ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

July 9, 2018

ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಇತಿಹಾಸ್ ಸಾಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿ ಮಾತ ನಾಡಿದ ಬಿಜೆಪಿ ಮುಖಂಡ ಎನ್.ವಿ. ಫಣೀಶ್, ವಿದ್ಯಾರ್ಥಿಗಳು ಎತ್ತರಕ್ಕೆ ಬೆಳೆಯಬೇಕಾದರೆ ತಮ್ಮ ತಪ್ಪುಗಳನ್ನು ಅರಿತುಕೊಳ್ಳಬೇಕು. ಸಮಾಜದ ಹಿತಕ್ಕಾಗಿ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿ ಗಳಲ್ಲಿ ಒಳ್ಳೆಯ ದೃಷ್ಟಿಕೋನಗಳನ್ನು ಬೆಳೆಸ ಬೇಕು. ಮುಂದಿನ ಪೀಳಿಗೆ ಸಮಾಜಕ್ಕೆ ಆಸ್ತಿಯಾಗಬೇಕೇ ವಿನಃ ಹೊರೆಯಾಗಬಾರದು. ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಯನ್ನು ಇಮ್ಮಡಿಗೊಳಿಸಲು ಪ್ರತಿಭಾ…

ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಅಧ್ಯಯನ ಅತ್ಯಗತ್ಯ: ಜೋಹರ್ ಜಬೀನ್ ಅಭಿಮತ
ಮೈಸೂರು

ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ಅಧ್ಯಯನ ಅತ್ಯಗತ್ಯ: ಜೋಹರ್ ಜಬೀನ್ ಅಭಿಮತ

July 9, 2018

ಮೈಸೂರು: ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲಿ ಪುಸ್ತಕ ನೋಡಿ ಉತ್ತರ ಬರೆಯುವ ಪರೀಕ್ಷಾ ಪದ್ಧತಿ ಜಾರಿಗೊಳಿಸಲು ಚಿಂತನೆ ನಡೆಯುತ್ತಿದ್ದು, ಇದಕ್ಕೆ ತಳಮಟ್ಟದಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ಆದಲ್ಲಿ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕಿ ಜೋಹರ್ ಜಬೀನ್ ಅಭಿಪ್ರಾಯಪಟ್ಟರು. ಮೈಸೂರಿನ ಜಯಲಕ್ಷ್ಮೀಪುರಂನಲ್ಲಿರುವ ಮಹಾಜನ ಕಾಲೇಜಿನ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ…

ಯೋಗ, ಆಯುರ್ವೇದ ಚಿಕಿತ್ಸೆಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯ
ಮೈಸೂರು

ಯೋಗ, ಆಯುರ್ವೇದ ಚಿಕಿತ್ಸೆಯಲ್ಲಿ ಮತ್ತಷ್ಟು ಸಂಶೋಧನೆ ಅವಶ್ಯ

July 9, 2018

ಮೈಸೂರು: ಇತ್ತೀಚೆಗೆ ಜಗತ್ತಿನ ಬಹುತೇಕ ಜನರು ಯೋಗ ಮತ್ತು ಆಯುರ್ವೇದ ಚಿಕಿತ್ಸೆಗೆ ಹೆಚ್ಚಿನ ಒಲವು ತೋರುತ್ತಿರುವುದರಿಂದ, ಈ ಕ್ಷೇತ್ರದಲ್ಲಿ ಮತ್ತಷ್ಟು ಸಂಶೋಧನೆ ಅಗತ್ಯ ಎಂದು ಹಿರಿಯ ಆಯುರ್ವೇದ ವೈದ್ಯ (ಯೋಗ ಮತ್ತು ಪ್ರಕೃತಿ ಚಿಕಿತ್ಸೆ) ಡಾ.ಎ.ಎಸ್.ಚಂದ್ರಶೇಖರ ಅಭಿಪ್ರಾಯಪಟ್ಟರು. ಚಾಮುಂಡಿಬೆಟ್ಟ ತಪ್ಪಲಿನ ಜೆಎಸ್‍ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಕಾಲೇಜು ವತಿಯಿಂದ ಆಯೋಜಿಸಿದ್ದ `ವೈದ್ಯ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ತಂತ್ರಜ್ಞಾನ ಬೆಳೆದಂತೆ ಹೆಚ್ಚಿನ ಜನರಲ್ಲಿ ಆರೋಗ್ಯ ಸಮಸ್ಯೆ, ಒತ್ತಡದ ಬದುಕು ಸೇರಿದಂತೆ ಇತರೆ ಆರೋಗ್ಯ…

