ಬೆಂಗಳೂರು: ರಾಜ್ಯ ಸರ್ಕಾರವು 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಸೂರಿನ ಸಾಹಿತಿ ಚ.ಸರ್ವಮಂಗಳಾ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹೆಚ್.ಎಲ್.ದತ್ತು, ಚಿತ್ರನಟ ಜೈ ಜಗದೀಶ್, ಮಾಜಿ ಕೇಂದ್ರ ಸಚಿವೆ ಮಾರ್ಗರೇಟ್ ಆಳ್ವಾ ಸೇರಿದಂತೆ 63 ಗಣ್ಯರಿಗೆ ನ.30ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಮೈಸೂರಿನಿಂದ ಸಾಹಿತ್ಯ ಕ್ಷೇತ್ರದಲ್ಲಿ ಚ. ಸರ್ವ ಮಂಗಳಾ, ಚಲನಚಿತ್ರ ಕ್ಷೇತ್ರದಲ್ಲಿ ನಿರ್ದೇಶಕ ಭಾರ್ಗವ, ರಾಜನ್, ಶಿಕ್ಷಣ ಕ್ಷೇತ್ರದಲ್ಲಿ ಗೀತಾ ರಾಮಾನುಜಂ, ಚಾಮರಾಜನಗರ ಜಿಲ್ಲೆಯ ರಾಮ ಸಮುದ್ರದ ಚನ್ನಮಲ್ಲೇಗೌಡರಿಗೆ…
ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ: ಸಿಎಂ
November 29, 2018ಮೈಸೂರು: ಕುಲಪತಿಗಳ ಈಗಿನ ಆಯ್ಕೆ ಪದ್ಧತಿ ಬಗ್ಗೆ ಬಹಿರಂಗ ಚರ್ಚೆ ಮಾಡಿದರೆ ನಾಳೆ ಮಾಧ್ಯಮಗಳಲ್ಲಿ ಅದೇ ಒಂದು ದೊಡ್ಡ ಬ್ರೇಕಿಂಗ್ ನ್ಯೂಸ್ ಮಾಡುತ್ತಾರೆ. ಈಗಿನ ಆಯ್ಕೆ ಪದ್ಧತಿ ಬದಲಾಗಬೇಕೆಂಬುದು ನನ್ನ ನಿಲುವು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಮೈಸೂರು ವಿವಿಯ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ಬುಧವಾರ ಆಯೋಜಿಸಿದ್ದ `ಕರ್ನಾಟಕ ರಾಜ್ಯದಲ್ಲಿ ಗುಣಾತ್ಮಕ ಉನ್ನತ ಶಿಕ್ಷಣ; ಸಾಧ್ಯತೆಗಳು ಹಾಗೂ ಸವಾಲುಗಳು’ ಕುರಿತು 28 ವಿವಿಗಳ ಕುಲಪತಿಗಳು ಹಾಗೂ ಶಿಕ್ಷಣ ತಜ್ಞರೊಡನೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು….
