ಮೈಸೂರು

ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ
ಮೈಸೂರು

ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ

July 10, 2018

ಮೈಸೂರು:  ಹನ್ನೆರಡನೇ ಶತಮಾನದಲ್ಲಿ ಆಗಿ ಹೋದ ಬಸವಣ್ಣನವರ ತತ್ವಾದರ್ಶಗಳು ಎಂದೆಂದಿಗೂ ಪ್ರಸ್ತುತ ಎಂದು ಅಮೇರಿಕಾದಲ್ಲಿರುವ ಭಾರತದ ರಾಯಭಾರಿ ಕಚೇರಿಯ ಮೊದಲ ಕಾರ್ಯದರ್ಶಿ ಶಂಭುಲಿಂಗಪ್ಪ ತಿಳಿಸಿದರು. ಅಮೇರಿಕಾದ ಮೆರಿಲ್ಯಾಂಡ್‍ನಲ್ಲಿ ನಡೆದ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ನಿನ 12ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುತ್ತೂರು ಮಠ ಹಾಗೂ ಜೆಎಸ್‍ಎಸ್ ಮಹಾವಿದ್ಯಾಪೀಠವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪ್ರಶಂಸಿಸಿದರು. ಅಮೇರಿಕಾದ ಮಿಷಿಗನ್‍ನಲ್ಲಿ 1999ರಲ್ಲಿ ಜೆಎಸ್‍ಎಸ್ ಸ್ಪಿರಿಚ್ಯುಯಲ್ ಮಿಷನ್ ಪ್ರಾರಂಭವಾಯಿತು. 2006ರಲ್ಲಿ ಮೆರಿಲ್ಯಾಂಡ್‍ನಲ್ಲಿ ಜೆಎಸ್‍ಎಸ್ ಮಿಷನ್‍ನ ಕೇಂದ್ರ…

ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ
ಮೈಸೂರು

ನನ್ನ ರಂಗಭೂಮಿ ಮತ್ತು ರಂಗ ವಿಮರ್ಶೆ ಅಂದು-ಇಂದು ಕೃತಿ ಬಿಡುಗಡೆ ಸಮಾರಂಭ

July 10, 2018

ಮೈಸೂರು:  ಮೈಸೂರಿನ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಜನಮನ ರಚನೆಯ `ನನ್ನ ರಂಗಭೂಮಿ’ ಮತ್ತು `ರಂಗ ವಿಮರ್ಶೆ ಅಂದು-ಇಂದು’ ಕೃತಿಗಳ ಬಿಡುಗಡೆ ಸಮಾರಂಭ ಹಾಗೂ `ನನ್ನ ರಂಗಭೂಮಿ’ ವಿಷಯವನ್ನು ಒಳಗೊಂಡ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಜು. 15 ರಂದು ಬೆಳಿಗ್ಗೆ 10.30 ಗಂಟೆಗೆ ಕಲಾಮಂದಿರದ ಮನೆಯಂಗಳ ವೇದಿಕೆಯಲ್ಲಿ ಏರ್ಪಡಿಸಲಾಗಿದೆ. ವಿಚಾರವಾದಿ ಪ್ರೊ. ಕೆ.ಎಸ್. ಭಗವಾನ್ ಕಾರ್ಯಕ್ರಮ ಉದ್ಘಾಟಿಸುವರು. ಡಾ. ಸಿ. ನಾಗಣ್ಣ ಕೃತಿಗಳನ್ನು ಬಿಡುಗಡೆ ಮಾಡುವರು. ಡಾ. ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ರಂಗ…

ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ
ಮೈಸೂರು

ಮೈಸೂರು ವಿವಿ ಕುಲಪತಿಯಾಗಿ ಪ್ರೊ. ರಾಜಣ್ಣ ನೇಮಕಕ್ಕೆ ಆಗ್ರಹ

July 10, 2018

ಮೈಸೂರು:  ಪ್ರೊ. ರಾಜಣ್ಣನವರನ್ನು ಸಾಮಾಜಿಕ ನ್ಯಾಯದಡಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕ ಮಾಡಬೇಕೆಂದು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಮಾನವ ನೌಕರರ ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಉಪಾಧ್ಯಕ್ಷ ಭಾಸ್ಕರ್, ಕಾರ್ಯದರ್ಶಿ ವಿನೋದ್ ಮತ್ತು ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಹದಿನೆಂಟು ವಿಶ್ವವಿದ್ಯಾನಿಲಯಗಳಿದ್ದು, ಇಲ್ಲಿಯವರೆಗೆ ಗುಲ್ಬರ್ಗಾ ವಿವಿಯಲ್ಲಿ ಮಾತ್ರ ಕುಲಪತಿ ನೇಮಕವಾಗಿರುತ್ತದೆ. ಆದರೆ ಇದುವರೆವಿಗೂ ಮೈಸೂರು ವಿವಿಗೆ ನಾಯಕ ಸಮುದಾಯದ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಿಲ್ಲ. ಕೇವಲ ಇಬ್ಬರನ್ನು ಮಾತ್ರ ಕುಲಸಚಿವರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ. ಇದರಿಂದ…

ಉಚಿತ ಕಂಪ್ಯೂಟರ್ ತರಬೇತಿ ಶಿಬಿರ
ಮೈಸೂರು

ಉಚಿತ ಕಂಪ್ಯೂಟರ್ ತರಬೇತಿ ಶಿಬಿರ

July 10, 2018

ಮೈಸೂರು: ಮೈಸೂರಿನ ಬೋಗಾದಿಯ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಜು. 12 ರಿಂದ 14 ರವರೆಗೆ ಪ್ರತಿದಿನ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರವರೆಗೆ ಉಚಿತ ಕಂಪ್ಯೂಟರ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಗೃಹಿಣಿಯರು, ವ್ಯಾಪಾರಸ್ಥರು ಹಾಗೂ ನಿವೃತ್ತ ನೌಕರರು ಭಾಗವಹಿಸಬಹುದು. ಮೂರು ದಿನಗಳ ಶಿಬಿರದಲ್ಲಿ ಬೇಸಿಕ್ ಕಂಪ್ಯೂಟರ್ ಬಳಕೆ, ಆನ್‍ಲೈನ್‍ನಲ್ಲಿ ಸಿನಿಮಾ, ಬಸ್, ರೈಲು, ವಿಮಾನಗಳಲ್ಲಿ ಆಸನಗಳನ್ನು ಕಾಯ್ದಿರಿಸುವ ವಿಧಾನ, ಫ್ಲಿಪ್‍ಕಾರ್ಟ್, ಅಮೇಜಾನ್‍ನಂತಹ ಸಾಮಾಜಿಕ ಜಾಲತಾಣಗಳ ಆಪ್‍ಗಳ ಬಳಕೆ, ಮೊಬೈಲ್ ಫೋಟೋಗ್ರಫಿ, ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸುವ ವಿಧಾನಗಳ…

ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಮೈಸೂರು

ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

July 10, 2018

ಮೈಸೂರು: ಮೈಸೂರು-ಹುಣಸೂರು ರಸ್ತೆ, ಇಲವಾಲದ ಬಳಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಸಮೀಪದ ನಿಲಂಗಾಲ ಗ್ರಾಮದ ಮಹದೇವು ಅವರ ಪುತ್ರ ಯಶವಂತಕುಮಾರ್(22) ಮೃತಪಟ್ಟವರು. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇವರು, ಊರಿಗೆ ಹೋಗಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಯಲ್ಲಿ ಯಶವಂತ್ ತಮ್ಮ ಹೊಂೀಡಾ ಶೈನ್ ಬೈಕ್(ಕೆಎ-45, ಎಕ್ಸ್-9420)ನಲ್ಲಿ ಮೈಸೂರಿನ ಕಡೆಗೆ ಬರುವಾಗ ಇಲವಾಲ ಸಮೀಪದ ಇಂಡಿಯನ್…

