ಮೈಸೂರು: ಮೈಸೂರಿನ ರೈಲ್ವೆ ಮೈದಾನದಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರ ವತಿಯಿಂದ ನಡೆದ ರಾಜ್ಯಮಟ್ಟದ ‘ಶ್ರೀ ಮಾಯಕಾರ ಕಪ್’ ಕ್ರಿಕೆಟ್ ಪಂದ್ಯಾವಳಿಯ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಭಾನು ವಾರ ಏರ್ಪಡಿಸಲಾಗಿತ್ತು. ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ವಿಜೇತ ಬೆಂಗಳೂರಿನ ಸಮರ್ಥ ಕ್ರಿಕೆಟರ್ಸ್ ತಂಡಕ್ಕೆ 10,001.ರೂ ನಗದು ಮತ್ತು ಟ್ರೋಫಿ ಹಾಗೂ ರನ್ನರ್‍ಅಪ್ ಮೈಸೂರಿನ ಪಾಠಶಾಲೆ ಸೀನಿಯರ್ಸ್ ತಂಡಕ್ಕೆ 5000.ರೂ ನಗದು ಮತ್ತು ಟ್ರೋಫಿಯನ್ನು ಶಾಸಕ ಎಸ್.ಎ. ರಾಮದಾಸ್ ವಿತರಿಸಿದರು. ನಂತರ ಮಾತನಾಡಿದ ಅವರು, ಕ್ರಿಕೆಟ್ ಕೆಲವೇ…
ಮೈಸೂರಲ್ಲಿ ಟಿ.ಪಿ.ಕೈಲಾಸಂ ನೆನಪು ಕಾರ್ಯಕ್ರಮ
July 30, 2018ಮೈಸೂರು: ನಗೆಕಾರ, ವಿಡಂಬನಕಾರ, ಪ್ರಚಂಡ ಪ್ರತಿಭಾವಂತ, ವಿಶೇಷ ಮಾತುಗಾರ, ಪ್ರಾಸಪ್ರಿಯ, ಅಪ ರೂಪದ ವ್ಯಕ್ತಿ ಹಾಗೆಯೇ ಸ್ವಲ್ಪ ಮುಂಗೋಪಿ ನಮ್ಮ ಕೈಲಾಸಂ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ ವಿಶ್ರಾಂತ ಜಂಟಿ ನಿರ್ದೇಶಕ ಹಾಗೂ ರಂಗ ಚಿಂತಕ ಡಾ. ಹೆಚ್.ಎ. ಪಾಶ್ರ್ವನಾಥ್ ಅಭಿಪ್ರಾಯಿಸಿದರು. ನಗರದ ಅರಮನೆ ಉತ್ತರದ್ವಾರದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆ ಸಂಯುಕ್ತಾ ಶ್ರಯದಲ್ಲಿ ನಡೆದ ರಂಗ ಸಂಜೆ ‘ಕನ್ನಡ ಪ್ರಹಸನ ಪಿತಾಮಹ ಟಿ.ಪಿ.ಕೈಲಾಸಂ’…
ವಿದೇಶಿ ವಿದ್ಯಾರ್ಥಿ ಬಂಧನ; ಮಾದಕ ವಸ್ತು ವಶ
July 30, 2018ಮೈಸೂರು: ಮಾದಕ ವಸ್ತು ಹೊಂದಿದ್ದ ವಿದೇಶಿ ಪ್ರಜೆಯೊಬ್ಬನನ್ನು ಮೈಸೂರಿನ ಲಷ್ಕರ್ ಠಾಣೆಯ ಪೊಲೀಸರು ಬಂಧಿಸಿ, 7 ಕೆಜಿ 592 ಗ್ರಾಂ ಖಾಟಾ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಯೆಮನ್ ದೇಶದ ಪ್ರಜೆ ಹಮ್ಜಾ ಅಬ್ದೊ ಖಾಸಿಂ ಅಬ್ದುಲ್ಲಾ (23) ಎಂಬಾತನೇ ಬಂಧಿತನಾಗಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೈಸೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿಯಾದ ಈತ, ಶನಿವಾರ ಮೈಸೂರಿನ ಕೆಎಸ್ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಪೆಟ್ರೋಲ್ ಬಂಕ್ ಬಳಿಯ ಪಾರ್ಸಲ್ ಕಚೇರಿಯಲ್ಲಿ ಗಲಾಟೆ ಮಾಡುತ್ತಿದ್ದ ವೇಳೆ ಪೊಲೀಸರ ಕೈಗೆ…
ಹುಲಿ ಸಂತತಿ ರಕ್ಷಿಸಿದರೆ ಇಡೀ ಪರಿಸರ ಕಾಪಾಡಿದಂತೆ
July 30, 2018ಮೈಸೂರು: ಅಳಿವಿನಂಚಿನಲ್ಲಿರುವ ಹುಲಿ ಸಂತತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದಕ್ಕೆ ಎಲ್ಲರೂ ಕೈಜೋಡಿಸಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅರಣ್ಯ ಇಲಾಖೆ ನಿವೃತ್ತ ಹಿರಿಯ ಅಧಿಕಾರಿ ಪಿ.ಎಸ್.ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಮೃಗಾಲಯದ ಆವರಣದಲ್ಲಿರುವ ಆ್ಯಂಪಿಥೇಟರ್‍ನಲ್ಲಿ ಭಾನುವಾರ ಆಯೋಜಿಸಲಾಗಿದ್ದ `ವಿಶ್ವ ಹುಲಿ ದಿನ’ದ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿಶೇಷ ಉಪನ್ಯಾಸ ನೀಡಿದ ಅವರು, ಪರಿಸರ ವ್ಯವಸ್ಥೆಯಲ್ಲಿ ಹುಲಿಗಳು ಅಪರೂಪದ ಪ್ರಾಣಿಗಳಾಗಿದ್ದು, ಮುಂಜೂಣಿ ಸ್ಥಾನದಲ್ಲಿವೆ. ಆದರೆ ಬೇಟೆಗಾರರ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಹುಲಿಗಳ ಸಂತತಿ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಪ್ರಸ್ತುತವಿರುವ…
ತಿರುಗಾಟದಿಂದ ಲೋಕಾನುಭವ ಹೆಚ್ಚಳ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಅಭಿಮತ
July 30, 2018ಮೈಸೂರು: ಹೆಚ್ಚು ತಿರುಗಾಡಿದಷ್ಟು ಲೋಕಾನುಭವ ಹೆಚ್ಚುತ್ತದೆ. ಹಾಗಾಗಿ ಸಾಧ್ಯವಿದ್ದಷ್ಟು ಲೋಕ ಸುತ್ತಿ ಅನುಭವ ಪಡೆದುಕೊಳ್ಳಿ ಎಂದು ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲಶಾಸ್ತ್ರಿ ಸಲಹೆ ನೀಡಿದರು. ಮೈಸೂರಿನ ಕಲಾಮಂದಿರ ಮನೆಯಂಗಳದಲ್ಲಿ ಗಾಯತ್ರಿ ಎಂಟರ್ ಪ್ರೈಸಸ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕಲಾವಿದ ಎಸ್.ಎಂ.ಜಂಬುಕೇಶ್ವರ್ ಅವರ `ಅಮೆರಿಕದ ಅಂತರಂಗ’ ಪ್ರವಾಸ ಕಥನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶ ಸುತ್ತು, ಕೋಶ ಓದು ಎಂಬ ಗಾದೆ ಮಾತನ್ನು ಉಲ್ಲೇಖಿಸಿದ ಅವರು, ನೀವು ಸುತ್ತಿದಷ್ಟು ಲೋಕದ ಅನುಭವ ಹೆಚ್ಚುತ್ತದೆ. ಅದನ್ನು ಜಂಬುಕೇಶ್ವರ್ ಅವರು ತಮ್ಮ ಪುಸ್ತಕದಲ್ಲಿ…
ನಾಳೆಯಿಂದ ಚಾಮುಂಡೇಶ್ವರಿ ಪೂಜಾ ಮಹೋತ್ಸವ, ಆ.3ರಂದು ಚಂಡಿಕಾ ಹೋಮ
