಡಿದ್ದು, ಡಿ.8ರವರೆಗೆ ಮೈಸೂರು ನಗರ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿ ರುವ ಪರೀಕ್ಷೆಗೆ 10,498 ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಡಿ.8ರಂದು ನಡೆಯುವ ಕನ್ನಡ ಭಾಷೆ ಸಾಮಾನ್ಯ ಪತ್ರಿಕೆಯ ಪರೀಕ್ಷೆಯನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ…

ಮಹಿಳೆಯ ಹೊಟ್ಟೆಯಲ್ಲಿತ್ತು 12 ಕೆಜಿ ಗೆಡ್ಡೆ : ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು
ಮೈಸೂರು

ಮಹಿಳೆಯ ಹೊಟ್ಟೆಯಲ್ಲಿತ್ತು 12 ಕೆಜಿ ಗೆಡ್ಡೆ : ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

December 1, 2018

ಮೈಸೂರು: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಯೊಬ್ಬರ ಹೊಟ್ಟೆಯಿಂದ 12 ಕೆಜಿ ತೂಕದ ಮಾಂಸದ ಗೆಡ್ಡೆಯೊಂದನ್ನು ತೆಗೆಯುವಲ್ಲಿ ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್‍ನ ವೈದ್ಯರು ಯಶಸ್ವಿಯಾಗಿದ್ದಾರೆ. ಆಗಾಗ ಹೊಟ್ಟೆ ನೋವು ಕಾಣಿಸಿಕೊಂಡು ಪರಿತಪಿಸುತ್ತಿದ್ದ ಮೈಸೂರಿನ ಶಾಂತಿನಗರ ಸಲ್ಮಾ (47) ಅವರ ಹೊಟ್ಟೆ ದಪ್ಪವಾಗುತ್ತಾ ಬಂದಿತ್ತು. ಇದರಿಂದ ಭಯಗೊಂಡ ಅವರು ಕೆಲವು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದರು. ಹೊಟ್ಟೆಯಲ್ಲಿ ಗೆಡ್ಡೆ ಇರುವ ಬಗ್ಗೆ ಖಚಿತಪಡಿಸಿ, ಶಸ್ತ್ರಚಿಕಿತ್ಸೆ ನಡೆಸಬೇಕಾ ಗುತ್ತದೆಂದು ತಿಳಿಸಿದರು. ಶಸ್ತ್ರಚಿಕಿತ್ಸೆಗೆ ಅಗತ್ಯ ಹಣ ಹೊಂದಿಸಲಾಗದ ಅವರು ಸಂಬಂಧಿಕರ…

ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು
ಮೈಸೂರು

ಮದುವೆ ನಿಲ್ಲಿಸಿದ ವಾಟ್ಸಪ್! ನಿಶ್ಚಯಿಸಿದ್ದ ಮದುವೆ ಮುರಿದು ಬಿತ್ತು… ಪ್ರೇಮಿಗಳು ವಿವಾಹವಾದರು

December 1, 2018

ಸಕಲೇಶಪುರ: ವಾಟ್ಸಪ್ ಸಂದೇಶದಿಂದ ಮದುವೆಯೊಂದು ಮುರಿದು ಬಿದ್ದಿದ್ದು, ವಧುವಿನ ಜೊತೆ ಇದ್ದ ಫೋಟೋಗಳನ್ನು ವರನಿಗೆ ವಾಟ್ಸಪ್ ಮಾಡಿದ್ದ ಪ್ರಿಯಕರನೇ ಆಕೆಯನ್ನು ಮದುವೆಯಾದ ಘಟನೆ ಸಕಲೇಶಪುರದ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ನಡೆದಿದೆ. ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದ ಶ್ರುತಿ ಮತ್ತು ಬೈಕೆರೆ ಗ್ರಾಮದ ಯೋಧ ತಾರೇಶ್ ವಿವಾಹ ಶೀನಪ್ಪಶೆಟ್ಟಿ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಲಾಗಿತ್ತು. ಮಾಂಗಲ್ಯ ಧಾರಣೆಗೆ ಕೆಲ ಗಂಟೆಗಳ ಮುನ್ನ ಮಧುಮಗ ತಾರೇಶ್ ಮೊಬೈಲ್‍ಗೆ ವಾಟ್ಸಪ್ ಸಂದೇಶ ಬಂದಿದೆ. ಅದರಲ್ಲಿ ಕೆಲವೇ ಗಂಟೆಗಳಲ್ಲಿ ತಾನು ವಿವಾಹವಾಗಬೇಕಾಗಿದ್ದ ವಧು…

