ಮಂಗಳೂರು: ಈಗಾಗಲೇ ಮಹಾಮಳೆ ಮತ್ತು ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೊಡಗು ಹಾಗೂ ಮಂಗಳೂರಿನ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಎಚ್ಚರಿಕೆ ನೀಡಿದೆ. ಈ ಸಂಬಂಧ ಹವಾಮಾನ ಇಲಾಖೆ ಮಂಗಳೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಎರಡು ಜಿಲ್ಲೆಯ ಕೆಲವು ಭಾಗಗಳಲ್ಲಿ ಮಂಗಳವಾರ ಮತ್ತು ಬುಧವಾರ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಕರ್ನಾಟಕದ ಕರಾವಳಿ…
ಖೋಟಾ ನೋಟು ದಂಧೆ: ಮಹಿಳೆ ಸೆರೆ
August 28, 2018ಮೈಸೂರು: ಖೋಟಾ ನೋಟು ತಯಾರಿಕೆ ಹಾಗೂ ಚಲಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರನ್ನು ವಿದ್ಯಾರಣ್ಯಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಜೆಪಿ ನಗರ ನಿವಾಸಿ ಗೌರಮ್ಮ (40) ಬಂಧಿತ ಆರೋಪಿ. ವಿದ್ಯಾರಣ್ಯಪುರಂ ವ್ಯಾಪ್ತಿಯ ಗ್ರಂಥಾಲಯ ಬಳಿ ರಸ್ತೆಬದಿ ವ್ಯಾಪಾರಿಗಳಿಂದ ಬಟ್ಟೆ ಖರೀದಿಸಿದ ಗೌರಮ್ಮ ಜೆರಾಕ್ಸ್ ನೋಟುಗಳನ್ನು ನೀಡಿದ್ದರಿಂದ ಸಂಶಯಗೊಂಡ ವ್ಯಾಪಾರಿ ಸ್ವೀಕರಿಸಲು ನಿರಾಕರಿಸಿದ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆದ ಸಂದರ್ಭ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯ ಪುರಂ ಠಾಣೆ ಇನ್ಸ್‍ಪೆಕ್ಟರ್ ಓಂಕಾರಪ್ಪ…
ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯಿರಿ
August 28, 2018ಮೈಸೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಜನ ತತ್ತರಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಭೀಕರ ಅನಾಹುತವೇ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಸಭೆ ಕರೆದು ಚರ್ಚಿಸುವಂತೆ ಶಾಸಕ, ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‍ವೊಂದರಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೆಡೆ ನದಿಗಳು ಉಕ್ಕಿ ಹರಿಯುತ್ತಿದ್ದರೆ, ಮತ್ತೊಂದೆಡೆ ಹನಿ ಮಳೆಯೂ ಆಗದೆ ಭೀಕರ ಬರಗಾಲ ತಲೆದೋರಿದೆ. ಎಂದೂ ಕೇಳಯರಿಯದಂತಹ ಪ್ರಕೃತಿ ವಿಕೋಪಕ್ಕೆ ಕೊಡಗು ಸಾಕ್ಷಿಯಾಗಿ,…
ಮೈಸೂರಲ್ಲಿ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ
August 28, 2018ಮೈಸೂರು: ಮೈಸೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರು ಅವರ 164ನೇ ಜಯಂತಿಯನ್ನು ಸೋಮವಾರ ಆಚರಿಸಲಾಯಿತು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತದ ಆಶ್ರಯದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಯಂತ್ಯೋತ್ಸವವನ್ನು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್ ಉದ್ಘಾಟಿಸಿ, ನಾರಾಯಣ ಗುರುಗಳ ಚಿತ್ರಪಟಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಋಗ್ವೇದಲ್ಲಿ ಹೇಳುವಂತೆ ಉದಾತ್ತ ಚಿಂತನೆಗಳನ್ನು ಸ್ವೀಕರಿಸಲು ಜಾತಿ, ಮತ, ಪ್ರದೇಶ…
