ಮೈಸೂರು

ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ
ಮೈಸೂರು

ಮಳೆಯಿಂದ ಶಾಲಾ ಮಕ್ಕಳ ಬವಣೆ: ಪೋಷಕರ ಆಕ್ರೋಶ

July 25, 2018

ಪಿರಿಯಾಪಟ್ಟಣ: ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಪಟ್ಟಣದ ಆದಿಚುಂಚನಗಿರಿ ಶಾಲೆಯ ಆವರಣ ಕೆಸರು ಗದ್ದೆಯಂತಾಗಿದ್ದು, ಮಕ್ಕಳ ಸ್ಥಿತಿ ಹೇಳತೀರದಾಗಿದೆ. ಇದರಿಂದ ಕುಪಿತಗೊಂಡ ಪೋಷಕರು ಶಾಲೆ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ ಪ್ರಸಂಗ ಇಂದು ನಡೆಯಿತು. ಪಟ್ಟಣದ ಅಬ್ಬೂರು ವ್ಯಾಪ್ತಿಗೆ ಸೇರಿರುವ ಅದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆವರಣ ಮಳೆಯಿಂದಾಗಿ ಶಾಲೆಗೆ ಹೋಗುವ ಮತ್ತು ಬರುವ ಸಂದರ್ಭದಲ್ಲಿ ಮಕ್ಕಳು ಪಡುತ್ತಿರುವ ಸಂಕಷ್ಟದಿಂದ ಪೋಷಷಕರು ಆತಂಕಗೊಂಡು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಪೋಷಷಕರಾದ ಟಿ.ಜ.ಪುಟ್ಟರಾಜು ಮೆಲ್ಲಹಳ್ಳಿ ಪರಮೇಶ್, ಪಟ್ಟಣದ ನಟರಾಜ್,…

ಕಪಿಲೆಯಲ್ಲಿ ಮುಳುಗುತ್ತಿದ್ದ ಬೆಂಗಳೂರು ವೃದ್ಧ ದಂಪತಿ
ಮೈಸೂರು

ಕಪಿಲೆಯಲ್ಲಿ ಮುಳುಗುತ್ತಿದ್ದ ಬೆಂಗಳೂರು ವೃದ್ಧ ದಂಪತಿ

July 25, 2018

ನಂಜನಗೂಡು: ಬೆಂಗಳೂರಿನ ವೃದ್ಧ ದಂಪತಿ ಕಪಿಲಾ ನದಿಯಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ವೃದ್ಧೆಯನ್ನು ಪಾರು ಮಾಡಿದರೆ, ವೃದ್ಧ ನೀರಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ದುರಂತ ಇಂದು ನಂಜನಗೂಡಿನ ಹದಿನಾರು ಕಾಲು ಮಂಟಪದ ಬಳಿ ನಡೆದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿ ನಾಗ ರಾಜು(70) ನೀರಲ್ಲಿ ಮುಳುಗಿ ಸಾವಿಗೀಡಾದರೆ, ಅವರ ಪತ್ನಿ ಕಲಾವತಿ(60)ಯನ್ನು ರಕ್ಷಿಸಲಾಗಿದೆ. ಮರದ ಕೊಂಬೆಯೊಂದಕ್ಕೆ ಸಿಲುಕಿದ್ದ ಕಲಾವತಿಯವರನ್ನು ಸ್ಥಳೀಯರು ರಕ್ಷಿಸಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಿ ಸಿದ್ದಾರೆ. ಆದರೆ, ತಾನು ಮತ್ತು ಪತಿ ನಂಜನ ಗೂಡು ದೇವಸ್ಥಾನಕ್ಕೆ ಬಂದಿದ್ದು,…

