ಮೈಸೂರು,ಸೆ.22(ಪಿಎಂ)-ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಅಸೋಷಿಯೇಷನ್ ಮೈಸೂರು ವಿಭಾಗದ ನೇತೃತ್ವದಲ್ಲಿ ರೈಲ್ವೆ ಇಲಾಖೆಯ ಸ್ಟೇಷನ್ ಮಾಸ್ಟರ್‍ಗಳು ಬುಧವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ನೈರುತ್ಯ ರೈಲ್ವೆಯ ಡಿಆರ್‍ಎಂ ಕಚೇರಿ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸ್ಥಗಿತಗೊಳಿಸಿರುವ ರಾತ್ರಿ ಪಾಳಿ ಭತ್ಯೆಯನ್ನು ಮತ್ತೆ ಜಾರಿಗೊಳಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಖಾಲಿ ಇರುವ ಸ್ಟೇಷನ್ ಮಾಸ್ಟರ್ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು. ಕೆಲವೆಡೆ ಹೆಚ್ಚುವರಿಯಾಗಿ 12 ಗಂಟೆಗಳ ಕಾಲ ಸ್ಟೇಷನ್ ಮಾಸ್ಟರ್‍ಗಳನ್ನು ದುಡಿಸು ತ್ತಿದ್ದು, 8…
ಮೈಸೂರು ಸದರನ್ ಸ್ಟಾರ್ ಹೋಟೆಲ್ ಪುನಾರಂಭ 16 ತಿಂಗಳ ನಂತರ ಹೋಟೆಲ್ ಪ್ರಾರಂಭಕ್ಕೆ ಸಿದ್ಧತೆ
September 23, 2021ಮೈಸೂರು, ಸೆ. 22(ಆರ್‍ಕೆ)- ಮೈಸೂರಿನ ವಿನೋಬಾ ರಸ್ತೆ ಯಲ್ಲಿರುವ ಪ್ರತಿಷ್ಠಿತ ಸದರನ್ ಸ್ಟಾರ್ ಹೋಟೆಲ್ ಅಕ್ಟೋಬರ್ ಮೊದಲ ವಾರ ಪುನಾರಂಭಗೊಳ್ಳಲಿದೆ. ಕೋವಿಡ್-19ರಿಂದಾಗಿ 2020ರ ಮೇ 19ರಂದು ಈ ಹೋಟೆಲ್ ಬಂದ್ ಆಗಿತ್ತು. ಇದೀಗ ಕೊರೊನಾ ಸೋಂಕಿನ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿದ್ದು, ಎಲ್ಲಾ ಚಟುವಟಿಕೆ, ವಹಿವಾಟು ಚುರುಕುಗೊಂಡಿರುವುದರಿಂದ ಅಕ್ಟೋಬರ್ ಮೊದಲ ವಾರ ಹೋಟೆಲ್ ಸೇವೆಯನ್ನು ಪುನಾ ರಂಭಿಸಲು ಆಡಳಿತ ಮಂಡಳಿ ಮುಂದಾಗಿದೆ. ಈ ಬಗ್ಗೆ ಹೋಟೆಲ್‍ನ ಎಲ್ಲಾ ನೌಕರರಿಗೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂದೇಶ ನೀಡಲಾಗಿದೆ ಎಂದು ಸದರನ್…
ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಗೆ `ಬಾಂಬ್’ ಬೆದರಿಕೆ
September 23, 2021ಮೈಸೂರು,ಸೆ.22(ಆರ್‍ಕೆ)- ಮೈಸೂ ರಿನ ದೇವರಾಜ ಮೊಹಲ್ಲಾದಲ್ಲಿರುವ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಪತ್ರದಿಂದ ಎರಡು ಗಂಟೆ ಕಾಲ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸ್, ಬಾಂಬ್ ಪತ್ತೆ ಹಾಗೂ ನಿಷ್ಕ್ರಿಯ ದಳ, ಬೆರಳಚ್ಚು ಮುದ್ರೆ ಘಟಕ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಕಚೇ ರಿಗೆ ತೆರಳಿ ಅಧಿಕಾರಿ, ಸಿಬ್ಬಂದಿಗಳನ್ನು ಹೊರಕ್ಕೆ ಕಳುಹಿಸಿ ಕಚೇರಿ ಒಳಗೆ ಹಾಗೂ ಆವರಣದಲ್ಲಿ ಎರಡು ಗಂಟೆ ಶೋಧ ನಡೆಸಿ ದರು….