ಸರಸ್ವತಿಪುರಂ ಠಾಣೆಯಲ್ಲಿ ಸಹೋದ್ಯೋಗಿ ಸೀಮಂತ ಭಾವ-ಬಾಂಧವ್ಯಕ್ಕೆ ಸಾಕ್ಷಿಯಾದ ಸಮಾರಂಭ
ಮೈಸೂರು

ಸರಸ್ವತಿಪುರಂ ಠಾಣೆಯಲ್ಲಿ ಸಹೋದ್ಯೋಗಿ ಸೀಮಂತ ಭಾವ-ಬಾಂಧವ್ಯಕ್ಕೆ ಸಾಕ್ಷಿಯಾದ ಸಮಾರಂಭ

July 10, 2018

ಮೈಸೂರು: ಗಲಾಟೆ, ಗದ್ದಲ, ಕಳ್ಳತನ, ಸುಲಿಗೆ ಹೀಗೆ ಒಂದಿಲ್ಲೊಂದು ಕೇಸುಗಳಿಂದ ಪೊಲೀಸರು ಹೈರಾಣಾಗಿರುತ್ತಾರೆ. ದೂರುದಾರರು, ಆರೋಪಿಗಳ ವಿಚಾರಣೆಯಿಂದ ಠಾಣೆ ಗದ್ದಲದ ಗೂಡಾಗಿರುತ್ತದೆ. ಇದೆಲ್ಲದಕ್ಕೂ ಒಗ್ಗಿರುವ ಪೊಲೀಸರು, ಭಾವಜೀವಿಗಳಲ್ಲ ಎಂಬ ಆರೋಪವನ್ನೂ ಸಹಿಸುತ್ತಾರೆ. ಆದರೆ ಇಂದು ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. ಠಾಣೆಯ ಮಹಿಳಾ ಸಿಬ್ಬಂದಿ, ತುಂಬು ಗರ್ಭಿಣ ರಕ್ಷಿತಾ ಅವರಿಗೆ ಸಹೋದ್ಯೋಗಿಗಳು, ಸೀಮಂತ ನೆರವೇರಿಸಿ, ಹರಸಿದರು. ರಕ್ಷಿತಾ ಅವರ ಪತಿ ತ್ರಿಮೂರ್ತಿ ಅವರನ್ನೂ ಠಾಣೆಗೆ ಕರೆಸಿ, ದಂಪತಿಗೆ ಫಲತಾಂಬೂಲ, ಉಡುಗೊರೆ ನೀಡಿ, ತುಂಬು…

ಎರಡನೇ ಮದುವೆಯಾಗುತ್ತಿದ್ದ ಹೆಡ್ ಕಾನ್‍ಸ್ಟೇಬಲ್ ಪೊಲೀಸ್ ಠಾಣೆಗೆಳೆದೊಯ್ದ ಪತ್ನಿ!
ಮೈಸೂರು

ಎರಡನೇ ಮದುವೆಯಾಗುತ್ತಿದ್ದ ಹೆಡ್ ಕಾನ್‍ಸ್ಟೇಬಲ್ ಪೊಲೀಸ್ ಠಾಣೆಗೆಳೆದೊಯ್ದ ಪತ್ನಿ!

