ಬೈಲಕುಪ್ಪೆ: ಬಿ.ಎಂ. ರಸ್ತೆ ಬದಿಯಲ್ಲಿ ಭಾರೀ ಗಾತ್ರದ ಮರ ವೊಂದನ್ನು ಅರಣ್ಯ ಇಲಾಖೆಯವರು ಗುರುವಾರ ತೆರವುಗೊಳಿಸಿದರು.ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆ ಬದಿಯಲ್ಲಿ ಕೆಲ ತಿಂಗಳಿಂದ ಕಾಡು ಜಾತಿ ಮರವೊಂದು ಅಪಾಯದ ಅಂಚಿನಲ್ಲಿತ್ತು, ಇದರ ಪಕ್ಕದಲ್ಲೇ ವಿದ್ಯುತ್ ತಂತಿ ಹಾದು ಹೋಗಿದ್ದು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿತ್ತು. ಇದನ್ನು ಗಮನಿಸಿದ ಜಿ.ಪಂ ಸದಸ್ಯ ವಿ.ರಾಜೇಂದ್ರ ಮರ ಕಡಿಸುವಂತೆ ಒತ್ತಾಯಿಸಿದ್ದರು. ನಿಯಮಾನುಸಾರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮರವನ್ನು ಹರಾಜು ಮಾಡಲಾಗಿತ್ತು. ಮಳೆ ಕಾರಣ ಒಡ್ಡಿ ಮರವನ್ನು ಕಡಿಯಲು ವಿಳಂಬ…
ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ
July 27, 2018ತಿ.ನರಸೀಪುರ: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ ಹಿನ್ನೆಲೆ ಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಾಯಕ ಶಿವಕುಮಾರ್ ನೇತೃತ್ವದಲ್ಲಿ ಪಟ್ಟಣದ ಟೀಷಾಪ್, ಚಿಲ್ಲರೆ ಅಂಗಡಿ ಹಾಗೂ ಬಾರ್‍ಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಯಿತು. ಪಟ್ಟಣದ ವಿದ್ಯೋದಯ ಕಾಲೇಜು ರಸ್ತೆ ಹಾಗೂ ತಾಲೂಕು ಕಚೇರಿ ರಸ್ತೆ ಯಲ್ಲಿ ಶಾಲಾ ಕಾಲೇಜಿನ 100 ಮೀಟರ್ ಅಂತರ ದೊಳಗೆ ತಂಬಾಕು ಉತ್ಪನ್ನ ಹಾಗೂ ಬೀಡಿ ಸಿಗರೇಟ್ ಮಾರಾಟ ಮಾಡುತ್ತಿದ್ದವರ ಮೇಲೆ ದಿಢೀರ್ ದಾಳಿ ನಡೆಸಿದ ಅಧಿಕಾರಿ ಗಳ…
ಜನತೆ, ಕಾರ್ಯಕರ್ತರಿಗೆ ಚಿರಋಣಿ: ಶಾಸಕ ಹರ್ಷವರ್ಧನ್
July 27, 2018ಮಲ್ಕುಂಡಿ: ಬಿಜೆಪಿ ಗೆಲುವಿಗೆ ಸಹಕರಿಸಿದ ಪಕ್ಷದ ಕಾರ್ಯ ಕರ್ತರು ಹಾಗೂ ಕ್ಷೇತ್ರದ ಜನತೆಗೆ ಸದ ಚಿರಋಣಿಯಾಗಿದ್ದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಹರ್ಷವರ್ಧನ್ ತಿಳಿಸಿದರು. ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರಿಗೆ ಕೃತಜ್ಞತೆ ಹಾಗೂ ಗ್ರಾಮದ ನಾಯಕರ ಬೀದಿಯಲ್ಲಿ 20 ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮಾಜಿ ಸಚಿವ ಶ್ರೀನಿವಾಸ್‍ಪ್ರಸಾದ್ ಅವರ ಹಾದಿಯಲ್ಲಿ ನಡೆದು ಅದೇ ರೀತಿಯಾಗಿ ಜನರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ….
