ಮೈಸೂರು, ಅ.28(ಎಂಟಿವೈ)- ವಿಕಲಚೇತನರ ವಿರುದ್ಧ ಅಸಂಬದ್ಧ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಕ್ಷಮೆಯಾಚಿಸುವಂತೆ ಆಗ್ರಹಿಸಿ ಮೈಸೂರು ಜಿಲ್ಲಾ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮೈಸೂರು ಮಹಾತ್ಮಗಾಂಧಿ ವೃತ್ತದಲ್ಲಿರುವ ಗಾಂಧೀಜಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ವಿಕಲಚೇತನರು, ಸಚಿವ ಕೆ.ಎಸ್.ಈಶ್ವರಪ್ಪ ತಮ್ಮ ಜವಾಬ್ದಾರಿ ಹಾಗೂ ಹಿರಿತನ ಮರೆತು ವಿಕಲಚೇತನ ಸಮುದಾಯವನ್ನೇ ಅವಹೇಳನ ಮಾಡಿದ್ದಾರೆ. ರಾಜಕೀಯ ಪ್ರತಿಷ್ಠೆಯ ಮಾತಿ ನಲ್ಲಿ ವಿಕಲಚೇತನರನ್ನು ಚೇಡಿಸುವಂತೆ ಮಾತನಾಡಿದ್ದಾರೆ. ಅಂಗವೈಕಲ್ಯವನ್ನು ಹಿಯ್ಯಾಳಿಸುವ ಪರಿ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡಲೇ…
ನಿಗದಿಗಿಂತ ಹೆಚ್ಚುವರಿ ತಂಬಾಕು ಬೆಳೆದರೆ ವಿಧಿಸಲಾಗುತ್ತಿದ್ದ ದಂಡದಲ್ಲಿ ಕಡಿತ
October 29, 2021ಮೈಸೂರು,ಅ.28(ಎಂಟಿವೈ)-ರಾಜ್ಯದಲ್ಲಿ ಅಧಿ ಕೃತ ತಂಬಾಕು ಬೆಳೆಗಾರರು ನಿಗದಿಗಿಂತ ಹೆಚ್ಚಾಗಿ ತಂಬಾಕು ಬೆಳೆದರೆ ಕಟ್ಟಬೇಕಾಗಿದ್ದ ದಂಡದ ಪ್ರಮಾಣ ವನ್ನು ಕಡಿತ ಮಾಡಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಮಂತ್ರಾಲಯ ಅಧಿಸೂಚನೆ ಹೊರಡಿಸಿದೆ. ಅಧಿಕೃತ ರೈತರು ಬೆಳೆದ ಹೆಚ್ಚುವರಿ ತಂಬಾಕಿಗೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ ಕಡಿಮೆ ಮಾಡು ವಂತೆ ಹಲವು ವರ್ಷಗಳಿಂದ ಸಾಕಷ್ಟು ಬಾರಿ ರೈತರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಆದರೆ ಇದುವರೆಗೂ ನಿಗದಿಗಿಂತ ಹೆಚ್ಚಾಗಿ ಬೆಳೆದ ತಂಬಾಕಿಗೆ ದಂಡ ವಿಧಿಸುವುದಲ್ಲದೆ, ಆದಾಯದಲ್ಲಿ ಕಡಿತ ಮಾಡಲಾಗುತ್ತಿತ್ತು. ಇದರಿಂದ…
ಎನ್‍ಟಿಎಂ ಶಾಲೆ, ನಿರಂಜನ ಮಠ, ವಿವೇಕ ಸ್ಮಾರಕ ವಿಷಯ ಸುಖಾಂತ್ಯ: ಹೋರಾಟಗಾರರಲ್ಲಿ ಆಶಾಭಾವನೆ
