ಮೈಸೂರು: ಗೋಕುಲಂ 6ನೇ ವಾರ್ಡ್ ನಿಜಕ್ಕೂ ತೀವ್ರ ಜಿದ್ದಾ ಜಿದ್ದಿಯ ಕಣವಾಗಿ ಮಾರ್ಪಟ್ಟಿತ್ತು. ಇಲ್ಲಿ ಹಾಲಿ ಮೂವರು ಪಾಲಿಕೆ ಸದಸ್ಯರಾದ ಜೆಡಿಎಸ್‍ನ ಎಸ್‍ಬಿಎಂ ಮಂಜು, ಬಿಜೆಪಿಯ ಟಿ. ಗಿರೀಶ್‍ಪ್ರಸಾದ್ ಮತ್ತು ಬಿಜೆಪಿ ಬಂಡಾಯ ಅಭ್ಯರ್ಥಿ ಸ್ನೇಕ್ ಶ್ಯಾಮ್ ಕಣದಲ್ಲಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು. ತೀವ್ರ ಪೈಪೋ ಟಿಯ ನಡುವೆ ಅಂತಿಮವಾಗಿ ಜೆಡಿಎಸ್‍ನ ಎಸ್‍ಬಿಎಂ ಮಂಜು, ಬಿಜೆಪಿಯ ಟಿ.ಗಿರೀಶ್‍ಪ್ರಸಾದ್ ಅವರನ್ನು 193 ಮತಗಳ ಅಂತರದಲ್ಲಿ ಸೋಲಿಸಿ, ಪುನರಾಯ್ಕೆ ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಬ್ಬ ಹಾಲಿ ಸದಸ್ಯ ಬಿಜೆಪಿ ಬಂಡಾಯ ಅಭ್ಯರ್ಥಿ…
ಪ್ರೇಮಕುಮಾರಿಗೆ ಹೀನಾಯ ಸೋಲು
September 4, 2018ಮೈಸೂರು: ಶಾಸಕ ಎಸ್.ಎ.ರಾಮದಾಸ್ ವಿರುದ್ಧ ಪದೇಪದೆ ಆರೋಪಗಳನ್ನು ಮಾಡುತ್ತಲೇ ಪ್ರಚಾರದಲ್ಲಿರುವ ಎಂ.ಪ್ರೇಮ ಕುಮಾರಿ ಜಡೇದ, ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಹೀನಾಮಾನವಾಗಿ ಸೋಲುಂಡಿದ್ದಾರೆ. 57ನೇ ವಾರ್ಡ್ (ಕುವೆಂಪುನಗರ) ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಜೆಡಿಎಸ್ ಹಾಗೂ ಬಿಜೆಪಿಯ ಘಟಾ ನುಘಟಿ ಅಭ್ಯರ್ಥಿಗಳ ಎದುರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆ ಅವರದ್ದಾಗಿದ್ದು, ಮತದಾರರು ನನ್ನ ಕೈಹಿಡಿಯಲಿದ್ದಾರೆ ಎಂಬ ಆಶಯ ಹೊಂದಿದ್ದರು. ಆದರೆ ಮತದಾರರು ಅವರನ್ನು ಸಂಪೂರ್ಣ ವಾಗಿ ತಿರಸ್ಕರಿಸಿದ್ದು, ಅವರಿಗೆ ಕೇವಲ 16 ಮತಗಳು ಮಾತ್ರ ಬಿದ್ದಿವೆ.
ಕೇವಲ 8 ಮತಗಳ ಅಂತರದ ಗೆಲುವು!
