ಮೈಸೂರು, ಜ.4-ಪದವೀಧರೆಯನ್ನು ಅತ್ಯಾಚಾರ ಮಾಡಿ, ಬಲವಂತವಾಗಿ ಮದುವೆಯಾದ ನಂತರ ಜಾತಿ ನಿಂದನೆ ಮಾಡಿರುವ ಬಗ್ಗೆ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಪ್ರಕರಣ ದಾಖಲಾಗಿದೆ. ವಿವರ: ಸ್ಯಾಂಟ್ರೋ ರವಿ ಮೊದಲಿಗೆ ಫೈನಾನ್ಷಿ ಯಲ್ ಅಸಿಸ್ಟೆಂಟ್ ಹುದ್ದೆಗೆ ಬೇಕಾಗಿದ್ದಾರೆ ಎಂದು ಪತ್ರಿಕೆಯಲ್ಲಿ 2019ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಜಾಹೀರಾತು ನೀಡಿದ್ದಾನೆ. ಜಾಹೀರಾತಿನಲ್ಲಿದ್ದ ಮೊಬೈಲ್ ಸಂಖ್ಯೆಗೆ ಮೈಸೂರಿನ ವಿಜಯನಗರ ನಿವಾಸಿ 27 ವರ್ಷ ವಯಸ್ಸಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರೆ 2019ರ ಮಾರ್ಚ್ 2ರಂದು ಕರೆ ಮಾಡಿ ದಾಗ, ಸ್ಯಾಂಟ್ರೊ…
ಸಿಎಫ್‍ಟಿಆರ್‍ಐ ಆವರಣದಲ್ಲಿ ಜೋಡಿ ಚಿರತೆ ಪ್ರತ್ಯಕ್ಷ
January 5, 2023ಮೈಸೂರು, ಜ.4(ಎಂಟಿವೈ)- ಮೈಸೂರಿನ ಹೃದಯ ಭಾಗದ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ (ಸಿಎಫ್‍ಟಿಆರ್‍ಐ) ವಿಶಾಲ ಆವರಣದಲ್ಲಿ ಮುಂಜಾನೆ ಜೋಡಿ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ, ಇವುಗಳ ಸೆರೆಗೆ ಕಾರ್ಯಾ ಚರಣೆ ಆರಂಭಿಸಿದೆ. ಮುಂಜಾಗ್ರತಾ ಕ್ರಮವಾಗಿ ಸಿಎಫ್‍ಟಿಆರ್‍ಐ ಶಾಲೆಗೆ ರಜೆ ಘೋಷಿಸಲಾಗಿದೆ. ಇತ್ತೀಚಿನ ದಿನ ಗಳಲ್ಲಿ ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಭಯದ ವಾತಾವರಣ ನಿರ್ಮಾಣ ವಾಗಿರುವ ಬೆನ್ನಲ್ಲೇ ಇದೀಗ ಮೈಸೂರಿನ ಹೃದಯ ಭಾಗದಲ್ಲೇ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿ ಆತಂಕ…
ಮೈಸೂರು ನಗರ, ಗ್ರಾಮಾಂತರ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಒತ್ತಾಯ
January 5, 2023ಮೈಸೂರು, ಜ.4 (ಆರ್‍ಕೆಬಿ)- ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸುವ ಬೇಡಿಕೆ ವಿಷಯ ಮತ್ತೆ ಪ್ರಸ್ತಾಪವಾಗಿದೆ. ಮೈಸೂರು ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಕುರಿತು ಬುಧವಾರ ಮೈಸೂರಿನ ರಾಣಿ ಬಹದ್ದೂರ್ ಸಭಾಂಗಣ ದಲ್ಲಿ ನಗರಪಾಲಿಕೆ 2023-24ನೇ ಸಾಲಿನ ಬಜೆಟ್ ಕರಡು ಸಿದ್ಧಪಡಿಸುವ ಸಂಬಂಧ ಪೂರ್ವಭಾವಿಯಾಗಿ ಕರೆದಿದ್ದ ಎರಡನೇ ಸುತ್ತಿನ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಈ ಒತ್ತಾಯಗಳು ಕೇಳಿ ಬಂದವು. ಮೈಸೂರು ನಗರ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣವನ್ನು ಸ್ಥಳಾಂತರಿಸಲು ಕ್ರಮ…
ಅಗ್ನಿಶಾಮಕ ಸಿಬ್ಬಂದಿಯ ವಸತಿಗೃಹದಲ್ಲಿ ಸಿಲಿಂಡರ್ ಸ್ಫೋಟ: 6 ಮಂದಿಗೆ ಗಾಯ
