ಇಂಗ್ಲಿಷ್ ಹೊಟ್ಟೆಪಾಡಿಗೆ, ಕನ್ನಡ ಹೃದಯ ದೀವಿಗೆ: ಪ್ರೊ.ಕೆ.ಅನಂತರಾಮು
ಮೈಸೂರು

ಇಂಗ್ಲಿಷ್ ಹೊಟ್ಟೆಪಾಡಿಗೆ, ಕನ್ನಡ ಹೃದಯ ದೀವಿಗೆ: ಪ್ರೊ.ಕೆ.ಅನಂತರಾಮು

December 1, 2018

ಮೈಸೂರು:  ದಿನ ದಿಂದ ದಿನಕ್ಕೆ ಕನ್ನಡ ಭಾಷೆಯ ಸಾರ್ವ ಭೌಮತೆಗೆ ಧಕ್ಕೆಯುಂಟಾಗುತ್ತಿದೆ. ಮಾತೃ ಭಾಷೆಯ ರಕ್ಷಣೆಗಾಗಿ ಹೊಟ್ಟೆಪಾಡಿನ ಭಾಷೆ ಯಾದ ಇಂಗ್ಲಿಷನ್ನು ಬುದ್ಧಿಗೆ ಮಾತ್ರ ಸೀಮಿತ ಗೊಳಿಸಿ. ಕನ್ನಡವನ್ನು ಹೃದಯದಲ್ಲಿಟ್ಟುಕೊಳ್ಳಿ ಎಂದು ಸಾಹಿತ್ಯ ಮತ್ತು ಸಂಸ್ಕøತಿ ಚಿಂತಕ ಪ್ರೊ.ಕೆ.ಅನಂತರಾಮು ಸಲಹೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲ ಯದ ಕಾವೇರಿ ಸಭಾಂಗಣದಲ್ಲಿ ಶುಕ್ರ ವಾರ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂ ದಾಗಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗು ತ್ತಿದೆ. ಕನ್ನಡವನ್ನಷ್ಟೇ ಕಲಿತರೆ ಕೆಲಸ ಸಿಗುವು ದಿಲ್ಲ ಎಂಬ ಅಸಮಾಧಾನ ಬಹುತೇಕರ ಲ್ಲಿದೆ. ಇಂಗ್ಲಿಷನ್ನೂ ಕಲಿಯಿರಿ, ಆದರೆ ಕನ್ನಡಕ್ಕೆ ಪ್ರಾಧಾನ್ಯತೆ ನೀಡಿ ಎಂದು ಸಲಹೆ ನೀಡಿದರು.

ಕನ್ನಡಿಗರು ಕಲೆ, ಚಿತ್ರಕಲೆ, ಸಿನಿಮಾ, ರಂಗ ಭೂಮಿ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ ಸೇರಿ ದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ದ್ದಾರೆ. ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ ವನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಎಂದು ಹೇಳಲಾಗುತ್ತದೆ. ಚಿತ್ರಕಲೆಯಲ್ಲಿ ಮೈಸೂರು ಶೈಲಿಯ ಕಲೆ ಎನ್ನಲಾಗುತ್ತದೆ. ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮೆರೆದಿರುವ ಕನ್ನಡಿಗರು ವಿಶ್ವದ ಗಮನ ಸೆಳೆದಿದ್ದಾರೆ. ಇಂತಹ ಸಮೃದ್ಧವಾಗಿರುವ ಕನ್ನಡ ಭಾಷೆಯ ಸೊಬಗು, ಶ್ರೀಮಂತಿಕೆ ರಕ್ಷಿಸಬೇಕಾದ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಗಮನ ಸೆಳೆದರು. ಯುವ ಜನರಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಕಡಿಮೆಯಾಗುತ್ತಿದೆ. ಇದಕ್ಕೆ ಪೋಷಕರು ಹಾಗೂ ಅಧ್ಯಾಪಕ ವರ್ಗ ಅವಕಾಶ ನೀಡಬಾ ರದು. ಭಾಷೆ ಹಾಗೂ ಸಂಸ್ಕøತಿಯ ನಡುವೆ ಉತ್ತಮ ಬಾಂಧವ್ಯವಿದೆ. ಭಾಷೆ ರಕ್ಷಣೆಗೆ ಮುಂದಾದರೆ ತಾನಾಗಿಯೇ ನಮ್ಮ ಸಂಸ್ಕøತಿ ಯನ್ನು ರಕ್ಷಿಸಬಹುದು ಎಂದು ಅಭಿಪ್ರಾಯಿಸಿದರು.

ಕನ್ನಡಿಗರು ನಿನ್ನೆ-ಮೊನ್ನೆಯವರಲ್ಲ. ರಾಮಾ ಯಣ, ಮಹಾಭಾರತದಷ್ಟೇ ಪುರಾತನ ವಾದ ಇತಿಹಾಸ ಹೊಂದಿದ್ದಾರೆ. ಕನ್ನಡ ರಾಜ್ಯೋ ತ್ಸವ ಕಾರ್ಯಕ್ರಮ ನವೆಂಬರ್ ಒಂದರಂದೇ ಆಚರಿಸಬೇಕೆಂಬ ನಿಯಮವಿಲ್ಲ. ವರ್ಷವಿಡೀ ಕನ್ನಡಾಂಬೆಯ ಆರಾಧಿಸಬೇಕು ಎಂದರು. ಮುಕ್ತ ವಿವಿ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ ಮಾತನಾಡಿ, ಮುಕ್ತ ವಿವಿಯಲ್ಲಿ ಯುಜಿಸಿ ಮತ್ತು ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಇಂಗ್ಲಿಷ್‍ನಲ್ಲಿ ವ್ಯವಹರಿಸಲಾಗುತ್ತಿದೆ. ಆಡಳಿತದಲ್ಲಿ ಕನ್ನಡ ಭಾಷೆಯನ್ನೇ ಬಳಸಲಾಗುತ್ತಿದೆ. ವೆಬ್‍ಸೈಟ್ ಅನ್ನು ಕನ್ನಡ ಮತ್ತು ಇಂಗ್ಲಿಷ್‍ನಲ್ಲಿ ಸಿದ್ಧಪಡಿ ಸಲಾಗಿದ್ದು, ಕನ್ನಡದಲ್ಲಿಯೇ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಇದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದ ರಾಮಯ್ಯ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಕ್ತ ವಿವಿಯಲ್ಲಿ ನೋಂದಣಿಯಾಗುವ ವಿದ್ಯಾರ್ಥಿಗಳಲ್ಲಿ ಬಹುತೇಕ ಮಂದಿ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಮುಕ್ತ ವಿವಿಯ ಹಣಕಾಸು ಅಧಿಕಾರಿ ಡಾ.ಖಾದರ್ ಪಾಷ, ಕುಲಸಚಿವ ಪ್ರೊ.ಬಿ.ರಮೇಶ್, ಪರೀಕ್ಷಾಂಗ ಕುಲಸಚಿವ ಡಾ.ಎಂ.ಎಸ್.ರಮಾನಂದ್, ಶೈಕ್ಷ ಣಿಕ ವಿಭಾಗದ ಡೀನ್ ಪ್ರೊ.ಜಗದೀಶ್, ಅಧ್ಯಯನ ಕೇಂದ್ರದ ಡೀನ್ ಪ್ರೊ.ಡಿ.ಟಿ. ಬಸವರಾಜು ಮತ್ತಿತರರು ಪಾಲ್ಗೊಂಡಿದ್ದರು.

Translate »