ವಾಗ್ವಾದಕ್ಕೆ ಕಾರಣವಾದ ಕಟ್ಟಡ ಕಾಮಗಾರಿ
ಮೈಸೂರು

ವಾಗ್ವಾದಕ್ಕೆ ಕಾರಣವಾದ ಕಟ್ಟಡ ಕಾಮಗಾರಿ

July 25, 2018

ತಿ.ನರಸೀಪುರ:  ಇಲ್ಲಿನ ಪುರಸಭೆಯ ನೂತನ ಕಟ್ಟಡ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರನ ಪರ ವಕಾಲತ್ತು ವಹಿಸಿಕೊಂಡು ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ನಾಗರತ್ನಮ್ಮ ವಿರುದ್ದ ಸದಸ್ಯ ಬಿ.ಮರಯ್ಯ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಜರುಗಿತು. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಸಿ.ಉಮೇಶ್(ಕನಕಪಾಪು) ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ವಿಶೇಷ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಸದಸ್ಯ ಆಲಗೂಡು ನಾಗರಾಜು, ಹಳೆ ಹೆರಿಗೆ ಆಸ್ಪತ್ರೆ ಮುಂಭಾಗ ನೂತನವಾಗಿ ನಿರ್ಮಿಸಲಾಗುತ್ತಿ ರುವ ಕಟ್ಟಡದ ಬೇಸ್‍ಮೆಂಟ್‍ನಲ್ಲಿ ನೀರು ಶೇಖರಣೆಯಾಗುತ್ತಿದ್ದು, ಇದನ್ನು ಗಮನಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ಬಿ.ಮರಯ್ಯ…

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ
ಮೈಸೂರು

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಸಿದ್ದರಾಮಯ್ಯ ಅಪಸ್ವರ

July 24, 2018

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುವ ಬಗ್ಗೆ ಮರುವಿಮರ್ಶೆ ಮಾಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಸಿದ್ದರಾಮಯ್ಯ, ಇಂದು ಸಂಸತ್ ಹಾಲ್‍ನಲ್ಲಿ ರಾಹುಲ್ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಗೊಂಡ ನಂತರದ ವಿದ್ಯಮಾನಗಳು, ಪಕ್ಷ ಸಂಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲದೇ ಮೈತ್ರಿ ಸರ್ಕಾರದ…

ಮೈಸೂರು-ಬೆಂಗಳೂರು ಆರು ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ ಚಾಲನೆ
ಮೈಸೂರು

ಮೈಸೂರು-ಬೆಂಗಳೂರು ಆರು ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸೆಪ್ಟೆಂಬರ್ ನಲ್ಲಿ ಚಾಲನೆ

July 24, 2018

ಬೆಂಗಳೂರು: ಮೈಸೂರು-ಬೆಂಗಳೂರು ನಡುವಿನ 6,800 ಕೋಟಿ ರೂ. ವೆಚ್ಚದ ಆರು ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸೆಪ್ಟೆಂಬರ್‍ನಲ್ಲಿ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ನಡುವಿನ ಆರು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದು, ಸಮ್ಮತಿ ನೀಡಿದ್ದಾರೆ. ಸೆಪ್ಟೆಂಬರ್ ಮೊದಲ ವಾರ ಕಾಮಗಾರಿ ಆರಂಭ ವಾಗಲಿದೆ ಎಂದರು. ಈ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಶೇ. 63ರಷ್ಟು…

ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್
ಮೈಸೂರು

ಸರ್ಕಾರಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್ ಪಾಸ್

July 24, 2018

ರಾಮನಗರ: ಕೇವಲ ಸರ್ಕಾರಿ ಶಾಲಾ ಕಾಲೇಜ್‍ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸೋಮವಾರ ಹೇಳಿದ್ದಾರೆ. ಇಂದು ರಾಮನಗರ ಜಿಲ್ಲೆಯ ಚೆನ್ನಪಟ್ಟಣದಲ್ಲಿ ಜೆಡಿಎಸ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಲಕ್ಷಾಂತರ ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆ ಮತ್ತು ಕಾಲೇಜ್‍ಗಳಿಗೆ ಸೇರುವ ಮಕ್ಕಳಿಗೆ ಉಚಿತ ಬಸ್ ಪಾಸ್ ಅಗತ್ಯ ಇಲ್ಲ. ಬಿಜೆಪಿಯವರು ಎಬಿವಿಪಿಯನ್ನು ಮುಂದಿಟ್ಟು ಕೊಂಡು ರಾಜಕೀಯ ಮಾಡುವುದು ಬೇಡ. ನನಗೆ ಅವರಿಗಿಂತ ಚೆನ್ನಾಗಿ ರಾಜಕೀಯ…