January 5, 2023ಮೈಸೂರು, ಜ.4(ಎಂಟಿವೈ)-ಮೈಸೂರಿನ ಬನ್ನಿಮಂಟಪದಲ್ಲಿರುವ ಅಗ್ನಿಶಾಮಕ ಸಿಬ್ಬಂದಿಯ ವಸತಿಗೃಹ ದಲ್ಲಿ ಅಡುಗೆ ಅನಿಲ(ಎಲ್‍ಪಿಜಿ)ದ ಸಿಲಿಂಡರ್ ಸ್ಫೋಟಿಸಿ 6 ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೈಸೂರು-ಬೆಂಗಳೂರು ಮುಖ್ಯ ರಸ್ತೆಯ ಬನ್ನಿಮಂಟಪದ ಅಗ್ನಿಶಾಮಕ ಠಾಣೆಯ ಅನತಿ ದೂರದ ಸಿಬ್ಬಂದಿ ಮಹದೇವ್ ಅವರ ವಸತಿ ಗೃಹದಲ್ಲಿ ಸಿಲಿಂಡರ್ ಸ್ಫೋಟಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಫೈರ್‍ಮನ್ ಮಹದೇವ ಅವರ ಮನೆಯಲ್ಲಿ ನಾಲ್ವರು ಹಾಗೂ ಪಕ್ಕದ ಮನೆಯ ಇಬ್ಬರು ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ವಿವರ: ಇಂದು ಬೆಳಗ್ಗೆ…
ರಾಜ್ಯದಲ್ಲಿ ಬಿಜೆಪಿ ಕೊನೆಯ ದಿನಗಳನ್ನು ಎಣಿಸುತ್ತಿದೆ
January 3, 2023ಮೈಸೂರು, ಜ.2(ಆರ್‍ಕೆಬಿ)- ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಜೆಡಿಎಸ್ ವಿರುದ್ಧ ಆಧಾರರಹಿತ ಮತ್ತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಮೂಲಕ ಬಿಜೆಪಿ ತನ್ನ ಸಮಾಧಿಯನ್ನು ತಾನೇ ತೋಡಿಕೊಳ್ಳುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನ ಲಕ್ಷ್ಮೀಪುರಂನಲ್ಲಿರುವ ನೇರಂಬಳ್ಳಿ ಕನ್ವೆನ್ಷನ್ ಹಾಲ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಸಭೆಯಲ್ಲಿ ಅಮಿತ್ ಶಾ ಜೆಡಿಎಸ್ ಬಗ್ಗೆ ಸಾರ್ವಜನಿಕವಾಗಿ ಟೀಕೆ ಮಾಡಿದ್ದಾರೆ. ಜೆಡಿಎಸ್ ಪಕ್ಷವನ್ನು ಭ್ರಷ್ಟ,…
ಬಿಎಸ್‍ವೈ, ಬೊಮ್ಮಾಯಿ ಅವರನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದನ್ನು ವೀರಶೈವ ಸಮುದಾಯ ಅರ್ಥ ಮಾಡಿಕೊಳ್ಳಬೇಕು
January 3, 2023ಮೈಸೂರು, ಜ.2(ಆರ್‍ಕೆಬಿ)- ಬಿಜೆಪಿ ಬೆಂಬಲದ ಮೂಲವಾಗಿರುವ ವೀರಶೈವ ಲಿಂಗಾಯಿತ ಸಮುದಾಯದ ಮುಖಂ ಡರನ್ನು ಬಿಜೆಪಿ ಹೈಕಮಾಂಡ್ ನಿಯಂ ತ್ರಿಸುತ್ತಿದೆ. ಇಂದು ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸ್ಥಿತಿ ಏನಾಗಿದೆ ಎಂಬುದನ್ನು ವೀರಶೈವ ಲಿಂಗಾ ಯತ ಮುಖಂಡರು ಅರ್ಥ ಮಾಡಿಕೊಳ್ಳ ಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಮೈಸೂರಿನ ನೇರಂಬಳ್ಳಿ ಕನ್ವೆನ್ಷನ್ ಹಾಲ್ ನಲ್ಲಿ ಸೋಮವಾರ ಕೃಷ್ಣರಾಜ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಕೆ.ವಿ. ಮಲ್ಲೇಶ್ ಆಯೋಜಿಸಿದ್ದ `ಶರಣರೊಂ ದಿಗೆ ಕುಮಾರಣ್ಣ’…
ಅರಬ್ಬಿತಿಟ್ಟಲ್ಲಿ ಮತ್ತೊಂದು ಸಲಗ ಸೆರೆ
January 3, 2023ಮೈಸೂರು,ಜ.2(ಎಂಟಿವೈ)- ಮೈಸೂರು, ಹುಣಸೂರು, ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭೀತಿ ಹುಟ್ಟಿಸಿ, ಕೊನೆಗೆ ಅರಬ್ಬಿತಿಟ್ಟು ಪ್ರದೇಶ ಹೊಕ್ಕಿದ್ದ ಮತ್ತೊಂದು ಸಲಗನನ್ನು ಸುರಕ್ಷಿತವಾಗಿ ಸೆರೆ ಹಿಡಿದು, ರೇಡಿಯೋ ಕಾಲರ್ ಅಳವಡಿಸಿ ನಾಗರಹೊಳೆ ಅಭಯಾರಣ್ಯದಲ್ಲಿ ಬಿಡುಗಡೆ ಮಾಡಿದ್ದಾರೆ. ಹುಣಸೂರು ತಾಲೂಕಿನ ಅರಬ್ಬಿತಿಟ್ಟು ಪ್ರದೇಶ ಸೇರಿ ಸುತ್ತಮುತ್ತಲ ರೈತರು ಹೊಲ ಗಳಲ್ಲಿ ಬೆಳೆದಿದ್ದ ಫಸಲನ್ನು ತಿಂದು, ಹಾಳು ಮಾಡಿ ನಾನಾ ರೀತಿ ಉಪಟಳ ನೀಡು ವುದರೊಂದಿಗೆ ಸ್ಥಳೀಯರಲ್ಲಿ ಭಯದ ವಾತಾವರಣ ಉಂಟು ಮಾಡಿದ್ದ ಎರಡು ಗಂಡಾನೆಗಳನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ…
