ಮೈಸೂರು

ಅಭ್ಯರ್ಥಿ ಆಯ್ಕೆಗೆ ರಾಜಕೀಯ ಪಕ್ಷಗಳ ಹೆಣಗಾಟ
ಮೈಸೂರು

ಅಭ್ಯರ್ಥಿ ಆಯ್ಕೆಗೆ ರಾಜಕೀಯ ಪಕ್ಷಗಳ ಹೆಣಗಾಟ

August 13, 2018

ಮೈಸೂರು:  ಮೈಸೂರು ನಗರ ಪಾಲಿಕೆ ಚುನಾವಣೆ ಸ್ಪರ್ಧಾ ಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಅಂತಿಮ ಪಟ್ಟಿ ಸಿದ್ಧಪಡಿಸುವುದು ಮೂರು ಪಕ್ಷಗಳಿಗೂ ಸವಾಲಿನ ಕೆಲಸವಾಗಿದೆ. ಕಳೆದ 2 ದಿನಗಳಿಂದ ಮೂರು ಪಕ್ಷಗಳಿಂದ ಸ್ಪರ್ಧಾಕಾಂಕ್ಷಿಗಳಿಗೆ ಅರ್ಜಿ ವಿತರಿಸಲಾಗುತ್ತಿದ್ದು, ನೂರಾರು ಮಂದಿ ಅರ್ಜಿ ಪಡೆದಿದ್ದಾರೆ. ಜೆಡಿಎಸ್‍ನಿಂದ ನರಸಿಂಹರಾಜ ಕ್ಷೇತ್ರದಲ್ಲಿ 36, ಚಾಮರಾಜ ಕ್ಷೇತ್ರದಲ್ಲಿ 20 ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿ 30 ಸೇರಿದಂತೆ 65 ವಾರ್ಡ್‍ಗಳಿಂದ ಒಟ್ಟು 86 ಅರ್ಜಿಗಳು ವಿತರಣೆಯಾಗಿವೆ. ಹಾಗೆಯೇ ಕಾಂಗ್ರೆಸ್‍ನಲ್ಲಿ ಮೂರು ಕ್ಷೇತ್ರಗಳಿಂದ ಒಟ್ಟು 250 ಸ್ಪರ್ಧಾಕಾಂಕ್ಷಿಗಳು ಅರ್ಜಿ ಪಡೆದಿದ್ದಾರೆ….

ಇಂದು ರಾಜ್ಯಕ್ಕೆ ರಾಹುಲ್ ಭೇಟಿ
ಮೈಸೂರು

ಇಂದು ರಾಜ್ಯಕ್ಕೆ ರಾಹುಲ್ ಭೇಟಿ

August 13, 2018

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಸ್ಟ್ 13 ರಂದು ಕರ್ನಾ ಟಕಕ್ಕೆ ಭೇಟಿ ನೀಡ ಲಿದ್ದಾರೆ. ರಾಜ್ಯ ದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿ ತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಅವರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಆಗಸ್ಟ್ 13ರ ಸೋಮ ವಾರ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೀದರ್‍ನಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿ ದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲಿ ದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ…

10 ದಿನ ಕಳೆದರೂ ಪತ್ತೆಯಾಗದ ಕೆ.ಆರ್.ಪೇಟೆ ತಹಸೀಲ್ದಾರ್ ಅಪಹರಣದ ನೈಜ ಸ್ಥಿತಿ ನೂತನ ತಹಸೀಲ್ದಾರ್ ಶಿವಮೂರ್ತಿ ಅಧಿಕಾರ
ಮೈಸೂರು

10 ದಿನ ಕಳೆದರೂ ಪತ್ತೆಯಾಗದ ಕೆ.ಆರ್.ಪೇಟೆ ತಹಸೀಲ್ದಾರ್ ಅಪಹರಣದ ನೈಜ ಸ್ಥಿತಿ ನೂತನ ತಹಸೀಲ್ದಾರ್ ಶಿವಮೂರ್ತಿ ಅಧಿಕಾರ

