ಮೈಸೂರು

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು
ಮಂಡ್ಯ, ಮೈಸೂರು

ರೋಗಗಳಿಂದ ನರಳುತ್ತಿರುವ ಚಿಕ್ಕೋನಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು

November 28, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಸ್ಪೆಂಟ್‍ವಾಷ್ ಮೇಜರ್ ಟ್ಯಾಂಕ್ ವಾರದ ಹಿಂದೆ ಸ್ಫೋಟಗೊಂಡು ವಾರವೇ ಕಳೆದಿದ್ದು, ಕಾರ್ಖಾನೆ ಸುತ್ತಲಿನ ಚಿಕ್ಕೋನಹಳ್ಳಿ, ತಗ್ಗಹಳ್ಳಿ, ಅಣ್ಣೆದೊಡ್ಡಿ, ಕೀಳಘಟ್ಟ, ಯು.ಸಿ.ದೊಡ್ಡಿ, ಗೊಲ್ಲರದೊಡ್ಡಿ ಸೇರಿದಂತೆ 17 ಗ್ರಾಮಗಳ ಜನರು ವಿವಿಧ ರೋಗಗಳಿಂದ ನರಳುತ್ತಿದ್ದಾರೆ. ಚಿಕ್ಕೋನಹಳ್ಳಿ ಗ್ರಾಮವೊಂದರಲ್ಲೇ 500ಕ್ಕೂ ಹೆಚ್ಚು ಜನರಿಗೆ ಸೊಂಟ ನೋವು, ಕೆಮ್ಮು, ನೆಗಡಿ, ತುರಿಕೆ, ಗಂಟಲು ಕೆರೆತ, ಚರ್ಮ ರೋಗಗಳು, ಶ್ವಾಸಕೋಶದ ಸಮಸ್ಯೆ ಬಾಧಿಸುತ್ತಿದೆ. ಟ್ಯಾಂಕ್ ಸ್ಫೋಟದಿಂದ 82 ಲಕ್ಷ ಲೀಟರ್‍ಗೂ ಅಧಿಕ ರಾಸಾಯನಿಕ ದ್ರಾವಣ…

ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ
ಮೈಸೂರು

ಪಕ್ಷಿಗಳು, ಪರಿಸರವೆಂದರೆ ಈ ಪೋರಿಗೆ ಪಂಚಪ್ರಾಣ

November 28, 2018

ಮೈಸೂರು:  ಹಕ್ಕಿಗಳ ಆರೈಕೆಯೇ ಈ ಪುಟಾಣಿಗೆ ಆನಂದ! ಹಕ್ಕಿಗಳೆಂದರೆ ಈಕೆಗೆ ಅಕ್ಕರೆ, ಪರಿಸರವೆಂದರೆ ಕಾಳಜಿ. ಹೌದು, 11 ವರ್ಷ ಆ ಬಾಲಕಿಗೆ ಪಕ್ಷಿಗಳ ಬಗ್ಗೆ ಅತೀವ ಪ್ರೀತಿ. ಅವುಗಳಿಗೆ ಕಾಳು-ಕಡ್ಡಿ ನೀಡಲು ಫುಡ್ ಕಪ್ಸ್, ನೀರುಣಿಸಲು ವಾಟರ್ ಕಪ್ಸ್ ಸಿದ್ಧಪಡಿಸುವ ಕಾಯಕದಲ್ಲಿ ನಿರತಳಾಗಿದ್ದಾಳೆ ಈ ಪೋರಿ. ಮೈಸೂರಿನ ಜೆಪಿ ನಗರದ ನಿವಾಸಿ ಎಸ್.ವರ್ಷಿಣಿ ಎಂಬ 7ನೇ ತರಗತಿ ಬಾಲಕಿ ತನ್ನದೇ ಪ್ರಪಂಚದಲ್ಲಿ ಪಕ್ಷಿ ಸಂಕುಲಕ್ಕೆ ಆಸರೆಯಾಗಿದ್ದಾಳೆ. ಈಕೆ ತನ್ನ ಮನೆಯ ಆಸುಪಾಸು ಹಾಗೂ ಚಾಮುಂಡಿಬೆಟ್ಟದಲ್ಲಿ ಪಕ್ಷಿಗಳು ಸೇರುವ…