October 29, 2021ಮೈಸೂರು, ಅ.28(ಪಿಎಂ)- ಎನ್‍ಟಿಎಂ ಕನ್ನಡ ಶಾಲೆ ಅದೇ ಜಾಗದಲ್ಲಿ ಉಳಿದು, ಶ್ರೀ ನಿರಂಜನ ಮಠದ ಅಸ್ಮಿತೆಗೂ ಯಾವುದೇ ಧಕ್ಕೆ ಬಾರದೇ, ವಿವೇಕ ಸ್ಮಾರಕವೂ ಆಗಲಿ ಎಂಬ ಮಹಾರಾಣಿ (ಎನ್‍ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದುದ್ದೇಶ ಈಡೇರುವ ಆಶಾ ಭಾವನೆ ಮೂಡಿದೆ. ಎಲ್ಲವೂ ಸುಖಾಂತ್ಯ ಕಾಣುವ ಇಂತಹ ಸನ್ನಿವೇಶದಲ್ಲಿ ಈ ಹಿಂದೆ ನಮ್ಮಲ್ಲೇ ಇದ್ದ ಕೆಲವರು ಶಾಲೆಯನ್ನು ಬೇರೆಡೆ ನಿರ್ಮಿಸಬಹುದೆಂಬ ಬಗ್ಗೆ ಪ್ರಚಾರ ಮಾಡುವ ಮೂಲಕ ಶಾಲೆ ಉಳಿಸುವ ಒಕ್ಕೂಟದ ಹೋರಾಟ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು…
ಮಳೆ ಹಾನಿ ಪ್ರದೇಶಗಳಿಗೆ ಶಾಸಕ ರಾಮದಾಸ್ ಭೇಟಿ
October 29, 2021ಮೈಸೂರು, ಅ.28(ಆರ್‍ಕೆಬಿ)-ಕಳೆದ ಹಲವು ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾಗಿದ್ದ ಪ್ರದೇಶಗಳಿಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿ ಪರಿಶೀಲಿಸಿದರು. ಕುವೆಂಪುನಗರ, ಜಯನಗರ, ಅಗ್ರಹಾರ, ಇಟ್ಟಿಗೆಗೂಡು, ಕುವೆಂಪು ನಗರ ಎಂ.ಬ್ಲಾಕ್, ವಿಶ್ವೇಶ್ವರನಗರ, ಜೆ.ಪಿ.ನಗರ ಶ್ರೀರಾಂಪುರ ವಾರ್ಡ್ ಗಳಲ್ಲಿ ಮಳೆಯಿಂದ ತೀವ್ರ ಹಾನಿಯಾಗಿದ್ದು, ಆಯಾಯ ನಗರಪಾಲಿಕೆ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಒಳಚರಂಡಿ ಮತ್ತು ಕುಡಿಯುವ ನೀರಿನ ವಿಭಾಗದ ಇಂಜಿನಿಯರುಗಳು, ಮುಡಾ ಇಂಜಿನಿಯರುಗಳು ಹಾಗೂ ಆರೋಗ್ಯಾಧಿಕಾರಿಗಳು, ವಲಯ ಇಂಜಿನಿಯರುಗಳೊಂದಿಗೆ ಭೇಟಿ ನೀಡಿ, ಹಾನಿ ಪರಿಶೀಲಿಸಿದರು. ತುರ್ತಾಗಿ ಅಗತ್ಯ ಕ್ರಮ…
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್
October 28, 2021ಮೈಸೂರು, ಅ.27(ಆರ್‍ಕೆಬಿ)- ಕುಂಚಿಟಿಗ ಸಮುದಾಯವನ್ನು ಕೇಂದ್ರದ ಇತರೆ ಹಿಂದುಳಿದ ವರ್ಗಗಳ (ಓಬಿಸಿ) ಪಟ್ಟಿಗೆ ಸೇರಿ ಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ವಿಚಾರವಾಗಿ ಮೈಸೂರು ಕುಂಚಿಟಿಗರ ಸಂಘದ ಪರವಾಗಿ ಕಾರ್ಯದರ್ಶಿ ಎಂ.ಅರ್.ಯೋಗೀಶ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮುಖ್ಯ ನ್ಯಾಯಮೂರ್ತಿ ರೀತುರಾಜ್ ಅವಸ್ಥಿ ಅವರ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಿದ ಸಂದರ್ಭ ದಲ್ಲಿ ಕೇಂದ್ರ ಸರ್ಕಾರದ ಪರ ವಕೀಲರು ವಾದ ಮಂಡಿಸಿ,…
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾವ ತಿಮ್ಮಯ್ಯರ ಅಂತ್ಯಕ್ರಿಯೆ
