ಮೈಸೂರು

ಬಿಜೆಪಿ ಯುವ ಮೋರ್ಚಾದಿಂದ ಶಿವರಾತ್ರೇಶ್ವರ ನಗರದಲ್ಲಿ ಸ್ವಚ್ಛತಾ ಶ್ರಮದಾನ
ಮೈಸೂರು

ಬಿಜೆಪಿ ಯುವ ಮೋರ್ಚಾದಿಂದ ಶಿವರಾತ್ರೇಶ್ವರ ನಗರದಲ್ಲಿ ಸ್ವಚ್ಛತಾ ಶ್ರಮದಾನ

July 2, 2018

ಮೈಸೂರು: ಎನ್‍ಆರ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ಸ್ವಚ್ಛ ಭಾರತದ ಅಭಿಯಾನದ ಅಂಗವಾಗಿ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಎನ್‍ಆರ್ ಕ್ಷೇತ್ರದ ಬಿಜೆಪಿ ಯುವ ಮೋರ್ಚಾದಿಂದ ನಡೆದ 20ನೇ ಸ್ವಚ್ಛತಾ ಕಾರ್ಯಕ್ರಮ ಇದಾಗಿದ್ದು, ವಾರ್ಡ್ 45ರ ವ್ಯಾಪ್ತಿಯ ಬನ್ನಿಮಂಟಪದ ಶಿವರಾತ್ರೇಶ್ವರ ನಗರದಯಲ್ಲಿರುವ ಅರಳಿ ಕಟ್ಟೆಯ ಸ್ವಚ್ಛತೆ ಕೈಗೊಳ್ಳಲಾಯಿತು. ಅರಳಿ ಕಟ್ಟೆಯ ಆವರಣದಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಲಾಯಿತು. ಅಲ್ಲದೆ, ಅರಳಿ ಕಟ್ಟೆಯ ಆವರಣವನ್ನು ಶುಚಿಗೊಳಿಸಿ ಸಾರ್ವಜನಿಕರು ಪೂಜಾ ವಿಧಿವಿಧಾನ ಕೈಗೊಳ್ಳಲು ಅನುವು ಆಗುವಂತೆ…

ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ
ಮೈಸೂರು

ಪ್ರಿಯಕರನಿಗಾಗಿ ಗಂಡನನ್ನೇ ತೊರೆದ ನವ ವಿವಾಹಿತೆ

July 2, 2018

 ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋದ ಜೋಡಿ ಆಭರಣ ಕದ್ದು ಬಂದಿದ್ದಾಳೆಂಬ ಪ್ರತಿದೂರು ನೀಡಿದ ಮಾವನ ಮನೆಯವರು ಮೈಸೂರು: ಪ್ರಿಯಕರನಿಗಾಗಿ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮಹಿಳೆಯೊಬ್ಬಳು ಗಂಡನ ಮನೆಯಿಂದ ಹಿಂದಿರುಗಿ ಪ್ರಿಯಕರನೊಂದಿಗೆ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ರೈಲ್ವೆ ಕ್ವಾರ್ಟರ್ಸ್ ನಿವಾಸಿಯಾಗಿರುವ ನವ ವಿವಾಹಿತೆ ಇದೀಗ ಪ್ರಿಯಕರನೊಂದಿಗೆ ಬಾಳ್ವೆ ನಡೆಸಲು ಬಯಸಿ ತನ್ನ ಪತಿ ಮನೆಯನ್ನು ತೊರೆದು ಬಂದು ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ರೈಲ್ವೆ ಬಡಾವಣೆಯ ನಿವಾಸಿಯಾಗಿದ್ದ ಯುವತಿ ಕಳೆದ 9…