August 13, 2018

ಮೈಸೂರು: ಅಪಹರಣವಾಗಿ ನಂತರ ಸುರಕ್ಷಿತವಗಿ ಹಿಂದಿರುಗಿದ ಕೆ.ಆರ್.ಪೇಟೆ ತಹಸೀಲ್ದಾರ್ ಕೆ.ಮಹೇಶ್‍ಚಂದ್ರ ಅವರ ಪ್ರಹಸನದ ನೈಜ ಸ್ಥಿತಿ 10 ದಿನ ಕಳೆದರೂ ಪತ್ತೆಯಾಗಲಿಲ್ಲ. ಆಗಸ್ಟ್ 3ರಂದು ಕೆಲಸ ಮುಗಿಸಿ ಕೆ.ಆರ್.ಪೇಟೆಯಿಂದ ಕೆ.ಆರ್.ನಗರಕ್ಕೆ ಹೊರಟಿದ್ದ ಮಹೇಶ್‍ಚಂದ್ರ ಅವರನ್ನು ಮಾರ್ಗ ಮಧ್ಯೆ ಬೇರ್ಯ ಸಮೀಪ ಅಪಹರಿಸಲಾಗಿತ್ತೆಂಬುದು, ಮಾರುತಿ ಓಮ್ನಿ, ಅವರ ಶರ್ಟಿನ ಬಟನ್‍ಗಳು ಹಾಗೂ ಶೂಗಳು ಪತ್ತೆಯಾದ ಮರುದಿನ ತಿಳಿದು ಬಂದಿತ್ತು. ಕೆ.ಆರ್.ನಗರ, ಸಾಲಿಗ್ರಾಮ ಮತ್ತು ಕೆ.ಆರ್.ಪೇಟೆ ಠಾಣೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಶೋಧನಾ ಕಾರ್ಯ ಆರಂಭಿಸಿದ್ದರು. ಆಗಸ್ಟ್…

ಮೈಸೂರಲ್ಲಿ ಅಂಗಾಂಗ ದಾನ ಮಹತ್ವದ ಅರಿವು
ಮೈಸೂರು

ಮೈಸೂರಲ್ಲಿ ಅಂಗಾಂಗ ದಾನ ಮಹತ್ವದ ಅರಿವು

August 13, 2018

ಮೈಸೂರು: ಅಂಗಾಂಗ ದಾನ ದಿನದ ಹಿನ್ನೆಲೆಯಲ್ಲಿ ಮೈಸೂರಿನ ಚಿಕ್ಕಗಡಿಯಾರದ ಬಳಿ ಭಾನುವಾರ ಯಂಗ್ ಇಂಡಿಯನ್ಸ್ ಸಂಸ್ಥೆ ಹಾಗೂ ಸಿಐಐ ಸಂಸ್ಥೆಯು ಸಾರ್ವಜನಿಕರಲ್ಲಿ ಅಂಗಾಂಗ ದಾನದ ಮಹತ್ವದ ಬಗ್ಗೆ ಅರಿವು ಮೂಡಿಸಿತು. ಅಪಘಾತ ಹಾಗೂ ವಿವಿಧ ಆರೋಗ್ಯ ಸಮಸ್ಯೆಯಿಂದಾಗಿ ಅಂಗಾಂಗ ವೈಫಲ್ಯಕ್ಕೆ ತುತ್ತಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವವರನ್ನು ಬದುಕಿಸಲು ಅಂಗಾಂಗ ದಾನ ಮಹತ್ವ ಪಡೆಯುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಯಿತು. ಯಂಗ್ ಇಂಡಿಯನ್ಸ್, ಸಿಐಐ, ರೋಟರಿ ಮೈಸೂರು, ಹ್ಯೂಮನ್ ಟಚ್, ಸೇವಾ ಹಸ್ತ, ಗಿಫ್ಟ್ ಆನ್ ಆರ್ಗನ್ ಹಾಗೂ ಇನ್ನಿತರರ…

ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  ಚಾಮರಾಜ ಕ್ಷೇತ್ರದ 19 ವಾರ್ಡ್‍ಗಳಿಗೆ  160 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು
ಮೈಸೂರು

ಮೈಸೂರು ಮಹಾನಗರ ಪಾಲಿಕೆ ಚುನಾವಣೆ:  ಚಾಮರಾಜ ಕ್ಷೇತ್ರದ 19 ವಾರ್ಡ್‍ಗಳಿಗೆ  160 ಬಿಜೆಪಿ ಟಿಕೆಟ್ ಆಕಾಂಕ್ಷಿಗಳು

August 13, 2018

ಮೈಸೂರು,: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿನ 19 ನಗರ ಪಾಲಿಕೆ ವಾರ್ಡ್‍ಗಳಿಗೆ ಬಿಜೆಪಿಯಲ್ಲಿ 160 ಆಕಾಂಕ್ಷಿಗಳು ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸಿದ್ದಾರೆ. ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಇಂದು ವಿವಿಪುರಂನಲ್ಲಿರುವ ತಮ್ಮ ಕಚೇರಿಯಲ್ಲಿ ಪಕ್ಷದ ನಗರ ಪಾಲಿಕೆ ಚುನಾವಣಾ ಆಕಾಂಕ್ಷಿಗಳ ಸಭೆ ನಡೆಸಿದ ವೇಳೆ 19 ವಾರ್ಡ್‍ಗಳಿಗೆ ಬರೋಬ್ಬರಿ 160 ಮಂದಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದರಲ್ಲದೆ, ಟಿಕೆಟ್ ಕೋರಿಕೆಗಾಗಿ ಶಾಸಕರ ಕಚೇರಿಯಿಂದ ಅರ್ಜಿ ನಮೂನೆಗಳನ್ನು ಪಡೆದುಕೊಂಡರು. ಆ ಪೈಕಿ 31ನೇ ವಾರ್ಡಿನ ಕಾರ್ಪೊರೇಟರ್ ಗಿರೀಶ್‍ಪ್ರಸಾದ್, 17ನೇ ವಾರ್ಡಿನ ಪಾಲಿಕೆ…

ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ
ಮೈಸೂರು

ವಿಜಯನಗರದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಆರಂಭ

August 13, 2018

ಮೈಸೂರು: ಮೈಸೂರಿನ ವಿಜಯನಗರದ ಹಿನಕಲ್ ಸಮೀಪವಿರುವ ಮುಡಾ ರೈತ ಸಂತೆ ಕಟ್ಟಡದಲ್ಲಿ ಭಾನುವಾರದ ಸಾವಯವ ತರಕಾರಿ ಸಂತೆ ಇಂದು ಆರಂಭವಾಯಿತು. ರೈತ ಸಂಘ ಹಾಗೂ ಎಪಿಎಂಸಿ ಆಶ್ರಯದಲ್ಲಿ ಆರಂಭವಾದ ಭಾನುವಾರದ ತರಕಾರಿ ಸಂತೆಯನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ರೈತರು ತಮ್ಮ ಜಮೀನುಗಳಲ್ಲಿ ರಾಸಾಯನಿಕ ಬಳಸದೆ ಬೆಳೆದ ಸೊಪ್ಪು, ತರಕಾರಿಗಳನ್ನು ತಂದು ನೇರವಾಗಿ ಈ ಸಂತೆಯಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾರಕ್ಕೊಮ್ಮೆ ಭಾನುವಾರ ಮಾತ್ರ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 1 ಗಂಟೆವರೆಗೆ ತರಕಾರಿ ಮಾರುಕಟ್ಟೆ ತೆರೆದಿರುತ್ತದೆ….

ಆನೆ ಲದ್ದಿಯಿಂದ ತಯಾರಾಗಿದೆ ಅಂಚೆ ಲಕೋಟೆ!! ಇದು ಕೇವಲ ಸಂಗ್ರಹಕ್ಕೆ ಮಾತ್ರ ಲಭ್ಯ
ಮೈಸೂರು

ಆನೆ ಲದ್ದಿಯಿಂದ ತಯಾರಾಗಿದೆ ಅಂಚೆ ಲಕೋಟೆ!! ಇದು ಕೇವಲ ಸಂಗ್ರಹಕ್ಕೆ ಮಾತ್ರ ಲಭ್ಯ

August 13, 2018

ಮೈಸೂರು:  ಆನೆ ಲದ್ದಿಯಿಂದ ತಯಾರಾದ ಕಾಗದಕ್ಕೆ ಸಿಕ್ಕಿದೆ ಅಂಚೆ ಲಕೋಟೆ ಸ್ಪರ್ಶ! ಹೌದು, ಆನೆ ಸಂತತಿ ಸಂರಕ್ಷಣೆಯ ಸಂದೇಶ ಸಾರಲು ಆನೆಯ ಲದ್ದಿಯಲ್ಲಿರುವ ನಾರಿನಿಂದ ತಯಾರು ಮಾಡಿರುವ ಕಾಗದದಲ್ಲಿ ಅಂಚೆ ಲಕೋಟೆ ಹೊರತರಲಾಗಿದೆ. ಅರಣ್ಯ ಇಲಾಖೆ ಹಾಗೂ ಭಾರತೀಯ ಅಂಚೆ ಇಲಾಖೆ ಜಂಟಿ ಆಶ್ರಯದಲ್ಲಿ ವಿಶ್ವ ಆನೆ ದಿನದ ಅಂಗವಾಗಿ ಹೊರತಂದಿರುವ ಈ ವಿಶೇಷ ಅಂಚೆ ಲಕೋಟೆಯನ್ನು ಭಾನುವಾರ ಮೈಸೂರಿನಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಲಕೋಟೆಯನ್ನು ಸಿಎಂ…

ಸಾಂಸ್ಕೃತಿಕ ನಗರಿಯಲ್ಲಿ 2ನೇ ‘ಮೈಸೂರು ಲಿಟರರಿ ಫೆಸ್ಟ್’
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ 2ನೇ ‘ಮೈಸೂರು ಲಿಟರರಿ ಫೆಸ್ಟ್’

