ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ
ಮೈಸೂರು

ಮೊದಲ ತಂಡದಲ್ಲಿ ಸ್ಥಾನ ಪಡೆದ ಧನಂಜಯ

August 31, 2018

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.2ರಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುತ್ತಿರುವ ಆರು ಆನೆಗಳ ಮೊದಲ ತಂಡದಲ್ಲಿ ಪ್ರಮುಖ ಆನೆಗಳಾದ ಬಲ ರಾಮ, ಅಭಿಮನ್ಯು, ದ್ರೋಣ ಬರುತ್ತಿಲ್ಲ. ಕಾಡಾನೆ ಕಾರ್ಯಾಚರಣೆಗೆ ಹೋಗಿರುವ ಹಿನ್ನೆಲೆಯಲ್ಲಿ ಅವುಗಳ ಬದಲಿಗೆ ಇದೇ ಮೊದಲ ಬಾರಿಗೆ ಆಗಮಿಸುತ್ತಿರುವ ವಿಕ್ರಮ, ಗೋಪಿ ಸ್ಥಾನ ಪಡೆದುಕೊಂಡಿವೆ.

ಅಂಬಾರಿ ಆನೆ ಅರ್ಜುನನ ನೇತೃತ್ವದಲ್ಲಿ ಮೊದಲ ತಂಡದಲ್ಲಿ 6 ಆನೆಗಳು ಆಗಮಿಸುತ್ತಿವೆ. ಪೂರ್ವ ನಿಗದಿ ಪ್ರಕಾರ ಮೊದಲ ತಂಡದಲ್ಲಿ ಬಲರಾಮ, ಅಭಿಮನ್ಯು ಮತ್ತು ದ್ರೋಣ ಬರಬೇಕಿತ್ತು. ಆದರೆ ರಾಮನಗರದಲ್ಲಿ ಜನರಿಗೆ ಉಪಟಳ ನೀಡುತ್ತಿರುವ ಕಾಡಾನೆಯ ಕಾರ್ಯಾಚರಣೆಗೆ ಬಲರಾಮ, ಅಭಿಮನ್ಯು ಮತ್ತು ದ್ರೋಣ ಸೇರಿದಂತೆ ಕೆಲ ಆನೆಗಳನ್ನು ಕಳಿಸ ಲಾಗಿದೆ.

ಕಾಡಾನೆಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿ ಸುವ ಸಾಮಥ್ರ್ಯ ಹೊಂದಿರುವ ಈ 3 ಆನೆಗಳಿಂದ ಮುಂಚೂಣಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೊದಲ ತಂಡದಲ್ಲಿ, ಎರಡನೇ ತಂಡದ 3 ಆನೆಗಳನ್ನು ಕರೆತರಲು ನಿರ್ಧರಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿರುವ ಭೀಕರ ಪ್ರಕೃತಿ ವಿಕೋಪದಿಂದಾಗಿ ಈ ಬಾರಿ 20 ದಿನ ತಡವಾಗಿ ಮೊದಲ ತಂಡದ ಆನೆಗಳು ಮೈಸೂರಿಗೆ ಆಗಮಿಸುತ್ತಿವೆ. ಬೆನ್ನಲ್ಲೇ ಎರಡನೇ ತಂಡದ 6 ಆನೆಗಳನ್ನು ಸಹ ಕರೆತರಲು ನಿರ್ಧರಿಸಲಾಗಿದೆ. ಈ ಮಧ್ಯೆ ಮೊದಲ ಬಾರಿ ದಸರಾಗೆ ಆಗಮಿಸುವ ಧನಂಜಯ ಮೊದಲ ತಂಡದಲ್ಲಿ ಸೇರ್ಪಡೆಯಾಗಿದ್ದಾನೆ.

ಮೊದಲ ತಂಡದಲ್ಲಿ ಬಳ್ಳೆ ಶಿಬಿರ ದಲ್ಲಿರುವ ಅರ್ಜುನ(58), ದುಬಾರೆ ಶಿಬಿರದ ಧನಂಜಯ (37), ಗೋಪಿ (36), ವಿಕ್ರಮ(45) ದುಬಾರೆಯ ಆನೆಕಾಡು ಶಿಬಿರದಿಂದ, ಮತ್ತಿಗೂಡು ಶಿಬಿರದಿಂದ ವರಲಕ್ಷ್ಮೀ(62), ಬಂಡೀಪುರದ ಶಿಬಿರದಿಂದ ಚೈತ್ರ(47) ಆಗಮಿಸ ಲಿವೆ. ಅದರಲ್ಲಿ 5 ಆನೆಗಳು ವೀರನಹೊಸಳ್ಳಿ ಗೇಟ್ ನಿಂದ ಮೈಸೂರಿಗೆ ಬಂದರೆ ಬಂಡೀಪುರದಿಂದ ಚೈತ್ರ ನೇರವಾಗಿ ಅರಮನೆಗೆ ಆಗಮಿಸಲಿವೆ.

Translate »