ಮೈಸೂರು: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜನನಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಮನೆ ಮನೆ ಬೊಂಬೆ ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತ ರಾದವರಿಗೆ ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಗುರುವಾರ ಬಹುಮಾನ ವಿತರಿಸಲಾಯಿತು. ಮೈಸೂರಿನ ಜಗನ್ಮೋಹನ ಅರಮನೆ ಯಲ್ಲಿ 1 ಲಕ್ಷ ಬೊಂಬೆ ಪ್ರದರ್ಶನ ನಡೆಸಿದ್ದ ಆಂಧ್ರಪ್ರದೇಶದ ಗಾಯತ್ರಿ ಸೇವಾ ಟ್ರಸ್ಟ್‍ನ ಡಾ.ಎ.ರವಿಕಲ್ಯಾಣ ಚಕ್ರವರ್ತಿ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರ ಹ್ಮಣ್ಯ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾರ್ಯದರ್ಶಿ ಡಾ.ಸುಜಾತಾ ರಾವ್ ಇನ್ನಿ ತರರು ಅತಿಥಿಯಾಗಿ ಪಾಲ್ಗೊಂಡು ಬೊಂಬೆ…
`ವುಮೆನ್ ಅಂಡ್ ಲಾ’ ಪುಸ್ತಕ ಬಿಡುಗಡೆ
October 26, 2018ಮೈಸೂರು: ಎಸ್‍ಬಿಆರ್‍ಆರ್ ಮಹಾಜನ ಕಾನೂನು ಕಾಲೇಜಿನ ವಿದ್ಯಾರ್ಥಿ ಪರೀಕ್ಷಿತ್ ಕೆ.ನಾಯ್ಕ್ ಅವರ `ವುಮೆನ್ ಅಂಡ್ ಲಾ (ಮಹಿಳೆ ಮತ್ತು ಕಾನೂನು)’ ಪುಸ್ತಕ ವನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಎಸ್‍ಬಿಆರ್‍ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ `ವುಮೆನ್ ಅಂಡ್ ಲಾ’ ಎಂಬ ಆಂಗ್ಲಾ ಭಾಷಾ ಪುಸ್ತಕವನ್ನು ನಿವೃತ್ತ ಐಪಿಎಸ್ ಅಧಿಕಾರಿ ಕೆ.ಪಿ.ಪುಟ್ಟಸ್ವಾಮಿ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಮಹಿಳಾ ಸಮುದಾಯ ಸಮಾಜ ದಲ್ಲಿ ಎದುರಿಸುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ಇರುವ ಕಾನೂನು…
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಉತ್ತಮ
October 26, 2018ಮೈಸೂರು: ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಉತ್ತಮವಾಗಿದೆ ಎಂದು ಚಾಮರಾಜನಗರ ಸಂಸದ ಆರ್.ಧ್ರುವ ನಾರಾಯಣ್ ತಿಳಿಸಿದರು. ಮೈಸೂರಿನ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಆಯೋ ಜಿಸಿದ್ದ ಪೀಪಲ್ಸ್ ಪಾರ್ಕ್ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಆರ್.ಗೋವಿಂದ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕೇವಲ ಶೇ.12ರಷ್ಟಿದ್ದ ಶೈಕ್ಷಣಿಕ ಪ್ರಗತಿ, ಪ್ರಸ್ತುತ ಶೇ.74ರಷ್ಟಿದೆ. ಕರ್ನಾಟಕ ರಾಜ್ಯದಲ್ಲಿ ಶೇ.75 ರಷ್ಟಿದ್ದು, ಇತರೆ ರಾಜ್ಯಗಳಿಗಿಂತ ಸಾಕಷ್ಟು ಉತ್ತಮವಾಗಿದೆ ಎಂದು ಹೇಳಿದರು….