August 13, 2018

ಮೈಸೂರು:  ಮೈಸೂರು ಲಿಟರರಿ ಅಸೋಸಿಯೇಷನ್(ಒಐಂ) ವತಿ ಯಿಂದ ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿರುವ ಸೆನೆಟ್ ಭವನದಲ್ಲಿ ಇಂದು 2ನೇ ‘ಮೈಸೂರು ಲಿಟರರಿ ಫೆಸ್ಟ್-2018’ ಯಶಸ್ವಿ ಯಾಗಿ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮೈಸೂರು ಲಿಟರರಿ ಫೆಸ್ಟ್ ಅನ್ನು ಖ್ಯಾತ ಸಾರೋದ್ ವಾದಕ ಮತ್ತು ಸಾಹಿತಿ ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅವರು ದೀಪ ಬೆಳಗಿ ಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕನ್ನಡ ಸುಂದರ ಭಾಷೆ, ಬಾಳೆಹಣ್ಣು ಸುಲಿದಷ್ಟು ಸುಲಭವಾಗಿರುವ ಈ ಭಾಷೆ…

ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕ ಮೀಸಲಿಡಬೇಕು: ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ
ಮೈಸೂರು

ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕ ಮೀಸಲಿಡಬೇಕು: ಅಂತರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ

August 13, 2018

ಮೈಸೂರು: ಕೇಂದ್ರ ಸರ್ಕಾರವು ಕ್ರೀಡಾ ಚಟುವಟಿಕೆಗಳಿಗೆ 200 ಅಂಕ ನಿಗದಿಪಡಿಸಿದರೆ ಪೋಷಕರೇ ಮಕ್ಕಳನ್ನು ಕ್ರೀಡೆಗೆ ಪ್ರೋತ್ಸಾಹಿಸುತ್ತಾರೆ ಎಂದು ಅಂತಾರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ದೇವಯ್ಯ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ಭಾನುವಾರ ಆಯೋಜಿಸಿದ್ದ ಮೈಸೂರು ಲಿಟರರಿ ಫೆಸ್ಟ್ 2018 ಕಾರ್ಯಕ್ರಮದಲ್ಲಿ `ನಾವು ಕ್ರೀಡಾ ರಾಷ್ಟ್ರವೇ’ ವಿಷಯ ಕುರಿತು ಮಾತನಾಡಿದ ಅವರು, ಭಾರತ ಸರ್ಕಾರವು ಪಠ್ಯಕ್ರಮದಲ್ಲಿ 200 ಅಂಕಗಳನ್ನು ಕ್ರೀಡೆಗೆಂದು ಮೀಸಲಿರಿಸಬೇಕು. ಇಲ್ಲವಾದಲ್ಲಿ ಯಾರೊಬ್ಬರೂ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಪಠ್ಯಕ್ರಮದಲ್ಲಿ ಕ್ರೀಡೆಗೆ 200 ಅಂಕಗಳನ್ನು ನಿಗದಿಪಡಿಸಿದರೆ…

ಹಿಂದುತ್ವ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ
ಮೈಸೂರು

ಹಿಂದುತ್ವ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ

August 13, 2018

ಮಾಜಿ ರಾಯಭಾರಿ, ಶ್ರೇಷ್ಠ ಬರಹಗಾರ ಪವನ್ ವರ್ಮಾ ಪ್ರತಿಪಾದನೆ ಮೈಸೂರು:  ಹಿಂದುತ್ವವೂ ಕೇವಲ ಧರ್ಮವಲ್ಲ, ಅದು ಜೀವನದ ಮಾರ್ಗ ಎಂಬುದನ್ನು ಮಾಜಿ ರಾಯಭಾರಿ ಹಾಗೂ ಶ್ರೇಷ್ಠ ಬರಹಗಾರ ಪವನ್ ವರ್ಮಾ ಅವರು ಅರ್ಥಗರ್ಭಿತವಾಗಿ ವಿವರಿಸಿದರು. ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ರುವ ಸೆನೆಟ್ ಭವನದಲ್ಲಿ ಮೈಸೂರು ಲಿಟರರಿ ಅಸೋಸಿಯೇಷನ್ ಇಂದು ಏರ್ಪ ಡಿಸಿದ್ದ ‘ಮೈಸೂರು ಲಿಟರರಿ ಫೆಸ್ಟ್-2018’ ರಲ್ಲಿ ಭಾಗವಹಿಸಿ, ‘ಹಿಂದೂ ತತ್ವಶಾಸ್ತ್ರದಲ್ಲಿ ಆದಿ ಶಂಕರಾಚಾರ್ಯರು ಪ್ರಸ್ತಾಪಿಸಿದ ಅದ್ಭುತ ನಿರೂಪಣೆ’ ಕುರಿತು ವಿಚಾರ ಮಂಡಿಸಿದ ಅವರು, ಶಿಕ್ಷಣದಲ್ಲಿ ಪುರಾತನ…

1 1,436 1,437 1,438 1,439 1,440 1,611
Translate »