October 28, 2021ಮೈಸೂರು, ಅ.27(ಪಿಎಂ)- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಅನಾರೋಗ್ಯ ದಿಂದ ನಿಧನರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರ ಮಾವ ಆರ್.ತಿಮ್ಮಯ್ಯ (ಪಾಪಣ್ಣ) ಅವರ ಅಂತ್ಯಕ್ರಿಯೆ ಬುಧವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದವರು ಸೇರಿದಂತೆ ಮೃತರ ಸಂಬಂಧಿಕರು ಭಾಗವಹಿಸಿದ್ದರು. ಮೃತ ತಿಮ್ಮಯ್ಯ ನವರ ದ್ವಿತೀಯ ಪುತ್ರಿ ಉಷಾ ಅವರು ಡಿ.ಕೆ.ಶಿವ ಕುಮಾರ್ ಅವರ ಪತ್ನಿ. ಮೈಸೂರಿನ ಇಂದಿರಾನಗರ (ಇಟ್ಟಿಗೆಗೂಡು) ನಿವಾಸಿಯಾಗಿದ್ದ ತಿಮ್ಮಯ್ಯ, ಮೈಸೂರಿನ ಶ್ರೀ ರಾಜ ಸೋಪ್‍ನೆಟ್ ಕಾರ್ಖಾನೆ (ಎಸ್‍ಆರ್…
ಪ್ರಮೋದಾದೇವಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ಸಚಿವ ಸೋಮಶೇಖರ್
October 28, 2021ಮೈಸೂರು,ಅ.27(ಆರ್‍ಕೆಬಿ)-ಮೈಸೂರು ಸಂಸ್ಥಾನಕ್ಕೆ ಅದರದ್ದೇ ಆದ ವಿಶೇಷ, ಗೌರವ, ಸ್ಥಾನಮಾನಗಳು ಇವೆ. ಇಂಥ ಒಂದು ರಾಜ ಪರಂಪರೆಯನ್ನು ಸಮರ್ಥವಾಗಿ ನಿಭಾಯಿಸಿಕೊಂಡು, ಸಾರ್ವಜನಿಕವಾಗಿಯೂ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವ ರಾಜಮಾತೆ ಡಾ. ಪ್ರಮೋದಾದೇವಿ ಒಡೆಯರ್ ಅವರಿಗೆ ಮೈಸೂರು ಮತ್ತು ಚಾ.ನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ರಾಜ್ಯ ಹಾಗೂ ಮೈಸೂರು ವಿಷಯಕ್ಕೆ ಬಂದಾಗ ಮೈಸೂರು ಒಡೆಯರು ಸದಾ ಸರ್ಕಾರದ ಬೆನ್ನುಲುಬಾಗಿ ನಿಲ್ಲುತ್ತಾರೆ. ಇಂದಿಗೂ ಆ ಪರಂಪರೆಯನ್ನು ತಾವು ಮುಂದುವರಿಸಿಕೊಂಡು ಬರುತ್ತಿದ್ದೀರಿ. ಕಾಲ ಕಾಲಕ್ಕೆ ಸರ್ಕಾ…
ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕರೆ
October 28, 2021ಮೈಸೂರು,ಅ.27(ಆರ್‍ಕೆಬಿ)-ಯುವಜನರು ಸ್ಥಳೀಯ ನಾಗರಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜವನ್ನು ಉತ್ತಮ ದಿಕ್ಕಿನೆಡೆಗೆ ಕೊಂಡೊ ಯ್ಯುವಂತೆ ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ.ಆರ್.ಶಿವಪ್ಪ ಕರೆ ನೀಡಿದ್ದಾರೆ. ರೆಡ್‍ಕ್ರಾಸ್ ಸಂಸ್ಥೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಮೈಸೂರು ಜಿಲ್ಲಾ ಶಾಖೆಯು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬುಧ ವಾರ ಆಯೋಜಿಸಿದ್ದ ಪ್ರಥಮ ಚಿಕಿತ್ಸೆ ಅರಿವು ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಯುವ ಜನರು ಬೆಳೆಯುತ್ತಾ ಅವರ ಜವಾಬ್ದಾರಿಯೂ ಹೆಚ್ಚುತ್ತಾ ಹೋಗುತ್ತದೆ. ಸ್ಥಳೀಯ ಸರ್ಕಾರದ ಅಭಿವೃದ್ಧಿಯಲ್ಲಿ…