ಸಾಲಿಗ್ರಾಮ ಕೆರೆಗೆ ಜಿಪಂ ಸದಸ್ಯ ಸಾರಾ ನಂದೀಶ್ ಬಾಗಿನ
July 27, 2018ಭೇರ್ಯ: ಹಾರಂಗಿ ನಾಲಾ ಆಧುನೀಕರಣದಿಂದ ಈ ಭಾಗದ ರೈತರು ಒಂದು ಬೆಳೆ ಬೆಳೆಯಬಹುದು ಎಂದು ಮಿರ್ಲೆ ಜಿಪಂ ಸದಸ್ಯ ಸಾರಾ ನಂದೀಶ್ ತಿಳಿಸಿದರು. ಸಾಲಿಗ್ರಾಮದ ಕೆರೆ ಸಂಪೂರ್ಣ ವಾಗಿ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜತೆಗೂಡಿ ಬಾಗಿನ ಅರ್ಪಿಸಿ ಮಾತನಾಡಿದರು. ಹಾರಂಗಿ ನಾಲೆ ಬೂದನೂರು ಹಳ್ಳ ಮತ್ತು ಶಿಡ್ಲಹಳ್ಳಿದವರೆಗೆ ಹರಿಯುತ್ತಿದ್ದು, ಮುಂದೆ ನೀರು ಹರಿಸಲು ನೀರಾವರಿ ಅಧಿಕಾರಿಗಳು ಶ್ರಮವಹಿಸಬೇಕಾಗಿತ್ತು. ಕೊನೆ ಹಂತವರೆಗೆ ನೀರು ಇದುವರೆವಿಗೂ ಹರಿದಿಲ್ಲ ಎಂದ ಅವರು ಈ ಬಾರಿ ವರುಣನ ಕೃಪೆಯಿಂದ ಎಲ್ಲೆಡೆ ಉತ್ತಮ ಮಳೆಯಾಗಿ…
ಇಂದು ಗುರುಪೂರ್ಣಿಮಾ
July 27, 2018ಮೈಸೂರು: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ದೇಶಾದ್ಯಂತ 109 ಸ್ಥಳಗಳಲ್ಲಿ `ಗುರುಪೂರ್ಣಿಮಾ ಮಹೋತ್ಸವ’ ಆಯೋಜಿಸಿದ್ದು, ಅದರಂತೆ ಜು.27ರಂದು ಸಂಜೆ 5 ಗಂಟೆಗೆ ಮೈಸೂರಿನ ಜಯಲಕ್ಷ್ಮಿಪುರಂನ ಶ್ರೀ ಪ್ರಸನ್ನ ಪಾರ್ವತಿ ಕಲ್ಯಾಣ ಮಂಟಪದಲ್ಲಿ `ಗುರುಪೂರ್ಣಿಮಾ ಮಹೋತ್ಸವ’ವನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಗುರುಪೂಜೆ, ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ ಕುರಿತ ಸಾಕ್ಷ್ಯ ಚಿತ್ರ, ಸಮಾಜ-ರಾಷ್ಟ್ರ ಮತ್ತು ಧರ್ಮದ ಬಗ್ಗೆ ಕೃತಿ ಶೀಲರಾಗಿರುವ ಗಣ್ಯರ ವಿಚಾರಗಳು ಹಾಗೂ ಆಪತ್ಕಾಲದಲ್ಲಿ ಸಮಾಜ…
ವಿಜಯನಗರ ಸರ್ಕಾರಿ ಪದವಿ ಕಾಲೇಜಿಗೆ ನ್ಯಾಕ್ ಮಾನ್ಯತೆ
July 27, 2018ಮೈಸೂರು: ಮೈಸೂರಿನ ವಿಜಯನಗರದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ 2014-15ನೇ ನ್ಯಾಕ್ `ಬಿ’ ಶ್ರೇಣಿ ಮಾನ್ಯತೆ ಪಡೆದಿದೆ. ಮೈಸೂರು ಹಾಗೂ ಸುತ್ತಮುತ್ತಲಿನ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಕಾಲೇಜಾಗಿದ್ದು ಫಲಿತಾಂಶದಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು, ಕಾಲೇಜು ಶಿಕ್ಷಣ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿದೆ. ಕಾಲೇಜಿನಲ್ಲಿ 2018-19ನೇ ಸಾಲಿನ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿಬಿಎ ಪದವಿಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪಿಂಜರಾಪೋಲ್ ಮಾದರಿ ನಾಯಿಗಳಿಗೊಂದು ಆಶ್ರಯ ತಾಣ
July 26, 2018ಮೈಸೂರು: ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಪಿಂಜರಾಪೋಲ್ ರೀತಿಯಲ್ಲೇ ಬೀದಿ ನಾಯಿಗಳನ್ನು ನೋಡಿಕೊಳ್ಳುವ ಕೇಂದ್ರವನ್ನು ಪ್ರಾರಂಭಿಸುವ ಕುರಿತು ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸುವುದಾಗಿ ಶಾಸಕ ಎಸ್.ಎ.ರಾಮದಾಸ್ ಭರವಸೆ ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಕೃಷ್ಣರಾಜ ಕ್ಷೇತ್ರದ ಹಿಂದಿನ 1 ಮತ್ತು 4ನೇ ವಾರ್ಡ್ ಸೇರಿ 51ನೇ ವಾರ್ಡ್‍ನ ಅಗ್ರಹಾರ, ರಾಮಾನುಜ ರಸ್ತೆ ಮತ್ತಿತರೆ ಪ್ರದೇಶಗಳಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರಿಂದ ಸಮಸ್ಯೆ ಆಲಿಸಿದರು. ನಂತರ ಅವರು ಮಾತನಾಡಿ, ಈ ಭಾಗದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವ್ಯಾಪಕ…