ಬೆಂಬಲ ಬೆಲೆಯಲ್ಲಿ ಮೆಕ್ಕೆ ಜೋಳ, ಅಕ್ಕಿ ಖರೀದಿ ಕೆಎಂಎಫ್ ಮೂಲಕ ಜೋಳ ಖರೀದಿಗೆ ಸೂಚನೆ
October 26, 2018ಬೆಂಗಳೂರು: ಪ್ರತೀ ಕ್ವಿಂಟಾಲ್ ಮೆಕ್ಕೆ ಜೋಳಕ್ಕೆ 1300 ರೂ. ಹಾಗೂ ಅಕ್ಕಿಗೆ 1200 ರೂ. ಬೆಂಬಲ ನಿಗದಿಪಡಿಸಿದ್ದು, ಕರ್ನಾಟಕ ಹಾಲು ಒಕ್ಕೂಟದ ಮುಖಾಂತರ ಮೆಕ್ಕೆ ಜೋಳ ಮತ್ತು ಅಕ್ಕಿಯನ್ನು ನೇರವಾಗಿ ಖರೀದಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಮೆಕ್ಕೆ ಜೋಳ ಮತ್ತು ಅಕ್ಕಿಗೆ ಬೆಂಬಲ ಬೆಲೆ ನಿಗದಿಪಡಿಸುವ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2 ಲಕ್ಷ ಮೆಟ್ರಿಕ ಟನ್ ಮೆಕ್ಕೆ ಜೋಳವನ್ನು ಕ್ವಿಂಟಾಲ್‍ಗೆ 1300 ರೂ.ಗಳಂತೆ ರೈತರಿಂದ ಖರೀದಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ ಕ್ವಿಂಟಾಲ್‍ಗೆ 1200…
ಟಿವಿಎಸ್ ಮೋಟಾರ್ಸ್ ನಿರ್ದೇಶಕ, ಸಿಇಓ ಆಗಿ ರಾಧಾಕೃಷ್ಣನ್ ನೇಮಕ
October 26, 2018ಮೈಸೂರು: ದ್ವಿಚಕ್ರ, ತ್ರಿಚಕ್ರ ವಾಹನ ಕ್ಷೇತ್ರದಲ್ಲಿ ದೇಶದ ಪ್ರಮುಖ ಕಂಪನಿಗಳಲ್ಲೊಂದಾದ ಟಿವಿಎಸ್ ಮೋಟಾರ್ ಕಂಪನಿಯ ಪೂರ್ಣಕಾಲಿಕ ನಿರ್ದೇಶಕರಾಗಿ ಕೆ.ಎನ್.ರಾಧಾ ಕೃಷ್ಣನ್ ನೇಮಕಗೊಂಡಿದ್ದಾರೆ ಎಂದು ಟಿವಿಎಸ್ ಮೋಟಾರ್ ಕಂಪನಿ ಅಧ್ಯಕ್ಷ ವೇಣು ಶ್ರೀನಿವಾಸನ್ ಹೇಳಿದ್ದಾರೆ. ಅವರು ಮುಂದಿನ 5 ವರ್ಷಗಳವರೆಗೆ ಕಂಪನಿಯ ನಿರ್ದೇಶಕ ಮತ್ತು ಸಿಇಓ ಆಗಿ ಕಾರ್ಯ ನಿರ್ವಹಿಸುವರು. ಚೆನ್ನೈನ ಐಐಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಧಾಕೃಷ್ಣನ್, ಅಹಮದಾಬಾದ್ ಐಐಎಂನಲ್ಲಿ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆಗೆ ನಿರ್ಧಾರ
October 26, 2018ಹುಣಸೂರು: ಕನ್ನಡ ರಾಜ್ಯೋತ್ಸವ ಆಚರಣೆಗೆ ಅಡ್ಡಿಯಾಗಿರುವ ರಸ್ತೆಗಳ ನಿರ್ಬಂಧವನ್ನು ತೆರವುಗೊಳಿಸಿ ಜಿಲ್ಲಾಡಳಿತ ಮತ್ತು ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನ.10ರಿಂದ 15ರೊಳಗೆ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದರು. ನಗರಸಭೆ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕರೆ ಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳನ್ನು ಅಲಿಸಿದ ನಂತರ ಮಾತನಾಡಿದ ಅವರು, ನ.3ರಂದು ಲೋಕ ಸಭೆ ಉಪಚುನಾವಣೆ ಇದೆ. ಇದರ ನೀತಿ ಸಂಹಿತೆ ನ.8ರ ತನಕ ಜಾರಿಯಲ್ಲಿರುವ ಕಾರಣ ಈ ಸಂದರ್ಭದಲ್ಲಿ ಜಿಲ್ಲಾಡಳಿತ ಯಾವುದೇ ತೀರ್ಮಾನಗಳನ್ನು…
ಕೈ ಅಭ್ಯರ್ಥಿ ಗೆಲುವಿಗಾಗಿ ಧ್ರುವ, ಯತೀಂದ್ರ ಮತಬೇಟೆ