ಗ್ರಾಮಕ್ಕೆ ದಿಢೀರ್ ನುಗ್ಗಿದ ಕಾಡಾನೆಗೆ ರೈತ ಮಹಿಳೆ ಬಲಿ
December 31, 2022ಬಿಳಿಕೆರೆ (ಹುಣಸೂರು ತಾಲೂಕು), ಡಿ. 30(ಎಂಟಿವೈ)- ಶುಕ್ರವಾರ ಬೆಳ್ಳಂಬೆಳಗ್ಗೆ ಹುಣಸೂರು ತಾಲೂಕು ಬಿಳಿಕೆರೆ ಬಳಿಯ ಚಿಕ್ಕಬೀಚನಹಳ್ಳಿ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ರೈತ ಮಹಿಳೆ ಯನ್ನು ಕೊಂದು, ಇಬ್ಬರು ಯುವಕರನ್ನು ಗಾಯಗೊಳಿಸುವ ಮೂಲಕ ಪುಂಡಾಟ ಮೆರೆದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತು. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕೆಲವೇ ಗಂಟೆಗಳಲ್ಲಿ ಪುಂಡಾನೆಯನ್ನು ಸೆರೆ ಹಿಡಿದು ಗ್ರಾಮಸ್ಥರ ಆತಂಕವನ್ನು ದೂರ ಮಾಡಿದ್ದಾರೆ. ಚಿಕ್ಕಬೀಚನಹಳ್ಳಿ ಗ್ರಾಮದ ಸಿದ್ದೇಗೌಡ ಎಂಬುವರ ಪತ್ನಿ ಚಿಕ್ಕಮ್ಮ(55) ಕಾಡಾನೆ ದಾಳಿಯಿಂದ ಮೃತಪಟ್ಟವರಾಗಿದ್ದು, ಬಿಳಿಕೆರೆ ಗ್ರಾಮದ…
ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್‍ಗೆ ಸರ್ಕಾರ ಚಿಂತನೆ
December 30, 2022ಮೈಸೂರು,ಡಿ.29(ಆರ್‍ಕೆ)-ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಿನಿ ಫುಡ್‍ಪಾರ್ಕ್ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಕರ್ನಾಟಕ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾದ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಮೊಹ ಮದ್ ಇರ್ಫಾನ್ ಇಂದಿಲ್ಲಿ ತಿಳಿಸಿದ್ದಾರೆ. ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಜಿಲ್ಲಾ ಕೈಗಾರಿಕಾ ಸಂಘದ ಸಹ ಯೋಗದಲ್ಲಿ ಮೈಸೂರಿನ ರುಚಿ ದಿ ಪ್ರಿನ್ಸ್ ಹೋಟೆಲ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ಆಹಾರ ಸಂಸ್ಕರಣೆ, ಮುನಿಸಿ ಪಾಲಿಟಿ ಕಾಯ್ದೆ ಮತ್ತು ಆನ್ ಬೋರ್ಡಿಂಗ್ ಜೆಡ್ ಪ್ರಮಾಣೀಕರಣ…
ಜಾಹಿರಾತು ಮೂಲಕ ಗ್ರಾಹಕರಿಗೆ ವಂಚಿಸಿದರೆ ಕಾನೂನು ಕ್ರಮ
December 30, 2022ಮೈಸೂರು, ಡಿ.29(ಆರ್‍ಕೆ)- ತಪ್ಪು ಮಾಹಿತಿಯೊಂದಿಗೆ ಜಾಹಿರಾತು ಮೂಲಕ ಗ್ರಾಹಕರಿಗೆ ಮೋಸ ಮಾಡಿದರೆ ಉದ್ದಿಮೆ ದಾರರು, ವ್ಯಾಪಾರಸ್ಥರ ವಿರುದ್ಧ ಪ್ರಕರಣ ದಾಖಲಿಸಿ, ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿ ಹಾರ ಆಯೋಗದ ಅಧ್ಯಕ್ಷ ಬಿ. ನಾರಾ ಯಣಪ್ಪ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಗ್ರಾಹಕರ ವ್ಯಾಜ್ಯ ಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಎಂಬಿಎ ವಿಭಾಗದಲ್ಲಿ ಆಯೋಜಿಸಿದ್ದ…