ಮೈಸೂರು

ಯಶಸ್ವಿ ಎಸ್.ಸೋಮಶೇಖರ್ ಮುಡಾ ನೂತನ ಅಧ್ಯಕ್ಷ
ಮೈಸೂರು

ಯಶಸ್ವಿ ಎಸ್.ಸೋಮಶೇಖರ್ ಮುಡಾ ನೂತನ ಅಧ್ಯಕ್ಷ

December 21, 2022

ಮೈಸೂರು, ಡಿ.20(ಎಸ್‍ಬಿಡಿ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದ ನೂತನ ಅಧ್ಯಕ್ಷರಾಗಿ ಬಿಜೆಪಿ ಮುಖಂಡರೂ ಆದ ಹೆಸರಾಂತ ಉದ್ಯಮಿ ಯಶಸ್ವಿ ಎಸ್.ಸೋಮಶೇಖರ್ ಅವರನ್ನು ನೇಮಕ ಮಾಡಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ಹಲವು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಇವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ನಿರ್ವ ಹಿಸಿದ್ದಾರೆ. ಕೊನೆಗೂ ಭಾರೀ ಪೈಪೋಟಿ ನಡೆಯುತ್ತಿದ್ದ ಮುಡಾ ಅಧ್ಯಕ್ಷ ಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದು, ನಾಳೆ (ಡಿ.21) ಬೆಳಗ್ಗೆ 11ಕ್ಕೆ ಅಧಿಕಾರ ಸ್ವೀಕರಿ ಸಲಿದ್ದಾರೆ. ಈ ಬಗ್ಗೆ `ಮೈಸೂರು…

`ಪ್ರಸಾದ’ದಡಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ;48.3 ಕೋಟಿ ರೂ. ಯೋಜನೆಗೆ ಕೇಂದ್ರದ ಅಸ್ತು
ಮೈಸೂರು

`ಪ್ರಸಾದ’ದಡಿ ಚಾಮುಂಡಿಬೆಟ್ಟದ ಸಮಗ್ರ ಅಭಿವೃದ್ಧಿ;48.3 ಕೋಟಿ ರೂ. ಯೋಜನೆಗೆ ಕೇಂದ್ರದ ಅಸ್ತು

December 20, 2022

ಮೈಸೂರು, ಡಿ. 19(ಆರ್‍ಕೆ)-ಮೈಸೂರಿನ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ `ಪ್ರಸಾದ’ ಯೋಜನೆಯಡಿ 48.3 ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳಲು ಕೇಂದ್ರ ಸರ್ಕಾರ ಕಡೆಗೂ ಅನುಮೋದನೆ ನೀಡಿದೆ. ಪಿಲಿಗ್ರಿಮೇಜ್ ರಿಜುವಿನೇಷನ್ ಅಂಡ್ ಸ್ಪಿರಿಚ್ಯುಯಲ್, ಹೆರಿಟೇಜ್ ಆಗ್‍ಮೆಂಟೇಷನ್ ಡ್ರೈವ್ (ಪ್ರಸಾದ್) ಯೋಜನೆ ಯಡಿ ಚಾಮುಂಡಿಬೆಟ್ಟದಲ್ಲಿ ಭಕ್ತಾದಿಗಳು ಹಾಗೂ ಪ್ರವಾಸಿ ಗರ ಅನುಕೂಲಕ್ಕಾಗಿ ಕೈಗೊಳ್ಳಲು ಉದ್ದೇಶಿಸಿರುವ ಅಭಿ ವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರವು 48.3 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಿದ್ದು, ಈ ಸಂಬಂಧ…

ತಿಂಗಳ ಕಾಲ ನಂದಿನಿ ಉತ್ಪನ್ನಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ
ಮೈಸೂರು

ತಿಂಗಳ ಕಾಲ ನಂದಿನಿ ಉತ್ಪನ್ನಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

December 20, 2022

ಮೈಸೂರು,ಡಿ.19(ಎಂಟಿವೈ)-ಹೊಸ ವರ್ಷ ಹಾಗೂ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಕೆಎಂಎಫ್ ಹಾಗೂ ಮೈಮುಲ್ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮೇಳವನ್ನು ಆಯೋಜಿಸಿದ್ದು, ಡಿ.19ರಿಂದ ಜ.19ರವರೆಗೆ `ನಂದಿನಿ ಸಿಹಿ ಉತ್ಸವ’ ನಡೆಯಲಿದೆ. ಪ್ರತಿ ಬಾರಿಯಂತೆ ಈ ವರ್ಷವೂ ‘ನಂದಿನಿ ಸಿಹಿ ಉತ್ಸವ’ ಆರಂಭಿಸಲಾಗಿದ್ದು, ಹಾಲು, ಮೊಸರು, ತುಪ್ಪ ಹೊರತುಪಡಿಸಿ 52 ಬಗೆಯ ನಂದಿನಿ ಸಿಹಿ ಉತ್ಪನ್ನಗಳ ದರದಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸೋಮವಾರ ಕೆಆರ್‍ಎಸ್ ರಸ್ತೆಯಲ್ಲಿರುವ ನಂದಿನಿ ಪಾರ್ಲರ್ ನಲ್ಲಿ `ಸಿಹಿ…

ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ
ಮೈಸೂರು

ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ

December 18, 2022

ಮೈಸೂರು, ಡಿ.17(ಎಸ್‍ಬಿಡಿ)- ಲಿಂಗಾ ಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಮುಂದಿನ ಜನವರಿಗೆ ಬೀದರ್‍ನಲ್ಲಿ `ರಾಷ್ಟ್ರೀಯ ಲಿಂಗಾಯತ ಪ್ರಥಮ ಮಹಾ ಅಧಿವೇಶನ’ ಆಯೋಜಿಸಲು ಜಾಗತಿಕ ಲಿಂಗಾಯತ ಮಹಾಸಭಾ ನಿರ್ಧರಿಸಿದೆ. ಮೈಸೂರಿನ ಹೊಸಮಠದಲ್ಲಿ ಶನಿವಾರ ಜಾಗತಿಕ ಲಿಂಗಾಯತ ಮಹಾಸಭಾದ 2022-23ನೇ ಸಾಲಿನ ತೃತೀಯ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಪದಾಧಿಕಾರಿಗಳು ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ವಿಶ್ರಾಂತ ಜಿಲ್ಲಾ ನ್ಯಾಯಾಧೀಶ ಎಸ್.ಎನ್. ಕೆಂಪೇಗೌಡರ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರೆಯ ಲಿದ್ದು,…

ವಿರಾಜಪೇಟೆ ಬಳಿ ದಂಪತಿ ಬಂಧನ; ಇಬ್ಬರ ವಿರುದ್ಧವೂ ರೌಡಿಶೀಟ್ ತೆರೆಯಲು ನಿರ್ಧಾರ
ಮೈಸೂರು

ವಿರಾಜಪೇಟೆ ಬಳಿ ದಂಪತಿ ಬಂಧನ; ಇಬ್ಬರ ವಿರುದ್ಧವೂ ರೌಡಿಶೀಟ್ ತೆರೆಯಲು ನಿರ್ಧಾರ

December 17, 2022

ಮೈಸೂರು, ಡಿ.16(ಎಸ್‍ಬಿಡಿ)- ಮೈಸೂರಿನ ಸಾತಗಳ್ಳಿ ಬಸ್ ನಿಲ್ದಾಣದ ಬಳಿ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ಹಿಡಿದು, ಧಮ್ಕಿ ಹಾಕುವುದರೊಂದಿಗೆ ಪ್ರಾಣಬೆದರಿಕೆ ಹಾಕಿ ತಲೆಮರೆಸಿಕೊಂಡಿದ್ದ ದಂಪತಿಯನ್ನು ಬಂಧಿಸಿದ್ದು, ಇಬ್ಬರ ವಿರುದ್ಧ ತಕ್ಷಣವೇ ರೌಡಿಶೀಟ್ ತೆಗೆಯುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ತಿಳಿಸಿದರು. ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅವರು, ಆರೋಪಿಗಳಾದ ಬನ್ನಿಮಂಟಪ ಸಿ ಲೇಔಟ್ ನಿವಾಸಿ ಶಫೀಕ್ ಅಹಮದ್ ಹಾಗೂ ಆತನ ಪತ್ನಿ ಸೈಯದ್ ಮುನ್ನೀಸಾರನ್ನು ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ…

ಖಾಸಗಿ ಡೆವಲಪರ್‍ಗಳಿಗೆ ಅನುಕೂಲಕಾರಿ ನಿರ್ಧಾರ!
ಮೈಸೂರು

ಖಾಸಗಿ ಡೆವಲಪರ್‍ಗಳಿಗೆ ಅನುಕೂಲಕಾರಿ ನಿರ್ಧಾರ!