ಕಾಮುಕನಿಗೆ 10 ವರ್ಷ ಜೈಲು: ಡಿಎನ್‍ಎ ಪರೀಕ್ಷೆಯಿಂದ ಆರೋಪ ಸಾಬೀತು
July 26, 2018ಮೈಸೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭವತಿಯಾಗಲು ಕಾರಣನಾದ ಕಾಮುಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 4 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಯಾಲಯದ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ತೀರ್ಪು ನೀಡಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿ ಶಿವಕುಮಾರ್ (37) ಶಿಕ್ಷೆಗೆ ಗುರಿಯಾದ ಕಾಮುಕನಾಗಿದ್ದು, ಈತ 2016ರ ಫೆಬ್ರವರಿಯಲ್ಲಿ ತನ್ನ ಎದುರು ಮನೆಯ ಬುದ್ಧಿಮಾಂದ್ಯ ಯುವತಿ ಬಹಿರ್ದೆಸೆಗಾಗಿ ಮನೆಯಿಂದ ಹೊರಗೆ ಬಂದಾಗ ಆಕೆಯನ್ನು ತನ್ನ ಮನೆಯ ಟೆರೆಸ್‍ಗೆ…
14ನೇ ಹಣಕಾಸು ಯೋಜನೆಯ 9.80 ಲಕ್ಷ ದುರುಪಯೋಗ: ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್
July 26, 2018ಮೈಸೂರು: 14ನೇ ಹಣಕಾಸು ಯೋಜನೆಯ 9.80 ಲಕ್ಷ ರೂ. ಹಣ ದುರುಪಯೋಗ ಆರೋಪದ ಮೇರೆಗೆ ರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೇರಿ ನಾಲ್ವರ ವಿರುದ್ಧ ಮೈಸೂರು ದಕ್ಷಿಣ (ಗ್ರಾಮಾಂತರ) ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ರಮ್ಮನಹಳ್ಳಿ ಗ್ರಾಪಂ ಅಧ್ಯಕ್ಷೆ ರೇಖಾ, ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಮೈಸೂರಿನ ವಿಜಯನಗರದಲ್ಲಿರುವ ಫ್ಯಾಷನ್ ಹಟ್ಸ್ ಅಂಗಡಿ ಮಾಲೀಕ ಮಂಜು ಮತ್ತು ಎಂ.ಲಿಂಗರಾಜ ಸ್ವಾಮಿ ಎಂಬುವರು 9.80 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ…
ರಂಗಾಯಣದಿಂದ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ ಪ್ರದರ್ಶನ 10 ವರ್ಷಗಳ ನಂತರ ಮತ್ತೆ ಪ್ರಯೋಗ
July 26, 2018ಮೈಸೂರು: ಮೈಸೂರಿನ ರಂಗಾಯಣ ಹೊಸ ಹೊಸ ರಂಗ ಪ್ರಯೋಗಗಳಿಗೆ ಹೆಸರುವಾಸಿ. ವಿಲಿಯಂ ಶೇಕ್ಸ್‍ಪಿಯರ್ ಸೇರಿದಂತೆ ಅನೇಕ ಅದ್ಭುತ ನಾಟಕಕಾರರನ್ನು ರಂಗಕ್ಕೆ ತಂದ ಹೆಗ್ಗಳಿಕೆ ರಂಗಾಯಣದ್ದು. ಇಂದು 10 ವರ್ಷಗಳ ನಂತರ ಸಂಪೂರ್ಣ ಶಾಸ್ತ್ರೀಯ ಸಂಗೀತ ಪ್ರಧಾನ ಪೌರಾಣಿಕ ನಾಟಕ `ಮನ್ಮಥ ವಿಜಯ’ವನ್ನು ಪ್ರದರ್ಶಿಸಲು ಸಜ್ಜಾಗಿದೆ. `ಮನ್ಮಥ ವಿಜಯ’ ಎಂಬ ಪೂರ್ಣ ಪ್ರಮಾಣದ ಶಾಸ್ತ್ರಿಯ ಕಂಪನಿ ನಾಟಕವನ್ನು ಪ್ರದರ್ಶಿಸಲು ರಂಗಾಯಣದ ಕಲಾವಿದರು ಸಜ್ಜಾಗಿದ್ದಾರೆ. 10 ವರ್ಷಗಳ ಹಿಂದೆ ರಂಗಾಯಣದ ಅಂಗಳದಲ್ಲಿ ಮೂಡಿ ಬಂದು ಎಲ್ಲರ ಮೆಚ್ಚುಗೆಗಳಿಸಿರುವ `ಸದಾರಮೆ’ ನಾಟಕ…