ಮಹಿಳೆಯರ ರಕ್ಷಣೆಗೆ ಆಗ್ರಹಿಸಿ ಪ್ರತಿಭಟನೆ
September 23, 2021ಮೈಸೂರು, ಸೆ.22(ಆರ್‍ಕೆಬಿ)- ಶಾಲಾ -ಕಾಲೇಜುಗಳ ಬಳಿ ಪೊಲೀಸ್ ಸಿಬ್ಬಂದಿ ನೇಮಿಸಬೇಕು. ಮೈಸೂರು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಗುಂಪುಗೂಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿನಿಯರು, ಮಹಿಳೆಯರು ಮನೆಗೆ ಹೋಗುವ ಮಾರ್ಗದಲ್ಲಿ ಮೈದಾನ, ಉದ್ಯಾ ನವನಗಳ ಬಳಿ ಚುಡಾಯಿಸುವ ಯುವಕ ರಿಗೆ ಶಿಕ್ಷೆ ಆಗಬೇಕು. ಹೀಗೇ ನಾನಾ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜಾತ್ಯ ತೀತ ಮಹಿಳಾ ರಕ್ಷಣಾ ವೇದಿಕೆ ಮತ್ತು ಕದಂಬ ಸೈನ್ಯ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಜಾತ್ಯತೀತ ಮಹಿಳಾ ರಕ್ಷಣಾ ವೇದಿಕೆ…
ಅರಮನೆಯಲ್ಲಿ ಬಣ್ಣ ಬಳಿಯುವಾಗ ಬಿದ್ದು ಕಾರ್ಮಿಕನಿಗೆ ಗಾಯ
September 23, 2021ಮೈಸೂರು,ಸೆ.22(ಎಂಟಿವೈ)- ನಾಡ ಹಬ್ಬ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಗೆ ಬಣ್ಣ ಬಳಿಯುವ ವೇಳೆ ಕಾರ್ಮಿಕನೊಬ್ಬ ಬಿದ್ದು ಗಾಯಗೊಂಡಿದ್ದಾನೆ. ಬುಧವಾರ ಬೆಳಗ್ಗೆ ಅರಮನೆಯ ಜಯ ಮಾರ್ತಾಂಡ ದ್ವಾರದ ಗೋಡೆ ಗಳಿಗೆ ಬಣ್ಣ ಬಳಿಯುತ್ತಿದ್ದ ಗೌಸಿಯಾ ನಗರದ ನಿವಾಸಿ ಅಫ್ತಾಬ್(32), ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ. ಸುಮಾರು 15ರಿಂದ 18 ಅಡಿ ಎತ್ತರ ದಿಂದ ಕೆಳಕ್ಕೆ ಬಿದ್ದ ಇವರನ್ನು ಜೊತೆ ಕೆಲಸಗಾರರು ಕೂಡಲೇ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಿದರು. ದಸರಾ ಸಮೀಪಿ ಸುತ್ತಿರುವ ಹಿನ್ನೆಲೆಯಲ್ಲಿ ಅರಮನೆಗೆ ಬಣ್ಣ ಬಳಿಯುವ ಕಾರ್ಯ…
ಕಸದಿಂದ ಸಾಂಕ್ರಾಮಿಕ ರೋಗ ಭೀತಿ: ನಿವಾಸಿಗಳ ಪ್ರತಿಭಟನೆ
