ಮೈಸೂರು

ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ
ಮೈಸೂರು

ಪಾಲಿಕೆ 35ನೇ ವಾರ್ಡ್‍ನಲ್ಲಿ ಬಿಜೆಪಿ  ಮುಖಂಡರು, ಕಾರ್ಯಕರ್ತರ ಮೇಲೆ ಹಲ್ಲೆ

September 1, 2018

ಮೈಸೂರು: ಮತಗಟ್ಟೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಪ್ರಶ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ನೂರಾರು ಜನರಿದ್ದ ಗುಂಪು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಮೈಸೂ ರಿನ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ 35ನೇ ವಾರ್ಡ್‍ನಲ್ಲಿ ನಡೆದಿದೆ. ಬಿಜೆಪಿ ಮುಖಂಡರಾದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮುಖಂಡ ಸಂದೇಶ್, ಕಾರ್ಯಕರ್ತರಾದ ಸಮರ್ಥ್, ಚರಣ್, ಗೋವಿಂದ್, ಮಂಜು ಹಾಗೂ ಪ್ರಭು ಅವರ ಮೇಲೆ ಹಲ್ಲೆ ನಡೆದಿದ್ದು, ಇವರಲ್ಲಿ ನಾಲ್ವರಿಗೆ ತೀವ್ರ ಪೆಟ್ಟು ಬಿದ್ದಿದ್ದು, ಕಾವೇರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ…

ಶಾಂತಿಯುತ ಶೇ.50.01ರಷ್ಟು ಮತದಾನ
ಮೈಸೂರು

ಶಾಂತಿಯುತ ಶೇ.50.01ರಷ್ಟು ಮತದಾನ

September 1, 2018

ಮೈಸೂರಿನ ಚಾಮರಾಜ, ಕೃಷ್ಣರಾಜ, ನರಸಿಂಹರಾಜ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಲ್ಲದೆ ಇನ್ನಿತರೆ ಸಣ್ಣಪುಟ್ಟ ಪಕ್ಷಗಳಲ್ಲದೆ ಪಕ್ಷೇತರರು ಸ್ಪರ್ಧಿಸಿರುವುದರಿಂದ ಸಹಜವಾಗಿ ಬಿರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಮತದಾನದ ವೇಳೆ ಪಕ್ಷಗಳ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತಗಟ್ಟೆ ಬಳಿ ಮತದಾರನ ಓಲೈಕೆಗೆ ಯತ್ನಿಸುತ್ತಿದ್ದುದು ಸಾಮಾನ್ಯವಾಗಿತ್ತು. ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆಗೆ ಪ್ರಾರಂಭದ ಒಂದು ಗಂಟೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಅರ್ಧ ತಾಸು ಕೆಲ ಬೂತ್‍ಗಳಲ್ಲಿ ಒಂದೇ…

ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ
ಮೈಸೂರು

ಅಭ್ಯರ್ಥಿಗಳ ಹಣೆಬರಹ ಇವಿಎಂನಲ್ಲಿ ಭದ್ರ

September 1, 2018

ಮೈಸೂರು:  ಪಾಲಿಕೆ ಮಿನಿ ಸಮರಕ್ಕೆ ತೆರೆ ಬಿದ್ದಿದ್ದು, ಅಭ್ಯರ್ಥಿ ಗಳ ಭವಿಷ್ಯವೀಗ ವಿದ್ಯುನ್ಮಾನ ಮತ ಯಂತ್ರ (ಇವಿಎಂ) ಗಳಲ್ಲಿ ಭದ್ರವಾಗಿದೆ. ಇಂದು ಸಂಜೆ 5 ಗಂಟೆಗೆ ಮತದಾನ ಪ್ರಕ್ರಿಯೆ ಅಂತ್ಯಗೊಂಡಿದ್ದು, ಮತದಾರ ತನ್ನ ತೀರ್ಪನ್ನು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ದಾಖಲಿಸಿದ್ದಾನೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಒಟ್ಟು 393 ಅಭ್ಯರ್ಥಿಗಳ ಅದೃಷ್ಟ ಸೆಪ್ಟೆಂಬರ್ 3ರಂದು ಬಹಿರಂಗಗೊಳ್ಳಲಿದೆ. ಮೈಸೂರು ಮಹಾನಗರಪಾಲಿಕೆಯ ಒಟ್ಟು 815 ಮತಗಟ್ಟೆಗಳಲ್ಲಿ ದಾಖಲಾದ ಮತಗಳನ್ನು ವಿಡಿಯೋ ರೆಕಾರ್ಡ್ ಮಾಡಿ, ತಮ್ಮ ದೃಢೀಕರಣದೊಂದಿಗೆ ಆಯಾ ಚುನಾವಣಾಧಿಕಾರಿಗಳು ಸೀಲ್ ಮಾಡಿದ ಇವಿಎಂಗಳನ್ನು…

ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ
ಮೈಸೂರು

ಮೈಸೂರು ಪಾಲಿಕೆ ವಾರ್ಡ್ ನಂ.36ರಲ್ಲಿ ಅತ್ಯಧಿಕ ಶೇ.65.83, ವಾರ್ಡ್ ನಂ.24ರಲ್ಲಿ ಅತೀ ಕಡಿಮೆ ಶೇ.36.80ರಷ್ಟು ಮತದಾನ

September 1, 2018

ಮೈಸೂರು: ಮೈಸೂರು ಮಹಾ ನಗರ ಪಾಲಿಕೆಯ 65 ವಾರ್ಡ್‍ಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಒಟ್ಟು 7,98,690 ಮತದಾರರ ಪೈಕಿ 3,99,428 ಮಂದಿ ಹಕ್ಕು ಚಲಾಯಿಸಿದ್ದು, ಶೇಕಡಾ 50.01ರಷ್ಟು ಮತದಾನ ನಡೆದಿದೆ. ನರಸಿಂಹರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಯರಗನಹಳ್ಳಿ, ಅಂಬೇಡ್ಕರ್ ಕಾಲೋನಿ 36ನೇ ವಾರ್ಡ್‍ನಲ್ಲಿ ಶೇ.65.83ರಷ್ಟು ಮತದಾನ ನಡೆದಿದ್ದು, ಅಲ್ಲಿನ 10,057 ಮತದಾರರ ಪೈಕಿ 6,621 ಮಂದಿ ಮತ ಚಲಾಯಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಂಡಿ ಮೊಹಲ್ಲಾ 24ನೇ ವಾರ್ಡ್‍ನಲ್ಲಿ ಅತೀ ಕಡಿಮೆ ಎಂದರೆ 36.80ರಷ್ಟು ಮತದಾನ ನಡೆದಿದ್ದು, ಅಲ್ಲಿನ…

ಸೆಪ್ಟೆಂಬರ್ ಮೂರನೇವಾರ ಸಂಪುಟ ವಿಸ್ತರಣೆ
ಮೈಸೂರು

ಸೆಪ್ಟೆಂಬರ್ ಮೂರನೇವಾರ ಸಂಪುಟ ವಿಸ್ತರಣೆ

September 1, 2018

ಸಮನ್ವಯ ಸಮಿತಿ ಸಭೆ ನಂತರ ಸಿದ್ದರಾಮಯ್ಯ ವಿವರಣೆ ಅನ್ನಭಾಗ್ಯ ಅಕ್ಕಿ ಪ್ರಮಾಣ ಕಡಿತಕ್ಕೆ ಸಿದ್ದು ತೀವ್ರ ಅಸಮಾಧಾನ ಏಕಕಾಲದಲ್ಲಿ 30 ನಿಗಮ ಮಂಡಳಿಗೆ ನೇಮಕ ಬೆಂಗಳೂರು: ಸೆಪ್ಟೆಂಬರ್ 3ನೇ ವಾರದಲ್ಲಿ ರಾಜ್ಯ ಸಂಪುಟ ವಿಸ್ತರಣೆಯಾಗಲಿದೆ ಎಂದು ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ನೂರು ದಿನಗಳನ್ನು ಪೂರೈಸಿದ ಬೆನ್ನಲ್ಲೇ ಇಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ…

ಇಂದು  ಮತದಾನ
ಮೈಸೂರು

ಇಂದು  ಮತದಾನ

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ 65 ವಾರ್ಡುಗಳು, ತಿ.ನರಸೀಪುರ, ಪಿರಿಯಾಪಟ್ಟಣ ಹಾಗೂ ಹೆಚ್.ಡಿ.ಕೋಟೆ ಪುರಸಭೆಗಳಿಗೆ ನಾಳೆ (ಆ.31) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇದೇ ವೇಳೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಕೊಳ್ಳೇಗಾಲ ನಗರಸಭೆ, ಹಾಸನ ಜಿಲ್ಲೆಯ ಹಾಸನ, ಅರಸೀಕೆರೆ ನಗರಸಭೆ, ಚನ್ನರಾಯಪಟ್ಟಣ, ಸಕಲೇಶಪುರ, ಹೊಳೆನರಸೀಪುರ ಪುರಸಭೆ, ಮಂಡ್ಯ ಜಿಲ್ಲೆಯ, ಮಂಡ್ಯ ನಗರಸಭೆ, ಪಾಂಡವಪುರ, ಮದ್ದೂರು, ನಾಗಮಂಗಲ ಪುರಸಭೆ ಅಲ್ಲದೆ ಬೆಳ್ಳೂರು ಪಟ್ಟಣ ಪಂಚಾಯ್ತಿಗಳಿಗೂ ನಾಳೆಯೇ ಮತದಾನ ನಡೆಯಲಿದೆ. ಮುಕ್ತ ಹಾಗೂ ಶಾಂತಿಯುತ…

ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್
ಮೈಸೂರು

ಮಾವುತರು, ಕಾವಾಡಿಗಳಿಗೆ ತಲೆ ಎತ್ತಿವೆ 22 ಟೆಂಟ್

August 31, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಮೈಸೂರಿಗೆ ಆಗಮಿಸುತ್ತಿರುವ ಗಜಪಡೆಯ ನಾಯಕ ಅರ್ಜುನ ನೇತೃತ್ವದ ಆರು ಆನೆಗಳ ಮಾವುತರು ಹಾಗೂ ಕಾವಾಡಿಗಳಿಗಾಗಿ ಅರಮನೆ ಆವರಣದಲ್ಲಿ 22 ಟೆಂಟ್‍ಗಳನ್ನು ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ದಸರಾ ಆನೆಗಳಿಗೆ ಅರಮನೆ ಆವರಣದಲ್ಲಿ ಶೆಡ್ ಹಾಗೂ ಮಾವುತರು, ಕಾವಾಡಿಗಳು, ವಿಶೇಷ ಮಾವುತರು, ಟೆಂಟ್ ಶಾಲೆ, ಗ್ರಂಥಾಲಯ ಹಾಗೂ ಆಯುರ್ವೇದ ಚಿಕಿತ್ಸಾಲಯಕ್ಕೆ ಟೆಂಟ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ನಾಲ್ವರು ಭಾಗವಹಿಸಿದ್ದರು. ಅದರಲ್ಲಿ ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ್ದ ನ್ಯಾಷನಲ್ ಎಂಟರ್…

ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!
ಮೈಸೂರು

ಮಗುವಿನೊಂದಿಗೆ ಚುನಾವಣಾ  ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೇದೆ!