ಮೈಸೂರಲ್ಲಿ ವಿಭಿನ್ನ ರೀತಿ ನಾನಾ ಪಕ್ಷಗಳ ಪ್ರಚಾರ ಭರಾಟೆ
August 28, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲೀಗ ಪ್ರಚಾರದ ಭರಾಟೆ ಜೋರಾಗಿದೆ. ಎಲ್ಲೆಂದರಲ್ಲಿ ಆಟೋರಿಕ್ಷಾ ಸೇರಿದಂತೆ ವಿವಿಧ ಪ್ರಚಾರ ವಾಹನಗಳು ಅಭ್ಯರ್ಥಿಗಳ ಭಾವಚಿತ್ರ ಸೇರಿದಂತೆ ಮತದಾನಕ್ಕಾಗಿ ಮನವಿ ಮಾಡುವ ಸಂದೇಶವಿರುವ ಬ್ಯಾನರ್‍ಗಳನ್ನು ಕಟ್ಟಿಕೊಂಡು ಸುತ್ತಾಡುತ್ತಿವೆ. ನಗರದ 65 ವಾರ್ಡ್‍ಗಳಲ್ಲೂ ಅಭ್ಯರ್ಥಿಗಳ ಮನೆ ಮನೆ ಭೇಟಿಯೂ ಕಳೆಗಟ್ಟಿದೆ. ಮತದಾರರ ಮನೆ-ಮನಗಳನ್ನು ಮುಟ್ಟಲು ಅಭ್ಯರ್ಥಿಗಳು ಮುದ್ರಿಸಿರುವ ಕರಪತ್ರಗಳು ಇದೀಗ ನಗರದ ಮನೆ-ಮನೆಗಳಲ್ಲೂ ಮಾತ್ರವಲ್ಲದೆ, ಅಂಗಡಿ-ಮುಂಗಟ್ಟು ಸೇರಿದಂತೆ ವಿಶೇಷವಾಗಿ ಚಹ ಅಂಗಡಿಗಳಲ್ಲಿ ಕಾಣಸಿಗುತ್ತಿವೆ. ಮತದಾರರನ್ನು ಖುದ್ದು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು…
ಎನ್.ಆರ್.ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷದ ಅಭ್ಯರ್ಥಿಗಳ ಬಿರುಸಿನ ಪ್ರಚಾರ
August 28, 2018ಮೈಸೂರು: ಮೈಸೂರು ಮಹಾನಗರಪಾಲಿಕೆ ಚುನಾವಣೆಯಲ್ಲಿ ನರಸಿಂಹರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್‍ಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷೇತರ ಅಭ್ಯರ್ಥಿಗಳ ಪ್ರಚಾರ ಕಾಂiÀರ್i ಬಿರುಸುಗೊಂಡಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಪ್ರಮುಖ ಹುರಿಯಾಳುಗಳು ಮನೆ ಮನೆಗೆ ಭೇಟಿ ನೀಡಿ ಮತಯಾಚನೆಯಲ್ಲಿ ತೊಡಗಿದ್ದು, ಮತದಾರರ ಗಮನ ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಎಸ್‍ಡಿಪಿಐ, ಬಿಎಸ್‍ಪಿ ಅಭ್ಯರ್ಥಿಗಳು ಸಹ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಶಾಸಕ ತನ್ವೀರ್‍ಸೇಠ್, ಎಂಎಲ್‍ಸಿ ರಿಜ್ವಾನ್ ಹರ್ಷದ್ ಇನ್ನಿತರ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ…
ಎಂಆರ್‍ಸಿ ನೂತನ ಸ್ಟೀವರ್ಡ್‍ಗಳಾಗಿ ಹೆಚ್. ಕುಸುಮಾಕರ್‍ಶೆಟ್ಟಿ, ಎಲ್. ವಿವೇಕಾನಂದ ಆಯ್ಕೆ
August 28, 2018ಮೈಸೂರು: ಮೈಸೂರು ರೇಸ್ ಕ್ಲಬ್ (ಎಂಆರ್‍ಸಿ)ನ ನೂತನ ಸ್ಟೀವರ್ಡ್‍ಗಳಾಗಿ ಹೆಚ್. ಕುಸುಮಾಕರ್ ಶೆಟ್ಟಿ (139 ಮತ), ಎಲ್. ವಿವೇಕಾ ನಂದ (116) ಹಾಗೂ ಆಡಳಿತ ಮಂಡಳಿ ಸಮಿತಿ ಸದಸ್ಯರಾಗಿ ಬಿ.ಎನ್. ಕಾರ್ಯಪ್ಪ (147), ಎಂ.ಸಿ. ಮಲ್ಲಿಕಾರ್ಜುನ್ (102) ಆಯ್ಕೆಯಾಗಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಎಂಆರ್‍ಸಿ ವಾರ್ಷಿಕ ಮಹಾಸಭೆ ನಡೆಯಿತು. ನಂತರ ಖಾಲಿ ಇದ್ದ ಎರಡು ಸ್ಟೀವರ್ಡ್ ಹಾಗೂ ಎರಡು ಆಡಳಿತ ಮಂಡಳಿ ಸಮಿತಿ ಸದಸ್ಯ ಸ್ಥಾನಕ್ಕೆ ಮಧ್ಯಾಹ್ನ ಚುನಾವಣೆ ನಡೆದು, ಮತ ಎಣಿಕೆ ನಂತರ ಫಲಿತಾಂಶವೂ…