July 30, 2018ಮೈಸೂರು: ಮೈಸೂರಿನ ಕಬೀರ್ ರಸ್ತೆಯಲ್ಲಿ ಭಾವಸಾರ ಕ್ಷತ್ರಿಯ ಚಾಮುಂಡೇಶ್ವರಿ ಯುವಕರ ಸೇವಾ ಸಮಿತಿ ವತಿಯಿಂದ ಜು.31ರಿಂದ ಆ.4ರವರೆಗೆ 35ನೇ ವರ್ಷದ ಚಾಮುಂಡೇಶ್ವರಿ ಪೂಜಾ ಮಹೋತ್ಸವ ನಡೆಯಲಿದೆ. ಜು.31ರಂದು ಬೆಳಿಗ್ಗೆ 10ಕ್ಕೆ ಚಾಮುಂಡೇಶ್ವರಿ ಅಮ್ಮನವರ ಪ್ರತಿಷ್ಠಾಪನೆ, ಆ.1ರಂದು ಸಂಜೆ 4.30ಕ್ಕೆ ಮಹಿಳೆಯರಿಗೆ ರಂಗೋಲೆ ಸ್ಪರ್ಧೆ, ಆ.2ರಂದು ವಿಶೇಷ ಪೂಜೆ, ಹೋಮ, ಆ.3ರಂದು ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಅಂಗವಾಗಿ ಬೆಳಿಗ್ಗೆ 7ಕ್ಕೆ ಚಂಡಿಕಾ ಹೋಮ, ಮಧ್ಯಾಹ್ನ ಪೂರ್ಣಾಹುತಿ, ಪ್ರಸಾದ ವಿನಿಯೋಗ ಹಾಗೂ ಸಂಜೆ 7ಕ್ಕೆ ಸಂಗೀತ ರಸಮಂಜರಿ ನಡೆಯಲಿದೆ. ಆ.4ರಂದು…
ಪ್ರೊ.ಬಿ.ಜೆ.ರಂಗನಾಥ್‍ರಿಗೆ ಗುರು ವಂದನೆ
July 30, 2018ಮೈಸೂರು: ಕುವೆಂಪುನಗರದ ಗಾನಭಾರತಿ ಸಭಾಂಗಣದಲ್ಲಿ ಭಾನುವಾರ ರಾವ್ಸ್ ಕನ್‍ಸ್ಟ್ರಕ್ಷನ್ಸ್ ಮತ್ತು ಸಂಸ್ಕಾರ ಭಾರತಿ ಆಶ್ರಯದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಐಐಟಿ ಮದ್ರಾಸ್, ಮೈಸೂರಿನ ಎನ್‍ಐಇ ವಿದ್ಯಾವಿಕಾಸ್ ಸೇರಿದಂತೆ ಪ್ರತಿಷ್ಠಿತ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸಿರುವ ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಬಿ.ಜೆ.ರಂಗನಾಥ್ ಹಾಗೂ ಶಿಕ್ಷಣ ಕ್ಷೇತ್ರದ ವಿವಿಧ ವಿಷಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 15ಕ್ಕೂ ಖ್ಯಾತ ಪ್ರಾಧ್ಯಾಪಕರನ್ನು ಡಾ.ಡಿ.ವಿ.ಪ್ರಹ್ಲಾದ್‍ರಾವ್ ಸನ್ಮಾನಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಪ್ರೊ.ಬಿ.ಜೆ.ರಂಗನಾಥ್, ಸಾತ್ವಿಕ, ಶಾಂತಿ, ಸಂತೋಷದಿಂದ ಜೀವನ ನಡೆಸಲು ಒಳ್ಳೆಯ ಗುರುವಿನ…
ಸಿಎಂ ವಾಸ್ತವವಿದ್ದ ಮೇದರ್ ಬ್ಲಾಕ್ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆ ನಿರ್ಮಿಸಲು ಮನವಿ