September 4, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ 58ರಲ್ಲಿ ಕೇವಲ 8 ಮತಗಳ ಅಂತರದಲ್ಲಿ ಬಿಜೆಪಿಯ ಆರ್.ಕೆ. ಶರತ್ ಕುಮಾರ್ ಗೆಲುವು ಸಾಧಿಸಿದ್ದು, ಇದು ಅತ್ಯಂತ ಕಡಿಮೆ ಅಂತರದ ಗೆಲುವಾಗಿದೆ. ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿ.ಪಿ. ಮಂಜುನಾಥ್ ಅಳಿಯನೂ ಆದ ಆರ್.ಕೆ.ಶರತ್‍ಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ, ಕಾಂಗ್ರೆಸ್‍ನ ಹೆಚ್.ಸಿ.ಕೃಷ್ಣಕುಮಾರ್ ಸಾಗರ್ 1770 ಮತಗಳನ್ನುಗಳಿಸುವ ಮೂಲಕ ಪ್ರಬಲ ಪೈಪೋಟಿ ನೀಡಿದ್ದರು. ಅದೇ ರೀತಿ ವಾರ್ಡ್ 19ರಲ್ಲಿ…
ಮೈಸೂರು ಪಾಲಿಕೆಗೆ ಪುನರಾಯ್ಕೆಗೊಂಡ 8 ಹಾಲಿ ಸದಸ್ಯರು
September 4, 2018ಮೈಸೂರು: ಹಾಲಿ ಪಾಲಿಕೆ ಸದಸ್ಯರಲ್ಲಿ 8 ಮಂದಿ ಪುನ ರಾಯ್ಕೆಯಾಗಿದ್ದಾರೆ. ಮಾಜಿ ಮೇಯರ್ ಅಯೂಬ್ ಖಾನ್: ಕಾಂಗ್ರೆಸ್‍ನ ಮಾಜಿ ಮೇಯರ್ ಅಯೂಬ್ ಖಾನ್ 13ನೇ ವಾರ್ಡ್ (ಉದಯಗಿರಿ) ನಲ್ಲಿ ಸತತ 4ನೇ ಬಾರಿ ಪುನರಾಯ್ಕೆಯಾಗಿ ದ್ದಾರೆ. ಅವರು ಜೆಡಿಎಸ್‍ನ ಮೊಹಮ್ಮದ್ ಷರೀಫ್ ಅವರನ್ನು 1142 ಮತಗಳ ಅಂತರ ದಿಂದ ಸೋಲಿಸಿದ್ದಾರೆ. ಎಸ್.ಬಿ.ಎಂ.ಮಂಜು: ಕಳೆದ ಉಪ ಚುನಾ ವಣೆಯಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿ (ಹಳೇ ವಾರ್ಡ್ 32- ಸಿ.ಮಹದೇಶ್ ಅವರ ಸದ ಸ್ಯತ್ವ ರದ್ದಾದ ಹಿನ್ನೆಲೆಯಲ್ಲಿ ತೆರವಾದ…
ತಿ.ನರಸೀಪುರದಲ್ಲಿ ಮೇಲುಗೈ ಸಾಧಿಸಿದ ಕಾಂಗ್ರೆಸ್
September 4, 20186 ಪಕ್ಷೇತರರು, ಬಿಜೆಪಿ 4, ಜೆಡಿಎಸ್ 3ರಲ್ಲಿ ಜಯ ತಿ.ನರಸೀಪುರ: ಪರಸಭೆಯಾಗಿ ಪರಿವರ್ತನೆಗೊಂಡು ಪ್ರಥಮ ಬಾರಿಗೆ ನಡೆದ ಚೊಚ್ಚಲ ಚುನಾವಣೆಯ ಮತ ಎಣಿಕೆಯ ಕಾರ್ಯ ಇಂದು ನಡೆದು ಕಾಂಗ್ರೆಸ್ 10, ಬಿಜೆಪಿ 4, ಜೆಡಿಎಸ್ 3 ಸ್ಥಾನ ಗಳಿಸಿದ್ದು, 6 ವಾರ್ಡ್‍ಗಳಲ್ಲಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ವಾರ್ಡ್ ನಂ.1ರಲ್ಲಿ ಪಕ್ಷೇತರ ಅಭ್ಯರ್ಥಿ ರೂಪಕರಿಯಪ್ಪ (311) ಕಾಂಗ್ರೆಸ್‍ನ ಚೆನ್ನಾಜಮ್ಮ(249) ಅವರನ್ನು ಪರಾಭವ ಗೊಳಿಸಿದ್ದಾರೆ. ವಾರ್ಡ್ ನಂ.2ರಲ್ಲಿ 496 ಮತ ಪಡೆದು ಜೆಡಿಎಸ್‍ನ ಸಿಸ್ಟಮ್ ಸಿದ್ದು ಕಾಂಗ್ರೆಸ್‍ನ ಪುಟ್ಟು(394), ವಿರುದ್ಧ ಜಯ…
ತಿ.ನರಸೀಪುರದಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರರ ವಿಜಯೋತ್ಸವ
September 4, 2018ತಿ.ನರಸೀಪುರ: ಪುರಸಭೆಯ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ವಿಜೇತ ಅಭ್ಯರ್ಥಿಗಳು ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿ ಮತದಾರರಿಗೆ ಪಾದಯಾತ್ರೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ಪಟ್ಟಣದ ಮಾಧವರಾವ್ ರಸ್ತೆಯಲ್ಲಿ 23ನೇ ವಾರ್ಡಿನಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಕೆ.ಕಿರಣ ಅವರು ಮುಖಂಡರು ಹಾಗೂ ಬೆಂಬಲಿಗರೊಂದಿಗೆ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು. ಎಸ್.ಕೆ.ಕಿರಣ ಮಾತನಾಡಿ, ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಿ, ನಿವಾಸಿಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಆದ್ಯತೆ ನೀಡುತ್ತೇನೆ ಎಂದರು. ಬಿಜೆಪಿ ಹಿಂ.ವರ್ಗಗಳ ಮೋರ್ಚಾ…
ಹೆಚ್.ಡಿ.ಕೋಟೆಯಲ್ಲಿ ಕಾಂಗ್ರೆ ಮೇಲುಗೈ: ಜೆಡಿಎಸ್ 8, ಬಿಜೆಪಿ, ಬಿಎಸ್‍ಪಿ ತಲಾ ಒಂದು, ಇಬ್ಬರು ಪಕ್ಷೇತರರ ಆಯ್ಕೆ
September 4, 2018ಹೆಚ್.ಡಿ.ಕೋಟೆ: ಪಟ್ಟಣದ ಪುರಸಭೆಯ 23 ಸ್ಥಾನಗಳಿಗೆ ಸೆ.31ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 11, ಜೆಡಿಎಸ್ 8, ಬಿಜೆಪಿ ಹಾಗೂ ಬಿಎಸ್‍ಪಿ ತಲಾ ಒಂದು ಸ್ಥಾನಗಳಿಸಿದ್ದು, ಇಬ್ಬರ ಪಕ್ಷೇತರರು ಜಯ ಸಾಧಿಸಿದ್ದಾರೆ. ವಾರ್ಡ್ 1ರಲ್ಲಿ ಕಾಂಗ್ರೆಸ್‍ನ ಆಸೀಫ್ ಇಕ್ಬಾಲ್ 252 ಮತ ಪಡೆದು 147 ಮತಗಳ ಅಂತರದಿಂದ ಜೆಡಿಎಸ್‍ನ ಮಹಮದ್ ಹನೀಫ್ ಅವರನ್ನು ಪರಾಭವಗೊಳಿಸದ್ದಾರೆ. ವಾರ್ಡ್ 2ರಲ್ಲಿ ಜೆಡಿಎಸ್ ಸರೋಜಮ್ಮ(385) ಕಾಂಗ್ರೆಸ್‍ನ ಟಿ.ಎಸ್.ರುಕ್ಮಿಣಿ ವಿರುದ್ಧ 20 ಮತಗಳ ಅಂತರದಿಂದ…
ಮೈಸೂರು ಮಹಾ ನಗರಪಾಲಿಕೆ ಚುನಾವಣೆ: ಇಂದು ಮತ ಎಣಿಕೆ