December 17, 2022

ಮೈಸೂರು, ಡಿ. 16(ಆರ್‍ಕೆ)-ಸುದೀರ್ಘ 6 ತಿಂಗಳ ನಂತರ ಶುಕ್ರವಾರ ನಡೆದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ಸಭೆಯಲ್ಲಿ ಯಾವುದೇ ಮಹತ್ವದ ವಿಷಯಗಳು ಪ್ರಸ್ತಾಪವಾಗದೇ ಕೇವಲ ಖಾಸಗಿ ಡೆವಲಪರ್‍ಗಳಿಗೆ ಅನುಕೂಲವಾಗುವಂತಹ ವಿಷಯ ಗಳನ್ನು ಮಾತ್ರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳೂ ಆದ ಮುಡಾ ಅಧ್ಯಕ್ಷ ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಮುಡಾ ಸದಸ್ಯತ್ವ ಹೊಂದಿರುವ ಶಾಸಕರಾದ ಎಸ್.ಎ. ರಾಮದಾಸ್, ತನ್ವೀರ್ ಸೇಠ್, ಎಲ್.ನಾಗೇಂದ್ರ, ಹರ್ಷವರ್ಧನ, ವಿಧಾನಪರಿಷತ್ ಸದಸ್ಯರಾದ ಎ.ಹೆಚ್. ವಿಶ್ವನಾಥ್, ಸಿ.ಎನ್. ಮಂಜೇಗೌಡ, ದಿನೇಶ್ ಗೂಳೀಗೌಡ,…

ಬೆಳೆ ಕಾಯುತ್ತಿದ್ದ ರೈತ ಹಾರಿಸಿದ ಗುಂಡು ತಗುಲಿ `ಬಲರಾಮ’ನಿಗೆ ಗಾಯ
ಮೈಸೂರು

ಬೆಳೆ ಕಾಯುತ್ತಿದ್ದ ರೈತ ಹಾರಿಸಿದ ಗುಂಡು ತಗುಲಿ `ಬಲರಾಮ’ನಿಗೆ ಗಾಯ

December 17, 2022

ಮೈಸೂರು/ಹನಗೋಡು, ಡಿ.16(ಎಂಟಿವೈ, ದೀಪು)- ನಾಡ ಹಬ್ಬ ದಸರಾ ಮಹೋತ್ಸವದಲ್ಲಿ 13 ಬಾರಿ ಚಿನ್ನದ ಅಂಬಾರಿ ಹೊತ್ತು ದಾಖಲೆ ನಿರ್ಮಿಸಿದ್ದ ಬಲರಾಮನ ಮೇಲೆ ರೈತ ಗುಂಡು ಹಾರಿಸಿದ್ದು, ಸಕಾಲದಲ್ಲಿ ಆನೆಗೆ ಪಶುವೈದ್ಯರು ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಲರಾಮನಿಗೆ ಒಂಟಿ ನಳಿಕೆ ನಾಡ ಬಂದೂಕಿನಿಂದ ಗುಂಡು ಹಾರಿಸಿದ ರೈತ ಎಂ.ಎ. ಸುರೇಶ್‍ನನ್ನು ಅರಣ್ಯಾಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ತನ್ನ ಜಮೀನಿಗೆ ನುಗ್ಗಿ ಕಾಡಾನೆ ಬೆಳೆ ನಾಶಪಡಿ ಸುತ್ತಿದೆ ಎಂದು ಭಾವಿಸಿ ತಾನು ಬಲರಾಮನ…

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ, ಶಿಕ್ಷಕರು ಸೇರಿ 25 ಮಂದಿಗೆ ಗಾಯ
ಮೈಸೂರು

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿ, ಶಿಕ್ಷಕರು ಸೇರಿ 25 ಮಂದಿಗೆ ಗಾಯ

December 16, 2022

ಹುಣಸೂರು, ಡಿ.15- ಹುಣಸೂರು ತಾಲೂಕಿನ ಧರ್ಮಾಪುರದಿಂದ ಶಿವಮೊಗ್ಗ ಜಿಲ್ಲೆಗೆ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಬಸ್ ಪಲ್ಟಿಯಾಗಿ ಐವರು ಶಿಕ್ಷಕರು, 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ 25 ಮಂದಿ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿ ರುವ ಘಟನೆ ಶಿವಮೊಗ್ಗ ಜಿಲ್ಲೆಯ ವಕ್ಕೋಡು ಕ್ರಾಸ್(ತುಮರಿ ಬಳಿಯಲ್ಲಿ)ನಲ್ಲಿ ನಡೆದಿದೆ. ತಾಲೂಕಿನ ಧರ್ಮಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವರುದ್ರಪ್ಪ, ಶಿಕ್ಷಕರಾದ ಕೀರ್ತಿಕುಮಾರಿ, ರವಿ ಕೈಮೂಳೆ ಮುರಿದಿದ್ದು, ವಿದ್ಯಾರ್ಥಿಗಳಾದ ರಾಜೇಶ್, ದಿವ್ಯ ಅವರಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಉಳಿದ ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳಿಂದ…

