ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ದಿ.ರಾಕೇಶ್ ಸಿದ್ದರಾಮಯ್ಯ 2ನೇ ವರ್ಷದ ಸ್ಮರಣೆ ಅಂಗವಾಗಿ ಸಾಮಾಜಿಕ ನ್ಯಾಯ ಕುರಿತಂತೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಅವರು ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸದೇ ಇದ್ದದ್ದೇ ಕಾರಣ ಎಂಬ ಅಭಿಪ್ರಾಯವನ್ನು ಅತಿಥಿಗಳು ವ್ಯಕ್ತಪಡಿಸಿದರು. ಮೈಸೂರಿನ ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಕೇಶ್ ಸಿದ್ದರಾಮಯ್ಯ ಸಾಮಾಜಿಕ ನ್ಯಾಯ ಸಂಸ್ಥೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ…
ದಾಂಡೇಲಿಯಲ್ಲಿ ವಕೀಲರ ಹತ್ಯೆ ಖಂಡಿಸಿ ಮೈಸೂರಲ್ಲಿ ವಕೀಲರ ಪ್ರತಿಭಟನೆ
July 31, 2018ಮೈಸೂರು: ದಾಂಡೇಲಿಯಲ್ಲಿ ನಡೆದ ವಕೀಲರೊಬ್ಬರ ಹತ್ಯೆ ಖಂಡಿಸಿ ಮೈಸೂರು ವಕೀಲರ ಸಂಘದ ವತಿಯಿಂದ ಮೈಸೂರಿನ ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು. ನ್ಯಾಯಾಲಯದ ಕಲಾಪಯಿಂದ ದೂರ ಉಳಿದ ನ್ಯಾಯವಾದಿಗಳು, ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಹಂತಕರನ್ನು ಕೂಡಲೇ ಬಂಧಿಸಬೇಕು. ಮುಂದೆ ವಕೀಲರ ಮೇಲಿನ ಹಲ್ಲೆ ನಡೆಯದಂತೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು. ದಾಂಡೇಲಿಯಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ. ವಕೀಲರ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಇದು ಖಂಡನಾರ್ಹ. ನ್ಯಾಯ ದೊರಕಿಸಿಕೊಡುವವರಿಗೇ ಇಂದು…
ಮೇಕೆದಾಟು ಅಣೆಕಟ್ಟೆ ಯೋಜನೆಗೆ ತಮಿಳುನಾಡು ಅಡ್ಡಿ ಖಂಡಿಸಿ ಪ್ರತಿಭಟನೆ
July 31, 2018ಮೈಸೂರು: ರಾಜ್ಯದ ಮಹತ್ವಾಕಾಂಕ್ಷೆಯ ಮೇಕೆದಾಟು ಅಣೆಕಟ್ಟು ಯೋಜನೆಗೆ ತಮಿಳುನಾಡು ಅಡ್ಡಿಪಡಿಸುತ್ತಿರುವುದನ್ನು ಖಂಡಿಸಿ, ಕರ್ನಾಟಕ ಸೇನಾ ಪಡೆ ಮೈಸೂರು ಜಿಲ್ಲಾ ಘಟಕದ ಕಾರ್ಯಕರ್ತರು ಸೋಮವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಕಾವೇರಿ ವಿವಾದವನ್ನು ಮುಂದಿಟ್ಟುಕೊಂಡು ತಮಿಳುನಾಡಿನವರು ಕರ್ನಾಟಕ ರಾಜ್ಯದ ಉದ್ಧೇಶಿತ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಅನಗತ್ಯವಾಗಿ ತೊಂದರೆ ನೀಡುತ್ತಿದ್ದಾರೆ ಎಂದು ಖಂಡಿಸಿದರು. ಪಕ್ಕದ ರಾಜ್ಯಗಳು ತಮ್ಮ ಅನುಕೂಲಕ್ಕಾಗಿ ನೀರಾವರಿ ಹಾಗೂ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಕಾಲ ಕಾಲಕ್ಕೆ ಅನುಷ್ಠಾನಗೊಳಿಸಿಕೊಳ್ಳುವ…
ಚಿತ್ರ ಸಾಹಿತಿ ಎಂ.ಎನ್.ವ್ಯಾಸರಾವ್‍ರಿಗೆ ನುಡಿ ನಮನ
July 31, 2018ಮೈಸೂರು: ಇತ್ತೀಚೆಗೆ ನಿಧನರಾದ ಕನ್ನಡದ ಜನಪ್ರಿಯ ಚಲನಚಿತ್ರ ಸಾಹಿತಿ ಎಂ.ಎನ್.ವ್ಯಾಸರಾವ್ ಅವರಿಗೆ `ನುಡಿ ನಮನ’ ಕಾರ್ಯಕ್ರಮ ಸೋಮವಾರ ಮೈಸೂರಿನ ಅಗ್ರಹಾರದ ಅಕ್ಕನ ಬಳಗ ಶಾಲೆಯಲ್ಲಿ ನಡೆಯಿತು. ಕೆಎಂಪಿಕೆ ಟ್ರಸ್ಟ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ಎನ್.ವ್ಯಾಸರಾವ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೈ.ಡಿ.ರಾಜಣ್ಣ, ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿ ಗುರ್ತಿಸಿಕೊಳ್ಳಲು ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಎಂ.ಎನ್.ವ್ಯಾಸರಾವ್ ರಚಿಸಿದ `ಸೂರ್ಯಂಗು, ಚಂದ್ರಂಗೂ ಬಂದಾರೆ ಮುನಿಸು.. ಅರಮನೇಲಿ ಏನೈತೆ ಸೊಗಸು…’ ಗೀತೆ…
ನಿಷೇಧದ ನಡುವೆಯೂ ತ್ಯಾಜ್ಯ ಸೇರುತ್ತಿರುವ ಪ್ಲಾಸ್ಟಿಕ್ ವಸ್ತುಗಳು
July 31, 2018ಕಲ್ಯಾಣ ಮಂಟಪಗಳಲ್ಲಿ ಪ್ಲಾಸ್ಟಿಕ್ ಹಾಳೆ, ಪ್ಲೇಟ್, ಚಮಚ, ಬಾಟಲಿಗಳ ಬಳಕೆ ನಿಂತಿಲ್ಲ – ರಾಜಕುಮಾರ್ ಭಾವಸಾರ್ ಮೈಸೂರು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟಿಕ್ ವಸ್ತುಗಳ ನಿಷೇಧವಿದ್ದರೂ ಮೈಸೂರಿನ ಬಹುತೇಕ ಕಲ್ಯಾಣ ಮಂಟಪ, ಛತ್ರಗಳಲ್ಲಿ ಪ್ಲಾಸ್ಟಿಕ್ ಲೋಟ, ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆ, ಪ್ಲೇಟ್ ಮತ್ತು ಚಮಚಗಳ ಬಳಕೆ ನಿರಾಂತಕವಾಗಿ ನಡೆದಿದೆ. ಪರಿಸರಕ್ಕೆ ಮಾರಕವಾಗುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಭಿತ್ತಿಪತ್ರ, ತೋರಣ, ಫ್ಲೆಕ್ಸ್, ಬಾವುಟ, ತಟ್ಟೆ, ಲೋಟ, ಚಮಚ, ಸ್ಟ್ರಾ ಕೊಳವೆ, ಊಟದ ಮೇಜಿನ ಮೇಲೆ ಹರಡುವ…