August 31, 2018

ಮೈಸೂರು: ಮೈಸೂರು ಮಹಾನಗರ ಪಾಲಿಕೆಗೆ ನಾಳೆ(ಆ.31) ನಡೆಯಲಿರುವ ಚುನಾವಣಾ ಕರ್ತವ್ಯಕ್ಕೆ ಮಹಿಳಾ ಪೇದೆಯೊಬ್ಬರು ತನ್ನ 2 ವರ್ಷದ ಮಗುವಿನೊಂದಿಗೆ ಹಾಜರಾಗುವ ಅನಿವಾರ್ಯತೆ ಎದುರಾಗಿತ್ತು. ಮೈಸೂರಿನ ಲಷ್ಕರ್ ಠಾಣೆ ಮಹಿಳಾ ಪೇದೆ ಈ.ಜ್ಯೋತಿ, ತನ್ನ 2 ವರ್ಷದ ಮಗುವಿನೊಂದಿಗೆ ಗುರುವಾರ ಮೈಸೂರಿನ ಮಹಾರಾಣಿ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಬಂದರು. ತಮ್ಮನ್ನು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ಮತಗಟ್ಟೆಯ ಮಾಹಿತಿ ಪಡೆದು, ಇನ್ನಿತರ ಸಿಬ್ಬಂದಿಯೊಂದಿಗೆ ವಾಹನ ಏರಿದರು. ಈ.ಜ್ಯೋತಿ, ಅವರ ಪತಿಯೂ ಕೆಎಸ್‍ಆರ್‍ಪಿ ಪೇದೆ. ಅವರೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವುದರಿಂದ ಬೇರೆ ದಾರಿ…

ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ
ಮೈಸೂರು

ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ

August 31, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಆರು ಆನೆಗಳ ಮೊದಲ ತಂಡದಲ್ಲಿ ಪ್ರಮುಖ ಆನೆಗಳಾದ ಬಲ ರಾಮ, ಅಭಿಮನ್ಯು, ದ್ರೋಣ ಬರುತ್ತಿಲ್ಲ. ಕಾಡಾನೆ ಕಾರ್ಯಾಚರಣೆಗೆ ಹೋಗಿರುವ ಹಿನ್ನೆಲೆಯಲ್ಲಿ ಅವುಗಳ ಬದಲಿಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ವಿಕ್ರಮ, ಗೋಪಿ ಸ್ಥಾನ ಪಡೆದುಕೊಂಡಿವೆ. ಅಂಬಾರಿ ಆನೆ ಅರ್ಜುನನ ನೇತೃತ್ವದಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸುತ್ತಿವೆ. ಪೂರ್ವ ನಿಗದಿ ಪ್ರಕಾರ ಮೊದಲ ತಂಡದಲ್ಲಿ ಬಲರಾಮ, ಅಭಿಮನ್ಯು ಮತ್ತು ದ್ರೋಣ ಬರಬೇಕಿತ್ತು. ಆದರೆ ರಾಮನಗರದಲ್ಲಿ…

ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!
ಮೈಸೂರು

ಅಲ್ಲಿ 500 ರೂ! ಇಲ್ಲಿ 1000 ರೂ. ಹಂಚಲಾಗುತ್ತಿದೆ! ಮತ್ತಿಲ್ಲಿ ಬೆಳ್ಳಿ ಪದಾರ್ಥ ಉಡುಗೊರೆ!!!

August 31, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ ಕಾಂಚಾಣದ ಕುಣಿತ ಜೋರಾಗಿದೆ. ಒಂದು ಮತಕ್ಕೆ 500 ರೂ., ಸಾವಿರ ರೂ. ಹಂಚಿಕೆಯಾಗುತ್ತಿದೆ. ಬೆಳ್ಳಿ ಪದಾರ್ಥಗಳನ್ನು ಉಡುಗೊರೆಯಾಗಿ ನೀಡಿ, ಮತ ಖರೀದಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಈ ಮಾತುಗಳು ಅಲ್ಲಿ ಇಲ್ಲಿ ಕೇಳಿ ಬರುತ್ತಿವೆಯಷ್ಟೇ. ಈವರೆಗೂ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳ ಹೊರತಾಗಿ ಬೇರ್ಯಾವ ಖಚಿತ ದೂರುಗಳು ಬಂದಿಲ್ಲ. ಆದರೆ ಸುಳ್ಳು ಮಾಹಿತಿಯಿಂದ ಚುನಾವಣಾಧಿಕಾರಿಗಳು ಗಸ್ತು ತಿರುಗಿ ಬೇಸ್ತು ಬಿದ್ದಿರುವ ಪ್ರಸಂಗಗಳು ಸಾಕಷ್ಟು ನಡೆದಿವೆ….

1 1,413 1,414 1,415 1,416 1,417 1,611
Translate »