ಮೈಸೂರು

ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗಬಾರದು
ಮೈಸೂರು

ಶಿಕ್ಷಣ ಪದವಿಗೆ ಮಾತ್ರ ಸೀಮಿತವಾಗಬಾರದು

September 2, 2018

ಮೈಸೂರು: ಶಿಕ್ಷಣ ಪದವಿ ಪ್ರಮಾಣ ಪತ್ರಗಳಿಗೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಎಲ್ಲೆಡೆ ಬಿತ್ತಬೇಕು ಎಂದು ರಾಮಕೃಷ್ಣ ಆಶ್ರಮದ ಸ್ವಾಮಿ ಮಹೇಶಾತ್ಮಾನಂದ ಹೇಳಿದರು. ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಶನಿವಾರ ಮೈಸೂರು ವೈದ್ಯಕೀಯ ಕಾಲೇಜು ಅಮೃತಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ನೂತನ ವೈದ್ಯಕೀಯ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಕೇವಲ ಪ್ರಮಾಣ ಪತ್ರ ಪಡೆಯಲು ಸೀಮಿತ ವಾಗಿದ್ದು, ವಿದ್ಯಾರ್ಥಿಗಳು ಸಮಾಜದಲ್ಲಿ ರುವ ಮಾನವೀಯ ಸಂಬಂಧ ಬೆಳೆಸಿ ಕೊಳ್ಳವುದರಲ್ಲಿ ಹಿಂದೆ…

ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ
ಮೈಸೂರು

ಕೊಡಗಿನಲ್ಲಿ ಪ್ರಕೃತಿ ವಿಕೋಪ ಕುರಿತು ಕೆಪಿಎ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ

September 2, 2018

ಮೈಸೂರು: ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ(ಕೆಪಿಎ)ಯಲ್ಲಿ ತರಬೇತಿ ಪಡೆಯುತ್ತಿರುವ 100 ಮಂದಿ ಡಿವೈಎಸ್‍ಪಿ ಮತ್ತು 300 ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಶಿಕ್ಷಣಾರ್ಥಿಗಳಿಗೆ ಕೊಡಗಿನ ಪ್ರಕೃತಿ ವಿಕೋಪಕ್ಕೊಳಗಾಗಿ ರುವ ಪ್ರದೇಶಗಳಲ್ಲಿ ಪ್ರಾಯೋಗಿಕ ತರಬೇತಿ ನೀಡಲಾಯಿತು. ಕಳೆದ ಮೂರು ದಿನಗಳಿಂದ ಮೂರು ತಂಡಗಳಾಗಿ ವಿಂಗಡಿಸಿ ಪ್ರತಿದಿನ 100 ಮಂದಿಯನ್ನು ಕರೆದೊಯ್ದು ಕೊಡಗಿನ ಅತಿವೃಷ್ಟಿಯಿಂದ ಉಂಟಾದ ಭೂ ಕುಸಿತ, ಜಲಾವೃತ ಪ್ರದೇಶ ಗಳು, ರಕ್ಷಣಾ ಕಾರ್ಯ ಪುನರ್ವಸತಿ ಪ್ರಕ್ರಿಯೆ ಹಾಗೂ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವವರ ಮೃತದೇಹಗಳನ್ನು ಹೊರತೆಗೆದ ಬಗ್ಗೆ ನೂತನ ಪೊಲೀಸ್…

ಜೈನ ಮುನಿ ತರುಣ್ ಸಾಗರ್ ವಿಧಿವಶ
ಮೈಸೂರು

ಜೈನ ಮುನಿ ತರುಣ್ ಸಾಗರ್ ವಿಧಿವಶ

September 2, 2018

ನವದೆಹಲಿ: ಜೈನಮುನಿ ತರುಣ್ ಸಾಗರ್ ದೀರ್ಘಕಾಲದ ಅನಾರೋಗ್ಯದ ನಂತರ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ದೆಹಲಿಯಲ್ಲಿ ನಿಧನರಾಗಿದ್ದಾರೆ. ಜಾಂಡೀಸ್‍ನಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ 51 ವರ್ಷ ವಯಸ್ಸಾಗಿತ್ತು. ಪೂರ್ವ ದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿರುವ ರಾಧಾಪುರಿ ಜೈನ ದೇವಸ್ಥಾನದಲ್ಲಿ ಅವರು ಆಶ್ರಮ ಹೊಂದಿ ದ್ದರು. ಅವರ ಅಂತಿಮ ಕ್ರಿಯೆಗಳು ಉತ್ತರ ಪ್ರದೇಶದ ಮುರುದ್ ನಗರದ ತರುಣ್ ಸಾಗರಮ್‍ನಲ್ಲಿ ನಡೆಸಲಾಗುತ್ತದೆ. ಮಧ್ಯಪ್ರದೇಶದ ದಹೊಹ್ ಜಿಲ್ಲೆಯಲ್ಲಿ 1967ರ ಜೂನ್ 26ರಂದು ಜನಿಸಿದ್ದ ತರುಣ್ ಸಾಗರ್ ಅವರು…

ಶ್ರೀ ವಾಣಿ ಫನ್ ಫೆಸ್ಟ್-2018: ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ಸಹಕಾರ ಮನೋಭಾವನೆ ಮೂಡಿಸುವ ಪ್ರಯತ್ನ
ಮೈಸೂರು

ಶ್ರೀ ವಾಣಿ ಫನ್ ಫೆಸ್ಟ್-2018: ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯ, ಸಹಕಾರ ಮನೋಭಾವನೆ ಮೂಡಿಸುವ ಪ್ರಯತ್ನ

September 2, 2018

ಮೈಸೂರು: ಪ್ರಸ್ತುತ ಜಾಗತೀಕರಣ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ವೃತ್ತಿ ಕೌಶಲ್ಯ, ಸಂವಹನ ಕಲೆ ಹಾಗೂ ವ್ಯವಹಾರ ಜ್ಞಾನ ವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿದ್ದ ಫನ್ ಫೆಸ್ಟ್‍ನಲ್ಲಿ ವಿದ್ಯಾರ್ಥಿಗಳು ತಿಂಡಿ-ತಿನಿಸು ಸೇರಿದಂತೆ ವಿವಿಧ ಬಗೆಯ ಮಳಿಗೆಗಳನ್ನು ತೆರೆದು ವ್ಯಾಪಾರ-ವಹಿವಾಟು ನಡೆಸಿದರು. ಮೈಸೂರಿನ ನಜರ್‍ಬಾದ್‍ನಲ್ಲಿರುವ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್‍ನ ಶ್ರೀ ವಾಣಿವಿಲಾಸ ಅರಸು ಬಾಲಿಕಾ ಪದವಿಪೂರ್ವ ಮತ್ತು ಪದವಿ ಕಾಲೇಜು ವತಿಯಿಂದ ಕಾಲೇಜಿನ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ `ಶ್ರೀ ವಾಣಿ ಫನ್ ಫೆಸ್ಟ್-2018’ರಲ್ಲಿ ವಿದ್ಯಾರ್ಥಿನಿಯರು ತಿಂಡಿ-ತಿನಿಸು, ಆಟಿಕೆ ಹಾಗೂ ಮನರಂಜನೆ ನೀಡುವಂತಹ…

ಮೈಸೂರಿನಲ್ಲೂ ಅಂಚೆ ಪಾವತಿ ಬ್ಯಾಂಕ್ ಆರಂಭ
ಮೈಸೂರು

ಮೈಸೂರಿನಲ್ಲೂ ಅಂಚೆ ಪಾವತಿ ಬ್ಯಾಂಕ್ ಆರಂಭ

September 2, 2018

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 2.30 ಗಂಟೆಗೆ ನವದೆಹಲಿಯ ತಲಕಟೋರ ಸ್ಟೇಡಿಯಂನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಸೇವೆಗೆ ಚಾಲನೆ ನೀಡಿದರು. ಪ್ರಧಾನಮಂತ್ರಿಗಳು ಕಾರ್ಯಕ್ರಮ ಉದ್ಘಾ ಟಿಸಿದ ನೇರ ದೃಶ್ಯವನ್ನು ವೀಕ್ಷಿಸಲು ಅಂಚೆ ಇಲಾಖೆಯು ಮೈಸೂರಿನ ಪಡುವಾರಹಳ್ಳಿ ಬಳಿ ಇರುವ ಲೀಲಾ ಚೆನ್ನಯ್ಯ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ವ್ಯವಸ್ಥೆ ಮಾಡಿತ್ತು. ಮೈಸೂರು ಜಿಲ್ಲಾ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ವೆಂಕಟಾಚಲಪತಿ, ಆಲ್ ಇಂಡಿಯಾ ರೇಡಿಯೋ ಅಸಿಸ್ಟೆಂಟ್ ಡೈರೆ ಕ್ಟರ್ (ಪ್ರೋಗ್ರಾಮ್)…

