ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು
ಮೈಸೂರು

ಮೈಸೂರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳವು

July 2, 2018

ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮನೆಯ ಬಾಗಿಲು ಮುರಿದು, ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೆ.ಆರ್.ಆಸ್ಪತ್ರೆಯ ಮುಖ್ಯ ರಸ್ತೆ ನಿವಾಸಿ ಸುರೇಶ್ ಅವರು ಶನಿವಾರ ಬೆಳಗ್ಗೆ ಮನೆಯ ಬೀಗ ಹಾಕಿಕೊಂಡು ಹೊರ ಹೋಗಿದ್ದು, ಸಂಜೆ 4 ಗಂಟೆಗೆ ವಾಪಸ್ ಬಂದಾಗ ಖದೀಮರು ಮನೆಯ ಬಾಗಿಲು ಮುರಿದು ಮನೆಯ ವಾಡ್ರೂಬ್‍ನ ಡ್ರಾಯರ್‍ನಲ್ಲಿದ್ದ 384.5 ಗ್ರಾಂ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿದ್ದಾರೆ. ಇದರ ಮೌಲ್ಯ 3,84,500 ರೂ. ಎಂದು ಅಂದಾಜಿಸ ಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ವಿಜಯನಗರ 4ನೇ ಹಂತದ ನಿವಾಸಿ ವೇದಾವತಿಯವರು ಜೂ.22ರಂದು ಮನೆಗೆ ಬೀಗ ಹಾಕಿಕೊಂಡು ಸಂಬಂಧಿಕರ ಮನೆಗೆ ಹೋಗಿದ್ದು, ಜೂ.29 ರಂದು ವಾಪಸ್ ಮನೆಗೆ ಬಂದಾಗ ಖದೀಮರು ಮನೆಯ ಹಿಂಬಾಗಿಲು ಮುರಿದು ಬೀರಿನಲ್ಲಿದ್ದ ಚಿನ್ನದ ಸರ-ಓಲೆ, ಬೆಳ್ಳಿ ಬಟ್ಟಲು-ಚೊಂಬು, ಕೀಚೈನ್ ಹಾಗೂ ಎಲ್‍ಇಡಿ ಟಿವಿ ಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಕ್ರಮವಾಗಿ ಲಷ್ಕರ್, ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »