ಮೈಸೂರು

ಕೆ.ಆರ್ ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸಲು ಶಾಸಕ ನಾಗೇಂದ್ರ ಸೂಚನೆ
ಮೈಸೂರು

ಕೆ.ಆರ್ ಆಸ್ಪತ್ರೆ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸಲು ಶಾಸಕ ನಾಗೇಂದ್ರ ಸೂಚನೆ

July 24, 2018

ಮೈಸೂರು: ಅನಾಮಿಕ ವಿಕೃತ ಕಾಮಿಯೋರ್ವ ಅತಿಕ್ರಮ ಪ್ರವೇಶ ಮಾಡಿ ವಿದ್ಯಾರ್ಥಿನಿಯರಿಗೆ ಆತಂಕ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ನರ್ಸಿಂಗ್ ಹಾಸ್ಟೆಲ್ ಭದ್ರತೆ ಹೆಚ್ಚಿಸುವಂತೆ ಶಾಸಕ ಎಲ್.ನಾಗೇಂದ್ರ ಅವರು ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಇಂದು ನರ್ಸಿಂಗ್ ಕಾಲೇಜಿಗೆ ದಿಢೀರ್ ಭೇಟಿ ನೀಡಿದ ಶಾಸಕರು, ಹಾಸ್ಟೆಲ್ ವಿದ್ಯಾರ್ಥಿನಿಗಳಿಂದ ಮಾಹಿತಿ ಪಡೆದು ಸಮಸ್ಯೆಗಳನ್ನು ಆಲಿಸಿದರು. ಸರಿಯಾಗಿ ನಿರ್ವಹಣೆ ಮಾಡದ ಕಾರಣ ಶೌಚಾಲಯ, ಸ್ನಾನಗೃಹ, ಅಡುಗೆ ಮನೆಗಳು ಶಿಥಿಲಗೊಂಡಿರುವುದು ಪರಿಶೀಲನೆ ವೇಳೆ ಕಂಡು ಬಂದಿತು. ಹಾಸ್ಟೆಲ್‍ಗೆ…

ಫಾಲ್ಕನ್ ಟೈರ್ಸ್ ಪುನರಾರಂಭ ಕುರಿತು ಇಂದು ಸಚಿವ ಕೆ.ಜೆ.ಜಾರ್ಜ್ ಸಭೆ
ಮೈಸೂರು

ಫಾಲ್ಕನ್ ಟೈರ್ಸ್ ಪುನರಾರಂಭ ಕುರಿತು ಇಂದು ಸಚಿವ ಕೆ.ಜೆ.ಜಾರ್ಜ್ ಸಭೆ

July 24, 2018

ಮೈಸೂರು:  ಮೂರು ವರ್ಷಗಳಿಂದ ಬಂದ್ ಆಗಿರುವ ಫಾಲ್ಕನ್ ಟೈರ್ಸ್ ಕಾರ್ಖಾನೆ ಪುನರಾರಂಭ ಸಂಬಂಧ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಕೆ.ಜೆ.ಜಾರ್ಜ್ ಅವರು ಮೈಸೂರಿನಲ್ಲಿ ಮಹತ್ವದ ಸಭೆ ನಡೆಸಲಿದ್ದು, 2 ಸಾವಿರಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳ ಭವಿಷ್ಯ ತಿಳಿಯಲಿದೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಾಳೆ(ಜು.24) ಬೆಳಿಗ್ಗೆ 11.30ಕ್ಕೆ ಸಭೆ ಏರ್ಪಡಿಸಲಾಗಿದ್ದು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಸೇರಿದಂತೆ ಸ್ಥಳೀಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ. ಜೊತೆಗೆ ಸರ್ಕಾರದ ಉನ್ನತ ಅಧಿಕಾರಿಗಳು,…

ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು
ಮೈಸೂರು

ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು

July 24, 2018

ಮೈಸೂರು:  ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಾಗರದಂತೆ ಕಾಣುವ ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಿಂದೆ ಹಿನ್ನೀರಿನ ಮಟ್ಟ ಇಳಿದಿದ್ದಾಗ ಈ ದೇವಾಲಯ ಗೋಚರವಾಗಿತ್ತು. ನಂತರ ದಡಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ಜೊತೆಗೆ ವಿಸ್ತಾರವಾದ ಆವರಣದಲ್ಲಿ ನಿಂತು ಹಿನ್ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇದೀಗ ಜನ ಸಾಗರವೇ ಹರಿದು ಬರುತ್ತಿದೆ. ಕೆಆರ್‌ಎಸ್‌ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಹಿನ್ನೀರು ಪ್ರದೇಶದಲ್ಲಿರುವ…

ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ
ಮೈಸೂರು

ಸರ್ವಿಸ್ ರಸ್ತೆಯಲ್ಲೇ ಅನಧಿಕೃತ ಮಳಿಗೆ ನಿರ್ಮಾಣ

July 24, 2018

ಮೈಸೂರು: ಮೈಸೂರು ವಿವಿಯಿಂದ, ಕುದುರೆಮಾಳ, ಸರಸ್ವತಿಪುರಂ, ಶ್ರೀರಾಂಪುರ 2ನೇ ಹಂತದ ಮೂಲಕ ಮುಂದಕ್ಕೆ ಸಾಗುವ ಬೃಹತ್ ರಾಜಕಾಲುವೆಯ ಮಾರ್ಗದ ಮಧ್ಯದ ಕಿರಿದಾದ ಕಾಲುವೆಯನ್ನು ದುರಸ್ತಿ (ಕೃಷ್ಣಧಾಮದಿಂದ 353/ಎ ನಂಬರಿನ ಮನೆಯವರೆಗೆ) ಮಾಡಬೇಕೆಂದು ವಲಯ ಕಚೇರಿ-3ರ ಸಹಾಯಕ ಇಂಜಿನಿಯರ್ ನೀಡಿದ್ದ ವರದಿಯನ್ನು ತಿದ್ದಿದವರು ಯಾರು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಮೈಸೂರಿನ ಸಾಹುಕಾರ್ ಚನ್ನಯ್ಯ ರಸ್ತೆ, ಸರಸ್ವತಿಪುರಂ ಕೃಷ್ಣಧಾಮ ಮಂದಿರದ ಎದುರಿನ ಎಸ್‍ಬಿಐ ಪ್ರಾದೇಶಿಕ ಕಚೇರಿ ಪಕ್ಕದಲ್ಲಿನ ಸರ್ವಿಸ್ ರಸ್ತೆ ಮತ್ತೆ ಸಾರ್ವಜನಿಕರ ಕೈ ತಪ್ಪುವಂತಿದೆ….

ಮೈಸೂರಲ್ಲಿ ಯುವತಿ ನಾಪತ್ತೆ
ಮೈಸೂರು

ಮೈಸೂರಲ್ಲಿ ಯುವತಿ ನಾಪತ್ತೆ

July 24, 2018

ಮೈಸೂರು:  ಕಾಲೇಜಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಹೋದ ಯುವತಿ ನಾಪತ್ತೆಯಾಗಿರುವ ಪ್ರಕರಣ ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹೆಬ್ಬಾಳು ಬಡಾವಣೆಯ ಮಹದೇವಮ್ಮ ಹಾಗೂ ಸೋಮಣ್ಣ ದಂಪತಿ ಪುತ್ರಿ ಎಸ್.ಸೌಮ್ಯಾ(23) ನಾಪತ್ತೆಯಾಗಿರುವ ಯುವತಿ. ಜು.20ರಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಕಾಲೇಜಿಗೆ ಹೋಗಿ, ಸ್ನೇಹಿತರಿಗೆ ಪುಸ್ತಕ ಕೊಟ್ಟು ಬರುವುದಾಗಿ ತಿಳಿಸಿ ಮನೆಯಿಂದ ಹೋದವಳು ವಾಪಸ್ಸಾಗಿಲ್ಲವೆಂದು ಆಕೆಯ ಪೋಷಕರು ದೂರು ನೀಡಿದ್ದು, ಪ್ರಿಯಕರ ಮಹೇಶ್‍ನೊಂದಿಗೆ ಹೋಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸೌಮ್ಯಾ ಅವರನ್ನು ವಿವಾಹ ಮಾಡಿಕೊಡುವಂತೆ ಮಹೇಶ್ ಪೀಡಿಸುತ್ತಿದ್ದ. ಇದಕ್ಕೆ…