ಮೈಸೂರು ಮಹಾ ನಗರಪಾಲಿಕೆ ಚುನಾವಣೋತ್ತರ ಘಟನೆ 4ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ
ಮೈಸೂರು

ಮೈಸೂರು ಮಹಾ ನಗರಪಾಲಿಕೆ ಚುನಾವಣೋತ್ತರ ಘಟನೆ 4ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಹಲ್ಲೆ

September 2, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 4ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಹೇಶ್ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆದಿದೆ. ಮತದಾನ ಮುಗಿದ ನಂತರ ಬೆಂಬಲಿಗರಾದ ರವಿ ಮತ್ತು ದಿನೇಶ್‍ರೊಂದಿಗೆ ವಾರ್ಡಿನ ಭೈರವೇಶ್ವರ ನಗರದಲ್ಲಿ ಚುನಾವಣೆ ಸಂಬಂಧ ಚರ್ಚಿಸುತ್ತಾ ಕುಳಿತಿದ್ದಾಗ ರಾತ್ರಿ 10.30 ಗಂಟೆ ವೇಳೆಗೆ ಬೈಕ್‍ನಲ್ಲಿ ಬಂದ ದೀಪಕ್ ಗೌಡ, ಮಲ್ಲಿಕಾರ್ಜುನ ಹಾಗೂ ಇತರರು ಏಕಾಏಕಿ ದಾಳಿ ನಡೆಸಿ ಹಲ್ಲೆ ಮಾಡಿ ಪರಾರಿಯಾದರು ಎಂದು ಮಹೇಶ್ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮೂಗು,…

ಮುಕ್ತ ವಿವಿ ಆವರಣದಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ
ಮೈಸೂರು

ಮುಕ್ತ ವಿವಿ ಆವರಣದಲ್ಲಿ ಎನ್‍ಸಿಸಿ ವಾರ್ಷಿಕ ತರಬೇತಿ ಶಿಬಿರ

September 2, 2018

ಮೈಸೂರು: ಮೈಸೂರಿನ ಮಾನಸಗಂಗೋತ್ರಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ಆವರಣದಲ್ಲಿ ಎನ್‍ಸಿಸಿ 13 ಕರ್ನಾಟಕ ಬೆಟಾಲಿಯನ್(ಆರ್ಮಿ) ವಾರ್ಷಿಕ ತರಬೇತಿ ಶಿಬಿರ ನಡೆಯುತ್ತಿದೆ. ಸಿಎ ಟಿಎಲ್ (ಕಂಬೈನ್ಡ್ ಆನ್ಯುಯಲ್ ಟ್ರೇನಿಂಗ್ ಕ್ಯಾಂಪ್)ನಲ್ಲಿ ಮೈಸೂರು, ಕೆ.ಆರ್.ನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಇತರ ಕಾಲೇಜುಗಳ 600 ಮಂದಿ ಎನ್‍ಸಿಸಿ ಕೆಡೆಟ್‍ಗಳು ತರಬೇತಿ ಶಿಬಿರ ದಲ್ಲಿ ಪಾಲ್ಗೊಂಡಿದ್ದಾರೆ. ಕರ್ನಲ್ ಮಂಜಿತ್‍ಸಿಂಗ್ ಟಡ್ಡ್, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಜಗದೀಶ್ ನಾಯರ್ ನೇತೃತ್ವದ ಎನ್‍ಸಿಸಿ ಆರ್ಮಿಯ 30 ಮಂದಿ ಸಿಬ್ಬಂದಿ ಹಾಜರಿದ್ದು, ಕೆಡೆಟ್‍ಗಳಿಗೆ ತರಬೇತಿ…

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ
ಮೈಸೂರು

ನಕಲಿ ದಾಖಲೆ ಸೃಷ್ಟಿಸಿ ಮುಡಾ ಆಸ್ತಿ ಮಾರಾಟ

September 2, 2018

ಮೈಸೂರು: ಮೈಸೂರಿನ ಜೆ.ಪಿ.ನಗರ ಇ-ಬ್ಲಾಕ್ 10ನೇ ಮುಖ್ಯ ರಸ್ತೆಯಲ್ಲಿ ಮುಡಾಗೆ ಸೇರಿರುವ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ನಗರಾಭಿವೃದ್ಧಿ ಸಚಿವರು, ವಿರೋಧ ಪಕ್ಷದ ನಾಯಕರು ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿರುವ ನಿವಾಸಿ ಗಳು ಜೆ.ಪಿ.ನಗರ 10ನೇ ಮುಖ್ಯ ರಸ್ತೆಯ ಸರ್ವೆ ನಂ.23/1ರಲ್ಲಿ 1 ಎಕರೆ 12 ಗುಂಟೆ ಮತ್ತು ಸರ್ವೆ ನಂ.23/2ರಲ್ಲಿ 4 ಎಕರೆ 20 ಗುಂಟೆ…