ಭಾರತದ ಅರ್ಥ ವ್ಯವಸ್ಥೆ ವಿಚಾರದಲ್ಲಿ ಅನ್ಯ ದೇಶೀಯ ವ್ಯವಸ್ಥೆ ಹೋಲಿಕೆ ಸಮಂಜಸವಲ್ಲ: ಆರ್ಥಿಕ ಚಿಂತಕ ಡಾ. ಸಿ.ಕೆ. ರೇಣುಕಾರ್ಯ ಅಭಿಮತ
July 31, 2018ಮೈಸೂರು: ಭಾರತದ ಆರ್ಥಿಕ ಸ್ಥಿತಿಗತಿ ವಿಶ್ಲೇಷಿಸಿ ಅರ್ಥೈಸಿಕೊಳ್ಳಲು ಅನ್ಯ ದೇಶೀಯ ಆರ್ಥಿಕ ಸಿದ್ಧಾಂತಗಳು ಹೆಚ್ಚು ಪ್ರಯೋಜನಕ್ಕೆ ಬಾರದು. ಈ ಹಿನ್ನೆಲೆಯಲ್ಲಿ ದೇಶದ ಅರ್ಥ ವ್ಯವಸ್ಥೆಗೆ ಅನುಗುಣವಾಗಿ ನಮ್ಮದೇ ಆರ್ಥಿಕ ಸಿದ್ಧಾಂತಗಳನ್ನು ಸಿದ್ಧಪಡಿಸಬೇಕಿದೆ ಎಂದು ಆರ್ಥಿಕ ಚಿಂತಕರೂ ಆದ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ ಅಭಿಪ್ರಾಯಪಟ್ಟರು. ಪದವಿ ಪೂರ್ವ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕರ ಕಚೇರಿ ಜಂಟಿ ಆಶ್ರಯದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಅರ್ಥಶಾಸ್ತ್ರ ಉಪನ್ಯಾಸಕರಿಗೆ…
ಗಂಗೋತ್ರಿ ಕಾಲೇಜಿನಲ್ಲಿ ಯೋಗ-ಪ್ರೇರಣ ಕಾರ್ಯಕ್ರಮ
July 31, 2018ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಪ್ರಯುಕ್ತ ವಿದ್ಯಾರ್ಥಿಗಳ ಯಶಸ್ಸಿಗಾಗಿ ಯೋಗ-ಪ್ರೇರಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರಿನ ಶ್ರೀ ವೇದವ್ಯಾಸ ಯೋಗ ಫೌಂಡೇಷನ್ ಸಂಸ್ಥಾಪಕ ಡಾ.ಕೆ.ರಾಘವೇಂದ್ರ ಆರ್.ಪೈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ ದಿವಸದ ಮಹತ್ವ ತಿಳಿಸಿ, ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರ ಸಾಧನೆ ಬಗ್ಗೆ ವಿವರಿಸಿದರು. ಸ್ವಾಮಿ ಜಗದಾತ್ಮಾನಂದರ ‘ಬದುಕಲು ಕಲಿಯಿರಿ’ ಪುಸ್ತಕ ಕುರಿತು ವಿವರಿಸಿದರು. ಮಕ್ಕಳಿಗೆ…
ಬಿಜೆಪಿ ಸಾಧನೆ ಕಿರುಹೊತ್ತಿಗೆ ವಿವಿಧ ಕ್ಷೇತ್ರದ ಗಣ್ಯರಿಗೆ ವಿತರಣೆ
July 31, 2018ಹೆಚ್.ಡಿ.ಕೋಟೆ: ಕೇಂದ್ರ ಸರ್ಕಾರದ ಸಾಧನೆಗಳ ಕಿರು ಹೊತ್ತಿಗೆ ಯನ್ನು ತಾಲೂಕು ಬಿಜೆಪಿ ಘಟಕದಿಂದ ವಿವಿಧ ಕ್ಷೇತ್ರದ ಗಣ್ಯರಿಗೆ ನೀಡಲಾಯಿತು. ತಾಲೂಕು ಬಿಜೆಪಿ ಘಟಕದಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 4 ವರ್ಷಗಳ ಸಾಧನೆ ವುಳ್ಳ ಪುಸ್ತಕವನ್ನು