ಇಂದಿನಿಂದ ಮೈಸೂರಲ್ಲಿ ರಣಜಿ
ಮೈಸೂರು

ಇಂದಿನಿಂದ ಮೈಸೂರಲ್ಲಿ ರಣಜಿ

November 28, 2018

ಮೈಸೂರು:  ಮೈಸೂರಿ ನಲ್ಲಿ ನಾಳೆ(ನ.28)ಯಿಂದ ನಾಲ್ಕು ದಿನಗಳ ಕಾಲ ರಣಜಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗಿದೆ. ಮೊದಲೆರಡು ಪಂದ್ಯಗಳಲ್ಲಿ ವಿದರ್ಭ ಹಾಗೂ ಮುಂಬಯಿ ತಂಡಗಳೊಂದಿಗೆ ಸೆಣಸಾಡಿ ಡ್ರಾ ಸಾಧನೆಯೊಂದಿಗೆ ಒಟ್ಟು 6 ಅಂಕ ಪಡೆದಿರುವ ಕರ್ನಾಟಕ ತಂಡ, ಇದೀಗ ಮಹಾರಾಷ್ಟ್ರದ ವಿರುದ್ಧ ಉತ್ತಮ ಪ್ರದರ್ಶನಕ್ಕೆ ಸಿದ್ಧವಾಗಿದೆ. ಈಗಾಗಲೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿರುವ ಉಭಯ ತಂಡಗಳ ಆಟಗಾರರು ಇಂದು…

ಕೇಂದ್ರ ಸಚಿವರಿಂದ ಇಂದು ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ
ಮೈಸೂರು

ಕೇಂದ್ರ ಸಚಿವರಿಂದ ಇಂದು ಇಎಸ್‍ಐ ಆಸ್ಪತ್ರೆ ಲೋಕಾರ್ಪಣೆ

November 28, 2018

2012ರಲ್ಲಿ ಆರಂಭವಾಗಿದ್ದ ಆಸ್ಪತ್ರೆಯ ಪುನರ್ ನಿರ್ಮಾಣ 34.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮೈಸೂರು: ಮೈಸೂರು-ಕೆಆರ್‍ಎಸ್ ಮುಖ್ಯ ರಸ್ತೆಯಲ್ಲಿರುವ ನವೀ ಕರಿಸಲ್ಪಟ್ಟ 100 ಹಾಸಿಗೆಗಳ ಇಎಸ್‍ಐ ಆಸ್ಪತ್ರೆಯನ್ನು ನಾಳೆ (ನ.28) ಬೆಳಿಗ್ಗೆ 10.30ಕ್ಕೆ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಉದ್ಘಾಟಿಸಲಿದ್ದಾರೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ಇಎಸ್‍ಐ ಆಸ್ಪತ್ರೆಯ ಹೊಸ ಕಟ್ಟಡ ವನ್ನು ಮಂಗಳವಾರ ಪರಿಶೀಲಿಸಿ ಪತ್ರ ಕರ್ತರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿರುವ ಇಎಸ್‍ಐ ಆಸ್ಪತ್ರೆ ಯನ್ನು…

ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ
ಮೈಸೂರು

ಅಭಿಮಾನಿ ಸಾಗರದ ಅಶ್ರುತರ್ಪಣದ ನಡುವೆ ಅಂಬರೀಶ್ ಲೀನ

November 27, 2018

ಬೆಂಗಳೂರು: ಶನಿವಾರ ರಾತ್ರಿ ನಿಧನರಾದ ಮಾಜಿ ಸಚಿವ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಡಾ. ರಾಜ್‍ಕುಮಾರ್ ಸ್ಮಾರಕದ ಬಳಿ ಇಂದು ಸಂಜೆ ನೆರವೇರಿತು. ಭಾನುವಾರ ಸಂಜೆ ಅಂಬರೀಶ್ ಅವರ ಪಾರ್ಥಿವ ಶರೀರ ವನ್ನು ಮಂಡ್ಯಕ್ಕೆ ಕೊಂಡೊಯ್ದು, ಅಲ್ಲಿನ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇಂದು ಬೆಳಿಗ್ಗೆ 9 ಗಂಟೆ ವೇಳೆಗೆ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್‍ನಲ್ಲಿ ಬೆಂಗಳೂರಿಗೆ ತರಬೇಕು ಎಂದು ಯೋಜನೆ ರೂಪಿಸಲಾಗಿತ್ತಾದರೂ, ತಡವಾಗಿ…

