ಬೆಂಗಳೂರು: ಐಪಿಎಲ್ ಪಂದ್ಯಾವಳಿ ವೇಳೆ ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದ ಕಾಂಪೌಂಡ್‍ನಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ 14 ಆರೋಪಿಗಳ ಪೈಕಿ ಮೂವರು ಆರೋಪಿಗಳು ಬುಧವಾರ ನ್ಯಾಯಾ ಲಯದಲ್ಲಿ ತಪೆÇ್ಪಪ್ಪಿಕೊಂಡಿದ್ದಾರೆ. ಆರೋಪಿಗಳಾದ ಬಿಹಾರದ ದರ್ಬಾಂಗದ ಗೌಹರ್ ಅಜೀಜಿ ಕೋಮನಿ, ಮಧುಬನಿಯ ಕಮಲ್ ಹಸನ್ ಹಾಗೂ ನವದೆಹಲಿಯ ಮಹಮದ್ ಕಫೀಲ್ ಅಖ್ತರ್ ಇಂದು ಎನ್‍ಐಎ ವಿಶೇಷ ನ್ಯಾಯಾಲಯದ ಮುಂದೆ ತಪೆÇ್ಪಪ್ಪಿಗೆ ಅಫಿಡವಿಟ್ ಸಲ್ಲಿಸಿದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿ ಯಾಸಿನ್ ಭಟ್ಕಳ್‍ಗೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದಾರೆ. 2010ರ…
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ಗೆ ಟ್ವಿಸ್ಟ್: ಪ್ರಕರಣದಲ್ಲಿ ನಿವೃತ್ತ ಕರ್ನಲ್ ಕೈವಾಡ?
July 5, 2018ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು ಪ್ರಕರಣದಲ್ಲಿ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಅವರ ಪಾತ್ರ ಇದೆ ಎಂಬುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಬಲಪಂಥೀಯ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ನಿವೃತ್ತ ಕರ್ನಲ್ ಅವರ ಕೈವಾಡವಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು ಈ ಸಂಬಂಧ ಸಾಕ್ಷಿ ಕಲೆ ಹಾಕಲು ಪ್ರಯತ್ನಿಸುತ್ತಿದ್ದಾರೆ. ಗೌರಿ ಹತ್ಯೆ ಮಾಡಲು ಅಮೋಲ್ ಕಾಳೆಗೆ 4 ಮಂದಿ ಆದೇಶ ನೀಡಿದ್ದಾರೆ. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಗೌರಿ…
ಸುಳ್ಯ ದಂತ ವೈದ್ಯಕೀಯ ಕಾಲೇಜು ಹಾಸ್ಟೆಲ್‍ನಲ್ಲಿ ಮೈಸೂರಿನ ಯುವತಿ ಆತ್ಮಹತ್ಯೆ
July 5, 2018ಮೈಸೂರು: ಸುಳ್ಯದ ದಂತ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೈಸೂರು ಯುವತಿ ಕಾಲೇಜಿನ ಹಾಸ್ಟೆಲ್‍ನಲ್ಲಿ ಬುಧವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಟೆರೆಶಿಯನ್ ಕಾಲೇಜು ಸಮೀ ಪದ ಗುರುರಾಜ ಬಡಾವಣೆಯ ಕಾವೇರಿ ಮಾರ್ಗದ ನಿವಾಸಿ, ವಿ.ಕೆ.ಬೇಕರಿ ಮಾಲೀಕ ರಮೇಶ್ ಎಂಬುವರ ಪುತ್ರಿ ಸುಮನ(19) ಆತ್ಮಹತ್ಯೆ ಮಾಡಿಕೊಂಡವರು. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ ಸುಮನ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಪ್ರತಿಷ್ಠಿತ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ…
ಸರ್ಕಾರಿ ಶಾಲೆಗಳಿರುವುದು ಕೇವಲ ಬಡವರು, ದಲಿತರಿಗೆ ಎಂಬಂತಾಗಿದೆ
July 5, 2018ಎನ್‍ಐಆರ್‍ಡಿಪಿಆರ್ ಮಹಾನಿರ್ದೇಶಕ ಡಾ.ಡಬ್ಲ್ಯು.ಆರ್.ರೆಡ್ಡಿ ವಿಷಾಧ ಮೈಸೂರು: ವರ್ಷ ಕಳೆದಂತೆ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರಿ ಶಾಲೆಗಳು ಕೇವಲ ಬಡವರು ಮತ್ತು ದಲಿತರಿಗೆ ಇರುವ ಶಾಲೆಗಳು ಎಂಬಂತಾಗಿದೆ. ಈ ಧೋರಣೆ ಬದಲಾಗಬೇಕು ಎಂದು ಹೈದರಾಬಾದ್‍ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ(ಎನ್‍ಐಆರ್‍ಡಿಪಿಆರ್) ಮಹಾನಿರ್ದೇಶಕ ಡಾ.ಡಬ್ಲ್ಯು.ಆರ್.ರೆಡ್ಡಿ ಅಭಿಪ್ರಾಯಪಟ್ಟರು. ಮಾನಸಗಂಗೋತ್ರಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ತಂತ್ರಜ್ಞಾನ ವಿಭಾಗದ ಎ.ವಿ.ಹಾಲ್‍ನಲ್ಲಿ ಆಯೋಜಿಸಿದ್ದ `ಗ್ರಾಮೀಣ ಮತ್ತು ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಲ್ಲಿರುವ ಶಿಕ್ಷಕರು ಮತ್ತು ಶಿಕ್ಷಕ ತರಬೇತುದಾರರು ಎದುರಿಸುತ್ತಿರುವ ಸಮಸ್ಯೆಗಳು,…
ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರಿಗೆ ಬೆಂಗಳೂರಲ್ಲಿರಲು ಮನೆಯಿಲ್ಲ!?