ಐಟಿ ದಾಳಿ ವೇಳೆ ಮಾಜಿ ಸಿಎಂ, ಪ್ರಭಾವಿ ರಾಜಕಾರಣಿ ಕುಟುಂಬದ ಆಸ್ತಿ ದಾಖಲೆ ಪತ್ತೆ
ಮೈಸೂರು

ಐಟಿ ದಾಳಿ ವೇಳೆ ಮಾಜಿ ಸಿಎಂ, ಪ್ರಭಾವಿ ರಾಜಕಾರಣಿ ಕುಟುಂಬದ ಆಸ್ತಿ ದಾಖಲೆ ಪತ್ತೆ

July 24, 2018

ಬೆಂಗಳೂರು:  ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ರಾಜಕಾರಣಿಯೊಬ್ಬರ ಕುಟುಂಬಕ್ಕೆ ಸೇರಿದ ಸ್ಥಿರ ಮತ್ತು ಚರಾಸ್ತಿ ದಾಖಲೆಗಳು ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಪತ್ತೆಯಾಗಿವೆ. ಕಳೆದ ಎರಡು ದಿನಗಳ ಹಿಂದೆ ನಗರದ ಬೌರಿಂಗ್ ಇನ್‍ಸ್ಟಿಟ್ಯೂಟ್ ಸಂಸ್ಥೆಯ ಸದಸ್ಯ ರೊಬ್ಬರ ಲಾಕರ್‍ನಲ್ಲಿ ಈ ದಾಖಲೆಗಳು ಪತ್ತೆಯಾಗಿವೆ. ಈ ದಾಖಲೆಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಲಾಕರ್ ಮಾಲೀಕ ಅವಿನಾಶ್ ಕುಕ್ರೇಜ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ರಾಜ್ಯದ ಕೆಲವು ಪ್ರಭಾವಿ ರಾಜಕಾರಣಿ ಗಳು, ಬಿಲ್ಡರ್‍ಗಳು ಮತ್ತು ವ್ಯಾಪಾರಸ್ಥರಿಗೆ ಸೇರಿವೆ ಎಂಬ…

ಇನ್ನೂ ಬಯಲಾಗದ ಶಿರೂರು ಶ್ರೀಗಳ ಸಾವಿನ ರಹಸ್ಯ: ಮೂಲ ಮಠದ ಸಿಸಿ ಕ್ಯಾಮರಾ ಡಿವಿಆರ್ ನಾಪತ್ತೆ
ಮೈಸೂರು

ಇನ್ನೂ ಬಯಲಾಗದ ಶಿರೂರು ಶ್ರೀಗಳ ಸಾವಿನ ರಹಸ್ಯ: ಮೂಲ ಮಠದ ಸಿಸಿ ಕ್ಯಾಮರಾ ಡಿವಿಆರ್ ನಾಪತ್ತೆ

July 24, 2018

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಇಹಲೋಕ ತ್ಯಜಿಸಿ ಇಂದಿಗೆ ಐದು ದಿನ. ಶ್ರೀಗಳ ಸಾವಿನ ಸುತ್ತ ಹಲವು ಅನುಮಾನ ವ್ಯಕ್ತವಾಗಿವೆ. ಶಿರೂರು ಮೂಲ ಮಠದ ಸಿಸಿ ಕ್ಯಾಮರಾ ಡಿವಿಆರ್ ನಿಗೂಢವಾಗಿ ನಾಪತ್ತೆಯಾಗಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ದಿನವೇ ಮಠಕ್ಕೆ ಬಂದ ವ್ಯಕ್ತಿ ಎಗರಿಸಿದ್ದನಾ? ಆಸ್ಪತ್ರೆ ಸೇರುವ ಮುನ್ನ ಶ್ರೀಗಳೇ ಡಿವಿಆರ್ ಬದಲಿಸಿದ್ದಾರೆಯೇ? ಅನ್ನುವುದು ಪೊಲೀಸ ರಿಗೆ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಅಲ್ಲದೆ ಶ್ರೀಗಳ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಇನ್ನು ಎರಡು ದಿನದಲ್ಲಿ ಹೊರಬರಲಿದೆ. ಆದರೆ ವಿಧಿ…

ರೈಲ್ವೆ ಗೂಡ್ಸ್ ಶೆಡ್‍ನಿಂದ ಅಕ್ಕಿ, ಗೋಧಿ  ಸಾಗಿಸಲು ಲಾರಿ ಮಾಲೀಕರ ಒಪ್ಪಿಗೆ
ಮೈಸೂರು

ರೈಲ್ವೆ ಗೂಡ್ಸ್ ಶೆಡ್‍ನಿಂದ ಅಕ್ಕಿ, ಗೋಧಿ  ಸಾಗಿಸಲು ಲಾರಿ ಮಾಲೀಕರ ಒಪ್ಪಿಗೆ

July 24, 2018

ಮೈಸೂರು: ಲಾರಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಲಾರಿಗಳು ಸಂಚರಿಸದ ಕಾರಣ ಬಂಡೀ ಪಾಳ್ಯ ಎಪಿಎಂಸಿ, ಬಂಬೂಬಜಾರ್ ಆರ್‍ಎಂಸಿಗಳಲ್ಲಿ ವಹಿವಾಟು ವ್ಯತ್ಯಯ ಕಂಡು ಬಂದಿದೆ. ಈ ಮಧ್ಯೆ ಜಿಲ್ಲಾಧಿಕಾರಿಗಳ ಅನುಮತಿ ಹಾಗೂ ಅಗತ್ಯ ಭದ್ರತೆಯೊಂದಿಗೆ ಕೇರಳಕ್ಕೆ ತರಕಾರಿ ಸಾಗಿಸಲು ಬಂಡೀಪಾಳ್ಯ ಎಪಿಎಂಸಿ ಅಧ್ಯಕ್ಷ ಸಿದ್ದೇಗೌಡ ಪ್ರಯತ್ನ ನಡೆಸಿದ್ದಾರೆ. ಇಂದು 4 ಲಾರಿ ತರಕಾರಿಯನ್ನು ಎಪಿಎಂಸಿ ದಲ್ಲಾಳಿಗಳು ಹಾಗೂ ಸಿಬ್ಬಂದಿ ಸಹಿತ ಕೇರಳದತ್ತ ಕಳಿಸಲಾಗಿದೆ. ಇನ್ನು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಇನ್ನಷ್ಟು ಲಾರಿ ತರಕಾರಿಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂದು…

ಮೈಸೂರಿನ 11ನೇ ವಾರ್ಡ್‍ನಲ್ಲಿ  ಶಾಸಕ ರಾಮದಾಸ್ ಪಾದಯಾತ್ರೆ
ಮೈಸೂರು

ಮೈಸೂರಿನ 11ನೇ ವಾರ್ಡ್‍ನಲ್ಲಿ  ಶಾಸಕ ರಾಮದಾಸ್ ಪಾದಯಾತ್ರೆ

July 24, 2018

ಮೈಸೂರು:  ಕೃಷ್ಣರಾಜ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾದ ಎಸ್.ಎ.ರಾಮದಾಸ್ ಅವರು ಕೃಷ್ಣರಾಜ ಕ್ಷೇತ್ರದ ಹಿಂದಿನ 11ನೇ ವಾರ್ಡ್ ಇಂದು 61ನೇ ವಾರ್ಡ್ ಆಗಿ ಪರಿವರ್ತನೆ ಆಗಿರುವ ಪ್ರದೇಶಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು. ಧರಂಸಿಂಗ್ ಕಾಲೋನಿಯಲ್ಲಿ ಇರುವಂತಹ ಪೌರಕಾರ್ಮಿಕರ ಬಡಾವಣೆಯಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಮಾಡುವ ಮೂಲಕ ಪಾದಯಾತ್ರೆ ಪ್ರಾರಂಭಿಸಿದರು. ಕಳೆದ 5 ವರ್ಷಗಳಿಂದ ಯಾವುದೇ ಕಾಮಗಾರಿಗಳು ಆಗಿಲ್ಲವೆಂದು ಜನರು ದೂರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು ಸ್ಲಂ ಬೋರ್ಡ್ ಅಡಿಯಲ್ಲಿ ರಸ್ತೆ…

1 1,470 1,471 1,472 1,473 1,474 1,611
Translate »