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ
ಮೈಸೂರು

ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಸ್ಮಾರಕ ಶತಃಸಿದ್ಧ

November 27, 2018

ಮಂಡ್ಯ: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಟ, ಮಾಜಿ ಸಚಿವ ಅಂಬರೀಶ್ ಸ್ಮಾರಕ ನಿರ್ಮಾಣ ಶತಃಸಿದ್ಧ. ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಪ್ರಶ್ನೆ ಎತ್ತಿ ಹೈ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ ವಕೀಲರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ನಗರದ ಸರ್‍ಎಂವಿ ಕ್ರೀಡಾಂಗಣದಲ್ಲಿ ಅಂಬಿ ಅಂತಿಮ ದರ್ಶನದ ವೇಳೆ ಮಾತನಾಡಿದ ಅವರು, ಒಬ್ಬ ಕಲಾವಿದ ತಾನು ಬದುಕಿ ರುವವರೆಗೂ ಸರ್ಕಾರಕ್ಕೆ ತೆರಿಗೆ ಕಟ್ಟುತ್ತಾನೆ. ಕಲೆಗೆ ಅಂಬರೀಶ್ ನೀಡಿರುವ ಕೊಡುಗೆ ಅಪಾರ. ಅವರ ಸ್ಮಾರಕವನ್ನು ಕಂಠೀರವ ಸ್ಟುಡಿಯೋದಲ್ಲಿ…

ಪ್ರೀತಿಯ ಮೊಮ್ಮಗನನ್ನು `ಕೂಸೆ’  ಎನ್ನುತ್ತಿದ್ದರು ಪಿಟೀಲು ಚೌಡಯ್ಯ!
ಮೈಸೂರು

ಪ್ರೀತಿಯ ಮೊಮ್ಮಗನನ್ನು `ಕೂಸೆ’ ಎನ್ನುತ್ತಿದ್ದರು ಪಿಟೀಲು ಚೌಡಯ್ಯ!

November 27, 2018

ಮೈಸೂರು:  ಒರಟು ತನದಿಂದಲೇ ಲಕ್ಷಾಂತರ ಹೃದಯಗಳನ್ನು ಗೆದ್ದ `ಒಂಟಿ ಸಲಗ’ ಅಂಬರೀಶ್. ರಾಜನಂತೆ ಬೆಳೆದು, ರಾಜನಂತೆಯೇ ಬದುಕು ಮುಗಿಸಿದ ಎಂದು ಅವರ ಗೆಳೆಯ ರಜನಿಕಾಂತ್ ಹೇಳಿದ್ದು ಅಕ್ಷರಶಃ ಸತ್ಯ. ಅಂಬರೀಶ್ ಅವರ ನೇರಾನೇರ ಕಟುವಾದ ಮಾತುಗಳು ಯಾರ ಮನಸ್ಸನ್ನೂ ನೋಯಿಸಲಿಲ್ಲ. ಬದಲಾಗಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದವು. ಅರಮನೆ ವಿದ್ವಾನರಾಗಿದ್ದ ಪಿಟೀಲು ಚೌಡಯ್ಯ ಅವರು, ತಮ್ಮ ಪ್ರೀತಿಯ ಮೊಮ್ಮಗ ಅಮರ್‍ನಾಥ್ (ಅಂಬರೀಶ್)ರನ್ನು `ಕೂಸೆ’ ಎಂದು ಕರೆಯುತ್ತಿದ್ದರಂತೆ. ಮುಂದೆ ರಾಜ ನಂತೆ ಬದುಕುತ್ತಾನೆಂಬ ನಂಬಿಕೆಯಿಂ ದಲೋ ಏನೋ ಅಂಬರೀಶ್ ಅವರಿಗೆ…

ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ  ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು ಗುದ್ದಲಿ ಪೂಜೆ
ಮೈಸೂರು

ಮೈಸೂರಿನ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಪಾಲಿಕೆ ಸದಸ್ಯ ಎಂ.ಡಿ.ನಾಗರಾಜು ಗುದ್ದಲಿ ಪೂಜೆ

