ಮೈಸೂರು: ಅರಮನೆ ನಗರಿ ಮೈಸೂರಿಂದ ರಾಜ್ಯ ರಾಜಧಾನಿಗೆ ಕೇವಲ 45 ನಿಮಿಷಗಳ ಪಯಣ! ಮೈಸೂರಿ ನಿಂದ ಚೆನ್ನೈ ತಲುಪಲು ಕೇವಲ 2 ಗಂಟೆ 25 ನಿಮಿಷಗಳೇ ಸಾಕು! ಮೈಸೂರು-ಚೆನ್ನೈ ನಡುವೆ ಹಾಲಿ ಅಂತರ 485 ಕಿಲೋಮೀಟರ್‍ಗಳಾ ಗಿದ್ದು, ಇದನ್ನು 435 ಕಿ.ಮೀ.ಗೆ ಕಡಿತ ಗೊಳಿಸಿ ಬುಲೆಟ್ ರೈಲು ಸಂಚಾರ ಪ್ರಸ್ತಾಪಕ್ಕೆ ಜರ್ಮನಿ ಸಲ್ಲಿಸಿರುವ ಅಧ್ಯ ಯನ ವರದಿಯಂತೆ ಯೋಜನೆ ಅನು ಷ್ಠಾನಕ್ಕೆ ಬಂದಲ್ಲಿ, ಗಂಟೆಗೆ 320 ಕಿ.ಮೀ. ವೇಗದಲ್ಲಿ ಬುಲೆಟ್ ಟ್ರೇನ್ ಸಂಚರಿಸು ವುದರಿಂದ ಈ ಶರವೇಗದ…
2 ಹುಲಿ, ಒಂದು ಆನೆ ಸಾವು
November 24, 2018ಮೈಸೂರು: ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯಲ್ಲಿ ಶುಕ್ರವಾರ 2 ಹುಲಿ ಹಾಗೂ ಒಂದು ಆನೆ ಕಳೇಬರ ಪತ್ತೆಯಾಗಿವೆ. ಗುಂಡ್ಲುಪೇಟೆ ವರದಿ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿಮವದ್ ಗೋಪಾಲ ಸ್ವಾಮಿ ಬೆಟ್ಟ ಅರಣ್ಯವಲಯದಲ್ಲಿ ಗಂಡು ಹುಲಿಯೊಂದು ಸಾವನ್ನಪ್ಪಿದೆ. ಕಳೆದ 3 ದಿನಗಳಿಂದ ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ 12 ವರ್ಷ ಪ್ರಾಯದ ಈ ಗಂಡು ಹುಲಿಯು ಆಹಾರವಿಲ್ಲದೆ ನರಳಿ ಸತ್ತಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಹಂಗಳ ಸಮೀಪದ ಹಿರೀಕೆರೆ ಬಳಿ…
ಪುರಭವನ ಆವರಣ ವಾಹನ ಮಾಲೀಕರ ಸುಲಿಗೆಗೆ ಬ್ರೇಕ್
November 24, 2018ಮೈಸೂರು: ವಾಹನ ಸವಾರರಿಂದ ಸುಲಿಗೆ ಮಾಡುತ್ತಿದ್ದ ಪುರಭವನದ ಆವರಣದಲ್ಲಿ ಪಾರ್ಕಿಂಗ್ ಗುತ್ತಿಗೆಯನ್ನು ಮೈಸೂರು ನಗರ ಪಾಲಿಕೆ ಶುಕ್ರವಾರ ರದ್ದು ಮಾಡಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆಯ ವತಿಯಿಂದಲೇ ಪಾರ್ಕಿಂಗ್ ವ್ಯವಸ್ಥೆ ಮುಂದುವರೆಸುವ ಆಲೋಚನೆ ಮಾಡುತ್ತಿದೆ. ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ಸಮಸ್ಯೆ ಉಂಟಾಗು ವುದನ್ನು ತಡೆಗಟ್ಟಲು ಪುರಭವನದಲ್ಲಿ ನಗರ ಪಾಲಿಕೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆಯ ವ್ಯವಸ್ಥೆಯನ್ನು ನಿರ್ವಹಿಸಲು ಗುತ್ತಿಗೆ ಪಡೆದಿದ್ದ ಗುತ್ತಿಗೆ ದಾರರು ಪಾಲಿಕೆ ನಿಗದಿಪಡಿಸಿದ್ದ ಶುಲ್ಕ ಕ್ಕಿಂತ ಹೆಚ್ಚುವರಿ…
ಶಾಲಾ-ಕಾಲೇಜಲ್ಲಿ ಮೊಬೈಲ್ ಬಳಕೆ ನಿಷೇಧ
November 24, 2018ಬೆಂಗಳೂರು: ವಿದ್ಯಾರ್ಥಿಗಳು ಇನ್ನು ಮುಂದೆ, ಶಾಲಾ-ಕಾಲೇಜುಗಳಲ್ಲಿ ಮೊಬೈಲ್ ಬಳಸುವಂತಿಲ್ಲ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ತರಗತಿಗಳಲ್ಲಿ ಮೊಬೈಲ್ ಬಳಸಿದರೆ ಅಂಥವರಿಗೆ ಕಠಿಣ ಶಿಕ್ಷೆ ಹಾಗೂ ಮೊಬೈಲ್ ಜಪ್ತಿ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಇಂಥದ್ದೊಂದು ಕಠಿಣವಾದ ನಿಯಮ ಜಾರಿ ಮಾಡಿದೆ. ಪದವಿ ಪೂರ್ವ ಶಿಕ್ಷಣ ಮಂಡಳಿ ಹೊರಡಿಸಿರುವ ನೂತನ ಅಧಿಸೂಚನೆಯಂತೆ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದೆ….
`ನಮ್ಮೂರ ತಿಂಡಿ’ ಆಹಾರ ಮೇಳಕ್ಕೆ ಸಚಿವ ಜಿ.ಟಿ.ದೇವೇಗೌಡರಿಂದ ಚಾಲನೆ
November 24, 2018ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭಾಗ್ಯ ಲಕ್ಷ್ಮಿ ಫುಡ್ಸ್ ವತಿಯಿಂದ ಏರ್ಪಡಿಸಿರುವ ನಾಲ್ಕು ದಿನಗಳ `ನಮ್ಮೂರ ತಿಂಡಿ’ ಆಹಾರ ಮೇಳಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡ ಶುಕ್ರವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಚಾಮರಾಜ ಕ್ಷೇತ್ರ ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ ಸಿಂಹ ಅವರ ಪತ್ನಿ ಅರ್ಪಿತಾ ಪ್ರತಾಪಸಿಂಹ, ಸಂಸ್ಥೆಯ ತನಯ್ ಬೈಸಾನಿ, ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವ ಸಲುವಾಗಿ ಆಯೋಜಿಸಿರುವ ಮೇಳದಲ್ಲಿ 150 ವಿವಿಧ ಬಗೆಯ ಖಾದ್ಯಗಳ…
ಪಾಠ ಹೇಳುತ್ತಿದ್ದ ಮಕ್ಕಳ ಮನೆಗೇ ಕನ್ನ ಹಾಕಿದ ಮೇಷ್ಟ್ರು…!