ಸಂಚಾರ ಅರಿವು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಮೈಸೂರು

ಸಂಚಾರ ಅರಿವು ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

July 24, 2018

ಮೈಸೂರು:  ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಅಂಗವಾಗಿ ದೇವರಾಜ ಸಂಚಾರ ಠಾಣೆಯ ಪೊಲೀಸರು, ಮಲ್ಲಮ್ಮ ಮರಿಮಲ್ಲಪ್ಪ ಮಹಿಳಾ ಕಲಾ, ವಾಣಿಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸಂಚಾರ ನಿಯಮಗಳ ಅರಿವು ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಸಂಚಾರ ಇನ್ಸ್‍ಪೆಕ್ಟರ್ ಎಲ್.ಶ್ರೀನಿವಾಸ್ ಬಹುಮಾನ ವಿತರಿಸಿದರು. ನಂತರ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯಾರ್ಥಿಗಳು, ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಹೆಲ್ಮೆಟ್ ಹಾಕದಿರುವುದು. ಲೈಸನ್ಸ್ ಇಲ್ಲದಿದ್ದರೂ ತ್ರಿಬಲ್ ರೈಡಿಂಗ್‍ನಲ್ಲಿ ಚಾಲನೆ ಮಾಡುವುದು ಹಾಗೂ…

ಲಾರಿ ಮಾಲೀಕರು, ಗುಡಿಸಲು ನಿವಾಸಿಗಳು, ದಸಂಸದಿಂದ ಪ್ರತ್ಯೇಕ ಪ್ರತಿಭಟನೆ
ಮೈಸೂರು

ಲಾರಿ ಮಾಲೀಕರು, ಗುಡಿಸಲು ನಿವಾಸಿಗಳು, ದಸಂಸದಿಂದ ಪ್ರತ್ಯೇಕ ಪ್ರತಿಭಟನೆ

July 24, 2018

ಮೈಸೂರು:  ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ ಮಾಲೀಕರು ಜಿಲ್ಲಾದಿಕಾರಿ ಕಚೇರಿ ಎದುರು ಧರಣಿ. ಫಲಾನುಭವಿಗಳಿಗೆ ಮನೆ ನೀಡುವಂತೆ ಒತ್ತಾಯಿಸಿ ಗುಡಿಸಲು ನಿವಾಸಿಗಳ ಸಂಘದಿಂದ ಸ್ಮಂ ಬೋಡ್ ಕಚೇರಿ ಎದುರು ಪ್ರತಿಭಟನೆ. ಸ್ವಾಮಿ ಅಗ್ನಿವೇಶ್ ಮೇಲಿನ ಹಲ್ಲೆ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಡಿಸಿ ಕಚೇರಿ ಮುಂದೆ ಪ್ರತಿಭಟನೆ. ಮೈಸೂರಲ್ಲಿ ಸೋಮವಾರ ಈ ಮೂರು ಪ್ರತ್ಯೇಕ ಪ್ರತಿಭಟನೆಗಳು ನಡೆದು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಲಾರಿ ಮಾಲೀಕರ ಧರಣಿ: ಡೀಸೆಲ್ ದರ ಇಳಿಸಿ, ಟೋಲ್ ರದ್ದುಮಾಡಿ…

ಡಿಎಫ್‍ಆರ್‌ಎಲ್‍ನಲ್ಲಿ ಆಹಾರ ವಿಶ್ಲೇಷಣೆ, ಗುಣಮಟ್ಟ ಖಾತರಿ ಸ್ನಾತಕೋತ್ರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ
ಮೈಸೂರು

ಡಿಎಫ್‍ಆರ್‌ಎಲ್‍ನಲ್ಲಿ ಆಹಾರ ವಿಶ್ಲೇಷಣೆ, ಗುಣಮಟ್ಟ ಖಾತರಿ ಸ್ನಾತಕೋತ್ರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ

July 24, 2018

ಮೈಸೂರು:  ಮೈಸೂರಿನ ಸಿದ್ದಾರ್ಥನಗರದ ರಕ್ಷಣಾ ಆಹಾರ ಸಂಶೋಧಕರ ಪ್ರಯೋಗಾಲಯ (ಡಿಎಫ್‍ಆರ್‌ಎಲ್)ನಲ್ಲಿ ಆಹಾರ ವಿಶ್ಲೇಷಣೆ ಮತ್ತು ಗುಣಮಟ್ಟ ಖಾತರಿ (Post Graduate Diploma in Food Analysis & Quality Assurance) ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‍ಗೆ ಅರ್ಜಿ ಆಹ್ವಾನಿಸಿದೆ. ಮೈಸೂರು ವಿವಿಯಿಂದ ಮಾನ್ಯತೆ ಪಡೆದಿರುವ ಈ 10 ತಿಂಗಳ ಅವಧಿಯ ಕೋರ್ಸ್‍ಗೆ ಪ್ರವೇಶ ಪಡೆಯಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ವಿಜ್ಞಾನ ಪದವೀಧರ, ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರ ವ್ಯಾಸಂಗ ಮಾಡಿರಬೇಕು. ಕೃಷಿ, ಪಶು ವಿಜ್ಞಾನದಲ್ಲಿ ಬಿಎಸ್‍ಸಿ…

ಪಾಂಡುರಂಗ ದೇವಸ್ಥಾನದಲ್ಲಿ ಏಕಾದಶಿ ಆಚರಣೆ
ಮೈಸೂರು

ಪಾಂಡುರಂಗ ದೇವಸ್ಥಾನದಲ್ಲಿ ಏಕಾದಶಿ ಆಚರಣೆ

July 24, 2018

ಮೈಸೂರು: ಪ್ರಥಮ ಏಕಾದಶಿ ಅಂಗವಾಗಿ ಮೈಸೂರಿನ ಲಷ್ಕರ್ ಮೊಹಲ್ಲಾ ಕಬೀರ್ ರಸ್ತೆ ಶ್ರೀ ಪಾಂಡುರಂಗ ವಿಠಲಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಮುಂಜಾನೆ 5 ಗಂಟೆಗೆ ಕಾಕಡಾರತಿ, ವಿಶೇಷ ಹಾಲಿನ ಅಭಿಷೇಕ, ಫಲ ಪಂಚಾಮೃತ, ಅಷ್ಟೋತ್ತರ ಪೂಜೆ ಇನ್ನಿತರ ಪೂಜೆಗಳು ನಡೆದವು. ಇದರ ಅಂಗವಾಗಿ ಇಡೀ ದೇವಾಲಯವನ್ನು ವಿಶೇಷ ಹೂವಿನ ಅಲಂಕರಿಸಲಾಗಿತ್ತು. ಸಂಜೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳಿಯಿಂದ ದೇವರನಾಮ, ಭಜನೆ, ವಿದ್ವಾನ್ ಗಣೇಶ್ ಶರ್ಮಾ ಅವರಿಂದ ಪ್ರವಚನ, ರಾತ್ರಿ ಮೈಸೂರಿನ ಇಸ್ಕಾನ್ ತಂಡದಿಂದ…

ಮೈಸೂರಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್ ಯಶಸ್ವಿ ಸೇವೆ 10 ಸಾವಿರ ಗಡಿ ದಾಟಿದ ಚಂದಾದಾರರ ಸಂಖ್ಯೆ
ಮೈಸೂರು

ಮೈಸೂರಲ್ಲಿ ಟ್ರಿಣ್ ಟ್ರಿಣ್ ಬೈಸಿಕಲ್ ಯಶಸ್ವಿ ಸೇವೆ 10 ಸಾವಿರ ಗಡಿ ದಾಟಿದ ಚಂದಾದಾರರ ಸಂಖ್ಯೆ

July 24, 2018

ಮೈಸೂರು: ಮೈಸೂರಿನಲ್ಲಿ ಜನಪ್ರಿಯವಾಗಿರುವ ಟ್ರಿಣ್ ಟ್ರಿಣ್ ಬೈಸಿಕಲ್ ಸೇವೆಗೆ ದಿನೇ ದಿನೇ ಹೆಚ್ಚು ಪ್ರತಿಕ್ರಿಯೆ ದೊರೆಯುತ್ತಿದ್ದು, ಈ ಯೋಜನೆಯ ಸದಸ್ಯರ ಸಂಖ್ಯೆ ಈಗ ಐದಂಕಿಗೆ ತಲುಪಿದೆ. ಯೋಜನೆಯ ಅಧಿಕೃತ ಚಂದಾದಾರರಾಗಿ ಇದುವರೆಗೆ 10,000 ಮಂದಿ ನೋಂದಣಿ ಮಾಡಿಸಿದ್ದು, ಇದು ಯಶಸ್ವಿಯಾಗಿ ನಡೆಯುತ್ತಿರುವುದಕ್ಕೆ ನಿದರ್ಶನವಾಗಿದೆ. ಕಳೆದ 2017ರ ಜೂನ್ 4ರಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದಲೇ ಯೋಜನೆಗೆ ಚಂದಾದಾರರಾಗುವವರ ಸಂಖ್ಯೆ ದಿನೇ ದಿನೇ ಏರತೊಡಗಿತ್ತು. ಇದರಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿ,ವಿದ್ಯಾರ್ಥಿನಿಯರು, ಸಾರ್ವಜನಿಕರು, ಪ್ರವಾಸಿಗರು, ಸರ್ಕಾರಿ ನೌಕರರು ಸೇರಿದ್ದಾರೆ. ದೇಶದ…

1 1,471 1,472 1,473 1,474 1,475 1,611
Translate »