ಮೈಸೂರು: ಮೈಸೂರಿನಲ್ಲಿ ಶುಕ್ರವಾರ ನಡೆದ ದೇಶಪ್ರೇಮ ಹಾಗೂ ರಾಷ್ಟ್ರ ನಿರ್ಮಾಣ ಕುರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ, ಇಂದು ಯುವ ಜನರಲ್ಲಿ ದೇಶಪ್ರೇಮದ ಕೊರತೆ ಉಂಟಾ ಗಿರುವ ಬಗ್ಗೆ ಬೇಸರ ವ್ಯಕ್ತವಾಯಿತು. ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಸಚಿವಾಲಯ, ಮೈಸೂರು ಜಿಲ್ಲಾ ನೆಹರು ಯುವ ಕೇಂದ್ರ, ಕಾಲೇಜು ಶಿಕ್ಷಣ ಇಲಾಖೆ, ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ ಜಂಟಿಯಾಗಿ 2019ರ ಗಣ ರಾಜ್ಯೋತ್ಸವದ ಅಂಗವಾಗಿ ಆಯೋಜಿ ಸಿದ್ದ ಸ್ಪರ್ಧೆಯಲ್ಲಿ ಮೈಸೂರು…
ಮೈಸೂರಿನ ವಿಜಯನಗರ 3ನೇ ಹಂತದಲ್ಲಿ 18 ಕೋಟಿ ರೂ. ವೆಚ್ಚದ ಸುಸಜ್ಜಿತ ಬಂಟ್ಸ್ ಕನ್ವೆನ್ಷನ್ ಹಾಲ್
November 3, 2018ಮೈಸೂರು: ಮೈಸೂರಿನ ವಿಜಯನಗರ 3ನೇ ಹಂತದ ಸಿಎ 1, ಎ ಬ್ಲಾಕ್‍ನಲ್ಲಿ ಬಂಟರ ಸಂಘದಿಂದ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಸುಸಜ್ಜಿತ ಆಶಾ ಪ್ರಕಾಶ್ ಶೆಟ್ಟಿ ಬಂಟ್ಸ್ ಕನ್ವೆ ನ್ಷನ್ ಹಾಲ್ ಅನ್ನು ನ.3ರಂದು ಬೆಳಿಗ್ಗೆ 9.30 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಧರ್ಮಸ್ಥಳ ಧರ್ಮಾ ಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಉದ್ಘಾಟಿಸಲಿದ್ದಾರೆ. ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿ ಅವರು ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ದರು….
ತ್ರಿಚಕ್ರ ವಾಹನದಲ್ಲಿ ಕನ್ನಡದ ಅಂಬಾರಿ
November 3, 2018ಮೈಸೂರು: ಮೈಸೂರು ಜಿಲ್ಲಾಡಳಿತ ಗುರುವಾರ ಮೈಸೂ ರಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋ ತ್ಸವದ ಮೆರವಣಿಗೆಯಲ್ಲಿ ಮೈಸೂರಿನ ಬೆಮೆಲ್ ಉದ್ಯೋಗಿ, ವಿಕಲಚೇತನ ರಮೇಶ್ ಶೆಟ್ಟಿ ಎಂಬುವರು ತಮ್ಮ ತ್ರಿಚಕ್ರ ವಾಹನ ವನ್ನು ಕರುನಾಡ ಅಂಬಾರಿಯಾಗಿ ಮಾರ್ಪ ಡಿಸಿ ಸಂಭ್ರಮಿಸಿದರು. ಕರುನಾಡ ಅಂಬಾರಿ ಯಲ್ಲಿ ಭುವನೇಶ್ವರಿ ಭಾವಚಿತ್ರ, ವಾಹನದ ಹೊರಭಾಗದ ಸುತ್ತಲೂ ಕನ್ನಡಕ್ಕಾಗಿ ಹೋರಾ ಡಿದವರು, ಜ್ಞಾನಪೀಠ ಪ್ರಶಸ್ತಿ ಪುರ ಸ್ಕøತರು, ಮೈಸೂರು ರಾಜ ಮಹಾರಾಜರ ಭಾವಚಿತ್ರಗಳನ್ನು ಹಾಕಿದ್ದರು. ಕಳೆದ 11 ವರ್ಷದಿಂದಲೂ ಅವರು ಕನ್ನಡ ರಾಜ್ಯೋ ತ್ಸವ ಸಂದರ್ಭದಲ್ಲಿ…
ಡಾ.ಅಂಬೇಡ್ಕರ್ ಪುತ್ಥಳಿ ಭಗ್ನ: ಹಸುವಟ್ಟಿ ಗ್ರಾಮಸ್ಥರ ಪ್ರತಿಭಟನೆ