ಸೆ.5ರಿಂದ ಮೈಸೂರಲ್ಲಿ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ
ಮೈಸೂರು

ಸೆ.5ರಿಂದ ಮೈಸೂರಲ್ಲಿ ಬ್ರಿಡ್ಜ್ ಚಾಂಪಿಯನ್‍ಷಿಪ್ ಪಂದ್ಯಾವಳಿ

September 2, 2018

ಮೈಸೂರು:  ಚತುರತೆ ಹಾಗೂ ಕ್ಷೀಪ್ರಗತಿಯ ವಿಶ್ಲೇಷಣಾ ಮನೋಭಾವ ಆಪೇಕ್ಷಿಸುವ ಆಟವೆಂದೇ ಹೆಸರು ಮಾಡಿರುವ `ಬ್ರಿಡ್ಜ್ ಗೇಮ್’ನ `ರಾಷ್ಟ್ರ ಮಟ್ಟದ ಅಂತರ್ ರಾಜ್ಯ ಬ್ರಿಡ್ಜ್ ಚಾಂಪಿಯನ್‍ಷಿಪ್’ ಪಂದ್ಯಾವಳಿ ಸೆ.5ರಿಂದ 9ರವರೆಗೆ ಮೈಸೂರಿನಲ್ಲಿ ನಡೆಯಲಿದೆ ಎಂದು ಮೈಸೂರು ಜಿಲ್ಲಾ ಬ್ರಿಡ್ಜ್ ಅಸೋಸಿಯೇಷನ್‍ನ ಅಧ್ಯಕ್ಷ ಹೆಚ್.ಎನ್.ಜಯಪಾಲ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಡ್ಜ್ ಫೆಡರೇಷನ್ ಆಫ್ ಇಂಡಿಯಾ, ಕರ್ನಾಟಕ ಬ್ರಿಡ್ಜ್ ಅಸೋಸಿಯೇಷನ್ ಹಾಗೂ ಮೈಸೂರು ಜಿಲ್ಲಾ ಬ್ರಿಡ್ಜ್ ಅಸೋಸಿಯೇಷನ್‍ನ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಜಯಚಾಮರಾಜ ಒಡೆಯರ್…

ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ
ಮೈಸೂರು

ವರುಣಾ ಉಪನಾಲೆಯಲ್ಲಿ ಅಪರಿಚಿತ ಶವ ಪತ್ತೆ

September 2, 2018

ಮೈಸೂರು: ಮೈಸೂರು ತಾಲೂಕು ವರುಣಾ ಪೊಲೀಸ್ ಠಾಣೆ ವ್ಯಾಪ್ತಿಯ ಕಡವೆಕಟ್ಟೆಹುಂಡಿ ಗ್ರಾಮದಲ್ಲಿ ಹಾದುಹೋಗುವ ವರುಣಾ ಉಪನಾಲೆಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಸುಮಾರು 50ರಿಂದ 60 ವರ್ಷದವನಾದ ಈತನ ಕೈ-ಕಾಲುಗಳ ಸ್ವಲ್ಪ ಭಾಗವನ್ನು ಜಲಚರಗಳು ತಿಂದು ಹಾಕಿದ್ದು, ಈತ ಎಲ್ಲೋ ಆಕಸ್ಮಿಕವಾಗಿ ನೀರಿಗೆ ಬಿದ್ದು ಸಾವನ್ನಪ್ಪಿದ್ದು, ಉಪನಾಲೆಯಲ್ಲಿ ನೀರು ನಿಲ್ಲಿಸುವಾಗ ಮೃತದೇಹ ಇಲ್ಲಿ ಸಿಕ್ಕಿ ಹಾಕಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈತನ ವಾರಸುದಾರರು ವರುಣಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2594411 ಅಥವಾ ಜಿಲ್ಲಾ ಪೊಲೀಸ್ ಕಂಟ್ರೋಲ್…

1 1,412 1,413 1,414 1,415 1,416 1,611
Translate »