September 23, 2021ಮೈಸೂರು, ಸೆ.22(ಆರ್‍ಕೆಬಿ)- ಮೈಸೂ ರಿನ ಮಹದೇವಪುರ ಬಡಾವಣೆಯಲ್ಲಿ ಕಸದ ರಾಶಿ ಕೊಳೆತು, ಕೊರೊನಾ ಸಾಂಕ್ರಾ ಮಿಕ ರೋಗ ಹರಡಲು ಒತ್ತಾಸೆಯಾಗಿ ದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲವೆಂದು ಆರೋಪಿಸಿ ಮಾನಂದವಾಡಿ ರಸ್ತೆಯ ಮಹದೇವಪುರ ಬಡಾವಣೆಯ ನಿವಾಸಿಗಳು ಇಂದು ಶ್ರೀರಾಂಪುರ ಪಟ್ಟಣ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜನಸಾಮಾನ್ಯರು ಮೂಗು ಮುಚ್ಚಿ ಕೊಂಡು ಓಡಾಡುವಂತಾಗಿದೆ. ಪೌರ ಕಾರ್ಮಿಕರನ್ನು ಕೇಳಿದರೆ ನಮಗೆ ಕಸ ತೆಗೆ ಯಲು ಅಧಿಕಾರಿಗಳಿಂದ ಸೂಚನೆ ಇಲ್ಲ ಎನ್ನುತ್ತಿದ್ದಾರೆ ಎಂದು ದೂರಿದರು. ಶ್ರೀರಾಂಪುರ ಪಟ್ಟಣ ಪಂಚಾಯಿತಿ…
ಪಟ್ಟದ ಆನೆ ವಿಕ್ರಮನಿಗೆ ಅಲ್ಪ ಮದ!
September 23, 2021ಮೈಸೂರು, ಸೆ.22(ಎಂಟಿವೈ)- ದಸರಾ ಮಹೋತ್ಸವದಲ್ಲಿ ಅರ ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯದಲ್ಲಿ ಪಟ್ಟದ ಆನೆ ಯಾಗಿ ಪಾಲ್ಗೊಳ್ಳಬೇಕಾಗಿದ್ದ ವಿಕ್ರಮನಿಗೆ ಕಾಣಿಸಿಕೊಂಡಿದ್ದ ಅಲ್ಪ ಪ್ರಮಾಣದಲ್ಲಿ ಮದ ಇನ್ನು ನಿವಾರಣೆಯಾಗದೇ ಇದ್ದು, ಪಶು ವೈದ್ಯರು ಹಾಗೂ ನುರಿತ ಮಾವುತರ ಸಲಹೆ ಮೇರೆಗೆ ದೇಹವನ್ನು ತಂಪಾಗಿಸಲು ಬಾಳೆಕಂದು ನೀಡಲಾಗುತ್ತಿದೆ. 2021ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದ ವಿಕ್ರಮ(58) ಈ ವರ್ಷವೂ ಪಟ್ಟದ ಆನೆಯಾಗಿ ಜವಾಬ್ದಾರಿ ನಿಭಾಯಿಸಬೇಕಾಗಿತ್ತು. ದುಬಾರೆ ಆನೆ ಶಿಬಿರದಲ್ಲಿದ್ದ ವಿಕ್ರಮನಿಗೆ ಜೂನ್‍ನಲ್ಲಿಯೇ ಮದ ಬಂದಿತ್ತು. ಸಾಮಾನ್ಯವಾಗಿ 3…
ವಿಷ್ಣು ಪುತ್ಥಳಿಗೆ ಹಾನಿ: ಅಭಿಮಾನಿಗಳ ಸಂಘ ಖಂಡನೆ
September 22, 2021ಮೈಸೂರು, ಸೆ.21(ಆರ್‍ಕೆಬಿ)- ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಎದುರಿನಲ್ಲಿ ರುವ ಡಾ.ವಿಷ್ಣುವರ್ಧನ್ ಉದ್ಯಾನದಲ್ಲಿ ಅಭಿಮಾನಿಗಳು ಸ್ಥಾಪಿಸಿದ್ದ ಡಾ.ವಿಷ್ಣುವರ್ಧನ್ ಪುತ್ಥಳಿಗೆ ಹಾನಿ ಮಾಡಿ ರುವುದನ್ನು ಡಾ.ವಿಷ್ಣು ಸೇನಾ ಸಮಿತಿ ಖಂಡಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳ ವಾರ ಮಾತನಾಡಿದ ಸಮಿತಿ ಅಧ್ಯಕ್ಷ ಎಂ.