ಮೈಸೂರು ನ್ಯಾಯಾಲಯ ಆವರಣದಲ್ಲಿ ಕನ್ನಡ ಕಹಳೆ
ಮೈಸೂರು

ಮೈಸೂರು ನ್ಯಾಯಾಲಯ ಆವರಣದಲ್ಲಿ ಕನ್ನಡ ಕಹಳೆ

December 1, 2018

ಮೈಸೂರು:  ನ್ಯಾಯಾ ಲಯದ ಆವರಣದಲ್ಲಿ ಕನ್ನಡ ವಿಜೃಂಭಿಸ ಬೇಕೆಂದು ಲೇಖಕ, ಖ್ಯಾತ ಅಂಕಣಕಾರ ಗುಬ್ಬಿಗೂಡು ರಮೇಶ್ ಆಶಿಸಿದರು.

ಮೈಸೂರು ವಕೀಲರ ಸಂಘದ ಆವರಣ ದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋ ತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೌರವಾನ್ವಿತ ನ್ಯಾಯಾಧೀಶರು, ಬಡ ಬೋರೇಗೌಡನಿಗೂ ನ್ಯಾಯಾಭಿ ದಾನ ಅರ್ಥವಾಗುವಂತೆ ಕನ್ನಡದಲ್ಲೇ ತೀರ್ಪು ಪ್ರಕಟಿಸಬೇಕು. ಬಹಳ ವರ್ಷಗಳಿಂದ ಬಹ ಳಷ್ಟು ನ್ಯಾಯಾಧೀಶರು ಕನ್ನಡದಲ್ಲೇ ತೀರ್ಪು ಬರೆದಿದ್ದಾರೆ. ಅಂತಹವರ ಸಂಖ್ಯೆ ಹೆಚ್ಚಾಗ ಬೇಕು. ಹಾಗೆಯೇ ವಕೀಲರು ಕನ್ನಡದಲ್ಲೇ ಕಲಾಪಗಳನ್ನು ನಡೆಸಬೇಕೆಂದು ಸಮಸ್ತ ಕನ್ನಡಿಗರ ಪರವಾಗಿ ಮನವಿ ಮಾಡಿ ಕೊಳ್ಳುತ್ತೇನೆ. ಹೀಗೆ ನ್ಯಾಯಾಲಯದ ಆವರಣದಲ್ಲಿ ಕನ್ನಡ ವಿಜೃಂಭಿಸಿದರೆ ಕರುನಾಡ ಅನಾವರಣವಾದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.

ನ್ಯಾಯಾಲಯದ ಕಲಾಪಗಳೊಂದಿಗೆ ರಾಜಕೀಯ ಕ್ಷೇತ್ರಕ್ಕೂ ದುಮುಕಿ, ಕರ್ನಾ ಟಕವನ್ನು ಆಡಳಿತಾತ್ಮಕವಾಗಿ ರೂಪಿಸಿದ ಮಹನೀಯರ ಚರಿತ್ರೆಯನ್ನು ತರುಣ ತಲೆಮಾರಿನ ವಕೀಲರು ಗಮನಿಸಬೇಕು. ರಾಜಕಾರಣದ ಮೊಗಸಾಲೆಯಲ್ಲಿ ವಕೀ ಲರ ಭಾಗವಹಿಸುವಿಕೆ ಬಗ್ಗೆ ತಿಳಿಯಬೇ ಕೆಂದು ಕಿವಿಮಾತು ಹೇಳಿದ ಅವರು, ವೃತ್ತಿ ಹಾಗೂ ಪ್ರವೃತ್ತಿ ಯಾವುದಾದರೂ ಸರಿಯೇ ಕನ್ನಡವನ್ನು ಜೀವಂತ ಭಾಷೆ ಯಾಗಿ ಬಳಸುತ್ತೇವೆ ಎಂಬ ಬದ್ಧತೆಯುಳ್ಳ ಕನ್ನಡಪರ ಕಟ್ಟಾಳುಗಳ ಹೊಸ ಪಡೆ ಸೃಷ್ಟಿ ಯಾಗಬೇಕೆಂದು ಆಶಯ ವ್ಯಕ್ತಪಡಿಸಿದರು.

ಟಿ.ಪಿ.ಕೈಲಾಸಂ ಅವರ ತಂದೆ ಪರಮ ಶಿವಯ್ಯ ಅವರು ನ್ಯಾಯಾಧೀಶ, ನ್ಯಾಯ ಮೂರ್ತಿಗಳಾಗಿದ್ದರು. ತಮ್ಮಂತೆ ಮಗನೂ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆ ಅವರಲ್ಲಿತ್ತು. ಆದರೆ ಕೈಲಾಸಂ ಅವ ರನ್ನು ಸಾಹಿತ್ಯ ಸೆಳೆದಿತ್ತು. ಕಾರ್ಯಕ್ರಮ ವೊಂದರಲ್ಲಿ ಕೈಲಾಸಂ ಅವರ ತಂದೆ ಎಂದು ಗುರುತಿಸಿ ಗೌರವಿಸಿದ್ದನ್ನು ಕಂಡು ಪರಮ ಶಿವಯ್ಯ ಅವರು ಭಾವುಕರಾಗಿದ್ದರು. ಕವಿ ಜಿ.ಪಿ.ರಾಜರತ್ನಂ ಅವರ ಮಾತೃಭಾಷೆ ತಮಿಳು. ಆದರೆ ಅವರಂತಹ ಅಪ್ಪಟ ಕನ್ನಡ ಪ್ರೇಮಿ ಮತ್ತೊಬ್ಬರಿಲ್ಲ. ಹೆಂಡ, ಹೆಂಡತಿ ಬಿಟ್ಟರೂ ಕನ್ನಡ ಪದವನ್ನು ಬಿಡುವುದಿಲ್ಲ. ನನ್ನ ನಾಲಿಗೆ ಸೀಳಿದರೂ, ಮೂಗಿನಲ್ಲೇ ಕನ್ನಡ ಪದವಾಡುತ್ತೇನೆ ಎಂದು ಅಗಾಧ ಕನ್ನಡ ಪ್ರೇಮ ಮೆರೆದರು. ಈ ಮಹನೀ ಯರ ಸ್ಮರಣೆಯೊಂದಿಗೆ ವಕೀಲರುಗಳೂ ಸಾಂಸ್ಕøತಿಕ ಪ್ರತಿನಿಧಿಗಳಾಗಿ ಬೆಳೆಯ ಬೇಕೆಂದು ಗುಬ್ಬಿಗೂಡು ರಮೇಶ್ ಹೇಳಿದರು.

ಕನ್ನಡದಂತೆ ಸ್ಪ್ಯಾನಿಶ್, ಡ್ಯಾನಿಷ್, ಜರ್ಮನ್, ರಷ್ಯನ್ ಇತ್ಯಾದಿ ಭಾಷೆಗಳೂ ಇಂಗ್ಲಿಷ್ ಮುಂದೆ ಮಂಡಿಯೂರಿ ಕುಳಿತಂತಿದೆ. ಈ ಪರಿಸ್ಥಿತಿಯಲ್ಲಿ ಕನ್ನಡದ ಪರ ಜೈಕಾರ ಹಾಕುವವವರ ಸಂಖ್ಯೆ ಹೆಚ್ಚುತ್ತಿರುವುದು ಸಮಾಧಾನದ ಸಂಗತಿ. ಗಡಿನಾಡ ಸಮಸ್ಯೆ ಬಗ್ಗೆ ಚಲನಚಿತ್ರದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈ ಕಥಾವಸ್ತುವನ್ನೊಳಗೊಂಡ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ- ಕಾಸರ ಗೋಡು’ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಅವರು, ಕನ್ನಡದಲ್ಲಿ ತೀರ್ಪು ಪ್ರಕಟಿಸಿ ರುವ ಮೈಸೂರಿನ 5ನೇ ಸಿವಿಲ್ ನ್ಯಾಯಾ ಲಯದ ನ್ಯಾಯಾಧೀಶರಾದ ಬಳ್ಳಪ್ಪ, ಮುನ್ಸಿಪ್ ನ್ಯಾಯಾಧೀಶರಾಗಿ ಆಯ್ಕೆಯಾ ಗಿರುವ ಪ್ರತಾಪ್ ಹಾಗೂ ಮಂಜು ಅವ ರನ್ನು ಅಭಿನಂದಿಸಿದರು. ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್ ಅಧ್ಯಕ್ಷತೆ ವಹಿಸಿ ದ್ದರು. ಮೇಯರ್ ಪುಷ್ಪಲತಾ ಜಗ ನ್ನಾಥ್, ಸಂಘದ ಕಾರ್ಯದರ್ಶಿ ಬಿ. ಶಿವಣ್ಣ, ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

Translate »