ಇನ್ನು ಮುಂದೆ ಕಂಬಗಳಿಗೆ ಬದಲು ಅಂಡರ್‍ಗ್ರೌಂಡ್‍ನಲ್ಲಿ ಕೇಬಲ್ ಅಳವಡಿಕೆ
ಮೈಸೂರು

ಇನ್ನು ಮುಂದೆ ಕಂಬಗಳಿಗೆ ಬದಲು ಅಂಡರ್‍ಗ್ರೌಂಡ್‍ನಲ್ಲಿ ಕೇಬಲ್ ಅಳವಡಿಕೆ

December 16, 2022

ಮೈಸೂರು, ಡಿ.15(ಎಸ್‍ಬಿಡಿ)- ಮೈಸೂರು ನಗರದ ಅಂದಗೆಡಿಸುವುದರ ಜೊತೆಗೆ ಸಾರ್ವಜನಿಕರಿಗೆ ಕಂಟಕವಾಗು ತ್ತಿರುವ ಕೇಬಲ್‍ಗಳ ತೆರವಿಗೆ ಮೈಸೂರು ಮಹಾನಗರ ಪಾಲಿಕೆ ಗಡುವು ವಿಧಿಸಿದೆ. ನಗರ ಪಾಲಿಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಗುರುವಾರ ನಡೆದ ಮುಂದುವರೆದ ಕೌನ್ಸಿಲ್ ಸಭೆಯಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಗಿದೆ. ಅಕ್ರಮವಾಗಿ ವಿದ್ಯುತ್ ಕಂಬಗಳಲ್ಲಿ ಅಳ ವಡಿಸಲಾಗಿರುವ ಟಿವಿ, ಇಂಟರ್‍ನೆಟ್ ಇನ್ನಿತರ ಕೇಬಲ್‍ಗಳನ್ನು ಭೂಮಿ ಒಳಗೆಯೇ (ಅಂಡರ್‍ಗ್ರೌಂಡ್-ಯುಜಿ) ಅಳವಡಿ ಸಲು ಮುಂದಿನ ಜನವರಿ 15ರೊಳಗೆ ಪಾಲಿಕೆಯಿಂದ ಅನುಮತಿ ಪಡೆದು, ನಂತರದ 2 ತಿಂಗಳಲ್ಲಿ ಕಾಮಗಾರಿ…

ಕೋರ್ಟ್ ಆದೇಶ ಜಾರಿಗೆ ಹೋದ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ದಂಪತಿ ಧಮ್ಕಿ
ಮೈಸೂರು

ಕೋರ್ಟ್ ಆದೇಶ ಜಾರಿಗೆ ಹೋದ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಮಚ್ಚು ತೋರಿಸಿ ದಂಪತಿ ಧಮ್ಕಿ

December 13, 2022

ಮೈಸೂರು, ಡಿ. 12- ಕೆಎಸ್‍ಆರ್‍ಟಿಸಿಗೆ ಸೇರಿದ ವಾಣಿಜ್ಯ ಸಂಕೀರ್ಣವನ್ನು ಗುತ್ತಿಗೆ ಪಡೆದಿದ್ದವನಿಗೆ ನ್ಯಾಯಾಲಯದ ಆದೇಶ ವನ್ನು ಜಾರಿ ಮಾಡಲು ತೆರಳಿದ ಕೆಎಸ್ ಆರ್‍ಟಿಸಿ ಅಧಿಕಾರಿಗಳಿಗೆ ದಂಪತಿ ರಾಜಾ ರೋಷವಾಗಿ ಧಮ್ಕಿ ಹಾಕಿದ್ದಾರೆ. ಅದ ರಲ್ಲೂ ಮಹಿಳೆಯೊಬ್ಬಳು ಸಾರ್ವಜನಿಕರ ಎದುರಲ್ಲೇ ಮಚ್ಚು ತೋರಿಸಿ, ಬೆದರಿಕೆ ಹಾಕಿದರೆ, ಆಕೆಯ ಪತಿ ಅಧಿಕಾರಿಗಳಿಗೆ ಅವಾಚ್ಯ ಶಬ್ಧಗಳಿಂದ ಹರಿಹಾಯ್ದ ಘಟನೆ ಮೈಸೂರಿನ ಸಾತಗಳ್ಳಿ ಬಸ್ ನಿಲ್ದಾಣದಲ್ಲಿ ಶನಿವಾರ ನಡೆದಿದೆ. ವಾಣಿಜ್ಯ ಸಂಕೀರ್ಣ ಗುತ್ತಿಗೆ ಪಡೆದಿದ್ದ ಬನ್ನಿಮಂಟಪ ಸಿ ಲೇಔಟ್ ನಿವಾಸಿ ಶಫೀಕ್ ಅಹಮದ್…

1 15 16 17 18 19 1,611
Translate »