November 24, 2018ಮೈಸೂರು: ಶ್ರೀಮಂತರ ಮಕ್ಕಳಿಗೆ ಮನೆ ಪಾಠ ಹೇಳಿ ಕೊಡುತ್ತಿದ್ದ ಶಿಕ್ಷಕನೇ ಮನೆಯ ಕೀ ಕದ್ದಿಟ್ಟು ಕೊಂಡು ನಂತರ 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1 ಲಕ್ಷ ನಗದು ಕಳವು ಮಾಡಿದ್ದ ಪ್ರಕರಣವನ್ನು ಕೃತ್ಯ ನಡೆದ ಐದೇ ದಿನದಲ್ಲಿ ಪತ್ತೆ ಹಚ್ಚಿ, ಖದೀಮನನ್ನು ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ರಾಜೀವ್ ನಗರ ಒಂದನೇ ಹಂತ, ಮಾದೇಗೌಡ ಸರ್ಕಲ್ ಸಮೀಪದ ನಿವಾಸಿ, ಗುಂಡ್ಲುಪೇಟೆ ತಾಲೂಕು ಹಂಗಳ ಗ್ರಾಮದ ಹಿರಿಯ ಪ್ರಾಥ ಮಿಕ ಶಾಲೆ ಶಿಕ್ಷಕ ಸೈಯದ್…
ಬಡವರಿಗಾಗಿ ಅಗ್ಗದಲ್ಲಿ ಅಂದದ ಮನೆ ನಿರ್ಮಿಸಿ
November 24, 2018ಮೈಸೂರು: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಹಲವರಿಗೆ ಸ್ವಂತ ಮನೆ ಹೊಂದಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಸಂಸ್ಥೆಯು ಕಡಿಮೆ ವೆಚ್ಚದಲ್ಲಿ ಸುಂದರವಾದ ಮನೆಯನ್ನು ಬಡವರಿಗಾಗಿ ನಿರ್ಮಿಸಿಕೊಡುವತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮನವಿ ಮಾಡಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಭವನದಲ್ಲಿ ಶುಕ್ರವಾರ ಬಿಲ್ಡರ್ಸ್ ಅಸೋಸಿ ಯೇಷನ್ ಮೈಸೂರು ಘಟಕ ಆಯೋಜಿಸಿದ್ದ ಬಿಲ್ಡ್‍ಟೆಕ್-2018 ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸೇರಿದಂತೆ…
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಲು `ಶಕ್ತಿ ಯೋಜನೆ’
November 24, 20187045006100 ಸಂಖ್ಯೆಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆ ನಮೂದಿಸಿ ಎಸ್‍ಎಂಎಸ್ ಕಳಿಸಿದರೆ ಸಾಕು ಸದಸ್ಯತ್ವ ನೋಂದಣಿ ಮೈಸೂರು: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೇಶಾದ್ಯಂತ `ಶಕ್ತಿ ಯೋಜನೆ’ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಅದಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಬಿರುಸಿನ ಕಾರ್ಯ ಚಟುವಟಿಕೆ ನಡೆದಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ತಿಳಿಸಿದರು. ಮೈಸೂ ರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪದಾಧಿಕಾರಿಗಳ ಸಭೆಯ…
ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
November 24, 2018ಮೈಸೂರು: ಮೈಸೂರು ವಿಜಯನಗರದ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇ ರಿತು. ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದ ಸಂಸ್ಥಾ ಪಕ ಪ್ರೊ. ಭಾಷ್ಯಂ ಸ್ವಾಮೀಜಿ ಅವರು ದೀಪ ಹಚ್ಚುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ದೇವ ಸ್ಥಾನದ ಆವರಣದಲ್ಲಿ ಒಪ್ಪಲಾಗಿ ಜೋಡಿಸಲಾಗಿದ್ದ ಹಣತೆಗಳನ್ನು ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಬೆಳಗಿಸಿ, ಹಬ್ಬದ ರೀತಿ ಆಚರಿಸಿದರು. ವಿಜಯನಗರ, ಹಿನಕಲ್ ಸುತ್ತಮುತ್ತಲಿನ ಬಡಾವಣೆಗಳಿಂದ ಆಗಮಿಸಿದ್ದ ಅಪಾರ ಭಕ್ತರು, ದೇವಸ್ಥಾನದ ಆವರಣದಲ್ಲಿ ಸಾಲಾಗಿ…
ಜೆಎಸ್‍ಎಸ್ ಅಂತರ ಸಂಸ್ಥೆಗಳ 3 ದಿನಗಳ ಕ್ರೀಡಾಕೂಟ
November 24, 2018ಸುತ್ತೂರು ಶ್ರೀಕ್ಷೇತ್ರದಲ್ಲಿ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನಂಜನಗೂಡು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣೆಯ ಅಂಗವಾಗಿ ನಡೆಯುತ್ತಿರುವ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾ ಕೂಟಕ್ಕೆ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಗಳು ಓದಿನೊಂದಿಗೆ ಕ್ರೀಡೆ ಮತ್ತು ಸಾಂಸ್ಕø ತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಸುತ್ತೂರು ಶ್ರೀಕ್ಷೇತ್ರ ರಾಜ್ಯದ ವ್ಯಾಪ್ತಿಯಲ್ಲಿ ತನ್ನ ಸಂಸ್ಥೆಗಳನ್ನು ತೆರೆಯುವ ಮೂಲಕ ಬಡ ಹಾಗೂ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಶಿಸ್ತು…