November 27, 2018

ಮೈಸೂರು: ಮೈಸೂರಿನ ಬಹು ನಿರೀಕ್ಷಿತ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿಗೆ ಕೊನೆಗೂ ಸೋಮವಾರ ಚಾಲನೆ ದೊರೆಯಿತು. ರಸ್ತೆಯ ಪಂಚ ಮುಖಿ ಆಂಜನೇಯಸ್ವಾಮಿ ದೇವಸ್ಥಾನದ ಕಾಂಪೌಂಡ್ ಬಳಿ ಮಹಾನಗರಪಾಲಿಕೆ ಸದಸ್ಯ ಎಂ.ಡಿ. ನಾಗರಾಜು ಅವರು ಗುದ್ದಲಿ ಪೂಜೆ ನೆರವೇರಿಸಿದರು. ರಸ್ತೆ ವಿಭಜಕ ಸೇರಿದಂತೆ ಒಟ್ಟು 60 ಅಡಿ ಅಗಲದ 0.8 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 4 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಮೈಸೂರು ಮಹಾನಗರಪಾಲಿಕೆ ಕಾಮಗಾರಿ ಕೈಗೆತ್ತಿಕೊಂಡಿದೆ. ನೆಹರೂ ವೃತ್ತ (ಮುಖ್ಯ ಅಂಚೆ ಕಚೇರಿ ವೃತ್ತ)ದಿಂದ ಆಯುರ್ವೇದ…

ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ
ಮೈಸೂರು

ಮೈಸೂರು ಕಾಂಗ್ರೆಸ್‍ನಿಂದ ಅಂಬರೀಶ್, ಜಾಫರ್ ಷರೀಫ್‍ಗೆ ಶ್ರದ್ಧಾಂಜಲಿ

November 27, 2018

ಮೈಸೂರು:  ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಹಿರಿಯ ನಟ ದಿ. ಅಂಬರೀಶ್ ಹಾಗೂ ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಹಲವಾರು ಮುಖಂ ಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡು ಅಗಲಿದ ನಾಯಕರ ಆತ್ಮಕ್ಕೆ ಶಾಂತಿ ಕೋರಿದರು. ಕಾಂಗ್ರೆಸ್ ಭವನದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದಿ.ಅಂಬರೀಶ್ ಹಾಗೂ ಜಾಫರ್ ಷರೀಫ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಶ್ರದ್ಧಾಂಜಲಿ ಸಭೆಯಲ್ಲಿ ಸಂಸದ ಆರ್.ಧ್ರುವ ನಾರಾಯಣ್ ಮಾತನಾಡಿ, ಹಿರಿಯ ನಟ ಅಂಬ ರೀಶ್…

ಮೈಸೂರು ಆಕಾಶವಾಣಿಯಲ್ಲಿ ನಾಳೆ `ಕನ್ನಡ ಉತ್ಸವ’ ಇಡೀ ದಿನ ನಾನಾ ಕಾರ್ಯಕ್ರಮ
ಮೈಸೂರು

ಮೈಸೂರು ಆಕಾಶವಾಣಿಯಲ್ಲಿ ನಾಳೆ `ಕನ್ನಡ ಉತ್ಸವ’ ಇಡೀ ದಿನ ನಾನಾ ಕಾರ್ಯಕ್ರಮ

November 27, 2018

ಮೈಸೂರು: ಯಾದವಗಿರಿಯಲ್ಲಿರುವ ಮೈಸೂರು ಆಕಾಶವಾಣಿ 100.6 ಎಫ್‍ಎಂ ಕೇಂದ್ರದಲ್ಲಿ ನವೆಂಬರ್ 28ರಂದು `ಕನ್ನಡ ಉತ್ಸವ’ ಆಯೋಜಿಸ ಲಾಗಿದ್ದು, ಬೆಳಿಗ್ಗೆ ಧ್ವಜಾರೋಹಣದಿಂದ ಸಂಜೆ ಸುಗಮ ಸಂಗೀತದವರೆಗೆ ಇಡೀ ದಿನ ಕನ್ನಡ ಉತ್ಸವ ನಡೆಯಲಿದೆ. ಆಕಾಶವಾಣಿ ಮತ್ತು ಆಕಾಶವಾಣಿ ಸಾಂಸ್ಕøತಿಕ ಸಂಘ ಜಂಟಿಯಾಗಿ ಕಾರ್ಯಕ್ರಮ ಏರ್ಪಡಿಸಿವೆ. ಬೆಳಿಗ್ಗೆ 11 ಗಂಟೆಗೆ ಮೈಸೂರು ಆಕಾಶವಾಣಿ ಮುಖ್ಯಸ್ಥ ಸುನೀಲ್ ಭಾಟಿಯಾ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 4 ಗಂಟೆಗೆ ಆಕಾಶವಾಣಿ, ಕೃಷಿ ಇಲಾಖೆ, ಮೈಸೂರು, ಮಂಡ್ಯ, ಚಾಮ ರಾಜ ನಗರ ಜಿಲ್ಲೆಗಳ ಪ್ರಾಂತೀಯ ಕೃಷಿಕರ…

1 1,261 1,262 1,263 1,264 1,265 1,611
Translate »