ಮೈಸೂರು: ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಮೈಸೂರು ನಗರದಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಮೈಸೂರಿನಲ್ಲಿ ಒಟ್ಟು 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಗುರುವಾರದಿಂದ (ನ.29) ಪರೀಕ್ಷೆ ಆರಂಭ ಗೊಂಡಿದ್ದು, ಡಿ.8ರವರೆಗೆ ಮೈಸೂರು ನಗರ 22 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿ ರುವ ಪರೀಕ್ಷೆಗೆ 10,498 ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಡಿ.8ರಂದು ನಡೆಯುವ ಕನ್ನಡ ಭಾಷೆ ಸಾಮಾನ್ಯ ಪತ್ರಿಕೆಯ ಪರೀಕ್ಷೆಯನ್ನು ಎಲ್ಲಾ ಅಭ್ಯರ್ಥಿಗಳು ಕಡ್ಡಾಯವಾಗಿ ಬರೆಯ ಬೇಕಿರುವ ಹಿನ್ನೆಲೆಯಲ್ಲಿ ಇದರ ಹೊರ ತಾಗಿ ಉಳಿದ ವಿವಿಧ ವಿಷಯಗಳಲ್ಲಿ ಪರೀಕ್ಷಾ ಕೇಂದ್ರಗಳು ಹಾಗೂ ಅಭ್ಯರ್ಥಿಗಳ ಸಂಖ್ಯೆ ಯಲ್ಲಿ ವ್ಯತ್ಯಯ ಇರಲಿದ್ದು, ನಿಗದಿತ ಕೇಂದ್ರಗಳಲ್ಲಿ ಡಿ.2 ಹೊರತಾಗಿ ಪ್ರತಿ ದಿನ ಪರೀಕ್ಷೆಗಳು ನಡೆಯಲಿವೆ.
ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತಿದ್ದು, ಮೈಸೂರಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಎದುರಿಸಲು 10 ಸಾವಿರಕ್ಕೂ ಹೆಚ್ಚು ಮಂದಿ ನೋಂದಾ ಯಿಸಿಕೊಂಡಿದ್ದಾರೆ. ಕುವೆಂಪುನಗರದ ಸರ್ಕಾರಿ ಪಿಯು ಕಾಲೇಜು, ಜಯಲಕ್ಷ್ಮೀಪುರಂನ ಎಸ್‍ಬಿಬಿಆರ್ ಮಹಾಜನ ಪಿಯು ಕಾಲೇಜು, ನಾರಾಯಣಶಾಸ್ತ್ರಿ ರಸ್ತೆಯ ಸರ್ಕಾರಿ ಮಹಾ ರಾಣಿ ಪಿಯು ಕಾಲೇಜು, ಮಂಚೇಗೌಡನ ಕೊಪ್ಪಲಿನ ಹೆಬ್ಬಾಳು ಸರ್ಕಾರಿ ಪಿಯು ಕಾಲೇಜು, ನಜರ್‍ಬಾದಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದೆ.
ಅದೇ ರೀತಿ ಮರಿಮಲ್ಲಪ್ಪ ಪಿಯು ಕಾಲೇಜು, ವಿದ್ಯಾವರ್ಧಕ ಪಿಯು ಕಾಲೇಜು, ಜಯಲಕ್ಷ್ಮೀಪುರಂನ ವಿವೇಕಾನಂದ ಪಿಯು ಕಾಲೇಜು, ಡಿ.ಬನುಮಯ್ಯ ಸಂಯುಕ್ತ ಪಿಯು ಕಾಲೇಜು, ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಪಿಯು ಕಾಲೇಜು, ಸಿದ್ಧಾರ್ಥನಗರದ ಬದ್ರಿಪ್ರಸಾದ್‍ಜೀ ಪಿಯು ಕಾಲೇಜು, ಊಟಿ ರಸ್ತೆಯ ಜೆಎಸ್‍ಎಸ್ ಪಿಯು ಕಾಲೇಜು, ಬನ್ನಿಮಂಟಪ ಸಂತ ಫಿಲೋಮಿನಾ ಪಿಯು ಕಾಲೇಜು, ಸಿದ್ಧಾರ್ಥ ನಗರದ ಟೆರಿಷಿಯನ್ ಬಾಲಕಿಯರ ಪಿಯು ಕಾಲೇಜು, ಲಲಿತಾದ್ರಿಪುರದ ವಿದ್ಯಾ ವಿಕಾಸ್ ಪಿಯು ಕಾಲೇಜು, ಸರಸ್ವತಿ ಪುರಂನ ವಿಜಯವಿಠಲ ಪಿಯು ಕಾಲೇಜು, ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಪಿಯು ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ.
ಇದರೊಂದಿಗೆ ಕೃಷ್ಣಮೂರ್ತಿಪುರಂನ ಎಂಎಂಕೆ ಮತ್ತು ಎಸ್‍ಡಿಎಂ ಬಾಲಕಿ ಯರ ಪಿಯು ಕಾಲೇಜು, ಜಯಲಕ್ಷ್ಮೀ ಪುರಂನ ಚಿನ್ಮಯ ಪಿಯು ಕಾಲೇಜು, ಲಕ್ಷ್ಮೀ ಪುರಂನ ಗೋಪಾಲಸ್ವಾಮಿ ಎಸ್‍ವಿ ಪಿಯು ಕಾಲೇಜು, ನಾರಾಯಣಶಾಸ್ತ್ರಿ ರಸ್ತೆಯ ಸದ್ವಿದ್ಯಾ ಪಿಯು ಕಾಲೇಜು, ಕುವೆಂಪು ನಗರದ ಶ್ರೀ ಆದಿಚುಂಚನಗಿರಿ ಪಿಯು ಕಾಲೇಜು ಸೇರಿ ಒಟ್ಟು 22 ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳ ಲಾಗಿದೆ. ಮೊದಲ ದಿನವಾದ ಗುರುವಾರ ಕುವೆಂಪುನಗರದ ಸರ್ಕಾರಿ ಪಿಯು ಕಾಲೇ ಜಿನ ಕೇಂದ್ರದಲ್ಲಿ ಶಿಕ್ಷಣ ಮತ್ತು ತರ್ಕಶಾಸ್ತ್ರ ವಿಷಯಗಳ ಪರೀಕ್ಷೆ ನಡೆದಿದ್ದು, 374 ಅಭ್ಯರ್ಥಿಗಳು ಈ ಪರೀಕ್ಷೆ ನೋಂದಾಯಿಸಿ ಕೊಂಡಿದ್ದರು. ಅದೇ ರೀತಿ ಇಂದು (ನ.30) ಜಯಲಕ್ಷ್ಮೀಪುರಂನ ಎಸ್‍ಬಿ ಆರ್‍ಆರ್ ಮಹಾಜನ ಕಾಲೇಜಿನ ಕೇಂದ್ರದಲ್ಲಿ ಮರಾಠಿ ಮತ್ತು ಸಮಾಜಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆದಿದೆ. 491 ಅಭ್ಯರ್ಥಿಗಳು ಈ ವಿಷಯ ಗಳನ್ನು ಪರೀಕ್ಷೆಗೆ ಆಯ್ಕೆ ಮಾಡಿಕೊಂಡಿದ್ದರು.