ಡಿ.ಪಾರ್ಥ ಸಾರಥಿ, ಕನ್ನಡ ನೆಲ, ಜಲ, ಭಾಷೆ ಹಾಗೂ ಕನ್ನಡ ಚಿತ್ರ ರಂಗದ ಉಳಿವಿಗಾಗಿ ಹೋರಾಟ ನಡೆಸಿದ್ದಾರೆ. ಅಂಥವರ ಪುತ್ಥಳಿಯನ್ನು ವಿಷ್ಣುವರ್ಧನ್ ಜನ್ಮ ದಿನಾಚರಣೆ ಬಳಿಕ ವಾಪಸ್ ತೆಗೆದುಕೊಂಡು ಹೋಗಿ ಎಂದು ಹೇಳಿದ್ದರೆ…
ಆಡಳಿತ ವೈಫಲ್ಯದಿಂದ ಬೇಸತ್ತ ಜನ ಬಿಜೆಪಿ ಧೂಳೀಪಟ ಮಾಡ್ತಾರೆ
September 22, 2021ಮೈಸೂರು, ಸೆ.21(ಆರ್‍ಕೆಬಿ)- ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಆಡ ಳಿತ ವೈಫಲ್ಯದಿಂದ ಜನರು ಬೇಸತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಯುತ್ತಿದ್ದಾರೆ. ಆ ಮೂಲಕ ಬಿಜೆಪಿ ಯನ್ನು ಧೂಳೀಪಟ ಮಾಡಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್.ಸುದರ್ಶನ್ ತಿಳಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಗ್ರಾಮಾಂ ತರ ಕಾಂಗ್ರೆಸ್ ವತಿಯಿಂದ ಮಂಗಳ ವಾರ ಆಯೋಜಿಸಿದ್ದ ಚಾಮರಾಜ ವಿಧಾನ ಸಭಾ ಕ್ಷೇತ್ರ ಮತಗಟ್ಟೆ ಮಟ್ಟದ ಪ್ರತಿನಿಧಿ ಗಳ…
ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆ ಗಮನಿಸಿದರೆ ರಾಜ್ಯದಲ್ಲಿ ಅವಧಿಗೂ ಮುನ್ನ ಚುನಾವಣೆ ಸಾಧ್ಯತೆ?
September 22, 2021ಮೈಸೂರು, ಸೆ.21(ಆರ್‍ಕೆಬಿ)- ಬಿಜೆಪಿಯಲ್ಲಿನ ಇತ್ತೀ ಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅವಧಿಗೂ ಮುನ್ನ ಚುನಾವಣೆ ಬರುವ ಸಾಧ್ಯತೆ ಇದೆ. ಉತ್ತರ ಪ್ರದೇಶ ಚುನಾವಣೆ ಜೊತೆಯಲ್ಲಿಯೇ ರಾಜ್ಯದಲ್ಲೂ ಚುನಾವಣೆ ನಡೆಯಲಿದೆ ಎಂಬ ಮಾತು ಬಿಜೆಪಿ ವಲಯದಲ್ಲೇ ಕೇಳಿ ಬರುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ ವಿ.ಆರ್.ಸುದರ್ಶನ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದ್ದು, ಇದನ್ನು ರಾಜ್ಯದ ಹಳ್ಳಿಹಳ್ಳಿಗೂ ಕೊಂಡೊಯ್ದು ಜನರಿಗೆ…