October 26, 2018ಸೋಮನಾಥಪುರ ಜಿಪಂ ಕ್ಷೇತ್ರ ಉಪ ಚುನಾವಣೆ ಅಹಿಂದ ಮತದಾರರ ಓಲೈಕೆ ಯತ್ನ ತಿ.ನರಸೀಪುರ: ತಾಲೂಕಿನ ಸೋಮನಾಥಪುರ ಜಿ.ಪಂ ಕ್ಷೇತ್ರದ ಉಪ ಚುನಾವಣೆಗೆ ಎರಡು ದಿನ ಬಾಕಿ ಇರುವ ಹಿನ್ನೆಲೆ ಯಲ್ಲಿ ಚುನಾವಣೆ ಪ್ರಚಾರ ತಾರಕಕ್ಕೇ ರುತ್ತಿದ್ದು, ಅಹಿಂದ ಸಮುದಾಯಗಳ ಮತ ಗಳನ್ನು ಸೆಳೆಯಲು ಸಂಸದ ಆರ್.ಧ್ರುವ ನಾರಾಯಣ ಹಾಗೂ ವರುಣಾ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಅವರು ವಿವಿಧೆಡೆ ಗುರುವಾರ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಪದ್ಮನಾಭ ಅವರ ಪರ ಭರ್ಜರಿ ಮತಬೇಟೆ ನಡೆಸಿದರು. ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡ…
ಮೈಸೂರಲ್ಲಿ ಇಬ್ಬರು ಯುವತಿಯರ ಅಪಹರಣ
October 26, 2018ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರನ್ನು ಅಪಹರಿ ಸಿರುವ ಬಗ್ಗೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರಿನ ಜನತಾನಗರ ನಿವಾಸಿ ಐಶ್ವರ್ಯ(17)ಅವರನ್ನು ಅ.19ರಂದು ಆಕೆಯ ಪ್ರಿಯಕರ ಮಹೇಶ್ ಎಂಬಾತ ಅಪಹರಿಸಿದ್ದಾನೆ ಎಂದು ಐಶ್ವರ್ಯ ತಾಯಿ ಲಕ್ಷ್ಮಿ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ತಮ್ಮ ಪುತ್ರಿ ಐಶ್ವರ್ಯ ಮತ್ತು ಮಹೇಶ್ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ನಾವು ಅವರಿಬ್ಬರಿಗೂ ಬುದ್ಧಿವಾದ ಹೇಳಿದ್ದೆವು. ಆದರೆ ಅ.19ರಂದು ಮಧ್ಯಾಹ್ನ 1 ಗಂಟೆ ಯಿಂದ ಸಂಜೆ 7 ಗಂಟೆಯೊಳಗಿನ…
ಆಕರ್ಷಕ ವರ್ಣರಂಜಿತ ವಾಲ್ಮೀಕಿ ಜಯಂತಿ ಮೆರವಣಿಗೆ: ಗಮನ ಸೆಳೆದ ನಾನಾ ಕಲಾ ತಂಡಗಳು, ಸ್ತಬ್ಧಚಿತ್ರಗಳು
October 25, 2018ಮೈಸೂರು: ಕಳೆದ ಶುಕ್ರವಾರವಷ್ಟೇ ನಡೆದ ದಸರಾ ಮಹೋತ್ಸ ವದ ವಿಜೃಂಭಣೆಯ ಜಂಬೂ ಸವಾರಿ ಮೆರವಣಿಗೆಯಂತೆ ಬುಧವಾರ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅದ್ಧೂರಿ ಮೆರವಣಿಗೆ ಮತ್ತೆ ಅದೇ ಸಂಭ್ರಮ ನೆನಪಿಗೆ ತಂದಿತು. ಮಿನಿ ಜಂಬೂ ಸವಾರಿ ಮೆರವಣಿಗೆ ಎನ್ನುವಷ್ಟು ಸಡಗರದಿಂದ ವಾಲ್ಮೀಕಿ ಜಯಂತಿ ಮೆರವಣಿಗೆ ನಡೆದದ್ದು ವಿಶೇಷ. ವಾಲ್ಮೀಕಿ ಕುಳಿತ ಭಂಗಿಯ ಪ್ರತಿಮೆ ಒಳಗೊಂಡು ಶೃಂಗಾರಗೊಂಡ ಸ್ತಬ್ಧಚಿತ್ರ, ಪೂಜಾ ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, ನಾಯಕ ಸಮುದಾಯದ ಮಹನೀಯರ ವೇಷಧಾರಿಗಳು ಹಾಗೂ ಹುಲಿವೇಷಧಾರಿಗಳು,…
ಲೋಡ್ ಶೆಡ್ಡಿಂಗ್ ಮಾಡಕೂಡದು: ಹೆಚ್.ಡಿ.ಕುಮಾರಸ್ವಾಮಿ
October 25, 2018ಬೆಂಗಳೂರು: ವಿದ್ಯುತ್ ಅಭಾವ ವಿದ್ದರೂ ಲೋಡ್‍ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾತ್ಕಾಲಿಕ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡಲು ಐದು ವಿತರಣಾ ಸಂಸ್ಥೆಗಳು ತೀರ್ಮಾನ ಕೈಗೊಂಡಿದ್ದವು. ಇದರ ಮಾಹಿತಿ ತಲುಪುತ್ತಿದ್ದಂತೆ ನಿಮ್ಮ ನಿರ್ಲಕ್ಷ್ಯಕ್ಕೆ ಗ್ರಾಹಕರು ಕಷ್ಟ ಅನುಭವಿಸುವುದು ಬೇಡ. ಇರುವ ವಿದ್ಯುತ್‍ನ್ನೇ ಸಮರ್ಪಕವಾಗಿ ವಿತರಣೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಭಾಗದಲ್ಲಿ ಲೋಡ್‍ಶೆಡ್ಡಿಂಗ್ ಮಾಡ ಕೂಡದು. ಕೃಷಿ…