ಪಡುವಲ ವಿರಕ್ತ ಮಠದ ಸ್ವಾಮೀಜಿ ಮಹದೇವಸ್ವಾಮಿಗಳಿಗೆ ನೀಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭ ದಲ್ಲಿ ದಡದಹಳ್ಳಿ ಚನ್ನಬಸವಸ್ವಾಮಿಗಳು, ಷಡಕ್ಷರಸ್ವಾಮಿ, ಪ್ರಗತಿಪರ ರೈತ ಮಲಾರ ಪುಟ್ಟಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ…
ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಮಾಜಿ ಅಂಗರಕ್ಷಕ ನಂಜನಗೂಡಿನ ಮೇಜರ್ ಸುಧೀರ್ ನಿಧನ
July 31, 2018ನಂಜನಗೂಡು: ದೇಶದ ಪ್ರದಾನ ಮಂತ್ರಿ ನರೇಂದ್ರಮೋದಿಯವರ ಅಂಗರಕ್ಷಕರಾಗಿ 2015ರಲ್ಲಿ ಕಾರ್ಯ ನಿರ್ವ ಹಿಸುತ್ತಿದ್ದ ಮೇಜರ್ ಸುಧೀರ್ ಅನಾರೋಗ್ಯದ ಕಾರಣ ಇಂದು ಮುಂಜಾನೆ 8-30 ಗಂಟೆಗೆ ಸೇಲಂನ ವಿನಾಯಕ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೂಲತಃ ನಂಜನಗೂಡಿನವರಾದ ಇವರು ನೀಲಕಂಠನಗರದ ನಿವಾಸಿ ವಿಶ್ವನಾಥ ನಾಯರ್ ಅವರ ಪುತ್ರರಾಗಿ ದ್ದಾರೆ. 1980ರಿಂದ 87ರವರೆಗೂ ನಂಜನಗೂಡಿನ ಕಾರ್ಮೆಲ್ ಶಾಲೆ ಹಾಗೂ 88 ರಿಂದ 92ರವರೆಗೂ ನಂಜನ ಗೂಡಿನ ಸರ್ಕಾರಿ ಜೂನಿಯರ್ ಕಾಲೇಜಿ ನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಉತ್ತಮ ಕ್ರೀಡಾಪಟುವಾಗಿದ್ದ ಇವರು ಕ್ರೀಡಾ ಕೋಟಾದಡಿಯಲ್ಲಿ…
ಆಶ್ರಯ ಮನೆ ಮಂಜೂರಾತಿಗೆ ಯಾರೂ ಕೂಡ ಹಣ ನೀಡಬೇಡಿ: ಶಾಸಕ ಡಾ. ಎಸ್.ಯತೀಂದ್ರ ಸೂಚನೆ
July 31, 2018ತಾಂಡವಪುರ: ಸರ್ಕಾರ ದಿಂದ ನೀಡುವ ಆಶ್ರಯ ಮನೆ ಮಂಜೂ ರಾತಿಗೆ ಯಾರೂ ಕೂಡ ಹಣ ನೀಡಬೇಡಿ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಎಸ್.ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು. ಅವರು ಇಂದು ನಂಜನಗೂಡು ತಾಲೂಕು ವರುಣಾ ಕ್ಷೇತ್ರಕ್ಕೆ ಸೇರುವ ಕೋಣನೂರು ಪಾಳ್ಯ ಗ್ರಾಮದಲ್ಲಿ ಜನ ಸಂಪರ್ಕ ಹಾಗೂ ಕುಂದು ಕೊರತೆ ಸಭೆಯಲ್ಲಿ ಮಾತನಾಡುತ್ತಾ, ವರುಣಾ ಕ್ಷೇತ್ರಕ್ಕೆ ಸೇರುವ ಹಲವಾರು ಗ್ರಾ.ಪಂಗಳಲ್ಲಿ ಆಶ್ರಯ ಮನೆ ಮಂಜೂರಾತಿಗಾಗಿ ಜನರು 20ರಿಂದ 25 ಸಾವಿರ ರೂ.ಗಳನ್ನು ನೀಡಬೇಕೆಂದು ತಮ್ಮ ಬಳಿ ಅಳಲನ್ನು ತೋಡಿಕೊಂಡಿದ್ದಾರೆ. ಆದರೆ…