ಮೈಸೂರು ಅರಮನೆಯಲ್ಲಿ ಕೇರಳ ಸ್ವಾಮೀಜಿ ದರ್ಬಾರ್ ವೈರಲ್ ಆಗಿರುವ ಫೋಟೋ
ಮೈಸೂರು

ಮೈಸೂರು ಅರಮನೆಯಲ್ಲಿ ಕೇರಳ ಸ್ವಾಮೀಜಿ ದರ್ಬಾರ್ ವೈರಲ್ ಆಗಿರುವ ಫೋಟೋ

July 2, 2018

ಮೈಸೂರು: ಮೈಸೂರು ಅರಮನೆಯಲ್ಲಿ ಕೇರಳಾದ ಸ್ವಾಮೀಜಿಯವರು ಭದ್ರತಾ ನಿಯಮವನ್ನು ಉಲ್ಲಂಘಿಸಿ ದರ್ಬಾರ್ ನಡೆಸುತ್ತಿರುವ ಪ್ರಕರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಓರ್ವ ಪೇದೆಯನ್ನು ಅಮಾನತು ಮಾಡಿರುವ ಘಟನೆ ವರದಿಯಾಗಿದೆ. ಅರಮನೆಯ ಭದ್ರತಾ ಸಿಬ್ಬಂದಿಯಾಗಿದ್ದ ಪೇದೆ ಚಿಕ್ಕಣ್ಣ ಎಂಬುವರೇ ಅಮಾನತಾದ ಪೇದೆಯಾಗಿದ್ದಾರೆ. ಅರಮನೆಯಲ್ಲಿ ಕೇರಳಾದ ಸ್ವಾಮೀಜಿ ಎನ್ನಲಾದ ಸುನೀಲ್ ದಾಸ್ ಎಂಬುವರು ರಾಜಮನೆತನಕ್ಕೆ ಹತ್ತಿರದವರಾಗಿದ್ದು, ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಆಗಿಂದಾಗ್ಗೆ ಬರುವ ಈ ಸ್ವಾಮೀಜಿ, ಅರಮನೆಯ ಭದ್ರತಾ ವಿಭಾಗದ…

ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ
ಮೈಸೂರು

ವೈನ್ ಸ್ಟೋರ್ ತೆರವಿಗೆ ಮುಡಾ ಆಯುಕ್ತರಿಂದ ಡಿಸಿ, ಪಾಲಿಕೆ ಆಯುಕ್ತರಿಗೆ ಪತ್ರ

July 2, 2018

ಮೈಸೂರು: ಮೈಸೂರಿನ ಸಿದ್ಧಾರ್ಥನಗರದ ಬುದ್ಧ ಮಾರ್ಗದಲ್ಲಿರುವ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರು ಪತ್ರದ ಮುಖೇನ ಮನವಿ ಮಾಡಿದ್ದಾರೆ. ಸದರಿ ವೈನ್ ಸ್ಟೋರ್‍ನಿಂದ ಇಲ್ಲಿನ ಸಾರ್ವಜನಿಕರಿಗೆ ಸಮಸ್ಯೆ ಎದುರಾಗಿರುವ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಸದರಿ ವೈನ್ ಸ್ಟೋರ್ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ವೈನ್ ಸ್ಟೋರ್ ಸಮೀಪದಲ್ಲೇ ಗೀತಾ ಶಾಲೆ ಇದ್ದು, ಇಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಸಾರ್ವಜನಿಕರು ವೈನ್…

ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!
ಮೈಸೂರು

ಟೂಲ್ಸ್ ಹಿಡಿದ ಕೈಯಲ್ಲರಳುತ್ತಿದೆ ಸಾಹಿತ್ಯ!

July 2, 2018

ಮೈಸೂರು:  ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಸುಪ್ತವಾಗಿರುತ್ತದೆ. ಜೊತೆಯಲ್ಲಿದ್ದವರ ಪ್ರೋತ್ಸಾಹ, ಸೂಕ್ತ ವೇದಿಕೆ ದೊರಕಿದರೆ ಪ್ರತಿಭೆ ಅನಾವರಣಗೊಂಡು, ಜೀವನಕ್ಕೊಂದು ವಿಶೇಷತೆ ಪ್ರಾಪ್ತವಾಗುತ್ತದೆ ಎಂಬುದಕ್ಕೆ ಕೆಎಸ್‍ಆರ್‍ಟಿಸಿ ಮೈಸೂರು ವಿಭಾಗೀಯ ಗ್ರಾಮಾಂತರ ವಿಭಾಗದ ಕಾರ್ಯಾಗಾರದ ಮೆಕ್ಯಾನಿಕ್ ಜೆ.ನರಸಿಂಗರಾವ್, ಸಾಕ್ಷಿಯಾಗಿದ್ದಾರೆ. ಮೈಸೂರಿನ ಶ್ರೀರಾಂಪುರ ನಿವಾಸಿಯಾಗಿರುವ ನರಸಿಂಗರಾವ್ ಅವರು, 26 ವರ್ಷಗಳಿಂದ ಸಾರಿಗೆ ಸಂಸ್ಥೆಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದುರಸ್ತಿಗೆ ಬಂದ ಬಸ್‍ಗಳನ್ನು ರಿಪೇರಿ ಮಾಡುವುದರೊಂದಿಗೆ ಸಾಹಿತ್ಯವನ್ನು ಆರಾಧಿಸುತ್ತಿದ್ದಾರೆ. ಓದುವ ಹವ್ಯಾಸವಿರುವ ಇವರು, ಕೆಲ ವರ್ಷಗಳಿಂದ ತೋಚಿದ್ದನ್ನು ಗೀಚುತ್ತಾ, ಇದೀಗ ನೂರಾರು ಸುಂದರ…