November 3, 2018ತಿ.ನರಸೀಪುರ: ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಾಲೂಕಿನ ಹಸುವಟ್ಟಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಶುಕ್ರವಾರ ರಸ್ತೆತಡೆ ನಡೆಸಿದರು. ತಾಲೂಕಿನ ಸೋಸಲೆ ಹೋಬಳಿಯ ಹಸುವಟ್ಟಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇ ಡ್ಕರ್ ಅವರ ಪುತ್ಥಳಿಯನ್ನು ಕಳೆದ ಗುರು ವಾರ ರಾತ್ರಿ ಕಿಡಿಗೇಡಿಗಳು ಭಗ್ನಗೊಳಿಸಿರುವ ಕೃತ್ಯ ಬೆಳಿಗ್ಗೆ ಬೆಳಕಿಗೆ ಬರುತ್ತಿದ್ದಂತೆ ತಿ. ನರಸೀಪುರ ಪೂರೀಗಾಲಿ ಮುಖ್ಯ ರಸ್ತೆ ಯಲ್ಲಿ ಜಮಾವಣೆಗೊಂಡ ದಸಂಸ ಮುಖಂಡರು ಹಾಗೂ ಗ್ರಾಮಸ್ಥರು ಆರೋಪಿಗಳ…
ಕನ್ನಡ ರಾಜ್ಯೋತ್ಸವದಂದು ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ
November 3, 2018ನಂಜನಗೂಡು: ನಗರದ ಸಮೀಪ ವಿರುವ ವಿದ್ಯಾನಗರ ಬಡಾವಣೆಯ ನಿವಾಸಿ ಗಳು ಒಗ್ಗಟ್ಟಾಗಿ ಸೇರಿ ಕನ್ನಡ ರಾಜ್ಯೋತ್ಸವ ದಂದು ಬಡಾವಣೆಯ ಅಭಿವೃದ್ಧಿ ಸಮಸ್ಯೆಗೆ ಸಹಕರಿಸುವ ನಿಟ್ಟಿನಲ್ಲಿ ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಜಿಪಂ ಸದಸ್ಯೆ ಮಧು ಸುಬ್ಬಣ್ಣ ಉದ್ಘಾಟಿಸಿ ಮಾತನಾಡಿ, ಬಡಾ ವಣೆಯವರು ಸಂಘಟಿತರಾಗಿ ಸೇರಿಕೊಂಡಿ ರುವುದು ಉತ್ತಮ ಬೆಳವಣಿಗೆ, ಸ್ಥಳೀಯ ಶಾಸಕರ ಗಮನ ಸೆಳೆದು ಬಡಾವಣೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ದೇವಿರಮ್ಮನಹಳ್ಳಿ ಗ್ರಾಪಂ ಪಿಡಿಓ ಶ್ರೀಧರ್ ಮಾತನಾಡಿ, ಬಡಾವಣೆಯ…
ಕರ್ತವ್ಯಕ್ಕೆ ಅಡ್ಡಿ: ದೂರು ದಾಖಲು
November 3, 2018ಬೆಟ್ಟದಪುರ: ಅಪಘಾತ ಸ್ಥಳದಿಂದ ವಾಹನಗಳನ್ನು ತೆರವುಗೊಳಿಸಲು ಬಂದ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಸ್ಥಳೀಯ ವ್ಯಕ್ತಿಗಳು ಅಡ್ಡಿಪಡಿಸಿರುವ ಘಟನೆ ಬೆಟ್ಟದಪುರ ಸಮೀಪದ ಕಿತ್ತೂರಿನಲ್ಲಿ ನಡೆದಿದೆ. ಕಿತ್ತೂರು-ಕಲ್ಯಾಣಿಕೊಪ್ಪಲು ರಸ್ತೆಯಲ್ಲಿ ಬುಧವಾರ ಸಂಜೆ ಟಿಪ್ಪರ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಬೆಟ್ಟದಪುರ ಪೊಲೀಸ್ ಠಾಣೆ ಎಎಸ್‍ಐ ರುದ್ರಪ್ಪಗೌಡ, ಸಿಬ್ಬಂದಿ ಗಣೇಶ್ ಸ್ಥಳಕ್ಕೆ ಬಂದು ವಾಹನಗಳನ್ನು ತೆರವುಗೊಳಿಸಲು ಮುಂದಾದಾಗ, ಕಾರಿನ ದುರಸ್ತಿ ವೆಚ್ಚ ಮತ್ತು ಪರಿಹಾರವನ್ನು ಲಾರಿ ಮಾಲೀಕರು ಸ್ಥಳದಲ್ಲಿಯೇ ನೀಡಬೇಕೆಂದು ಗಾಮಸ್ಥರು ಪಟ್ಟು ಹಿಡಿದರು. ಪೊಲೀಸರ…
ಜಾಗತೀಕರಣದಿಂದ ಕನ್ನಡ ಪ್ರಜ್ಞೆ ಮಾಯ
November 3, 2018ಮೈಸೂರು: ಜಾಗತೀಕರಣವು ವೈವಿಧ್ಯತೆಯನ್ನು ನಾಶಪಡಿಸುತ್ತಿರುವಂತೆ ಕನ್ನಡ ಪ್ರಜ್ಞೆಯನ್ನು ನಾಶಪಡಿಸುತ್ತಿದೆ ಎಂದು ಮಹಾರಾಣಿ ಕಾಲೇಜು ಪ್ರಾಧ್ಯಾಪಕ ಪ್ರೊ. ಎಂ.ಕೃಷ್ಣಮೂರ್ತಿ ವಿಷಾದಿಸಿದರು. ನಗರದ ಬಿ.ಎನ್.ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ರಾಜ್ಯೋತ್ಸವ ಸೇರಿದಂತೆ ಇಂದು ಅನೇಕ ಆಚರಣೆಗಳು ತಾಂತ್ರಿಕವಾಗಿ ಹೋಗಿವೆ. ಚರ್ಚಿಸುವ ಅವಕಾಶವೇ ಇಲ್ಲವಾಗು ತ್ತಿದೆ. ಹಾಗಾಗಿ ನಮ್ಮತನವನ್ನು ನಾವೇ ಉಳಿಸಿಕೊಳ್ಳಬೇಕಾಗಿದ್ದು, ಭಾಷಾವಾರು ಪ್ರಾಂತ್ಯ ರಚನೆಯು ವೈವಿಧ್ಯತೆಗೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಅಂತಹ ವೈವಿಧ್ಯತೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಉಳಿಸಿಕೊಳ್ಳುವ…