ಡಿ.15ರೊಳಗೆ ಲಕ್ಷ ಕುಟುಂಬಗಳಿಗೆ ಉಚಿತ ಗ್ಯಾಸ್ ಸಿಲಿಂಡರ್
November 29, 2018ಬೆಂಗಳೂರು: ಬಡತನದ ರೇಖೆ ಗಿಂತ ಕೆಳಗಿನ 1 ಲಕ್ಷ ಕುಟುಂಬ ಗಳಿಗೆ ಡಿಸೆಂ ಬರ್ 15ರೊಳ ಗಾಗಿ ಸಿಲಿಂ ಡರ್ ಮತ್ತು ಸ್ಟವ್‍ಗಳನ್ನು ವಿತರಿಸ ಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್‍ಖಾನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ 4450 ರೂ. ವೆಚ್ಚದಲ್ಲಿ ಎರಡು ಸಿಲಿಂಡರ್, ಒಂದು ಸ್ಟವ್ ಹಾಗೂ ರೆಗ್ಯುಲೇಟರ್‍ಗಳನ್ನು ಒದ ಗಿಸಲಾಗುವುದು. ಈಗಾಗಲೇ 4 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ ಇಷ್ಟು ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ…
ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಉದ್ಯೋಗಕ್ಕೂ ಸರ್ಕಾರದ ಆದ್ಯತೆ
November 29, 2018ಮೈಸೂರು: ಶಿಕ್ಷಣದ ಜೊತೆಗೆ ಮಕ್ಕಳಿಗೆ ಉದ್ಯೋಗ ನೀಡು ವುದು ಸರ್ಕಾರದ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳ ಪ್ರತಿಭೆ ಗುರ್ತಿಸಿ, ಉದ್ಯೋಗ ಸೃಷ್ಟಿಸಲು ಮೈತ್ರಿ ಸರ್ಕಾರ ಹಲವಾರು ಬದ ಲಾವಣೆಗಳನ್ನು ತರಲು ಆದ್ಯತೆ ನೀಡಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಹೇಳಿದರು. ಮೈಸೂರಿನ ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ರಜತ ಮಹೋ ತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿ ದರು. ಕಲಬುರ್ಗಿ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ಕೊಪ್ಪಳ, ಚಿತ್ರದುರ್ಗ, ಮೈಸೂರು ಸೇರಿದಂತೆ ಒಂಬತ್ತು ಜಿಲ್ಲೆಗಳಲ್ಲಿ ನಾನಾ ರೀತಿಯ ಕೈಗಾರಿಕೆಗಳ…
ಕನಕ ಜಯಂತಿಗೆ ಮೆರಗು ತಂದ ಆಕರ್ಷಕ ಮೆರವಣಿಗೆ
November 29, 2018ಮೈಸೂರು: ಸಂತ ಕವಿ ಶ್ರೀ ಭಕ್ತ ಕನಕದಾಸರ 531ನೇ ಜಯಂತ್ಯುತ್ಸವದ ಅಂಗ ವಾಗಿ ಬುಧವಾರ ಮೈಸೂರಿನಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಕನಕದಾಸರ ಪ್ರತಿಮೆಯನ್ನು ತೆರೆದ ಅಲಂಕೃತ ವಾಹನದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಯಿತು. ಮೈಸೂರು ಅರಮನೆಯ ಉತ್ತರ ದ್ವಾರದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂದೆ ಕನಕದಾಸರ ಜಯಂತಿ ಮಹೋ ತ್ಸವ ಸಮಿತಿ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನಂದಿ ಕಂಬಕ್ಕೆ ಪೂಜೆ ಸಲ್ಲಿಸಿ, ಕನಕದಾಸರ ಪ್ರತಿಮೆಗೆ…