July 5, 2018ನಿತ್ಯ ಹೊಳೆನರಸೀಪುರ-ಬೆಂಗಳೂರಿಗೆ ಅಪ್ ಅಂಡ್ ಡೌನ್ ಬೆಂಗಳೂರು: ಲೋಕೋಪಯೋಗಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪುತ್ರ ಹೆಚ್.ಡಿ. ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಮನೆ ಇಲ್ಲವಂತೆ. ಮನೆ ಇಲ್ಲದ ಕಾರಣ ಪ್ರತಿ ನಿತ್ಯ ರಾಜಧಾನಿಯಿಂದ 172 ಕಿಲೋ ಮೀಟರ್ ದೂರವಿರುವ ಹೊಳೆನರಸೀಪುರದಿಂದ ವಿಧಾನ ಸೌಧಕ್ಕೆ ಬಂದು ಹೋಗುತ್ತಿದ್ದಾರೆ. ರಾಜ್ಯ ಸರ್ಕಾರ ರೇವಣ್ಣ ಅವರಿಗೆ ಕುಮಾರ ಪಾರ್ಕ್‍ನಲ್ಲಿ ನಿವಾಸ ಮಂಜೂರು ಮಾಡಿದೆ. ಇವರಿಗೆ ನೀಡಿರುವ ನಿವಾಸವನ್ನು ಹಿಂದಿನ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತೆರವುಗೊಳಿಸಿಲ್ಲ. ಅವರು…
ಚಾಮುಂಡಿ ಬೆಟ್ಟ ದೇವಸ್ಥಾನ ಸುತ್ತಮುತ್ತ ಗುಂಡಿ ಮುಚ್ಚಲು ಒತ್ತಾಯ
July 5, 2018ಮೈಸೂರು: ಚಾಮುಂಡಿಬೆಟ್ಟದ ದೇವಸ್ಥಾನದ ಹೊರಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಇಲ್ಲಿಗೆ ಆಗಮಿಸುವ ಭಕ್ತರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. ಮುಂದಿನ ಶುಕ್ರವಾರದಿಂದ ಆಷಾಢ ಪೂಜೆ ಆರಂಭವಾಗುವುದರಿಂದ ದೇಶದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ವೇಳೆ ದೇವಸ್ಥಾನ ಹೊರ ಭಾಗದ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿರುವುದರಿಂದ ವೃದ್ಧರು, ಮಹಿಳೆಯರು ಬಿದ್ದರೆ ಏನು ಗತಿ?. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುವುದಿಲ್ಲವೆ? ಎಂದು ಭಕ್ತರು ಪ್ರಶ್ನಿಸಿದ್ದಾರಲ್ಲದೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ…
ಆಧಾರವಿಲ್ಲದೆ ನಮ್ಮ ಕುಟುಂಬ ಅಕ್ರಮ ಆಸ್ತಿ ಮಾಡಿದೆ ಎಂದು ಹೇಳಬೇಡಿ ಟೀಕಾಕಾರರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಚ್ಚರಿಕೆ ನುಡಿ
July 5, 2018ಬೆಂಗಳೂರು: ದೇವೇಗೌಡರ ಕುಟುಂಬ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಪಾಸ್ತಿ ಮಾಡಿದೆ ಎಂದು ದಾಖಲೆಗಳಿಲ್ಲದೆ ದೂರುವ ಪ್ರವೃತ್ತಿ ಸರಿಯಲ್ಲ, ಅಂತಹ ದೇನೇ ಇದ್ದರೂ ದಾಖಲೆಗಳನ್ನು ಒದಗಿಸಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಮ್ಮ ಟೀಕಾಕಾರರ ಮೇಲೆ ಎರಗಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯ ಬಿಜೆಪಿ ನಾಯಕರೊಬ್ಬರು,ದೇವೇಗೌಡರ ಕುಟುಂಬ ಅಕ್ರಮವಾಗಿ ಅಪಾರ ಪ್ರಮಾಣದ ಆಸ್ತಿ ಮಾಡಿದೆ ಎಂದು ದೂರಿರುವ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿ ದರು. ದೇವೇಗೌಡರ ಕುಟುಂಬ ಹಾಗೇನಾದರೂ ಅಕ್ರಮ ಆಸ್ತಿ ಪಾಸ್ತಿ ಮಾಡಿದ್ದರೆ ಅದಕ್ಕೆ ಪೂರಕವಾದ ದಾಖಲೆಗಳನ್ನು…
