ಮೈಸೂರು,ಅ.27-ಮೈಸೂರಿನ ಕೊಲಂ ಬಿಯಾ ಏಷಿಯಾ ಆಸ್ಪತ್ರೆ (ಮಣಿಪಾಲ್ ಆಸ್ಪತ್ರೆಗಳ ಒಂದು ಘಟಕ), ಟಿಬೆಟನ್ ಹಾರ್ಟ್ ಫೌಂಡೇಷನ್ ಸಹಯೋಗ ದೊಂದಿಗೆ ಬೈಲುಕುಪ್ಪೆಯಲ್ಲಿ ಮೂರು ದಿನಗಳ ಕಮ್ಯೂನಿಟಿ ಮಲ್ಟಿ ಸ್ಪೆಷಾಲಿಟಿ ಮೆಗಾ ಕ್ಯಾಂಪ್ ಅನ್ನು ಅ.20ರಿಂದ 22 ರವರೆಗೆ ಆಯೋಜಿಸಲಾಗಿತ್ತು. ಈ ವೇಳೆ ಟಿಬೆಟನ್ ಹಾರ್ಟ್ ಫೌಂಡೇ ಷನ್ ನಿರ್ದೇಶಕ ಟೆನ್‍ಜಿನ್ ಚೋನೈ ಮಾತ ನಾಡಿ, ಪ್ರಥಮ ಬಾರಿಗೆ ಟಿಬೆಟನ್ ಹಾರ್ಟ್ ಫೌಂಡೇಷನ್ ವತಿಯಿಂದ ಕೊಲಂಬಿಯಾ ಏಷಿಯಾ ಆಸ್ಪತ್ರೆ ಸಹಯೋಗದಲ್ಲಿ ಬೈಲು ಕುಪ್ಪೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು…
ಕೆ.ಆರ್.ಸರ್ಕಲ್‍ನಲ್ಲಿ `ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್ ಲೈಟ್ಸ್’ ಅಳವಡಿಕೆ
October 28, 2021ಮೈಸೂರು, ಅ.27(ಎಂಟಿವೈ)-ಮೈಸೂರಿನ ಕೆ.ಆರ್.ವೃತ್ತದಲ್ಲಿ ಪಾರಂಪರಿಕ ಶೈಲಿಯ ‘ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್‍ಲೈಟ್ಸ್’ ಅಳವಡಿಸುವ ಪ್ರಕ್ರಿಯೆ ಬುಧವಾರದಿಂದ ಆರಂಭವಾಗಿದೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ಪಾರಂಪರಿಕ ಶೈಲಿಯ 10 ವಿದ್ಯುತ್ ದೀಪದ ಕಂಬಗಳು ಮಧ್ಯಪ್ರದೇಶದ ವಿನ್ಯಾಸಕ ಸಂಸ್ಥೆಯಲ್ಲಿ ಪಾರಂ ಪರಿಕ ಶೈಲಿಯಲ್ಲಿ ಸಿದ್ಧಗೊಂಡಿದ್ದು, ಅವುಗಳು ಬುಧವಾರ ಮೈಸೂರು ತಲುಪಿದವು. 7 ಮೀಟರ್ ಎತ್ತರ ವಿರುವ ಈ ಕಂಬದ ಮಧ್ಯಭಾಗ ದಲ್ಲಿ ನಾಲ್ಕು ದಿಕ್ಕಿಗೂ ಆನೆಗಳ ತಲೆ ಮಾದರಿಯಲ್ಲಿ ವಿನ್ಯಾಸಗೊಳಿಸ ಲಾಗಿದ್ದು ಆಕರ್ಷಕವಾಗಿದೆ. ಒಂದು ಡೆಕೊರೇಟಿವ್ ಹೆರಿಟೇಜ್ ಸ್ಟ್ರೀಟ್‍ಲೈಟ್‍ಗೆ ಸುಮಾರು 5.5 ಲಕ್ಷ…
ಮಳೆ ನೀರು ಚರಂಡಿ ಒತ್ತುವರಿ ಮಾಡಿ ನಿರ್ಮಿಸಿರುವ ಕಟ್ಟಡಗಳ ಕೂಡಲೇ ತೆರವುಗೊಳಿಸಿ
October 28, 2021ಮೈಸೂರು, ಅ.27(ವೈಡಿಎಸ್)- ಮಳೆ ನೀರು ಚರಂಡಿ ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮನೆ ಅಥವಾ ಕಟ್ಟಡ ಗಳನ್ನು ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸುವಂತೆ ಶಾಸಕ ಎಸ್.ಎ. ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು. ನಗರ ಪಾಲಿಕೆ ಸಭಾಂಗಣದಲ್ಲಿ ಬುಧ ವಾರ ಕೆ.ಆರ್.ಕ್ಷೇತ್ರದ ನಿವಾಸಿಗಳಿಗೆ ಮಳೆ ಯಿಂದ ಆಗುತ್ತಿರುವ ತೊಂದರೆ ಹಾಗೂ ಸೂಕ್ತ ಪರಿಹಾರ ನೀಡುವ ನಿಟ್ಟಿನಲ್ಲಿ ಕ್ಷೇತ್ರದ ಪಾಲಿಕೆ ಸದಸ್ಯರು, ಮುಡಾ ಅಧ್ಯಕ್ಷರು ಮತ್ತು ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತ ನಾಡಿದ ಅವರು, ಮಳೆ ನೀರು ಸರಾಗವಾಗಿ ಹರಿಯಲು ರಾಜಕಾಲುವೆಗಳಲ್ಲಿರುವ ಹೂಳನ್ನು ತೆರವುಗೊಳಿಸಬೇಕು….
ಬೋಗಾದಿ ಕೆರೆ ಕೋಡಿ ಒಡೆದು ಹೊಳೆಯಂತೆ ರಸ್ತೆಯಲ್ಲಿ ಹರಿದ ನೀರು
October 27, 2021ಮೈಸೂರು, ಅ. ೨೬(ಆರ್‌ಕೆ)- ಮೈಸೂರಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಬೋಗಾದಿಯ ಮರಿಯಪ್ಪ ಕೆರೆ ಭರ್ತಿಯಾಗಿ ಅದರ ಕೋಡಿ ಒಡೆದು ನೀರು ಹೊಳೆಯಂತೆ ಬೋಗಾದಿ, ರಿಂಗ್ ರಸ್ತೆಯಲ್ಲಿ ಹರಿಯಿತು. ರಿಂಗ್ ರಸ್ತೆಗೆ ಹೊಂದಿಕೊAಡAತಿರುವ ಕೆರೆಯ ಪಶ್ಚಿಮ ಹಾಗೂ ದಕ್ಷಿಣ ಭಾಗದಲ್ಲಿ ಕೋಡಿ ಒಡೆದ ಪರಿಣಾಮ ನದಿ ಯಲ್ಲಿ ನೆರೆ ಬಂದAತೆ ನೀರು ಬೋಗಾದಿ ರಸ್ತೆ ಹಾಗೂ ರಿಂಗ್ ರಸ್ತೆಗೆ ನುಗ್ಗಿತು. ಅದರಿಂದಾಗಿ ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾರದೆ ತಾಸುಗಟ್ಟಲೆ ಟ್ರಾಫಿಕ್ ಜಾಮ್ ಆಗಿತ್ತು. ಮುಂಜಾನೆ ೪ ಗಂಟೆ…
ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಕ್ರಮ
October 27, 2021ಮೈಸೂರು, ಅ. ೨೬(ಆರ್‌ಕೆ)- ಮೈಸೂರು ನಗರದಲ್ಲಿ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ಬಗ್ಗೆ ಪರಿಶೀಲಿಸಿ ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ. ಆಗಾಗ ಕೆರೆ ಹೂಳು ತೆಗೆದು ಪುನರುಜ್ಜೀವನಗೊಳಿ ಸದಿರುವುದು, ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿರುವುದರಿಂದ ನಿರಂತ ರವಾಗಿ ಭಾರೀ ಮಳೆ ಸುರಿದ ಕಾರಣ ಭಾರೀ ಪ್ರಮಾಣದ ನೀರು ಹರಿಯು ತ್ತಿದೆ. ನೀರು ಸರಾಗವಾಗಿ ಹರಿದು ಹೋಗಲೆಂದು ನಿರ್ಮಿಸಿದ್ದ ರಾಜ ಕಾಲುವೆಗಳನ್ನು ಒತ್ತುವರಿ ಮಾಡಿರು ವುದರಿಂದ ಬಡಾವಣೆಗಳು ಜಲಾವೃತ ವಾಗುತ್ತಿರುವುದು ನನ್ನ ಗಮನಕ್ಕೂ…
ರಾಜ್ಯದಲ್ಲಿ ೩ನೇ ಅಲೆ ಆತಂಕ
October 27, 2021ಬೆAಗಳೂರು, ಅ.೨೬(ಕೆಎಂಶಿ)- ಕೋವಿಡ್-೧೯ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರನೇ ಅಲೆಗೆ ಆತಂಕ, ಗಾಬರಿ ಬೇಡ, ಆದರೆ ಮುನ್ನೆಚ್ಚರಿಕಾ ಕ್ರಮ ಅತ್ಯ ವಶ್ಯಕ. ರಾಜ್ಯದಲ್ಲಿ ಈ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸೋಂಕು ತಡೆಯಲು ತಜ್ಞರು ಹಾಗೂ ಅಧಿಕಾರಿಗಳ ಮಾಹಿತಿ ಕೇಳಿದ್ದೇವೆ. ಮಾಹಿತಿ ಬಂದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ನಿಯಮಾವಳಿಗಳನ್ನು ಮತ್ತೆ ಜಾರಿಗೊಳಿಸುವುದಾಗಿ…
ಮೈಸೂರಲ್ಲಿ ನೀರಿನ ಮೀಟರ್ ಇಲ್ಲದ ಮನೆಗೆ ಏಪ್ರಿಲ್‌ನಿಂದ ಭಾರೀ ದಂಡ
October 27, 2021ಮೈಸೂರು, ಅ.೨೬(ಎಸ್‌ಬಿಡಿ)- ಮೈಸೂರು ನಗರ ಪಾಲಿಕೆಯ ವಾಣ ವಿಲಾಸ ನೀರು ಸರಬರಾಜು ಮಂಡಳಿಯಿAದÀ ಕುಡಿಯುವ ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ಮೀಟರ್ ಅಳವಡಿಸಿ ಕೊಳ್ಳದಿದ್ದರೆ ಮುಂಬರುವ ಏಪ್ರಿಲ್‌ನಿಂದ ಭಾರೀ ಮೊತ್ತದ ದಂಡ ತೆರಬೇಕಾಗುತ್ತದೆ. ಗ್ರಾಹಕರೇ ಮೀಟರ್ ಅಳವಡಿಸಿಕೊಳ್ಳ ಬೇಕಿರುವುದರಿಂದ ಹಲವರು ಇದರ ಗೋಜಿಗೆ ಹೋಗಿಲ್ಲ. ಅಳವಡಿಸಿಕೊಂಡಿದ್ದರೂ ತಾಂತ್ರಿಕ ಕಾರಣಗಳಿಂದ ಮೀಟರ್ ಸ್ಥಗಿತಗೊಂಡಿ ದ್ದರೆ ದುರಸ್ತಿ ಮಾಡಿಸಿ ರುವುದಿಲ್ಲ, ಕೆಲವೆಡೆ ಕಳ್ಳತನವಾಗಿರುವ ಉದಾಹರಣೆಯೂ ಇದೆ. ಮತ್ತೆ ಕೆಲ ಗ್ರಾಹಕರು ಹೆಚ್ಚಿನ ಶುಲ್ಕ ಬರುತ್ತದೆ ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಮೀಟರ್…
ಇಂದು ರೆಡ್‍ಕ್ರಾಸ್ ಸಂಸ್ಥೆಯಿಂದ ಪ್ರಥಮ ಚಿಕಿತ್ಸೆ ಅರಿವು ಕಾರ್ಯಕ್ರಮ
October 27, 2021ಮೈಸೂರು, ಅ.26(ಆರ್‍ಕೆಬಿ)- ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಮೈಸೂರು ಜಿಲ್ಲಾ ಶಾಖೆಯ ವತಿಯಿಂದ ರೆಡ್‍ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ಅ.27 ಮತ್ತು 30ರಂದು ಪ್ರಥಮ ಚಿಕಿತ್ಸೆ ಅರಿವು ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಯುವ ರೆಡ್ ಕ್ರಾಸ್ ಘಟಕದ ಸಂಯೋ ಜಕ ಡಾ.ಕೆ.ಎಂ.ವೀರಯ್ಯ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಈ ವರ್ಷದ ಶತಮಾನೋತ್ಸವದ ಆಚರಣೆ ಹಿನ್ನೆಲೆಯಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಇನ್ನಿತರೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸಲಾಗಿದೆ. ಈ…
ಬೆಳಗಾವಿ ಪಾಲಿಕೆ ಕನ್ನಡ ಧ್ವಜ ತೆರವಿಗೆ ಎಂಇಎಸ್ ಪುಂಡಾಟ ಖಂಡಿಸಿ ಪ್ರತಿಭಟನೆ
October 27, 2021ಮೈಸೂರು,ಅ.26(ಪಿಎಂ)- ಬೆಳಗಾವಿ ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವಿಗೆ ಆಗ್ರಹಿಸಿರುವುದೂ ಸೇರಿದಂತೆ ಕನ್ನಡ ವಿರೋಧಿ ವರ್ತನೆ ತೋರುತ್ತಿರುವ ಎಂಇಎಸ್ ಸಂಘ ಟನೆ ಪುಂಡಾಟ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿ ಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಎಂಇಎಸ್ ಸಂಘಟನೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಹಿರಿಯ ಸಾಹಿತಿ ಬನ್ನೂರು ಕೆ.ರಾಜು, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯಿಂದ ಕನ್ನಡದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಇದರ…
ಕಾನೂನು ಎಂಬ ಧರ್ಮ ಪಾಲನೆಯಲ್ಲಿ ಸಮಾಜ ಮುನ್ನಡೆಯಬೇಕು
October 27, 2021ಮೈಸೂರು,ಅ.26(ಪಿಎಂ)- ಕಾನೂನು ಎಂಬ ಧರ್ಮ ಪಾಲನೆ ಮೂಲಕ ಸಮಾಜ ಮುನ್ನಡೆದರೆ ಯಾವುದೇ ರೀತಿಯ ದೌರ್ಜನ್ಯಕ್ಕೆ ಎಡೆಯಿಲ್ಲ ಎಂದು ಮೈಸೂರಿನ ಜೆಎಂಎಫ್‍ಸಿ ನ್ಯಾಯಾ ಲಯದ 6ನೇ ಹೆಚ್ಚುವರಿ ಸಿವಿಲ್ ನ್ಯಾಯಾ ಧೀಶರಾದ ಲಕ್ಷ್ಮೀಬಾಯಿ ಅಭಿಪ್ರಾಯಪಟ್ಟರು. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪಿಎಂ ಚಿಕ್ಕಬೋರಯ್ಯ ಸಭಾಂಗಣ ದಲ್ಲಿ `ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗ ವಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿ ಕಾರದ ಪ್ಯಾನ್ ಇಂಡಿಯಾ ಕಾನೂನು ಅರಿವು ಅಭಿ ಯಾನದಡಿ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ…