ಶರಣರ ಜೀವನ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ
ಮೈಸೂರು

ಶರಣರ ಜೀವನ ಮೌಲ್ಯಗಳು ಎಂದೆಂದಿಗೂ ಪ್ರಸ್ತುತ

July 9, 2018

ಮೈಸೂರು:  ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಮೈಸೂರಿನ ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಶಿವಾನುಭವ ದಾಸೋಹ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಬಿ.ವಿ.ವಸಂತಕುಮಾರ್ ಅವರು `ಶರಣರ ಜೀವನಮೌಲ್ಯ’ ಕುರಿತು ಉಪನ್ಯಾಸ ನೀಡಿದರು. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ, ಸತ್ಯಕ್ಕ ಮೊದಲಾದ ಶಿವಶರಣರ ವಚನ ಗಳನ್ನು ಉದಾಹರಿಸುತ್ತಾ ಅವರು ಶರಣರ ಜೀವನ ಮೌಲ್ಯಗಳು ಯಾವುದೋ ಒಂದು ಕಾಲಕ್ಕೆ ಸೀಮಿತವಾದುದಲ್ಲ. ಅವು ಸಾರ್ವಕಾಲಿಕ ಸತ್ಯ. ಮನುಷ್ಯ-ಮನು ಷ್ಯರ ನಡುವೆ…

ರೈತರು ಇನ್ನು ಮುಂದೆ ಖಾಸಗಿ ಶಾಲೆ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ
ಮೈಸೂರು

ರೈತರು ಇನ್ನು ಮುಂದೆ ಖಾಸಗಿ ಶಾಲೆ ಶುಲ್ಕ ಪಾವತಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬರುತ್ತೆ

July 9, 2018

ಮೈಸೂರು:  ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಸೇವಾ ಮನೋಭಾವನೆ ಕ್ಷೀಣಿಸುತ್ತಿದೆ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಬೇಸರ ವ್ಯಕ್ತಪಡಿಸಿದರು. ವಿದ್ಯಾರಣ್ಯಪುರಂನ ಒಕ್ಕಲಿಗರ ಸಂಘದ ಸಭಾಂಗಣದಲ್ಲಿ ನಡೆದ ‘ಅತ್ತಿಗುಪ್ಪೆ ಗೆಳೆಯರ ಬಳಗ’ದ ಉದ್ಘಾಟನೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೇವೆ ಮಾಡಲ್ಲ, ಬದಲು ದುಡ್ ಮಾಡ್‍ಬೇಕು ಎನ್ನುವ ಇಂದಿನ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಆದರ್ಶಗಳೇ ಇಲ್ಲವಾಗಿವೆ. ‘ದುಡ್ಡೆ ದೊಡ್ಡಪ್ಪ ವಿದ್ಯೆ ಅದರಪ್ಪಾ’ ಎನ್ನುವ ಕಾಲ ಹೋಗಿ ದುಡ್ಡೆ ಎಲ್ಲರಪ್ಪ ಎಂಬಂತಾಗಿದೆ. ಹೋರಾಟಗಾರರು ಮತ್ತು ಸಮಾಜ ಸೇವಕರನ್ನು…

ಡೊಳ್ಳು ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಎಡಿಜಿಪಿ ಭಾಸ್ಕರ್‍ರಾವ್ ಸೂಚನೆ
ಮೈಸೂರು