ರೋಗಕ್ಕೆ ತುತ್ತಾದ ಭತ್ತದ ಗದ್ದೆಗಳಿಗೆ ಕೃಷಿ ಇಲಾಖೆ ಅಧಿಕಾರಿಗಳ ಭೇಟಿ
October 28, 2021ಮೈಸೂರು, ಅ.27(ಎಂಟಿವೈ)- ಬದಲಾಗು ತ್ತಿರುವ ಹವಾಮಾನ, ಅನುಕ್ರಮವಲ್ಲದ ಬೇಸಾಯ ಪದ್ಧತಿಯಿಂದ ಭತ್ತದ ಬೆಳೆಗೆ ರೋಗ ಬಾದೆ ಕಾಡುತ್ತಿದ್ದು, ರೈತರು ತಜ್ಞರ ಸಲಹೆ ಪಡೆದು ಔಷಧಿ ಸಿಂಪಡಿಸಿ ಬೆಳೆ ನಷ್ಟ ತಡೆ ಗಟ್ಟುವಂತೆ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಸಸ್ಯ ಸಂರಕ್ಷಣೆ ವಿಭಾಗದ ಪ್ರಾಧ್ಯಾಪಕರಾದ ಡಾ. ಸಿ.ಗೋವಿಂದರಾಜು ಸಲಹೆ ನೀಡಿದ್ದಾರೆ. ಮೈಸೂರು ತಾಲೂಕಿನ ನಾಗನಹಳ್ಳಿಯಲ್ಲಿರುವ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಯ ವತಿ ಯಿಂದ ನಾಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗನಹಳ್ಳಿ, ಕಳಸ್ತವಾಡಿ, ಲಕ್ಷೀಪುರ, ಶ್ಯಾದನಹಳ್ಳಿ ಗ್ರಾಮಗಳ ಭತ್ತದ ಗದ್ದೆಗಳಿಗೆ…
ನೆರವಿಗೆ ಬಾರದ ಶಾಸಕ ರಾಮದಾಸ್ ವಿರುದ್ಧ ವಿವಿಧ ಬಡಾವಣೆ ನಿವಾಸಿಗಳ ಪ್ರತಿಭಟನೆ
October 28, 2021ಮೈಸೂರು, ಅ.27(ಆರ್‍ಕೆಬಿ)- ಇತ್ತೀ ಚೆಗೆ ಬಿದ್ದ ಧಾರಾಕಾರ ಮಳೆಯಿಂದ ಕೃಷ್ಣ ರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ನೂರಾರು ಮನೆ ಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ವಿವಿಧ ಬಡಾವಣೆಯ ನಿವಾಸಿಗಳು ಇಡೀ ರಾತ್ರಿ ಜೀವ ಭಯದಿಂದ ತತ್ತರಿಸುವಂತಾಗಿದೆ. ವ್ಯಕ್ತಿಯೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಘಟನೆಯೂ ನಡೆದಿದೆ. ಹೀಗಿದ್ದೂ ಕ್ಷೇತ್ರದ ಶಾಸಕರಾಗಲೀ, ನಗರಪಾಲಿಕೆ, ಮುಡಾ ಅಧಿಕಾರಿಗಳಾಗಲೀ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿ, ಕೃಷ್ಣರಾಜ ಕ್ಷೇತ್ರದ ವಿವಿಧ ಬಡಾ ವಣೆಗಳ ನಿವಾಸಿಗಳು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಬುಧವಾರ…