ಮೈಸೂರು ವಿವಿ ಕ್ರಾಫರ್ಡ್ ಭವನ ಬಳಿ, ಕಾರ್‍ಎಸ್ ರಸ್ತೆ ರೇಲ್ವೆ ಲೆವೆಲ್ ಕ್ರಾಸಿಂಗ್‍ನಲ್ಲಿ ಮೇಲ್ಸೆತುವೆ, ಕೆಳ ಸೇತುವೆ ನಿರ್ಮಾಣ ಸಂಬಂಧ ಸಂಸದ ಪ್ರತಾಪ್ ಸಿಂಹ ಚರ್ಚೆ
July 5, 2018ಮೈಸೂರು: ಸುಗಮ ಸಂಚಾರಕ್ಕೆ ಅನುವು ಮಾಡುವ ನಿಟ್ಟಿನಲ್ಲಿ ಮೈಸೂರು ವಿವಿ ಕ್ರಾಫರ್ಡ್ ಭವನ ಹಿಂಭಾಗ ಹಾಗೂ ಕೆಆರ್‍ಎಸ್ ರಸ್ತೆಯಲ್ಲಿ ಹಾದು ಹೋಗಿರುವ ರೈಲ್ವೆ ಲೆವೆಲ್ ಕ್ರಾಸಿಂಗ್‍ಗಳಿಗೆ ಮೇಲ್ಸೆತುವೆ ಇಲ್ಲವೇ ಕೆಳಸೇತುವೆ ನಿರ್ಮಿಸುವ ಸಂಬಂಧ ಸಂಸದ ಪ್ರತಾಪ್ ಸಿಂಹ ಬುಧವಾರ ರೇಲ್ವೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಮೈಸೂರು ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಕಾಮಗಾರಿ ಆರಂಭಿಸಲು ಇರುವ ತೊಡಕು ನಿವಾರಣೆಗೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ…
ಕನ್ನಡದಲ್ಲಿ `ಕವಿರಾಜಮಾರ್ಗ’ ಒಂದು ಅದ್ಭುತ
July 5, 2018ಕನ್ನಡ ಸಾಹಿತ್ಯ: ಅಧ್ಯಯನದ ಸವಾಲುಗಳು ಹಾಗೂ ಸಾಧ್ಯತೆಗಳು ಕುರಿತ 3 ದಿನಗಳ ಕಮ್ಮಟಕ್ಕೆ ಚಾಲನೆ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಅಭಿಮತ ಮೈಸೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಅದ್ಭುತಗಳಿವೆ. ಕವಿರಾಜ ಮಾರ್ಗವೇ ಒಂದು ಅದ್ಭುತ. ಕನ್ನಡದ ಬಗ್ಗೆ ಸಂಶೋಧನೆ ಅಷ್ಟು ಸುಲಭದ ಕೆಲಸವಲ್ಲ. ಆದರೆ ಕಲಿಯಲೇ ಬೇಕು. ಇಲ್ಲದಿದ್ದರೆ ಕನ್ನಡಕ್ಕೆ ಉಳಿಗಾಲವಿಲ್ಲ ಎಂದು ಮೈಸೂರಿನ ಭಾಷಾ ತಜ್ಞ ಪ್ರೊ.ಆರ್ವಿಯಸ್ ಸುಂದರಂ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಮಾನಸಗಂಗೋತ್ರಿಯ ಭಾರತೀಯ ಭಾಷಾ ಸಂಸ್ಥಾನದ ಸಂಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ…
ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮಟ್ಟದ 28ನೇ ಜಾಂಬೂರಿ ಈ ಬಾರಿ ಹಾಸನದಲ್ಲಿ ಆಯೋಜನೆ
July 5, 2018ಮೈಸೂರು: ರಾಜ್ಯಮಟ್ಟದ 28ನೇ ಜಾಂಬೂರಿ ಉತ್ಸವವನ್ನು ಹಾಸನ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಉತ್ಸವದಲ್ಲಿ ಪಾಲ್ಗೊಳ್ಳುವ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಭಾರತೀಯ ಸೇನೆಯ ಕಾರ್ಯ ವೈಖರಿ, ಇಸ್ರೋ ಸಂಸ್ಥೆಯ ತಜ್ಞರಿಂದ ಮಾಹಿತಿ-ತಂತ್ರಜ್ಞಾನದ ಪರಿಚಯ ಮಾಡಿಕೊಡುವುದರೊಂದಿಗೆ ವಿವಿಧ ಹೊಸ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಹಾಗೂ ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ತಿಳಿಸಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕಳೆದ ವರ್ಷ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ…