ಮೈಸೂರು ವಿವಿ ಆಡಳಿತ, ಮಾನಸಗಂಗೋತ್ರಿ ಶೈಕ್ಷಣಿಕ  ಚಟುವಟಿಕೆಗೆ ನೂತನ ತಂತ್ರಾಂಶದೊಂದಿಗೆ ಡಿಜಿಟಲೀಕರಣ
ಮೈಸೂರು

ಮೈಸೂರು ವಿವಿ ಆಡಳಿತ, ಮಾನಸಗಂಗೋತ್ರಿ ಶೈಕ್ಷಣಿಕ ಚಟುವಟಿಕೆಗೆ ನೂತನ ತಂತ್ರಾಂಶದೊಂದಿಗೆ ಡಿಜಿಟಲೀಕರಣ

December 1, 2018

ಮೈಸೂರು: ಇನ್ನೆರಡು ವರ್ಷದಲ್ಲಿ ಮೈಸೂರು ವಿವಿಯ ಆಡಳಿತ ಹಾಗೂ ಮಾನಸ ಗಂಗೋತ್ರಿಯ ಶೈಕ್ಷಣಿಕ ಚಟುವಟಿಕೆಗಳನ್ನು ಹಂತ ಹಂತ ವಾಗಿ ನೂತನ ತಂತ್ರಾಂಶ ಅಳವಡಿಸಿ ಡಿಜಿಟಲೀಕರಣ ಗೊಳಿಸಲಾಗುವುದು ಎಂದು ನೂತನ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ತಿಳಿಸಿದರು.

ಮೈಸೂರು ವಿವಿ ಮೌಲ್ಯಮಾಪನ ಭವನ ದಲ್ಲಿ ಕರ್ನಾಟಕ ರಾಜ್ಯ ಕಂಪ್ಯೂಟರ್ ಸೈನ್ಸ್ ಟೀಚರ್ಸ್ ಅಸೋಸಿಯೇಷನ್ ಹಾಗೂ ಮೈಸೂರು ವಿವಿ ಕಂಪ್ಯೂಟರ್ ಸೈನ್ಸ್ ವಿಭಾ ಗದ ವತಿಯಿಂದ ಆಯೋಜಿಸಿದ್ದ ಅಭಿನಂ ದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಸ್ಪರ್ಧಾತ್ಮಕ ಯುಗದಲ್ಲಿ ಮೈಸೂರು ವಿವಿಯೂ ಕಾಲಕ್ಕೆ ತಕ್ಕಂತೆ ಬದಲಾಗ ಬೇಕಾಗಿದೆ. ಅದಕ್ಕಾಗಿ ಮುಂದಿನ ಎರಡು ವರ್ಷದಲ್ಲಿ ವಿವಿಯ ಆಡಳಿತ ಮತ್ತು ಶೈಕ್ಷ ಣಿಕ ಚಟುವಟಿಕೆಗಳಲ್ಲಿ ಗುಣಮಟ್ಟ ಕಾಪಾಡಿ ಕೊಳ್ಳಲು ಡಿಜಿಟಲೀಕರಣಗೊಳಿಸಲಾಗು ವುದು. ಇದಕ್ಕೆ ಉನ್ನತ ಶಿಕ್ಷಣ ಸಚಿವರು, ಮುಖ್ಯಮಂತ್ರಿಗಳು ಸಹ ಕೈ ಜೋಡಿಸುವ ಭರವಸೆ ನೀಡಿದ್ದಾರಲ್ಲದೆ, ಇದಕ್ಕೆ ಬೇಕಾದ ತಂತ್ರಾಂಶ ಈಗಾಗಲೇ ಸಿದ್ದಗೊಂಡಿದ್ದು, ಹಂತ ಹಂತವಾಗಿ ಅಳವಡಿಸಬೇಕಾಗಿದೆ ಎಂದರು.
1986ರಲ್ಲಿ ಮೈಸೂರು ವಿವಿ ಕಂಪ್ಯೂ ಟರ್ ಸೈನ್ಸ್ ವಿಭಾಗದಲ್ಲಿ ಅರೆಕಾಲಿಕ ಉಪ ನ್ಯಾಸಕನಾಗಿ ಕೆಲಸಕ್ಕೆ ಸೇರಿದ ದಿನದಲ್ಲಿ ಕಷ್ಟದ ದಿನಗಳನ್ನು ನೋಡಿದ್ದೇನೆ. ಆದರೂ ಉಪ ನ್ಯಾಸಕ ವೃತ್ತಿಯಲ್ಲಿ ಮುಂದುವರೆಯುವ ಹಂಬಲದಿಂದ ಹತ್ತು ವರ್ಷಗಳ ಕಾಳ ಅರೆ ಕಾಲಿಕ ಉಪನ್ಯಾಸಕನಾಗಿ ಸೇವೆ ಸಲ್ಲಿಸಿ, ನಂತರ ಈ ಹುದ್ದೆ ಖಾಯಂ ಆಯಿತು. ಮೊದಲು ಬೆರಳಣಿಕೆ ವಿದ್ಯಾರ್ಥಿಗಳೊಂ ದಿಗೆ ಆರಂಭವಾದ ಈ ವಿಭಾಗ, ಕನಿಷ್ಟ ಒಂದು ಕಂಪ್ಯೂಟರ್ ಸಹಾ ಇರಲಿಲ್ಲ. ನಂತರ ಹಂತ ಹಂತವಾಗಿ ವಿಭಾಗದ ಅಭಿವೃದ್ಧಿಗೆ ಅನೇಕರ ಶ್ರಮವಿದೆ ಎಂದರು.

ಕಳೆದ 30 ವರ್ಷಗಳಿಂದ ಮೈಸೂರು ವಿವಿಯಲ್ಲಿ ಸೇವೆ ಸಲ್ಲಿಸಿದ್ದೇನೆ ಹಾಗೂ ಹಲವು ಕುಲಪತಿಗಳ ಜೊತೆ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿರುವುದರಿಂದ ವಿವಿಯ ಎಲ್ಲಾ ರೀತಿಯ ಸಾಧಕ-ಬಾಧಕಗಳ ಬಗ್ಗೆ ಅರಿವಿದೆ. ವಿವಿಯ ವಿವಿಧ ವಿಭಾಗದಲ್ಲಿ ರುವ ಸಣ್ಣಪುಟ್ಟ ಗೊಂದಲಗಳನ್ನು ನಿವಾ ರಿಸಲು ಎಲ್ಲಾ ವಿಭಾಗದ ಪ್ರಾಧ್ಯಾಪಕರೊಂ ದಿಗೆ ಉತ್ತಮ ಬಾಂಧವ್ಯ ಗಳಿಸಿ, ಶತಮಾನ ಪೂರೈಸಿರುವ ವಿವಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಘನತೆ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆÉ ಎಂದರು.
ನಂತರ ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಕುಲಪತಿ ಪ್ರೊ. ಬಿ.ಜಿ. ಸಂಗಮೇಶ್ವರ್ ಮಾತನಾಡಿ, ನೂತನ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮತ್ತು ನಾನು ಹಳೆಯ ಗೆಳೆಯರು. ನಾನು ಕಳೆದ 40 ವರ್ಷಗಳಿಂದ ಜೆಸಿ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ ಕೆಲಸ ಮಾಡುತ್ತಿ ದ್ದೇನೆ. ಈ ವೇಳೆ ಮೈಸೂರು ವಿವಿ ಕಂಪ್ಯೂ ಟರ್ ವಿಭಾಗ ಆರಂಭಿಸಿದ ದಿನಗಳಲ್ಲಿ ನಾನು ಸಹ ಸಂದರ್ಶಕ ಪ್ರಾಧ್ಯಾಪಕನಾಗಿ ಪಾಠ ಮಾಡಿದ್ದೆ. ಈ ವೇಳೆ ಹೇಮಂತಕುಮಾರ್ ಅವರು, ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಥಮ ಬ್ಯಾಚ್ ವಿದ್ಯಾರ್ಥಿಯಾಗಿದ್ದು, ಆಗಲೇ ಈ ವಿಭಾಗದ ಎಲ್ಲಾ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ ಪ್ರಸಂಗವನ್ನು ವಿವರಿಸಿದರು.

ಪ್ರೊ.ಹೇಮಂತಕುಮಾರ್, ಮೈಸೂರಿನ ಲಕ್ಷ್ಮೀಪುರಂ ಸರ್ಕಾರಿ ಶಾಲೆಯಲ್ಲಿ ಪ್ರಾಥ ಮಿಕ ಶಿಕ್ಷಣ, ಜೆಎಸ್‍ಎಸ್ ಶಾಲೆಯಲ್ಲಿ ಪ್ರೌಢಶಿಕ್ಷಣ, ಶಾರದಾವಿಲಾಸ ಕಾಲೇಜಿ ನಲ್ಲಿ ಪದವಿ, ಬಿ.ಇಡಿ ವ್ಯಾಸಂಗ ಮಾಡಿ ದ್ದಾರೆ. ನಂತರ ಮೈಸೂರು ವಿವಿ ಆರಂಭಿ ಸಿದ ಕಂಪ್ಯೂಟರ್ ಸೈನ್ಸ್ ವಿಭಾಗದ ಸ್ನಾತ ಕೋತ್ತರ ಶಿಕ್ಷಣ ಮುಗಿಸಿ, ಅದೇ ವಿಭಾಗ ದಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದರು. ಇದುವರೆಗೂ ರಾಷ್ಟ್ರ ಮತ್ತು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ನೂರಾರು ಪ್ರಂಬಂಧ ಗಳನ್ನು ಮಂಡಿಸಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗ ದರ್ಶಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು. ವೇದಿಕೆಯಲ್ಲಿ ಮೈಸೂರು ವಿವಿ ಕಂಪ್ಯೂ ಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಡಿ. ಎಸ್.ಗುರು, ಸಿಡಿಸಿ ನಿರ್ದೇಶಕ ಡಾ.ಎಸ್. ಶ್ರೀಕಂಠಸ್ವಾಮಿ, ಪ್ರೊ.ಕೆ.ಸಿದ್ದರಾಜು ಸೇರಿದಂತೆ ಇತರರಿದ್ದರು.

Translate »