ಇಂದು ಸಚಿವ ಜಿಟಿಡಿ ಅವರಿಂದ ಮುಕ್ತ ವಿವಿ 9 ಪ್ರಾದೇಶಿಕ ಕೇಂದ್ರಗಳ ಉದ್ಘಾಟನೆ
ಮೈಸೂರು

ಇಂದು ಸಚಿವ ಜಿಟಿಡಿ ಅವರಿಂದ ಮುಕ್ತ ವಿವಿ 9 ಪ್ರಾದೇಶಿಕ ಕೇಂದ್ರಗಳ ಉದ್ಘಾಟನೆ

December 1, 2018

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಮೂಲಕ ದೂರ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ನೆರವಾಗಲೆಂಬ ಉದ್ದೇಶದಿಂದ ರಾಜ್ಯದ 9 ಜಿಲ್ಲೆಗಳಲ್ಲಿ ಮುಕ್ತ ವಿವಿ ಪ್ರಾದೇಶಿಕ ಕೇಂದ್ರಗಳನ್ನು ನಾಳೆ(ಡಿ.1) ಬೆಳಿಗ್ಗೆ 11ಕ್ಕೆ ಮುಕ್ತ ಗಂಗೋತ್ರಿಯಲ್ಲಿರುವ ಘಟಿಕೋ ತ್ಸವ ಭವನದಲ್ಲಿ ವಿವಿಯ ಸಹ ಕುಲಾ ಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸ ಲಿದ್ದಾರೆ. 2015ರಲ್ಲಿ ಮುಕ್ತ ವಿವಿ ವತಿ ಯಿಂದ ಚಿಕ್ಕಮಗಳೂರು, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಹಾಸನ, ಕೋಲಾರ, ಚಾಮರಾಜನಗರ, ತುಮಕೂರು ಹಾಗೂ ಮಂಡ್ಯದಲ್ಲಿ ಸುಸಜ್ಜಿತವಾದ ಪ್ರಾದೇಶಿಕ ಕೇಂದ್ರಗಳ ಕಟ್ಟಡವನ್ನು ನಿರ್ಮಿಸ ಲಾಗಿತ್ತು. ಮುಕ್ತ ವಿವಿಯಲ್ಲಿ ಪ್ರವೇಶ ಪಡೆ ಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಜಿಲ್ಲೆಗಳಲ್ಲಿ ಪ್ರಾದೇಶಿಕ ಕೇಂದ್ರ ವನ್ನು ತೆರೆದಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಕಟ್ಟಡಗಳನ್ನು ಸಚಿವರು ಲೋಕಾರ್ಪಣೆ ಮಾಡಲಿ ದ್ದಾರೆ ಎಂದು ಮುಕ್ತ ವಿವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದ್ದಾರೆ.

Translate »