ದಟ್ಟಗಳ್ಳಿ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಸಚಿವ ಜಿ.ಟಿ.ದೇವೇಗೌಡರ ರೋಡ್ ಶೋ
August 28, 2018ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ದಟ್ಟಗಳ್ಳಿ ವಾರ್ಡ್ ಸಂಖ್ಯೆ 46ರಲ್ಲಿ ಜಾತ್ಯತೀತ ಜನತಾದಳ ಅಭ್ಯರ್ಥಿ ಪರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಸೋಮವಾರ ರೋಡ್ ಶೋ ನಡೆಸಿ, ಮತ ಯಾಚಿಸಿದರು. ರಾಜರಾಜೇಶ್ವರಿನಗರ, ದಟ್ಟಗಳ್ಳಿ, ಕನಕದಾಸನಗರ ಸುತ್ತಮುತ್ತ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದ ಅವರು ಜೆಡಿಎಸ್ ಪಕ್ಷದ ಅಭ್ಯರ್ಥಿ ಅನುಸೂಯ ರಮೇಶ್ ಅವರಿಗೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ರೋಡ್‍ಶೋ ಸಂದರ್ಭದಲ್ಲಿ ಸಚಿವರೊಂದಿಗೆ ಪಕ್ಷದ ಯುವ ಕಾರ್ಯಕರ್ತರು ಬೈಕ್‍ಗಳಲ್ಲಿ ತೆರಳಿ ಮತದಾರರ ಗಮನ ಸೆಳೆದರು….
ಮೈಸೂರು ಪಾಲಿಕೆಯಿಂದ ಮತದಾನ ಜಾಗೃತಿ
August 28, 2018ಮೈಸೂರು: ಆಗಸ್ಟ್ 31 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸುವಂತೆ ಇಂದು ಮೈಸೂರಲ್ಲಿ ಜನ ಜಾಗೃತಿ ಮೂಡಿಸಲಾಯಿತು. ಮೈಸೂರು ಮಹಾನಗರ ಪಾಲಿಕೆಯು ಮತದಾರರ ಶಿಕ್ಷಣ ಮತ್ತು ಚುನಾವಣಾ ಪಾಲ್ಗೊಳ್ಳುವಿಕೆ (ಸ್ವೀಪ್) ಚಟುವಟಿಕೆ ಅಂಗವಾಗಿ ಇಂದು ಜೆಎಲ್‍ಬಿ ರಸ್ತೆಯ ಆರ್‍ಟಿಓ ಸರ್ಕಲ್, ನಂಜುಮಳಿಗೆ ಸರ್ಕಲ್, ವಿವೇಕಾನಂದ ಸರ್ಕಲ್, ಜೆ.ಪಿ. ನಗರದ ಗೊಬ್ಬಳಿ ಮರ ಸರ್ಕಲ್, ಆಗ್ರಹಾರ ಸರ್ಕಲ್, ಬನುಮಯ್ಯ ಕಾಲೇಜು, ಪುರಭವನ ಸೇರಿದಂತೆ ಸುತ್ತಮುತ್ತಲ ಸ್ಥಳಗಳಲ್ಲಿ ಬೀದಿ ನಾಟಕ, ಜಾನಪದ ಗೀತೆ, ಜಾನಪದ…
ಮತ್ತೆ ಸಕ್ರಿಯ ರಾಜಕಾರಣಕ್ಕಿಳಿದ ಸುನೀಲ್ ಬೋಸ್
August 28, 2018ತಿ.ನರಸೀಪುರ: ಕಳೆದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿದ್ದ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಪುತ್ರ, ವಸತಿ ಯೋಜನೆ ಜಾಗೃತಿ ಉಸ್ತುವಾರಿ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಬೋಸ್ ಹಲವು ತಿಂಗಳ ನಂತರ ಪುರಸಭೆ ಚುನಾವಣೆ ಪ್ರಚಾರದ ಮೂಲಕ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಪರಿವರ್ತಿತ ಪುರಸಭೆಗೆ ನಡೆಯು ತ್ತಿರುವ ಸಾರ್ವತ್ರಿಕ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದ ಸುನೀಲ್ ಬೋಸ್, ಪಟ್ಟಣದಲ್ಲಿ ಸೋಮವಾರ ವರುಣಾ ಶಾಸಕ ಡಾ.ಎಸ್.ಯತೀಂದ್ರ ಅವರೊಂದಿಗೆ ವಿವಿಧ ವಾರ್ಡುಗಳಲ್ಲಿ ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು. ಸುಶೀಲಮ್ಮ…