ಮಹಿಳೆಯ ಹೊಟ್ಟೆಯಲ್ಲಿತ್ತು 12 ಕೆಜಿ ಗೆಡ್ಡೆ : ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು
ಮೈಸೂರು

ಮಹಿಳೆಯ ಹೊಟ್ಟೆಯಲ್ಲಿತ್ತು 12 ಕೆಜಿ ಗೆಡ್ಡೆ : ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರ ತೆಗೆದ ವೈದ್ಯರು

December 1, 2018

ಮೈಸೂರು: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆ ಯೊಬ್ಬರ ಹೊಟ್ಟೆಯಿಂದ 12 ಕೆಜಿ ತೂಕದ ಮಾಂಸದ ಗೆಡ್ಡೆಯೊಂದನ್ನು ತೆಗೆಯುವಲ್ಲಿ ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್‍ನ ವೈದ್ಯರು ಯಶಸ್ವಿಯಾಗಿದ್ದಾರೆ.

ಆಗಾಗ ಹೊಟ್ಟೆ ನೋವು ಕಾಣಿಸಿಕೊಂಡು ಪರಿತಪಿಸುತ್ತಿದ್ದ ಮೈಸೂರಿನ ಶಾಂತಿನಗರ ಸಲ್ಮಾ (47) ಅವರ ಹೊಟ್ಟೆ ದಪ್ಪವಾಗುತ್ತಾ ಬಂದಿತ್ತು. ಇದರಿಂದ ಭಯಗೊಂಡ ಅವರು ಕೆಲವು ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದರು. ಹೊಟ್ಟೆಯಲ್ಲಿ ಗೆಡ್ಡೆ ಇರುವ ಬಗ್ಗೆ ಖಚಿತಪಡಿಸಿ, ಶಸ್ತ್ರಚಿಕಿತ್ಸೆ ನಡೆಸಬೇಕಾ ಗುತ್ತದೆಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ಅಗತ್ಯ ಹಣ ಹೊಂದಿಸಲಾಗದ ಅವರು ಸಂಬಂಧಿಕರ ಸಲಹೆಯಂತೆ ಎರಡು ದಿನಗಳ ಹಿಂದೆ ಮೈಸೂರಿನ ಬೋಗಾದಿ 2ನೇ ಹಂತದಲ್ಲಿರುವ ಶ್ರೀದೇವಿ ನರ್ಸಿಂಗ್ ಹೋಮ್‍ಗೆ ದಾಖಲಾದರು. ಅಲ್ಲಿನ ವೈದ್ಯರಾದ ಡಾ.ಬಿ.ಡಿ.ದೇವರಾಜ್ ರೋಗಿಯನ್ನು ಪರೀಕ್ಷಿಸಿ, ಶುಕ್ರವಾರ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ 12 ಕೆಜಿ ತೂಕದ ದುರ್ಮಾಂಸ (ಗೆಡ್ಡೆ)ವನ್ನು ಹೊರತೆಗೆದಿದ್ದಾರೆ. ಈಗ ಸಲ್ಮಾ ಆರೋಗ್ಯವಾಗಿದ್ದಾರೆ.

Translate »