ಕನ್ನಡ ಪರ ಹೋರಾಟಗಾರರ ಮೇಲಿನ  ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಕನ್ನಡ ಪರ ಹೋರಾಟಗಾರರ ಮೇಲಿನ  ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

December 1, 2018

ಮೈಸೂರು: ನಾಡಿನ ನೆಲ-ಜಲ-ಭಾಷೆ ರಕ್ಷಣೆಗಾಗಿ ಹೋರಾಡುತ್ತಿ ರುವ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಕೂಡಲೇ ವಾಪಸ್ ಪಡೆಯ ಬೇಕೆಂದು ಒತ್ತಾಯಿಸಿ ಕನ್ನಡ ಕ್ರಿಯಾ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನ್ಯಾಯಾಲಯದ ಮುಂಭಾಗ ಗಾಂಧಿ ಪುತ್ಹಳಿ ಬಳಿ ಜಮಾವಣೆಗೊಂಡ ಕನ್ನಡಪರ ಹೋರಾಟ ಗಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪ ಡಿಸಿದರು. ಈ ವೇಳೆ ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಮಾತ ನಾಡಿ, ರಾಜ್ಯದಲ್ಲಿ ಗೋಕಾಕ್ ಚಳವಳಿ ವೇಳೆ ಕನ್ನಡಪರ ಹೋರಾಟಗಾರರನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಇತ್ತೀಚೆಗೆ ಹೋರಾಟಗಾರ ರನ್ನು ಕೇವಲವಾಗಿ ನೋಡಲಾಗುತ್ತಿದೆ. ಕಳೆದ 2 ವರ್ಷಗಳ ಹಿಂದೆ ಕೆ.ಆರ್.ವೃತ್ತದಲ್ಲಿ ಪ್ರತಿ ಭಟನೆ ನಡೆಸಿದ ಹಿನ್ನಲೆ ಪೊಲೀಸರು ಪ್ರತಿಭಟನಾ ಕಾರರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾ ರೆಂದು ಸುಳ್ಳು ದೂರು ದಾಖಲಿಸಿದ್ದಾರೆ. ಇದು ಸರಿಯಲ್ಲ ಎಂದರು. ನಾಡಿಗಾಗಿ ಹೋರಾಡುತ್ತಿರುವವರು ಇಂದು ನ್ಯಾಯಾಲಯಗಳಿಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ. ಜತಗೆ ನಮ್ಮನ್ನು ಅಪರಾಧಿ ಗಳೆಂದು ಪರಿಗಣಿಸಿ ಕೆಟ್ಟ ಮನೋಭಾವದಿಂದ ನೋಡಲಾಗುತ್ತಿದೆ. ನಮ್ಮ ಮೇಲಿನ ಪ್ರಕರಣ ಗಳನ್ನು ವಾಪಸ್ ಪಡೆಯುವಂತೆ ಮನವಿ ಮಾಡು ತ್ತಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದೆ. ಇನ್ನಾದರೂ ನಮ್ಮ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ರಾದ ಪ.ಮಲ್ಲೇಶ್, ಬೋಗಾದಿ ಸಿದ್ಧೇಗೌಡ, ಎಂ.ಬಿ.ವಿಶ್ವನಾಥ್, ಸಿದ್ದಾಶ್ರಮ, ಕೂ.ಸು. ನರಸಿಂಹಮೂರ್ತಿ, ಗೋಪಿನಾಥ್, ನಾಗೇಂದ್ರ, ಡಾ.ಮೆಲ್ಲಳ್ಳಿ ರೇವಣ್ಣ, ಬಾನು ಮೋಹನ್, ಅರವಿಂದ ಶರ್ಮ, ತೇಜಸ್ವಿಕುಮಾರ್, ಚೋರನಹಳ್ಳಿ ಮಹದೇವು ಮತ್ತಿತರರು ಪಾಲ್ಗೊಂಡಿದ್ದರು.

Translate »