ಡೊಳ್ಳು ಹೊಟ್ಟೆ ಕರಗಿಸುವಂತೆ ಪೊಲೀಸರಿಗೆ ಎಡಿಜಿಪಿ ಭಾಸ್ಕರ್‍ರಾವ್ ಸೂಚನೆ

July 9, 2018

ಮೈಸೂರು:  ಪೊಲೀಸರಲ್ಲಿ ಆರೋಗ್ಯದ ಬಗ್ಗೆ ಶಿಸ್ತು ಮೂಡಿಸಲು ಕೆಎಸ್‍ಆರ್‍ಪಿ ಎಡಿಜಿಪಿ ಭಾಸ್ಕರ್ ರಾವ್ ಅವರು ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದಾರೆ. ಪೊಲೀಸ್ ಇಲಾಖೆಯು ಪೊಲೀಸರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಡೊಳ್ಳು ಹೊಟ್ಟೆ, ಬೊಜ್ಜು ಬೆಳೆಸಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ದೈಹಿಕ ಸಾಮಥ್ರ್ಯದಿಂದ ಇಲಾಖೆಯಲ್ಲಿ ಅಶಿಸ್ತು ಮೂಡಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಹಾಗಾಗಿ ಈ ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ 12 ಕೆಎಸ್‍ಆರ್‍ಪಿ ಪಡೆಗಳಲ್ಲಿರುವ ಪೊಲೀಸರ ಡೊಳ್ಳು ಹೊಟ್ಟೆ ಕರಗಿಸುವ ಜವಾಬ್ದಾರಿ ಆಯಾಯ ಕಮಾಂಡೆಂಟ್‍ಗಳದ್ದಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ….

ಗಬ್ಬೆದ್ದು ನಾರುತ್ತಿದೆ ಎಂ.ಜಿ.ರಸ್ತೆ ಮಾರುಕಟ್ಟೆ
ಮೈಸೂರು

ಗಬ್ಬೆದ್ದು ನಾರುತ್ತಿದೆ ಎಂ.ಜಿ.ರಸ್ತೆ ಮಾರುಕಟ್ಟೆ

July 9, 2018

ಮೈಸೂರು:  ಒಂದೆಡೆ ಕಸದ ರಾಶಿ, ಕೊಳೆತ ತರಕಾರಿಗಳ ದುರ್ವಾಸನೆ, ಮತ್ತೊಂದೆಡೆ ಚರಂಡಿಗೆ ಅಳವಡಿಸಿದ್ದ ಸ್ಲ್ಯಾಬ್‍ಗಳು ಒಡೆದಿದ್ದು, ಪಾದಚಾರಿಗಳ ಸುಗಮ ಸಂಚಾರಕ್ಕೂ ಅಡ್ಡಿ… ಇದು ಎಂ.ಜಿ.ರಸ್ತೆಯ ಮಾರುಕಟ್ಟೆ ಸ್ಥಿತಿ. ಅಗ್ರಹಾರದಿಂದ ಮಾಲ್ ಆಫ್ ಮೈಸೂರು ಕಡೆಗೆ ಹೋಗುವ ಎಂ.ಜಿ.ರಸ್ತೆಯಲ್ಲಿರುವ ಮಾರು ಕಟ್ಟೆಯ ಬಳಿ ಕೊಳೆತ ತರಕಾರಿಗಳು, ಬಾಳೆ ಎಲೆ ಗಳು ಹಾಗೂ ಪ್ಲಾಸ್ಟಿಕ್ ಸೇರಿದಂತೆ ಕಸದ ರಾಶಿ ಮುಕ್ತವಾಗಿ ಎಲ್ಲರನ್ನು ಸ್ವಾಗತಿಸಿದರೆ, ಮತ್ತೊಂದೆಡೆ ಮೈಸೂರಿನ ಸುತ್ತಮುತ್ತಲಿನ ವಿವಿಧ ಭಾಗಗಗಳಿಂದ ತರಕಾರಿಗಳನ್ನು ಹೊತ್ತುತರುವ ಆಟೋ, ಬೈಕ್ ಸೇರಿದಂತೆ ಮತ್ತಿತರೆ ವಾಹನಗಳನ್ನು…

ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ
ಮೈಸೂರು

ಪ್ರೋತ್ಸಾಹ ಧನಕ್ಕಾಗಿ ಅರ್ಜಿ ಆಹ್ವಾನ

July 9, 2018

ಮೈಸೂರು: ಕನ್ನಡ ಪುಸ್ತಕ ಪ್ರಾಧಿಕಾರವು ಪರಿಶಿಷ್ಟ ಜಾತಿ ಸಾಹಿತಿಗಳ ಕೃತಿ ಪ್ರಕಟಣೆಗೆ ತಲಾ ರೂ.35,000-00ಗಳ ಪ್ರೋತ್ಸಾಹಧನ ನೀಡುವ ಯೋಜನೆ ರೂಪಿಸಿದ್ದು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿದಾರರು ಕಡ್ಡಾಯವಾಗಿ ತಮ್ಮ ಆರ್.ಡಿ. ನಂಬರ್ ಇರುವ ಜಾತಿ ಪ್ರಮಾಣ ಪತ್ರದೊಂದಿಗೆ A4 ಸೈಜ್ ಹಾಳೆಯಲ್ಲಿ ಡಿ.ಟಿ.ಪಿ. ಮಾಡಿದ ಕನಿಷ್ಟ 200 ಪುಟಗಳಿರುವ ಕೃತಿಯನ್ನು ಸಲ್ಲಿಸಬಹುದಾಗಿದೆ. ಈಗಾಗಲೇ ಸಾಹಿತ್ಯ ಕೃತಿಗಳು ಪ್ರಕಟವಾಗಿರುವ ಲೇಖಕರೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ವಿದೆ. 18 ವರ್ಷ ಮೇಲ್ಪಟ್ಟ ಯಾವುದೇ ಲೇಖಕರೂ ಕೂಡ ಅರ್ಜಿಗಳನ್ನು ಸಲ್ಲಿಸ ಬಹುದು….

ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು

ಪ್ರಶಸ್ತಿಗೆ ಅರ್ಜಿ ಆಹ್ವಾನ

July 9, 2018

ಮೈಸೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 5 ವರ್ಷ ಅತ್ಯುತ್ತಮ ಸೇವೆ ಸಲ್ಲಿಸಿರುವ ಇಬ್ಬರು ವ್ಯಕ್ತಿ ಹಾಗೂ ಎರಡು ಸಂಸ್ಥೆಗಳಿಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲು ಅರ್ಜಿ ಆಹ್ವಾನಿಸಿದೆ. ಪ್ರತಿ ವ್ಯಕ್ತಿಗೆ ನೀಡುವ ಪ್ರಶಸ್ತಿಯು ರೂ. 25,000/-ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ಮತ್ತು ಪ್ರತಿ ಸಂಸ್ಥೆಗೆ ನೀಡುವ ಪ್ರಶಸ್ತಿಯು ರೂ. 1.00 ಲಕ್ಷಗಳ ನಗದು ಬಹು ಮಾನ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಈ…

ನಾಳೆ ಮೈಸೂರಿನ ಕೆಲವೆಡೆ ನೀರು ವ್ಯತ್ಯಯ
ಮೈಸೂರು

ನಾಳೆ ಮೈಸೂರಿನ ಕೆಲವೆಡೆ ನೀರು ವ್ಯತ್ಯಯ

July 9, 2018

ಮೈಸೂರು: ತುರ್ತು ಕಾಮಗಾರಿ ನಿಮಿತ್ತ ಜು.10ರಂದು ಮೈಸೂರು ಪಾಲಿಕೆ ವಾರ್ಡ್ ಸಂಖ್ಯೆ 2, 3, 4, 5, 6, 7, 8, 9, 11, 12, 13, 14, 15, 16, 17, 18, 19, 21, 22, 24 ಮತ್ತು ದಟ್ಟಗಳ್ಳಿ 3ನೇ ಹಂತದಲ್ಲಿ ನೀರು ಸರಬ ರಾಜಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿವಿ ವಾಟರ್ ವಕ್ರ್ಸ್ ತಿಳಿಸಿದೆ.

1 1,497 1,498 1,499 1,500 1,501 1,611
Translate »