July 10, 2018

ಮೈಸೂರು:  ದೇವಸ್ಥಾನವೊಂದರಲ್ಲಿ ಎರಡನೇ ಮದುವೆಯಾಗುತ್ತಿದ್ದ ಹೆಡ್‍ಕಾನ್‍ಸ್ಟೇಬಲ್ ಓರ್ವ ರೆಡ್‍ಹ್ಯಾಂಡಾಗಿ ಪತ್ನಿಗೆ ಸಿಕ್ಕಿ ಬಿದ್ದಿರುವ ಪ್ರಸಂಗ ಮೈಸೂರಿನಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಮೈಸೂರಿನ ಸಿಎಆರ್‍ನಲ್ಲಿ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜಾಚಾರಿ ಅವರೇ ಪತ್ನಿ, ಇಬ್ಬರು ಮಕ್ಕಳಿದ್ದರೂ ಮತ್ತೊಂದು ಮದುವೆಯಾಗುತ್ತಿದ್ದವರು. ಭಾನುವಾರ ಬೆಳಿಗ್ಗೆ ವಿಜಯನಗರ 2ನೇ ಹಂತದ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮದುವೆ ನಡೆಯುತ್ತಿತ್ತು. ಪಂಚೆ, ಬಿಳಿ ಷರ್ಟ್, ಪೇಟ ತೊಟ್ಟು ಹಸೆಮಣೆ ಮೇಲೆ ಕುಳಿತಿದ್ದ ರಾಜಾಚಾರಿ, ಇನ್ನೇನು ವಧುವಿಗೆ ತಾಳಿ ಕಟ್ಟುವುದರಲ್ಲಿದ್ದರು.ಹೇಗೋ ಮಾಹಿತಿ ತಿಳಿದ ಅವರ ಪತ್ನಿ ಸವಿತಾ,…

ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ
ಮೈಸೂರು

ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ

July 9, 2018

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ ಗೌರವವಿಲ್ಲ. ಸ್ಥಾನಮಾನ ಕೇಳಿದರೆ ಗ್ರಾಮರಸ್ ಆಗಿ ಇಲ್ಲ ಎನ್ನುತ್ತಾರೆ ಎಂದು ಮಹಿಳಾ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದಾಗ ಮಾಜಿ ಸಚಿವೆ ಮೋಟಮ್ಮ ತಬ್ಬಿಬ್ಬಾದ ಘಟನೆ ಧಾರವಾಡದಲ್ಲಿ ಇಂದು ನಡೆಯಿತು. ಧಾರವಾಡದ ವಿದ್ಯಾವರ್ಧಕ ಸಂಘ ಭವನದಲ್ಲಿ ಕಾಂಗ್ರೆಸ್‍ನಿಂದ `ಚುನಾವಣೆ: ಒಳ-ಹೊರಗೆ’ ಕಾರ್ಯಕ್ರಮ ಮಾಜಿ ಸಚಿವೆ ಮೋಟಮ್ಮ ನೇತೃತ್ವದಲ್ಲಿ ನಡೆಯುತ್ತಿತ್ತು. ಈ ವೇಳೆ ಅನಿತಾ ಗುಂಜಾರಾ ಎಂಬ ಕಾರ್ಯಕರ್ತೆ ಕಾಂಗ್ರೆಸ್ ಮುಖಂಡರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಮೋಟಮ್ಮನವರು ತಬ್ಬಿಬ್ಬಾದರು. ಅನಿತಾ ಅವರು ಮಾತನಾಡುತ್ತಾ, ಕಾಂಗ್ರೆಸ್‍ನಲ್ಲಿ ಮಹಿಳೆಯರಿಗೆ…

ಚಾಮುಂಡಿಬೆಟ್ಟದ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರ ಸಾವಿಗೆ ಕಾರಣವಾದ ಕಾರು ಪತ್ತೆಗೆ ಪೊಲೀಸರ ಕಾರ್ಯಾಚರಣೆ
ಮೈಸೂರು

ಚಾಮುಂಡಿಬೆಟ್ಟದ ಹಿಟ್ ಅಂಡ್ ರನ್ ಪ್ರಕರಣ: ಇಬ್ಬರ ಸಾವಿಗೆ ಕಾರಣವಾದ ಕಾರು ಪತ್ತೆಗೆ ಪೊಲೀಸರ ಕಾರ್ಯಾಚರಣೆ