ಮೈಸೂರು ವಿವಿ ಆಡಳಿತ, ಮಾನಸಗಂಗೋತ್ರಿ ಶೈಕ್ಷಣಿಕ  ಚಟುವಟಿಕೆಗೆ ನೂತನ ತಂತ್ರಾಂಶದೊಂದಿಗೆ ಡಿಜಿಟಲೀಕರಣ
ಮೈಸೂರು

ಮೈಸೂರು ವಿವಿ ಆಡಳಿತ, ಮಾನಸಗಂಗೋತ್ರಿ ಶೈಕ್ಷಣಿಕ ಚಟುವಟಿಕೆಗೆ ನೂತನ ತಂತ್ರಾಂಶದೊಂದಿಗೆ ಡಿಜಿಟಲೀಕರಣ

December 1, 2018

ಮೈಸೂರು: ಇನ್ನೆರಡು ವರ್ಷದಲ್ಲಿ ಮೈಸೂರು ವಿವಿಯ ಆಡಳಿತ ಹಾಗೂ ಮಾನಸ ಗಂಗೋತ್ರಿಯ ಶೈಕ್ಷಣಿಕ ಚಟುವಟಿಕೆಗಳನ್ನು ಹಂತ ಹಂತ ವಾಗಿ ನೂತನ ತಂತ್ರಾಂಶ ಅಳವಡಿಸಿ ಡಿಜಿಟಲೀಕರಣ ಗೊಳಿಸಲಾಗುವುದು ಎಂದು ನೂತನ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ತಿಳಿಸಿದರು. ಮೈಸೂರು ವಿವಿ ಮೌಲ್ಯಮಾಪನ ಭವನ ದಲ್ಲಿ ಕರ್ನಾಟಕ ರಾಜ್ಯ ಕಂಪ್ಯೂಟರ್ ಸೈನ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾ ಗದ ವತಿಯಿಂದ ಆಯೋಜಿಸಿದ್ದ ಅಭಿನಂ ದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿ ಮೈಸೂರು…

ಮೈಸೂರು ನ್ಯಾಯಾಲಯ ಆವರಣದಲ್ಲಿ ಕನ್ನಡ ಕಹಳೆ
ಮೈಸೂರು

ಮೈಸೂರು ನ್ಯಾಯಾಲಯ ಆವರಣದಲ್ಲಿ ಕನ್ನಡ ಕಹಳೆ

December 1, 2018

ಮೈಸೂರು:  ನ್ಯಾಯಾ ಲಯದ ಆವರಣದಲ್ಲಿ ಕನ್ನಡ ವಿಜೃಂಭಿಸ ಬೇಕೆಂದು ಲೇಖಕ, ಖ್ಯಾತ ಅಂಕಣಕಾರ ಗುಬ್ಬಿಗೂಡು ರಮೇಶ್ ಆಶಿಸಿದರು. ಮೈಸೂರು ವಕೀಲರ ಸಂಘದ ಆವರಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋ ತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೌರವಾನ್ವಿತ ನ್ಯಾಯಾಧೀಶರು, ಬಡ ಬೋರೇಗೌಡನಿಗೂ ನ್ಯಾಯಾಭಿ ದಾನ ಅರ್ಥವಾಗುವಂತೆ ಕನ್ನಡದಲ್ಲೇ ತೀರ್ಪು ಪ್ರಕಟಿಸಬೇಕು. ಬಹಳ ವರ್ಷಗಳಿಂದ ಬಹ ಳಷ್ಟು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ಬರೆದಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಾಗ ಬೇಕು. ಹಾಗೆಯೇ ವಕೀಲರು ಕನ್ನಡದಲ್ಲೇ ಕಲಾಪಗಳನ್ನು ನಡೆಸಬೇಕೆಂದು ಸಮಸ್ತ ಕನ್ನಡಿಗರ…

ಕನ್ನಡ ಪರ ಹೋರಾಟಗಾರರ ಮೇಲಿನ  ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕನ್ನಡ ಪರ ಹೋರಾಟಗಾರರ ಮೇಲಿನ  ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

December 1, 2018

ಮೈಸೂರು: ನಾಡಿನ ನೆಲ-ಜಲ-ಭಾಷೆ ರಕ್ಷಣೆಗಾಗಿ ಹೋರಾಡುತ್ತಿ ರುವ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯ ಬೇಕೆಂದು ಒತ್ತಾಯಿಸಿ ಕನ್ನಡ ಕ್ರಿಯಾ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು. ನ್ಯಾಯಾಲಯದ ಮುಂಭಾಗ ಗಾಂಧಿ ಪುತ್ಹಳಿ ಬಳಿ ಜಮಾವಣೆಗೊಂಡ ಕನ್ನಡಪರ ಹೋರಾಟ ಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದರು. ಈ ವೇಳೆ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಮಾತ ನಾಡಿ, ರಾಜ್ಯದಲ್ಲಿ ಗೋಕಾಕ್ ಚಳವಳಿ ವೇಳೆ ಕನ್ನಡಪರ ಹೋರಾಟಗಾರರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ…

ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ
ಮೈಸೂರು

ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ

December 1, 2018

ಮೈಸೂರು:  ಮನೆ ಗೊಂದು ಶೌಚಾಲಯ ಕಡ್ಡಾಯ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ, ಸ್ವಚ್ಛ ಭಾರತ- ಸ್ವಸ್ಥ ಭಾರತ, ಸ್ವಚ್ಛ ಭಾರತ- ಸಮಾಜಕ್ಕೆ ಹಿತ ಎಂಬ ಘೋಷ ವಾಕ್ಯ ಗಳೊಂದಿಗೆ ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ಶಾರದಾದೇವಿನಗರದ ಪ್ರಮುಖ ರಸ್ತ್ತೆಗಳಲ್ಲಿ ಸ್ವಚ್ಛತಾ ಅಭಿಯಾನ – ವಿಶೇಷ ಜಾಗೃತಿ ಜಾಥಾ ನಡೆಸಿದರು. ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮೈಸೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿ ವೃದ್ಧಿ ಇಲಾಖೆ,…

ಇಂದು ಸಚಿವ ಜಿಟಿಡಿ ಅವರಿಂದ ಮುಕ್ತ ವಿವಿ 9 ಪ್ರಾದೇಶಿಕ ಕೇಂದ್ರಗಳ ಉದ್ಘಾಟನೆ
ಮೈಸೂರು

ಇಂದು ಸಚಿವ ಜಿಟಿಡಿ ಅವರಿಂದ ಮುಕ್ತ ವಿವಿ 9 ಪ್ರಾದೇಶಿಕ ಕೇಂದ್ರಗಳ ಉದ್ಘಾಟನೆ

December 1, 2018

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಮೂಲಕ ದೂರ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನೆರವಾಗಲೆಂಬ ಉದ್ದೇಶದಿಂದ ರಾಜ್ಯದ 9 ಜಿಲ್ಲೆಗಳಲ್ಲಿ ಮುಕ್ತ ವಿವಿ ಪ್ರಾದೇಶಿಕ ಕೇಂದ್ರಗಳನ್ನು ನಾಳೆ(ಡಿ.1) ಬೆಳಿಗ್ಗೆ 11ಕ್ಕೆ ಮುಕ್ತ ಗಂಗೋತ್ರಿಯಲ್ಲಿರುವ ಘಟಿಕೋ ತ್ಸವ ಭವನದಲ್ಲಿ ವಿವಿಯ ಸಹ ಕುಲಾ ಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸ ಲಿದ್ದಾರೆ. 2015ರಲ್ಲಿ ಮುಕ್ತ ವಿವಿ ವತಿ ಯಿಂದ ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹಾಸನ, ಕೋಲಾರ, ಚಾಮರಾಜನಗರ, ತುಮಕೂರು ಹಾಗೂ ಮಂಡ್ಯದಲ್ಲಿ…

ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ
ಮೈಸೂರು

ಡಿ.5ರಂದು ಮೃಗಾಲಯದಲ್ಲಿ ವಿಶ್ವ ಮಣ್ಣಿನ ದಿನಾಚರಣೆ

December 1, 2018

ಮೈಸೂರು: ವಿಶ್ವ ಮಣ್ಣಿನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಮೃಗಾಲಯದ ಆವರಣದಲ್ಲಿರುವ ವನ್ಯರಂಗದಲ್ಲಿ ಡಿ.5ರಂದು ಮಧ್ಯಾಹ್ನ 2.30ಕ್ಕೆ ತಜ್ಞರಿಂದ ಮಣ್ಣಿನ ಸವಕಳಿ ತಡೆ, ಸ್ಥಿತಿಗತಿ ಹಾಗೂ ಮಹತ್ವ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ಮತ್ತು ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಎಂ.ಕುಲಕರ್ಣಿ ತಿಳಿಸಿದ್ದಾರೆ. ನೈಸರ್ಗಿಕ ಸಂಪನ್ಮೂಲಗಳಲ್ಲಿ ಪ್ರಮುಖ ಪಾತ್ರ ವಹಿಸುವ ಮಣ್ಣು ಇತ್ತೀಚಿನ ದಿನಗಳಲ್ಲಿ ಅವನತಿಯತ್ತ ಸಾಗುತ್ತಿದೆ. ನವೀಕರಿಸಲಾಗದ ಸಂಪನ್ಮೂಲವಾಗಿರುವ ಮಣ್ಣಿನ ಸಂರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಂತರರಾಷ್ಟ್ರೀಯ ಮಣ್ಣಿನ ವೈಜ್ಞಾನಿಕ…

1 1,256 1,257 1,258 1,259 1,260 1,611
Translate »