ಕೈ ಅಭ್ಯರ್ಥಿ ಗೆಲುವಿಗಾಗಿ ಧ್ರುವ, ಯತೀಂದ್ರ ಮತಬೇಟೆ
ಮೈಸೂರು

ಕೈ ಅಭ್ಯರ್ಥಿ ಗೆಲುವಿಗಾಗಿ ಧ್ರುವ, ಯತೀಂದ್ರ ಮತಬೇಟೆ

October 26, 2018
  •  ಸೋಮನಾಥಪುರ ಜಿಪಂ ಕ್ಷೇತ್ರ ಉಪ ಚುನಾವಣೆ
  • ಅಹಿಂದ ಮತದಾರರ ಓಲೈಕೆ ಯತ್ನ

ತಿ.ನರಸೀಪುರ:  ತಾಲೂಕಿನ ಸೋಮನಾಥಪುರ ಜಿ.ಪಂ ಕ್ಷೇತ್ರದ ಉಪ ಚುನಾವಣೆಗೆ ಎರಡು ದಿನ ಬಾಕಿ ಇರುವ ಹಿನ್ನೆಲೆ ಯಲ್ಲಿ ಚುನಾವಣೆ ಪ್ರಚಾರ ತಾರಕಕ್ಕೇ ರುತ್ತಿದ್ದು, ಅಹಿಂದ ಸಮುದಾಯಗಳ ಮತ ಗಳನ್ನು ಸೆಳೆಯಲು ಸಂಸದ ಆರ್.ಧ್ರುವ ನಾರಾಯಣ ಹಾಗೂ ವರುಣಾ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಅವರು ವಿವಿಧೆಡೆ ಗುರುವಾರ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ಡಿ.ಪದ್ಮನಾಭ ಅವರ ಪರ ಭರ್ಜರಿ ಮತಬೇಟೆ ನಡೆಸಿದರು.

ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡ ರೊಂದಿಗೆ ತಾಲೂಕಿನ ನಂಜಾಪುರ ಗ್ರಾಮ ದಿಂದ ಗುರುವಾರ ಮತಯಾಚನೆಯನ್ನು ಆರಂಭಿಸಿದ ಕಾಂಗ್ರೆಸ್ ನಾಯಕರಿಬ್ಬರೂ ಗಾಣಿಗನಕೊಪ್ಪಲು, ಸೇನಾಪತಿಹಳ್ಳಿ, ಸೋಮ ನಾಥಪುರ, ಕನ್ನಾಯಕನಹಳ್ಳಿ, ಉಕ್ಕಲಗೆರೆ, ಎಂ.ಎಲ್.ಹುಂಡಿ, ಮೇಗಳಕೊಪ್ಪಲು ಹಾಗೂ ಕೇತುಪುರ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಅಹಿಂದ ಸಮುದಾಯಗಳ ಜನರನ್ನು ಭೇಟಿ ಮಾಡಿ ಅಭ್ಯರ್ಥಿ ಡಿ.ಪದ್ಮನಾಭ ಅವರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.

ಸಂಸದ ಆರ್.ಧ್ರುವನಾರಾಯಣ ಮಾತ ನಾಡಿ, ರಾಜ್ಯದಲ್ಲಿ ಈ ಹಿಂದೆ ಐದು ವರ್ಷ ಗಳ ಸ್ಥಿರ ಸರ್ಕಾರವನ್ನು ನೀಡಿದ ಸಿದ್ದ ರಾಮಯ್ಯ ಅವರು ರೈತರು ಮತ್ತು ಬಡವರ ಅಭಿವೃದ್ಧಿ ಹಿತದೃಷ್ಟಿಯಿಂದ ಹಲವು ಭಾಗ್ಯಗಳ ಯೋಜನೆಗಳನ್ನು ನೀಡಿದರು. ಹಾಗಾಗಿ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಲು ಜಿ.ಪಂ ಉಪ ಚುನಾವಣೆಯಲ್ಲಿ ಜನರು ಪಕ್ಷದ ಅಭ್ಯರ್ಥಿಗೆ ಬೆಂಬಲಿಸಬೇಕು. ಸ್ಥಳೀಯ ಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲ. ಡಿ.ಪದ್ಮನಾಭ ಅವರ ಸಾಮಾಜಿಕ ಸೇವೆಯನ್ನು ಗುರುತಿಸಿ ಮತವನ್ನು ಕೊಟ್ಟು ಚುನಾಯಿಸಬೇಕೆಂದು ಕರೆ ನೀಡಿದರು.

ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, 35 ವರ್ಷಗಳ ನಿಷ್ಟೆಯನ್ನು ಪರಿಗಣಿಸಿ ಡಿ.ಪದ್ಮನಾಭ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಎಲ್ಲಾ ವರ್ಗದ ಜನರು ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಜಿ.ಪಂ ಸದಸ್ಯ ಮಂಜುನಾಥನ್, ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ತಾ.ಪಂ ಅಧ್ಯಕ್ಷ ಆರ್.ಚಲುವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಅಧ್ಯಕ್ಷ ಕೆ.ಎಸ್.ಗಣೇಶ, ಸದಸ್ಯ ರಾಮಲಿಂಗಯ್ಯ, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಸದಸ್ಯ ಧನಂಜಯಗೌಡ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಟಿ.ಎಸ್. ಲೋಕೇಶ, ಸ್ಪಟಿಕ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಂ.ಕುಮಾರ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕಗ್ಗಲೀಪುರ ಎಂ. ರಾಜು, ಕಿಯೋನಿಕ್ಸ್ ಮಾಜಿ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಮೈಮುಲ್ ಮಾಜಿ ನಿರ್ದೇಶಕ ಕೆ.ಬಿ.ಪ್ರಭಾಕರ, ಗ್ರಾ.ಪಂ ಸದಸ್ಯರಾದ ಎಂ.ರಾಜು, ಡಿ.ಕೃಷ್ಣ, ವಕೀಲ ಎಂ.ರವಿ, ಮುಖಂಡ ರಾದ ವೀಣಾ ಶಿವಕುಮಾರ್, ಗಾಣಿಕೊಪ್ಪಲು ಮುರಳೀಧರ, ಗಿರೀಶ, ಪುಟ್ಟಸ್ವಾಮಿ, ನಾಗೇಶ, ಹರೀಶ, ಶಂಕರೇಗೌಡ, ಚನ್ನೇಗೌಡ, ಟಿ.ಗಿರೀಶ, ಉಮೇಶ, ಸತೀಶ, ವನಗಿರಿಗೌಡ, ದೀಪು, ಅರುಣ್, ಸುನಿಲ್, ಶಿವಕುಮಾರ್, ಮರೀ ಗೌಡ, ಧರ್ಮ ಮತ್ತಿತರರು ಹಾಜರಿದ್ದರು.

Translate »