ವಿಶ್ವದ ಅತ್ಯಂತ ಎತ್ತರದ ಸರ್ದಾರ್ ವಲ್ಲಭ ಭಾಯ್ ಪಟೇಲರ `ಏಕತಾ ಪ್ರತಿಮೆ’ ಲೋಕಾರ್ಪಣೆ
November 1, 2018ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲರ `ಏಕತಾ ಪ್ರತಿಮೆ’ಯನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು. ಗುಜರಾತ್‍ನ ಕೆವಾಡಿಯಾದ ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು. ದೇಶದ ಮೊದಲ ಉಪ ಪ್ರಧಾನಿ ಪಟೇಲ್ ಅವರು ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಿ ದ್ದರು. ಹೀಗಾಗಿ ಪ್ರತಿಮೆಗೆ `ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಸರ್ದಾರ್ ಪಟೇಲ್ ಅವರ ಪ್ರತಿಮೆಯ ಮೂಲಕ…
ಉಪ ಸಮರ: ಶನಿವಾರ ಮತದಾನಕ್ಕೆ ಸಿದ್ಧತೆ
November 1, 2018ಬೆಂಗಳೂರು: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ಮೇಲೆ ಭಾರೀ ಪರಿಣಾಮ ಬೀರಬಹುದೆಂದು ನಿರೀಕ್ಷಿಸಲಾಗಿರುವ ಐದು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದ್ದು, ಶನಿವಾರ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್‍ಕುಮಾರ್ ತಿಳಿಸಿದ್ದಾರೆ. ಬಿಜೆಪಿ, ಅದರಲ್ಲೂ ಆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮಣಿಸಲು ಕಳೆದ 15 ದಿನಗಳಿಂದ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಹಗಲಿರುಳೆನ್ನದೆ ಪ್ರಚಾರ ಕೈಗೊಂಡಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ,…
ತೆರೆಯಲಿದೆ ಇಂದು ಹಾಸನಾಂಬೆ ದೇವಸ್ಥಾನದ ಬಾಗಿಲು
November 1, 2018ಹಾಸನ: ಪುರಾಣ ಪ್ರಸಿದ್ಧ ಹಾಸನದ ಅಧಿದೇವತೆ ಹಾಸನಾಂಬ ದೇವಾಲಯದ ಬಾಗಿಲು ನಾಳೆ (ನ.1) ಬೆಳಿಗ್ಗೆ 11.30ಕ್ಕೆ ತೆರೆಯಲಿದೆ. ಸ್ವಚ್ಛತೆ, ಅಲಂಕಾರ, ಪೂಜಾ ವಿಧಿ-ವಿಧಾನಗಳು ನಡೆಯಲಿರುವುದರಿಂದ ಮೊದಲ ದಿನ ಭಕ್ತಾದಿ ಗಳಿಗೆ ದೇವಿಯ ದರ್ಶನವಿರುವುದಿಲ್ಲ. ನ.9ರಂದು ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾ ಗುತ್ತದೆ. ಅಂದೂ ಕೂಡ ಭಕ್ತಾದಿಗಳಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ. ನ.2ರಿಂದ 8ರವರೆಗೆ 7 ದಿನಗಳ ಕಾಲ ಭಕ್ತಾದಿಗಳು ಹಾಸನಾಂಬೆ ದೇವಿಯ ದರ್ಶನ ಪಡೆಯಬಹುದಾಗಿದೆ. ನಾಳೆ ಬೆಳಿಗ್ಗೆ ಹಾಸನಾಂಬ ದೇವಸ್ಥಾನ ಬಾಗಿಲು ತೆರೆಯುವ ವೇಳೆ ಎಲ್ಲಾ ತಳವಾರ…