July 30, 2018ಮೈಸೂರು: ಹನ್ನೆರಡು ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಭರವಸೆ ನೀಡಿದಂತೆ ಚಾಮರಾಜ ವಿಧಾನಸಭಾ ಕ್ಷೇತ್ರದ ಮೇದರ್ ಬ್ಲಾಕ್ ಮೈಸೂರು ಸಾಮಿಲ್ ಮುಂಭಾಗದಲ್ಲಿ ಕಳೆದ 45 ವರ್ಷಗಳಿಂದ ವಾಸವಿರುವ ಕೊಳಚೆ ಪ್ರದೇಶದ ನಿವಾಸಿಗಳಿಗೆ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಬೇಕೆಂದು ರಾಜ್ಯ ದಲಿತ ವಿಮೋಚನಾ ಸೇನೆ ಮನವಿ ಮಾಡಿದೆ. ಈ ಕುರಿತು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಸೇನೆಯ ವಿಭಾಗೀಯ ಅಧ್ಯಕ್ಷ ಹನುಮಂತಯ್ಯ ಅವರು 2007ರಲ್ಲಿ ತಾವು ಮುಖ್ಯಮಂತ್ರಿ ಆಗಿದ್ದಾಗ, ನಗರದ ವಾರ್ಡ್ 34ರ ವ್ಯಾಪ್ತಿಯಲ್ಲಿ ಲಕ್ಷಮ್ಮ ಎಂಬುವವರ…
ಯಾವುದೇ ಸಮುದಾಯಕ್ಕೆ ಸರ್ಕಾರದ ಸವಲತ್ತು ಕಲ್ಪಿಸಲು ಓಟ್‍ಬ್ಯಾಂಕ್ ರಾಜಕಾರಣ ಸಲ್ಲ: ಶಾಸಕ ಎಲ್.ನಾಗೇಂದ್ರ
July 30, 2018ಮೈಸೂರು: ಸರ್ಕಾರಗಳು ಯಾವುದೇ ಸಮುದಾಯಕ್ಕೆ ಸವಲತ್ತು ಕಲ್ಪಿಸಲು ತಾರತಮ್ಯ, ಓಟ್‍ಬ್ಯಾಂಕ್ ರಾಜಕಾರಣ ಮಾಡಬಾರದು ಎಂದು ಶಾಸಕ ಎಲ್.ನಾಗೇಂದ್ರ ತಿಳಿಸಿದರು. ನಗರದ ಚಂದ್ರಗುಪ್ತ ರಸ್ತೆಯ ಎಂ.ಎಲ್.ಜೈನ್ ಬೋರ್ಡಿಂಗ್ ಹೋಂನ ಎಂ.ಎಲ್.ವರ್ಧಮಾನಯ್ಯ ಸ್ಮಾರಕ ಭವನದಲ್ಲಿ ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟಬಲ್ ಟ್ರಸ್ಟ್ ಭಾನುವಾರ ಆಯೋಜಿಸಿದ್ದ `ಮೈಸೂರು ನಗರದ ಜೈನ್ ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ’ದಲ್ಲಿ ಮಾತನಾಡಿದ ಅವರು, ಜೈನ ಸಮುದಾಯವು ಶಾಂತಿ, ನೆಮ್ಮದಿಯಿಂದ ಯಾರಿಗೂ ತೊಂದರೆಕೊಡದೆ ಸಮಾಜದಲ್ಲಿ ಸೌಹಾರ್ದಯುತ ಜೀವನ ನಡೆಸುತ್ತಿದೆ. ಈ ಸಮುದಾಯಕ್ಕೆ ಸರ್ಕಾರದ ಯೋಜನೆಗಳು, ಸವಲತ್ತುಗಳು…
ಮೈಸೂರು ಗಾಲ್ಫ್ ಕ್ಲಬ್ ಅಧ್ಯಕ್ಷರಾಗಿ ಸಿ.ಎಸ್.ರವಿಶಂಕರ್ ಆಯ್ಕೆ
July 30, 2018ಮೈಸೂರು: ಮೈಸೂರಿನ ಜಯ ಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸಿ.ಎಸ್.ರವಿಶಂಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಲಾವಣೆಯಾದ ಒಟ್ಟು 772 ಮತಗಳ ಪೈಕಿ ರವಿಶಂಕರ್ 331 ಮತ ಪಡೆದು ಜಯಶೀಲರಾದರೆ, ವಿ.ಪ್ರಕಾಶ್ 311 ಮತ್ತು ಡಾ.ಬಿ.ಪ್ರಸನ್ನ ಶಂಕರ್ 130 ಮತ ಪಡೆದರು. ಕ್ಲಬ್‍ನ ಕ್ಯಾಪ್ಟನ್ ಆಗಿ ಡಾ. ವೆಂಕಟೇಶ್ ಜೋಷಿ ಅವರು 473 ಮತ ಪಡೆದು ಆಯ್ಕೆಯಾದರು. ಇವರ ಪ್ರತಿಸ್ಪರ್ಧಿ ಕೆ.ಎಂ.ವೀರ ಮೋಹನ್ 239 ಮತ ಪಡೆದರು. ಕಾರ್ಯದರ್ಶಿ ಸ್ಥಾನಕ್ಕೆ ನಡೆದ…