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ
ಮೈಸೂರು

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ

July 2, 2018

ಪೊರಕೆ ಹಿಡಿದ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಆಂದೋಲನ ಮೈಸೂರು: ಪ್ರತಿ ದಿನ ರೋಗಿಗಳ ಆರೋಗ್ಯ ನೋಡಿಕೊಳ್ಳುವ ಕೆ.ಆರ್.ಆಸ್ಪತ್ರೆ ವೈದ್ಯರು ಇಂದು ಪೊರಕೆ ಹಿಡಿದು ಆಸ್ಪತ್ರೆಯ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಆಸ್ಪತ್ರೆ ಪರಿಸರದ ಆರೋಗ್ಯವನ್ನು ನೋಡಿಕೊಂಡರು. ವೈದ್ಯರ ದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯ ಇಡೀ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಪೊರಕೆ ಹಿಡಿದು…

ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಹೆಚ್ಚು ತೆರಿಗೆ ಸಂಗ್ರಹ
ಮೈಸೂರು

ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಹೆಚ್ಚು ತೆರಿಗೆ ಸಂಗ್ರಹ

July 2, 2018

ಮೈಸೂರು: ಲೆಕ್ಕ ಪರಿಶೋಧಕರ ಪರಿಶ್ರಮದಿಂದ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದು ದಿ ಇನ್ಸ್‍ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತದ ಪ್ರಾದೇಶಿಕ ಕೌನ್ಸಿಲ್‍ನ ಮಾಜಿ ಅಧ್ಯಕ್ಷರೂ ಆದ ಹಿರಿಯ ಲೆಕ್ಕಪರಿಶೋಧಕ ಕೋತ ಎಸ್.ಶ್ರೀನಿವಾಸ್ ಹೇಳಿದರು. ಐಸಿಎಐ ದಕ್ಷಿಣ ಭಾರತದ ಪ್ರಾದೇಶಿಕ ಕೌನ್ಸಿಲ್‍ನ ಮೈಸೂರು ಶಾಖೆ ವತಿಯಿಂದ ಮೈಸೂರಿನ ಬೋಗಾದಿಯ ಬ್ಯಾಂಕ್ ಎಂಪ್ಲಾಯೀಸ್ ಕಾಲೋನಿಯಲ್ಲಿರುವ ಐಸಿಎಐ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ದಿನಾಚರಣೆ ಹಾಗೂ ಐಸಿಎಐ…

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ
ಮೈಸೂರು

ಅಪಾಯದ ಅಂಚಿನಲ್ಲಿ ಪಾದಚಾರಿ ಸುರಂಗ ಮಾರ್ಗ

July 2, 2018

ಮೈಸೂರು:  ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಾದಚಾರಿ ಸುರಂಗ ಮಾರ್ಗ ಅಪಾಯದ ಅಂಚಿನಲ್ಲಿದೆ. ಧನ್ವಂತರಿ ರಸ್ತೆ ಕೂಡುವ ಸ್ಥಳದಲ್ಲಿ ಸಯ್ಯಾಜಿರಾವ್ ರಸ್ತೆಯ ಎರಡೂ ಬದಿಗಳಿಗೆ ಸಂಪರ್ಕ ಕಲ್ಪಿಸುವ ಪಾದಚಾರಿ ಸುರಂಗ ಮಾರ್ಗ ಸದ್ಯ ಬಳಕೆಯಲ್ಲಿಲ್ಲ. ಆರೇಳು ತಿಂಗಳಿನಿಂದ ಗೇಟ್‍ಗೆ ಬೀಗ ಹಾಕಿ, ಬಂದ್ ಮಾಡಲಾಗಿದೆ. ಹೀಗಾಗಿ ಪಾದಚಾರಿಗಳು ರಸ್ತೆ ಮಧ್ಯೆ ಅಳವಡಿಸಿ ರುವ ಬ್ಯಾರಿಕೇಡ್‍ಗಳ ಸಂದುಗಳಲ್ಲಿ ನುಸುಳಿ, ವಾಹನ ದಟ್ಟಣೆ ನಡುವೆಯೇ ರಸ್ತೆ ದಾಟುವಂತಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾಗಿರುವ ಪಾದಚಾರಿ ಸುರಂಗ ಮಾರ್ಗ, ಇದೀಗ ಅನುಪಯುಕ್ತವಾಗಿದೆ….

ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ
ಮೈಸೂರು

ಖಾಸಗಿ ವೈದ್ಯಕೀಯ ಕ್ಷೇತ್ರ ಜನಮನ್ನಣೆ ಗಳಿಸಿದೆ: ಡಾ.ಎಸ್.ಪಿ.ಯೋಗಣ್ಣ ಅಭಿಮತ

July 2, 2018

ಮೈಸೂರು: ಸರ್ಕಾರಿ ವೈದ್ಯಕೀಯ ಕ್ಷೇತ್ರಕ್ಕಿಂತ ಖಾಸಗಿ ವೈದ್ಯಕೀಯ ಕ್ಷೇತ್ರ ಬೃಹತ್ತಾಗಿ ಬೆಳೆದಿದ್ದು, ಹೆಚ್ಚು ಜನಮನ್ನಣೆ ಗಳಿಸಿದೆ ಎಂದು ಮೈಸೂರಿನ ಹೃದ್ರೋಗ ತಜ್ಞ ಡಾ.ಎಸ್.ಪಿ. ಯೋಗಣ್ಣ ಅಭಿಪ್ರಾಯಪಟ್ಟರು. ನಗರದ ಜಯಚಾಮರಾಜೇಂದ್ರ ಒಡೆಯರ್ ಗಾಲ್ಫ್ ಕ್ಲಬ್‍ನಲ್ಲಿ ಭಾರತೀಯ ವೈದ್ಯ ಕೀಯ ಸಂಘ ಮೈಸೂರು ಶಾಖೆ ಭಾನುವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಯಲ್ಲಿ ಡಾ.ಬಿ.ಸಿ.ರಾಯ್ ಕುರಿತು ಮಾತ ನಾಡಿದ ಅವರು, ದೇಶದಲ್ಲಿ ಶೇ.15ರಷ್ಟು ಮಾತ್ರ ಸರ್ಕಾರಿ ವೈದ್ಯರಿದ್ದರೆ, ಶೇ.85ರಷ್ಟು ಖಾಸಗಿ ವೈದ್ಯರಿದ್ದಾರೆ. ಹಾಗೆಯೇ ರಾಜ್ಯದಲ್ಲಿ 1 ಲಕ್ಷ ವೈದ್ಯರಿದ್ದು, ಅದರಲ್ಲಿ 4…

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಮೈಸೂರು

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು

July 2, 2018

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯ ಬಾಗಿಲು ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೆ.ಆರ್.ಆಸ್ಪತ್ರೆಯ ಮುಖ್ಯ ರಸ್ತೆ ನಿವಾಸಿ ಸುರೇಶ್ ಅವರು ಶನಿವಾರ ಬೆಳಗ್ಗೆ ಮನೆಯ ಬೀಗ ಹಾಕಿಕೊಂಡು ಹೊರ ಹೋಗಿದ್ದು, ಸಂಜೆ 4 ಗಂಟೆಗೆ ವಾಪಸ್ ಬಂದಾಗ ಖದೀಮರು ಮನೆಯ ಬಾಗಿಲು ಮುರಿದು ಮನೆಯ ವಾಡ್ರೂಬ್‍ನ ಡ್ರಾಯರ್‍ನಲ್ಲಿದ್ದ 384.5 ಗ್ರಾಂ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ 3,84,500 ರೂ. ಎಂದು ಅಂದಾಜಿಸ ಲಾಗಿದೆ. ಮತ್ತೊಂದು ಪ್ರಕರಣದಲ್ಲಿ…

1 1,511 1,512 1,513 1,514 1,515 1,611
Translate »