July 9, 2018

ಮೈಸೂರು: ಚಾಮುಂಡಿಬೆಟ್ಟದ ಐ-ವಾಚ್ ಟವರ್ ಬಳಿ ಕಳೆದ ನಾಲ್ಕು ದಿನದ ಹಿಂದೆ ಬುಲೆಟ್‍ಗೆ ಡಿಕ್ಕಿ ಹೊಡೆದು ವಿದ್ಯಾರ್ಥಿಗಳಿಬ್ಬರನ್ನು ಬಲಿ ಪಡೆದು ಪರಾರಿಯಾಗಿರುವ ಕಾರಿನ ಸುಳಿವು ಪೊಲೀಸರಿಗೆ ದೊರೆತಿದ್ದು, ಪರಾರಿಯಾಗಿರುವ ಕಾರಿನ ಪತ್ತೆಗೆ ಜಿಲ್ಲೆಯಾದ್ಯಂತ ಮೈಸೂರು ಪೊಲೀಸರು ಹುಡುಕತೊಡಗಿದ್ದಾರೆ. ಧಾರ್ಮಿಕ ಹಾಗೂ ಪ್ರವಾಸಿ ತಾಣವೂ ಆಗಿರುವ ಚಾಮುಂಡಿಬೆಟ್ಟಕ್ಕೆ ಗುರುವಾರ(ಜು.5) ಸಂಜೆ ಮೈಸೂರು-ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಾಲೇ ಜಿನ ವಿದ್ಯಾರ್ಥಿಗಳಾದ ಅರವಿಂದರಾವ್ (22) ಹಾಗೂ ಎಂ.ಸಿ.ನಮನ (21) ಬುಲೆಟ್(ಕೆಎ-09, ಹೆಚ್‍ಎಲ್ -7829)ನಲ್ಲಿ ತೆರಳಿದ್ದರು. ಬೆಟ್ಟದಿಂದ ವಾಪಸ್ಸಾಗುತ್ತಿದ್ದಾಗ ಮಾರ್ಗ ಮದ್ಯೆ ವಾಚ್…

ಜಾವಾ ನನ್ನ ಜೀವ
ಮೈಸೂರು

ಜಾವಾ ನನ್ನ ಜೀವ

July 9, 2018

ರಸ್ತೆಗಿಳಿದ ನೂರಾರು ರೋಡ್ ಕಿಂಗ್‍ಗಳು ಜಾವಾ ದಿನದ ಹಿನ್ನೆಲೆಯಲ್ಲಿ ಗಮನ ಸೆಳೆದ ರ‍್ಯಾಲಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ಜಾವಾ ಮತ್ತು ಯೆಜ್ಡಿ ಬೈಕ್‍ಗಳು ಸದ್ದು ಮಾಡಿದವು. ಎಲ್ಲೆಂದರಲ್ಲಿ ರಸ್ತೆ ಸುಂದರಿಯದ್ದೇ ಕಾರುಬಾರಾಗಿತ್ತು. ವಿವಿಧ ರಸ್ತೆಗಳಲ್ಲಿ ಸಾಲು-ಸಾಲಾಗಿ ಸಾಗಿದ ಹಳೆಯ ಬೈಕ್‍ಗಳು ಸಾರ್ವಜನಿಕರ ಗಮನ ಸೆಳೆದವು. ಜಾವಾ ದಿನದ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಜಾವಾ ಬೈಕ್ ಹೊಂದಿರುವ ಸವಾರರು ಭಾನುವಾರ ತಮ್ಮ-ತಮ್ಮ ಜಾವಾ ಮತ್ತು ಯೆಜ್ಡಿ ಬೈಕ್‍ಗಳೊಂದಿಗೆ ರ‍್ಯಾಲಿ ನಡೆಸಿ `ಈ…

1 1,495 1,496 1,497 1,498 1,499 1,611
Translate »