September 3, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳಿಗೆ ಶುಕ್ರವಾರ ನಡೆದ ಮತದಾನದ ಎಣಿಕಾ ಕಾರ್ಯ ಸೋಮ ವಾರ (ಸೆ.3) ಬೆಳಿಗ್ಗೆ 8ರಿಂದ ಪಡುವಾರ ಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಆರಂಭ ಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಪಾಲಿಕೆಯ ಆಡಳಿತ ಯಾರ ಪಾಲಿಗೆ ಒಲಿಯಲಿದೆ ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ. ಮೈಸೂರು ನಗರ ವ್ಯಾಪ್ತಿಯ ಎಲ್ಲಾ 65 ವಾರ್ಡುಗಳ ಮತಯಂತ್ರಗಳನ್ನು ಮಹಾರಾಣಿ ವಾಣಿಜ್ಯ ಕಾಲೇಜಿನ 4 ಸ್ಟ್ರಾಂಗ್ ರೂಂಗಳಲ್ಲಿ ಬಿಗಿ ಭದ್ರತೆಯಲ್ಲಿ ಇಡಲಾಗಿದ್ದು, 13 ನೋಡಲ್ ಅಧಿಕಾರಿ…
ಗಜ ಪಯಣಕ್ಕೆ ಅದ್ಧೂರಿ ಚಾಲನೆ
September 3, 2018ಹನಗೋಡು: ಮಂಗಳವಾದ್ಯ ನಿನಾದ, ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ಮೊದಲ ತಂಡದ ಗಜ ಪಯಣ ಅದ್ಧೂರಿಯಾಗಿ ನೆರವೇರಿತು. ಇದರೊಂದಿಗೆ ಮೈಸೂರು ದಸರಾ ಮಹೋತ್ಸವದ ಸಾಂಪ್ರದಾಯಿಕ ಆಚರಣೆಗಳಿಗೂ ವಿಧ್ಯುಕ್ತ ಚಾಲನೆ ದೊರಕಿತು. ಹುಣಸೂರು ತಾಲೂಕಿನ ವೀರನಹೊಸ ಹಳ್ಳಿ ಗ್ರಾಮದ ಸಮೀಪ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರದ ಬಳಿ ಅರ್ಜುನ ನೇತೃತ್ವದ ಧನಂಜಯ, ಗೋಪಿ, ವಿಕ್ರಮ ಹಾಗೂ ಸರಳ ಗಜ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಪುಷ್ಪಾರ್ಚನೆ ಮಾಡುವ ಮೂಲಕ ಗಜ ಪಯಣಕ್ಕೆ ಚಾಲನೆ ನೀಡಿದರು….
ರಕ್ಷಣಾ ಸಚಿವೆ ವಿರುದ್ಧ ಕೊಡಗಿನ ಜನಪ್ರತಿನಿಧಿಗಳ ಅಸಮಾಧಾನ: ಪರಿಸರವಾದಿಗಳೊಂದಿಗೆ ಚರ್ಚಿಸಿದ್ದೇ ಕಾರಣ
September 3, 2018ಮಡಿಕೇರಿ: ಕೊಡಗು ಜಿಲ್ಲೆಯ ಪ್ರಕೃತಿ ವಿಕೋಪ ಪರಿಶೀಲನೆಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರು ಪರಿಸರವಾದಿಗಳೊಂದಿಗೆ ಮಾತುಕತೆ ನಡೆಸಿ ಅವರ ಮನವಿ ಸ್ವೀಕರಿಸಿದರು. ಇದು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಸೇರಿದಂತೆ ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಸುನೀಲ್ ಸುಬ್ರಮಣಿ ಅವರ ಆಕ್ರೋಷಕ್ಕೆ ಕಾರಣವಾಯಿತ್ತಲ್ಲದೆ ಕೇಂದ್ರ ಸಚಿವೆ ಹಾಗೂ ಜನಪ್ರತಿನಿಧಿಗಳ ನಡುವೆ ವಾಗ್ವಾದ ನಡೆಯಿತು. ಜಿಲ್ಲಾಧಿಕಾರಿ ಕಚೇರಿಗೆ ಬಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್, ಅಧಿಕಾರಿಗಳ ಸಭೆಗೂ ಮುನ್ನ, ನಿವೃತ್ತ ಏರ್ ಮಾರ್ಷಲ್…