ಮೇಕೆದಾಟು ಯೋಜನೆ: ತ್ವರಿತವಾಗಿ ಡಿಪಿಆರ್ ಸಿದ್ಧಪಡಿಸಲು ಸ್ಪೀಕರ್ ರಮೇಶ್ ಕುಮಾರ್ ಒತ್ತಾಯ
November 29, 2018ಬೆಂಗಳೂರು: ಕೃಷ್ಣರಾಜಸಾಗರ ಅಣೆಕಟ್ಟೆಗೆ ಸಮಾನಾಂತರವಾಗಿ ಮೇಕೆ ದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡುವ ವಿಚಾರದಲ್ಲಿ ರಾಜ್ಯ ಸರ್ಕಾರ ತಕ್ಷಣವೇ ಡಿಪಿಆರ್ ಸಿದ್ಧ ಮಾಡಿ ಕೇಂದ್ರಕ್ಕೆ ಸಲ್ಲಿಸಬೇಕೆಂದು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಸರ್ಕಾರ ವನ್ನು ಒತ್ತಾಯಿಸಿದ್ದಾರೆ. ಚಳಿಗಾಲ ಅಧಿವೇಶನ ಕುರಿತಂತೆ ವಿವರಣೆ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುವುದರಿಂದ ಉಭಯ ರಾಜ್ಯಗಳಿಗೂ ಅನುಕೂಲವಾಗಲಿದೆ. ಬರಡು ಭೂಮಿ ಜನರಿಗೆ ಶುದ್ಧ ಕುಡಿಯುವ ನೀರು ಧಕ್ಕಲಿದೆ ಎಂದರು. ಮೇಕೆದಾಟು ಯೋಜನೆಗೆ ಅನುಮತಿ ನೀಡಿರುವುದಕ್ಕೆ ಕೇಂದ್ರವನ್ನು ಅಭಿನಂದಿಸುತ್ತೇನೆ. ತ್ವರಿತಗತಿಯಲ್ಲಿ ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ಬೆಂಗಳೂರು…
ಕಬ್ಬು ಬೆಳೆಗಾರರಿಗೆ ನ್ಯಾಯ ಕೊಡಿಸುವಲ್ಲಿ ಸರ್ಕಾರವೂ ಅಸಹಾಯಕ
November 29, 2018ಮೈಸೂರು: ಸಂಕಷ್ಟದ ನಡುವೆಯೂ ಶ್ರಮಪಟ್ಟು ಬೆಳೆದ ಕಬ್ಬಿಗೆ ಕೊಡಬೇಕಾದ ಕೋಟ್ಯಾಂತರ ರೂ. ಹಣವನ್ನು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿದ್ದರೂ ನ್ಯಾಯ ಕೊಡಿಸಬೇಕಾದ ಸರ್ಕಾರ ಅಸಹಾಯಕತೆ ವ್ಯಕ್ತಪಡಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಹಗ್ಗಜಗ್ಗಾಟ ಸಾಮಾನ್ಯ ಸಂಗತಿ ಎನ್ನುವಂತಾಗಿದ್ದು, ಬೆವರು ಸುರಿಸಿ ಬೆಳೆದ ಕಬ್ಬನ್ನು ಕಾರ್ಖಾನೆ ಗಳಿಗೆ ಪೂರೈಸಿದ ರೈತ, ಸರ್ಕಾರದ ಮೊರೆ ಹೋದರೂ ಪ್ರಯೋಜನವಾಗುವ ಪರಿಸ್ಥಿತಿ ಮಾತ್ರ ಕಾಣುತ್ತಲೇ ಇಲ್ಲ. ಸಕ್ಕರೆ ಕಾರ್ಖಾನೆಗಳ ಮಾಲೀಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸಾಧ್ಯವಿಲ್ಲವೇ ಎಂದು ಅವಲೋಕಿಸಿ ದರೆ, ಸರ್ಕಾರವೇ ಕಾರ್ಖಾನೆ…
ಮೈಸೂರು ತಾಪಂ ಅಧ್ಯಕ್ಷೆ ವಿರುದ್ಧ ಅವಿಶ್ವಾಸಕ್ಕೆ ಸಿದ್ಧತೆ
November 29, 2018ಅಧ್ಯಕ್ಷೆ ಕಾಳಮ್ಮ ವಿರುದ್ಧ ತಿರುಗಿ ಬಿದ್ದ ಸ್ವಪಕ್ಷೀಯರು; ಜೆಡಿಎಸ್‍ನ 20 ಸದಸ್ಯರಿಂದ ತಾಪಂ ಇಓಗೆ ಮನವಿ ಮೈಸೂರು: ಒಪ್ಪಂದ ದಂತೆ ಅಧಿಕಾರಾವಧಿ ಮುಗಿದಿದ್ದರೂ ರಾಜೀ ನಾಮೆ ನೀಡದೆ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವರೆಯುತ್ತಿರುವ ತಾ.ಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ವಿರುದ್ಧ ಸ್ವಪಕ್ಷಿಯರೇ ತಿರುಗಿ ಬಿದ್ದಿದ್ದು, ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ. ಮೈಸೂರಿನ ನಜರ್‍ಬಾದ್‍ನಲ್ಲಿರುವ ಮಿನಿ ವಿಧಾನಸೌಧದ ತಾ.ಪಂ ಸಭಾಂ ಗಣದಲ್ಲಿ ಬುಧವಾರ ನಡೆಯಬೇಕಾಗಿದ್ದ ತಾ.ಪಂ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಜೆಡಿಎಸ್ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುವಂತೆ…
ಮೈಸೂರಲ್ಲಿ ರಣಜಿ ಕ್ರಿಕೆಟ್ ಪಂದ್ಯ 113 ರನ್‍ಗೆ ಮಹಾರಾಷ್ಟ್ರ ಸರ್ವಪತನ ಕರ್ನಾಟಕ ಬೌಲರ್‍ಗಳ ಮೇಲುಗೈ
November 29, 2018ಮೈಸೂರು: ಮೈಸೂರಿನಲ್ಲಿ ಇಂದಿನಿಂದ ಆರಂಭಗೊಂಡಿರುವ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ತಂಡ ಎದುರಾಳಿ ಮಹಾರಾಷ್ಟ್ರ ತಂಡದ ಎಲ್ಲಾ ವಿಕೆಟ್‍ಗಳನ್ನು ಪತನಗೊಳಿಸುವ ಮೂಲಕ ಮೊದಲ ದಿನದ ಅಂತ್ಯಕ್ಕೆ ಮೇಲುಗೈ ಸಾಧಿಸಿತು. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರಿಕೆಟ್ ಮೈದಾನ ದಲ್ಲಿ (ಗ್ಲೇಡ್ಸ್) ಇಂದಿನಿಂದ ನಾಲ್ಕು ದಿನ ಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 85ನೇ ಆವೃತ್ತಿಯ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ 4ನೇ ಸುತ್ತಿನ ತನ್ನ 3ನೇ ಪಂದ್ಯದ ಮೊದಲ ದಿನದಾಟದಲ್ಲಿ (ಬುಧ ವಾರ) ಕರ್ನಾಟಕ ತಂಡದ ಮಾರಕ ಬೌಲಿಂಗ್‍ನಿಂದ…
ದಸರಾ ವಸ್ತುಪ್ರದರ್ಶನದಲ್ಲಿ 19 ವಿವಿಗಳ ವಿಶೇಷ ಮಳಿಗೆ ಉದ್ಘಾಟನೆ
November 29, 2018ಮೈಸೂರು: ಮೈಸೂರಿನ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ 19 ವಿವಿಗಳ ಕಾರ್ಯ ವೈಖರಿ ಮತ್ತು ಸಾಧನೆಗಳನ್ನು ಬಿಂಬಿಸುವ ಪ್ರದರ್ಶನ ಮಳಿಗೆಯನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬುಧವಾರ ಸಂಜೆ ಉದ್ಘಾಟಿಸಿದರು. ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಸರಕಾರ ಅಧೀನ ದಲ್ಲಿರುವ 19 ವಿಶ್ವ ವಿದ್ಯಾನಿಲಯಗಳ ವಿಶೇಷತೆಗಳನ್ನೊಳಗೊಂಡ ಮಳಿಗೆಯನ್ನು ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಿರ್ಮಿಸಲಾಗಿದೆ. ಸಿಎಂ ಹೆಚ್.ಡಿ.ಕುಮಾರ ಸ್ವಾಮಿಯವರು ಪ್ರತೀ ಮಳಿಗೆಗೂ ಭೇಟಿ ನೀಡಿ ಅದರಲ್ಲಿದ್ದ ವಿಶೇಷತೆ ಬಗ್ಗೆ ಅಧಿಕಾರಿ ಗಳಿಂದ ಮಾಹಿತಿ ಪಡೆದುಕೊಂಡರು….