ಬೆಂಗಳೂರು: ನಗರ ಪ್ರದೇಶಗಳಲ್ಲಿ ಒತ್ತುವರಿ ಭೂಮಿ ತೆರವಿಗೆ ಭೌಗೋಳಿಕ ನಕಾಶೆ ಸಿದ್ಧಪಡಿಸಲು ಇಂದಿಲ್ಲಿ ಸೇರಿದ್ದ ಸಚಿವ ಸಂಪುಟ ಸಭೆ ನಿರ್ಧರಿಸಿದೆ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ದಾವಣಗೆರೆ ಸೇರಿದಂತೆ 10 ಮಹಾನಗರ ಪಾಲಿಕೆ ಹಾಗೂ ರಾಜ್ಯದ ಎಲ್ಲಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯ ಭೂ ನಕಾಶೆ ಸಿದ್ಧಗೊಳ್ಳಲಿದೆ. ಸಾವಿರಾರು ಕೋಟಿ ರೂ. ಮೌಲ್ಯದ ಸರ್ಕಾರಿ ಭೂಮಿ ಒತ್ತುವರಿ ಯಾಗಿದ್ದು, ಇದನ್ನು ತೆರವುಗೊಳಿಸುವ ಮೊದಲ ಹೆಜ್ಜೆಯಾಗಿ ವಿದ್ಯುನ್ಮಾನ ನಕಾಶೆ ಹೊರಬರಲಿದೆ. ಈ ನಕ್ಷೆಯಲ್ಲಿ ಸಾರ್ವಜನಿಕರ ಆಸ್ತಿ-ಪಾಸ್ತಿ ಜೊತೆಗೆ…
ಬೃಹತ್ ಅಕ್ವೇರಿಯಂ ಕಾಮಗಾರಿಗೆ ಜಾಗತಿಕ ಟೆಂಡರ್ ಕರೆಯಲು ಮೈಸೂರು ಮೃಗಾಲಯ ನಿರ್ಧಾರ
October 26, 2018ಮೈಸೂರು: ಮೈಸೂರು ನಗರ ಪಾಲಿಕೆಯಿಂದ ಹಸ್ತಾಂತರಗೊಂಡ ಬೃಹತ್ ಅಕ್ವೇರಿಯಂ ಕಟ್ಟಡಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವ ಮೃಗಾಲಯ ಪ್ರಾಧಿಕಾರವು ಜಾಗತಿಕ (ಗ್ಲೋಬಲ್) ಟೆಂಡರ್ ಪ್ರಕ್ರಿಯೆಗೆ ಮುಂದಾಗಿದೆ. ಮೈಸೂರಿನ ಕಾರಂಜಿಕೆರೆ ಹಾಗೂ ಮೃಗಾಲಯದ ನಡುವೆ ಬೃಹತ್ ಅಕ್ವೇರಿಯಂ ಸ್ಥಾಪನೆಗೆ ಮುಂದಾ ಗಿದ್ದ ಮೈಸೂರು ನಗರ ಪಾಲಿಕೆ 4.26 ಕೋಟಿ ರೂ. ಅನುದಾನದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಾ ಣಕ್ಕೆ ನಿರ್ಧರಿಸಿತ್ತು. ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಕಳೆದ 5 ವರ್ಷದಿಂದ ಪಾಳು ಬಿದ್ದಿದ್ದ ಅಕ್ವೇರಿಯಂ ಕಟ್ಟಡವನ್ನು 2018ರ ಜು.14ರಂದು ಪ್ರವಾಸೋದ್ಯಮ ಸಚಿವ…
ಭಕ್ತಿ ಭಾವದ ಯಶಸ್ವಿ ಚಾಮುಂಡೇಶ್ವರಿ ತೆಪ್ಪೋತ್ಸವ
October 26, 2018ಮೈಸೂರು: ಚಾಮುಂಡಿಬೆಟ್ಟದ ದೇವಿ ಕೆರೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಅಮ್ಮನವರ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಅಮ್ಮನವರ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಹೊರಟು ರಥದ ಬೀದಿಯ ಮೂಲಕ ಸಾಗಿ ದೇವೀಕೆರೆ ಅಂಗಳಕ್ಕೆ ಮೆರವಣಿಗೆ ಮೂಲಕ ತಲುಪಿತು. ಮೆರವಣಿಗೆ ವೇಳೆ ಭಕ್ತರು ಪೂಜೆ ಸಲ್ಲಿಸಿ, ಧನ್ಯತೆ ಮೆರೆದರು. ದೇವಿಕೆರೆ ಅಂಗಳದಲ್ಲಿ ಸಂಜೆಯವರೆಗೂ ವಿವಿಧ ಪೂಜೆ-ಪುರಸ್ಕಾರ, ಹೋಮ-ಹವನಗಳು ನಡೆದವು. ನಂತರ 7 ಗಂಟೆ ವೇಳೆಗೆ ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ಗೊಂಡು ಕಂಗೊಳಿಸುತ್ತಿದ್ದ ತೆಪ್ಪದಲ್ಲಿ…
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
October 26, 2018`ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ, ವಿಶೃತ್ ನಾಯಕ ಅತ್ಯುತ್ತಮ ನಟ, ತಾರಾ ಅನುರಾಧ ಅತ್ಯುತ್ತಮ ನಟಿ `ಹೆಬ್ಬೆಟ್ ರಾಮಕ್ಕ’, `ಹೆಬ್ಬುಲಿ’ಗೆ ತಲಾ ಮೂರು ಪ್ರಶಸ್ತಿ `ರಾಜಕುಮಾರ’, `ಮಾರ್ಚ್ 22’ಕ್ಕೆ ತಲಾ ಎರಡು ಪ್ರಶಸ್ತಿ ಬೆಂಗಳೂರು: 2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಮಾದೇಶ್ ಟಿ.ಭಾಸ್ಕರ್ ನಿರ್ಮಾಣದಲ್ಲಿ ಆದರ್ಶ್ ಹೆಚ್.ಈಶ್ವರಪ್ಪ ನಿರ್ದೇಶಿಸಿರುವ `ಶುದ್ಧಿ’ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಕೂಡ್ಲೂರು ರಾಮಕೃಷ್ಣ ನಿರ್ದೇಶನದಲ್ಲಿ ಹರೀಶ್ ಶೇರ್‍ಗಾರ್ ನಿರ್ಮಿಸಿರುವ `ಮಾರ್ಚ್ 22’ ಎರಡನೇ ಅತ್ಯುತ್ತಮ ಚಿತ್ರ ಹಾಗೂ…
ವಾಣಿಜ್ಯ ಮಂಡಳಿ ಸಂಧಾನ ವಿಫಲ
October 26, 2018ಬೆಂಗಳೂರು: ಚಿತ್ರರಂಗದ ಯಾವುದೇ ಸಮಸ್ಯೆಯಾದರೂ ಇತ್ಯರ್ಥಪಡಿಸುತ್ತಿದ್ದ ಚಲನಚಿತ್ರ ವಾಣಿಜ್ಯ ಮಂಡಳಿಗೆ ಶ್ರುತಿ ಹರಿಹರನ್ ಅವರ `ಮೀ ಟೂ’ ಅಭಿಯಾನ ಕಗ್ಗಂಟಾಗಿ ಪರಿಣಮಿಸಿದ್ದು, ವಾಣಿಜ್ಯ ಮಂಡಳಿಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಧಾನ ವಿಫಲವಾಗಿ, ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದೆ. ಶ್ರುತಿ ಹರಿಹರನ್ ಅವರು ನಾಯಕ ನಟ ಅರ್ಜುನ್ ಸರ್ಜಾ ವಿರುದ್ಧ ‘ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಇಂದು ಸಂಜೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಂಧಾನ…
ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಮಾನನಷ್ಟ ಮೊಕದ್ದಮೆ
October 26, 2018ಬೆಂಗಳೂರು: ತಮ್ಮ ವಿರುದ್ಧ `ಮೀ ಟೂ’ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ವಿರುದ್ಧ ಬಹು ಭಾಷಾ ನಟ, ಕನ್ನಡಿಗ ಅರ್ಜುನ್ ಸರ್ಜಾ ಅವರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಶ್ರುತಿ ಹರಿಹರನ್ ಮಾಡಿರುವ ಆರೋಪದಿಂದ ತನಗೆ ಹಾಗೂ ತನ್ನ ಕುಟುಂಬದವರಿಗೆ ನೋವುಂಟಾಗಿದೆ ಎಂಬ ಕಾರಣಕ್ಕಾಗಿ 5 ಕೋಟಿ ರೂ.ಗಳ ಮಾನ ನಷ್ಟ ಮೊಕದ್ದಮೆಯನ್ನು ಅರ್ಜುನ್ ಸರ್ಜಾ ಹೂಡಿದ್ದಾರೆ. ಅಲ್ಲದೇ ಶ್ರುತಿ ಹರಿಹರನ್ ವಿರುದ್ಧ ಅವರು ಕ್ರಿಮಿನಲ್ ಪ್ರಕರಣವನ್ನೂ ಕೂಡ ದಾಖಲಿಸಿದ್ದು, ಅದು ಸೈಬರ್…
ಏನಾದರೂ ಮಾಡಿ ಆದರೆ ಲೋಡ್ ಶೆಡ್ಡಿಂಗ್ ಮಾಡಬೇಡಿ ಅಧಿಕಾರಿಗಳಿಗೆ ಸಿಎಂ ಮತ್ತೆ ಸೂಚನೆ
October 26, 2018ಬೆಂಗಳೂರು: ಪ್ರಸ್ತುತ ಯಾವುದೇ ವಿದ್ಯುತ್ ಸರಬರಾಜು ಕಂಪನಿಯು ಲೋಡ್ ಶೆಡ್ಡಿಂಗ್ ಜಾರಿಗೆ ತಂದಿಲ್ಲ. ಹೀಗಾಗಿ ಇನ್ನು ಮುಂದೆಯೂ ಲೋಡ್ ಶೆಡ್ಡಿಂಗ್ ಮಾಡಬಾರದೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲು ಇಂದು ಮುಖ್ಯಮಂತ್ರಿ ಗಳು ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕೆಪಿಸಿಎಲ್, ಕೆಪಿಟಿಸಿಎಲ್ ಹಾಗೂ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು,…
ಬಗೆ ಬಗೆಯ ಖಾದ್ಯಗಳಿಂದ ಬರ ಸೆಳೆಯುತ್ತಿದ್ದ ದಸರಾ ಆಹಾರ ಮೇಳ ಸ್ಥಳ ಈಗ ಹೇಸಿಗೆ ತಾಣ
October 26, 2018ಮೈಸೂರು: ಬಗೆ ಬಗೆಯ ತಿಂಡಿ-ತಿನಿಸುಗಳಿಂದ ಘಮ ಘಮಿಸುತ್ತಿದ್ದ ಆ ಸ್ಥಳವೀಗ ದುರ್ವಾಸನೆಗೆ ಸಾಕ್ಷಿಯಾಗಿದೆ. ಹೌದು, ದಸರಾ ಮಹೋ ತ್ಸವದ ಅಂಗವಾಗಿ ಆಹಾರ ಮೇಳ ನಡೆದ ಲಲಿತ ಮಹಲ್ ಹೆಲಿಪ್ಯಾಡ್‍ನ ಮುಡಾ ಮೈದಾನದ ದುಸ್ಥಿತಿ ಇದು. ಮೈದಾನದಲ್ಲಿ ಪ್ಲಾಸ್ಟಿಕ್‍ನ ಚಮಚ, ತಟ್ಟೆ, ಲೋಟ, ಚೀಲ ಹೀಗೆ ಹತ್ತು-ಹಲವು ಬಗೆಯ ತ್ಯಾಜ್ಯಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮೈದಾನಕ್ಕೆ ಹೊಂದಿಕೊಂಡಿರುವ ಇಂದಿರಾ ಕ್ಯಾಂಟೀನ್ ಹಿಂಭಾಗದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಶೌಚಾಲಯಗಳನ್ನು ತೆರವು ಮಾಡಿದ್ದರೂ ಹೊಂಡಗಳನ್ನು ಮುಚ್ಚದೇ ಹಾಗೇ ಬಿಡಲಾಗಿದೆ. ಪರಿಣಾಮ ಹೊಂಡಗಳಲ್ಲಿ ಶೇಖರಣೆಗೊಂಡ ಮಲ-ಮೂತ್ರದ…
ಅರೆನಗ್ನ ಜಾಹೀರಾತು ಹೋರ್ಡಿಂಗ್ ತೆರವು
October 26, 2018ಮೈಸೂರು: ಮೈಸೂರು-ಹುಣಸೂರು ರಸ್ತೆಯಲ್ಲಿ ಅಳವಡಿಸಿದ್ದ ಆಕ್ಷೇಪಾರ್ಹ ಜಾಹೀರಾತು ಹೋರ್ಡಿಂಗ್ ತೆರವಾಗಿದೆ. ಹಲವು ಅಡೆತಡೆಗಳ ನಡುವೆಯೂ ಸಂಸದ ಪ್ರತಾಪ್ ಸಿಂಹ ಅವರ ಮುತು ವರ್ಜಿಯಿಂದ ಇತ್ತೀಚೆಗಷ್ಟೇ ಕಲಾ ಮಂದಿರದಿಂದ ವಾಲ್ಮೀಕಿ ರಸ್ತೆ ಜಂಕ್ಷನ್‍ವರೆಗೆ ಅಭಿವೃದ್ಧಿ ಗೊಂಡಿರುವ ಮೈಸೂರು-ಹುಣಸೂರು ಹೆದ್ದಾರಿಯಲ್ಲಿ, ಅರೆನಗ್ನ ಪುರುಷ ಹಾಗೂ ಸ್ತ್ರೀ ರೂಪದರ್ಶಿಗಳಿರುವ ಒಳ ಉಡುಪು ಜಾಹೀರಾತು ಹೋರ್ಡಿಂಗ್ ಅಳವಡಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರು ಆಕ್ಷೇಪಿಸಿದ್ದ ಹಿನ್ನೆಲೆ ಯಲ್ಲಿ `ಮೈಸೂರು ಮಿತ್ರ’ನ ಅ.24ರ ಸಂಚಿಕೆಯಲ್ಲಿ ಸಚಿತ್ರ ವರದಿ ಪ್ರಕಟಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು….
ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಪ್ರತಿಭಟನಾ ಮೆರವಣಿಗೆ
October 26, 2018ಮೈಸೂರು: ಗುತ್ತಿಗೆ ನೌಕರರಿಗೆ ಸಮಾನವೇತನ ಹಾಗೂ ಸೇವಾ ಭದ್ರತೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ವೇದಿಕೆ ಆಶ್ರಯದಲ್ಲಿ ನೂರಾರು ಗುತ್ತಿಗೆ ನೌಕರರು ಗುರುವಾರ ಮೈಸೂರಿನಲ್ಲಿ ಪ್ರತಿ ಭಟನಾ ಮೆರವಣಿಗೆ ನಡೆಸಿದರು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಜಮಾಯಿಸಿದ ಅವರು ಸಾರ್ವಜನಿಕ ಆರೋಗ್ಯ ಇಲಾಖೆ ಬಲಗೊಳ್ಳಬೇಕು, ಗುತ್ತಿಗೆ ನೌಕರರಿಗೆ ಸಮಾನ ವೇತನ, ಸೇವಾ ಭದ್ರತೆ ಸಿಗ ಬೇಕು ಎಂಬಿತ್ಯಾದಿ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಹಿಡಿದು ಅಲ್ಲಿಂದ ದೊಡ್ಡ ಗಡಿಯಾರ, ಗಾಂಧಿ ವೃತ್ತ, ವಿನೋಬಾ ರಸ್ತೆ,…