ನಂಜನಗೂಡು: 23 ವರ್ಷ ಗಳಿಂದ ಎ.ಸಿ.ಕೋರ್ಟ್ ಇಲ್ಲದೇ ಇಲ್ಲಿನ ವಕೀಲರು ಕಕ್ಷಿದಾರರಿಗೆ ನ್ಯಾಯ ದೊರಕಿಸಿ ಕೊಡಲು ಮೈಸೂರಿನ ಎ.ಸಿ.ಕೋರ್ಟ್‍ಗೆ ಅಲೆಯ ಬೇಕಾಗಿತ್ತು. ಮೈಸೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಮೇಲ್ಮನವಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಇಂದು ನಂಜನಗೂಡು ತಾಲೂಕು ವ್ಯಾಪ್ತಿಯ ಪ್ರಕರಣಗಳನ್ನು ಇಲ್ಲಿನ ತಾಲೂಕು ಕಛೇರಿಯ ನ್ಯಾಯಾಲಯ ಸಭಾಂಗಣ ದಲ್ಲಿ ಕಲಾಪಗಳನ್ನು ನಡೆಸಲು ಇಂದು ಉಪವಿಭಾಗಾಧಿಕಾರಿ ಶಿವೇಗೌಡ ಅಧಿಕೃತ ವಾಗಿ ಚಾಲನೆ ನೀಡುವುದರ ಮೂಲಕ ಎ.ಸಿ.ಕೋರ್ಟ್ ಉದ್ಘಾಟಿಸಿದರು. ಸಮಾರಂಭದಲ್ಲಿ ಉಪವಿಭಾಗಾದಿಕಾರಿ ಶಿವೇಗೌಡ ಮಾತನಾಡಿ, ನಂಜನಗೂಡು ವಕೀಲರ…
ನಿಲುವಾಗಿಲು ಏತ ನೀರಾವರಿ ಯಂತ್ರದ ಟ್ರಾನ್ಸ್‍ಫಾರ್ಮರ್‍ಗೆ ಶಾಸಕ ವಿಶ್ವನಾಥ್ ಚಾಲನೆ
July 31, 2018ಹುಣಸೂರು: ತಾಲೂಕಿನಲ್ಲಿರುವ ನೀರಿನ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿ ಜನ, ಜಾನುವಾರುಗಳಿಗೆ ಉಪಯೋಗವಾಗು ವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಶಾಸಕ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ. ತಾಲೂಕಿನ ನಿಲುವಾಗಿಲು ಗ್ರಾಮದ ಬಳಿ ಲಕ್ಷ್ಮಣತೀರ್ಥ ನದಿಗೆ ಅಳವಡಿಸಿರುವ ಚಿಲ್ಕುಂದ ಸೀರಿಸ್ ಏತ ನೀರಾವರಿ ಯಂತ್ರಕ್ಕೆ ನೂತನವಾಗಿ ಅಳವಡಿಸಿರುವ ಟ್ರಾನ್ಸ್‍ಫಾರ್ಮರ್‍ಗೆ ಚಾಲನೆ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, 100 ಹೆಚ್‍ಪಿ ಸಾಮಥ್ರ್ಯದ ಎರಡು ಮೋಟಾರ್‍ಗಳಿಂದ ಚಿಲ್ಕುಂದ, ಕಳಬೆಟ್ಟ, ನಾಗಮಂಗಲ ಹಾಗೂ ಹೊಸಕೆರೆಗಳಿಗೆ ನೀರು ತುಂಬಿಸುವ ಕೆಲಸ ನಡೆಯುತ್ತಿದ್ದು, ಇದರಿಂದ ನೀರಿನ ಸೆಲೆ…
ತಂಬಾಕು ಬ್ಯಾರನ್‍ಗೆ ಬೆಂಕಿ ಲಕ್ಷಾಂತರ ರೂ. ಹಾನಿ : ಓರ್ವನಿಗೆ ಗಾಯ
July 31, 2018ಪಿರಿಯಾಪಟ್ಟಣ: ತಂಬಾಕು ಸಂಸ್ಕರಣೆ ಮಾಡುವಾಗ ಬ್ಯಾರನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ಮೌಲ್ಯದ ತಂಬಾಕು ಭಸ್ಮವಾಗಿದ್ದು, ರೈತನೊಬ್ಬ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ತಾಲೂಕಿನ ನಾಗನಹಳ್ಳಿ ಪಾಳ್ಯದ ರೈತ ವೆಂಕಟೇಶ ಬೋವಿ ಎಂಬುವರ ಬ್ಯಾರನ್ ನಲ್ಲಿ ತಂಬಾಕು ಹದ ಮಾಡುವ ಸಮಯದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ಹದ ಮಾಡುತ್ತಿದ್ದ ತಂಬಾಕು ಮಾತ್ರ ವಲ್ಲದೆ ಈ ಹಿಂದೆ ಹದ ಮಾಡಿ ಸಂಗ್ರಹಿ ಸಿದ್ದ ಒಂದೂವರೆ ಲಕ್ಷ ರೂ.ಮೌಲ್ಯದ ತಂಬಾಕು, ಬ್ಯಾರನ್, ಇನ್ನಿತರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ….
ಆನೆ ಚೌಕೂರು ಅರಣ್ಯದಲ್ಲಿ ಶ್ರೀಗಂಧ ಕಳವಿಗೆತ್ನಿಸಿದ ಮೂವರ ಬಂಧನ
July 31, 2018ಪಿರಿಯಾಪಟ್ಟಣ: ಆನೆಚೌಕೂರು ಅರಣ್ಯ ಪ್ರದೇಶದಲ್ಲಿ ಶ್ರೀಗಂಧದ ಮರಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖಾ ಸಿಬ್ಬಂದಿ ಮಾಲು ಸಮೇತ ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. ಹುಣಸೂರು ತಾಲೂಕಿನ ಬೀರತಮ್ಮನಹಳ್ಳಿ ಗಿರಿಜನ ಹಾಡಿಯ ಸ್ವಾಮಿ, ನಾಗ, ಮತ್ತು ಮನುಗನಹಳ್ಳಿ ಗ್ರಾಮದ ಮಂಜು ಬಂಧಿತ ರಾಗಿದ್ದು, ತಾಲೂಕಿನ ಆನೆಚೌಕೂರು ಅರಣ್ಯ ವಲಯದಲ್ಲಿ ಭಾನುವಾರ ಆನೆಚೌಕೂರು ಅರಣ್ಯ ವಲಯ ಅಂಕಣ 5 ರ ಕುದುರೆ ಬಿದ್ದಹಳ್ಳಿ ಬಳಿಯ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಸಾಗಾಣೆ ಮಾಡಲು ಯತ್ನಿಸುತ್ತಿದ್ದರು ಎನ್ನಲಾಗಿದೆ. ಈ…
ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಚಿಂತನೆ !
July 30, 2018ಬೃಂದಾವನದ ವಿನ್ಯಾಸಗಾರ ಜರ್ಮನಿಯ ತೋಟಗಾರಿಕಾ ಪಿತಾಮಹ ಜಿ.ಹೆಚ್.ಕ್ರುಂಬೀಗೆಲ್‍ರವರ ಮರಿಮೊಮ್ಮಗಳಿಂದ ವಿರೋಧ ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‍ನ ರೂವಾರಿ ಮೈಸೂರು: ಜರ್ಮನಿಯ ತೋಟಗಾರಿಕಾ ಪಿತಾಮಹರಾಗಿದ್ದ ದಿ. ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರ ಮೊಮ್ಮಗಳಾದ ಅಲಿಯಾ ಫೆಲ್ಲ್ ಗಾರ್ಡಿನರ್ ಕ್ರುಂಬಿಗೆಲ್‍ರವರು ಬೃಂದಾವನ ಉದ್ಯಾನವನವನ್ನು ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರವರು ಬೆಂಗಳೂರಿನ laalbagh botanical gardens ನಲ್ಲಿ ವೈವಿದ್ಯಮಯ ಗಿಡಗಳನ್ನು ನೆಟ್ಟು ಅದರ ಶ್ರೀಮಂತ ಹೆಸರಿನ ಹೊದಿಕೆಯ ರೂವಾರಿಯಾಗಿದ್ದಾರೆ. ಅಂದಿನ ಮೈಸೂರು ಮಹಾರಾಜರಾಗಿದ್ದ…
ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ
July 30, 2018ಮಾನ್ಯ ಮುಖ್ಯಮಂತ್ರಿಯವರೇ, ಸುಪ್ರಸಿದ್ಧ ಬೃಂದಾವನ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ವರದಿಯನ್ನು ನಾನು ಇಂದು ಓದಿದಾಗ ನನಗೆ ಸಬೇದಾಶ್ಚರ್ಯವಾಯಿತು. ಅಂದಿನ ಮೈಸೂರು ಮಹರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಜನರ ಅನುಕೂಲಕ್ಕಾಗಿ ಕಾವೇರಿ ನದಿಗೆ ಒಂದು ಅಣೆಕಟ್ಟು ಕಟ್ಟುವ ಕನಸು ಹೊಂದಿದ್ದರು. ಅದಕ್ಕಾಗಿ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಮುಖ್ಯ ಇಂಜಿನಿಯರ್ ಆಗಿ ನೇಮಿಸಿದರು. ಅಣೆಕಟ್ಟಿನ ಒಂದು ಹಂತದ ಕೆಳಗೆ ಸುಂದರವಾದ ಬೃಂದಾವನ ಉದ್ಯಾನವನವನ್ನು ನಿರ್ಮಿಸಲಾಯಿತು ಮತ್ತು ಅದನ್ನು ಆಗ ಕೃಷ್ಣರಾಜ ಟೆರೆಸ್ ಗಾರ್ಡನ್…
ಮೈಸೂರಿನಿಂದ ಬೆಂಗಳೂರಿಗೆ ಹಾರಿತು `ಜೀವಂತ’ ಹೃದಯ
July 30, 2018ಗ್ರೀನ್ ಕಾರಿಡಾರ್ ಮೂಲಕ ಅಂಗಾಂಗ ರವಾನೆ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯಿಂದ 6 ಜನರಿಗೆ ಜೀವದಾನ ಗಂಟೆಗೆ 127 ಕಿ.ಮೀ. ವೇಗದಲ್ಲಿ ಆಂಬುಲೆನ್ಸ್‍ನಲ್ಲಿ ಬೆಂಗಳೂರು ತಲುಪಿದ ಅಂಗಾಂಗ ಮೈಸೂರು: ಕಟ್ಟಡವೊಂದರಲ್ಲಿ ಕೆಲಸ ಮಾಡುವ ವೇಳೆ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರ ಅಂಗಾಂಗ ದಾನ ಮಾಡುವ ಮೂಲಕ ಅವರ ಪೋಷಕರು ಮಾನವೀಯತೆ ಮೆರೆದರೆ, ವೈದ್ಯರು ಮತ್ತು ಪೊಲೀಸರು ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ಮಾಡಿ ಬೇರ್ಪಡಿಸಿದ ಅಂಗಾಂಗಗಳನ್ನು ಗ್ರೀನ್ ಕಾರಿಡಾರ್ ಮೂಲಕ ಬೆಂಗಳೂರಿಗೆ ನಿಗದಿತ ಸಮಯಕ್ಕೂ ಮುನ್ನ…
ಮಹಾಮಾರಿ ರೇಬಿಸ್‍ನಿಂದ ಸಾವು: ಕರ್ನಾಟಕಕ್ಕೆ 2ನೇ ಸ್ಥಾನ
July 30, 2018ಬೆಂಗಳೂರು: ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬಿಸ್ ಸೋಂಕು ಮಾರಣಾಂತಿಕವಾಗಿದ್ದು, ರಾಜ್ಯ ಸರ್ಕಾರ ಬೀದಿನಾಯಿಗಳಿಗೆ ಅತ್ಯುತ್ತಮ ರೇಬಿಸ್ ಲಸಿಕೆಗಳನ್ನು ಹಾಕುತ್ತಿದ್ದರೂ ರೋಗಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಏರುತ್ತಲೇ ಇದೆ. ರಾಷ್ಟ್ರೀಯ ಆರೋಗ್ಯ ಪ್ರೊಫೈಲ್ 2018 ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರಲ್ಲಿರುವ ಮಾಹಿತಿಗಳ ಪ್ರಕಾರ ದೇಶದಲ್ಲಿಯೇ ರೇಬಿಸ್‍ಗೆ ತುತ್ತಾಗಿರುವವರ ಸಂಖ್ಯೆ ಕರ್ನಾಟಕದಲ್ಲಿಯೇ ಹೆಚ್ಚು ಎಂಬುದಾಗಿ ತಿಳಿದುಬಂದಿದೆ. ರೇಬಿಸ್ ರೋಗಕ್ಕೆ ಸಂಬಂಧಿಸಿದ ಸಾವುಗಳಲ್ಲಿ ಕಳೆದ ವರ್ಷ ಕರ್ನಾಟಕ ರಾಜ್ಯ 2ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ರಾಜ್ಯದಲ್ಲಿ 97…
72.5 ಲಕ್ಷ ವೆಚ್ಚದ 5 ಕಾಮಗಾರಿಗೆ ಶಾಸಕ ರಾಮದಾಸ್ ಚಾಲನೆ
July 30, 2018ಮೈಸೂರು: ಮೈಸೂರಿನ ವಾರ್ಡ್ ನಂ.64ರಲ್ಲಿ ಸುಮಾರು 72.5 ಲಕ್ಷ ರೂ.ವೆಚ್ಚದ 5 ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ. ರಾಮದಾಸ್ ಭಾನುವಾರ ಚಾಲನೆ ನೀಡಿದರು. ಈ ವಾರ್ಡಿನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಸಾರ್ವಜನಿಕರು ತುರ್ತು ಆಗಬೇಕಿದ್ದ ಅಭಿವೃದ್ಧಿ ಕೆಲಸಗಳನ್ನು ಮಾಡಿಕೊಡಬೇಕೆಂದು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ವಿವೇಕಾನಂದ ವೃತ್ತದ ಬಸ್ ನಿಲ್ದಾಣದ ಸಮೀಪ 10 ಲಕ್ಷ ರೂ. ವೆಚ್ಚದ ಸಾರ್ವಜನಿಕರ ಶೌಚಾಲಯ ನಿರ್ಮಾಣ, 15 ಲಕ್ಷ ವೆಚ್ಚದಲ್ಲಿ ಶನಿದೇವರ ದೇವ ಸ್ಥಾನದಿಂದ ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆ ಅಭಿವೃದ್ಧಿ, 27.5 ಲಕ್ಷ…
ಸ್ವಾರ್ಥ ರಾಜಕಾರಣಿಗಳಿಂದ ರಾಜ್ಯ ಪ್ರತ್ಯೇಕತೆಯ ಕೂಗು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ
July 30, 2018ಮೈಸೂರು: ಸ್ವಾರ್ಥ ರಾಜಕಾರಣ ಮಾಡುತ್ತಿರುವವರು ರಾಜ್ಯವನ್ನು ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸುತ್ತಿದ್ದು, ವಾಸ್ತವವಾಗಿ ಇರುವುದೊಂದೇ ಕರ್ನಾಟಕ, ಅದು ಅಖಂಡ ಕರ್ನಾಟಕ ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಉತ್ತರ ಕರ್ನಾಟಕದ ಬಾದಾಮಿ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದು, ವಾಸ್ತವವಾಗಿ ಉತ್ತರ ಮತ್ತು ದಕ್ಷಿಣ ಕರ್ನಾಟಕ ಎಂದು ವಿಂಗಡಿಸುವುದೇ ತಪ್ಪು. ನಮ್ಮದು ಅಖಂಡ ಕರ್ನಾಟಕ. ಇದೀಗ ಉತ್ತರ ಕರ್ನಾಟಕ ಎಂದು ಪ್ರತ್ಯೇಕ ರಾಜ್ಯದ…