ಮೈಸೂರು,ಸೆ.21(ಎಂಟಿವೈ)- ಮರೆಗುಳಿ ದಿನದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸ್‍ಆರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ವತಿಯಿಂದ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡು, ಗಮನ ಸೆಳೆದರು. ಮೈಸೂರು ಅರಮನೆಯ ಉತ್ತರ ದ್ವಾರದ ಕೋಟೆ ಆಂಜ ನೇಯಸ್ವಾಮಿ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ಅಲ್ಜೈಮರ್ಸ್ ಅಂಡ್ ರಿಲೇಟೆಡ್ ಡಿಸ್‍ಆರ್ಡರ್ಸ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಶಾಖೆ ಏರ್ಪಡಿಸಿದ್ದ ಜಾಥಾವನ್ನು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮರೆಗುಳಿ ಸಮಸ್ಯೆ…
ನಿರಂಜನ ಮಠದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಮಠ ಸಂರಕ್ಷಣಾ ಸಮಿತಿ ಆಕ್ಷೇಪ
September 22, 2021ಮೈಸೂರು,ಸೆ.21(ಆರ್‍ಕೆಬಿ)- ಮೈಸೂ ರಿನ ನಿರಂಜನ ಮಠದ ಬಗ್ಗೆ ಮಾಧ್ಯಮ ದಲ್ಲಿ ಹೇಳಿಕೆ ನೀಡಿರುವ ಚಿಂತಕ, ಸಾಮಾ ಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಿರಂಜನ ಮಠ ಸಂರಕ್ಷಣಾ ಸಮಿತಿ ಟೀಕಾ ಪ್ರಹಾರ ನಡೆಸಿದೆ. ನಿರಂಜನ ಮಠ ಆವರಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ಟಿ.ಎಸ್.ಲೋಕೇಶ್, ನಿರಂಜನ ಮಠದ ಬಗ್ಗೆ ಸೂಕ್ತ, ವಾಸ್ತವ ಮಾಹಿತಿ ಅರಿತುಕೊಳ್ಳದೇ ಸೂಲಿಬೆಲೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ದ್ದಾರೆ. ರಾಮಕೃಷ್ಣ ಆಶ್ರಮದ ಪರವಾಗಿ ಹೇಳಿಕೆ ನೀಡುವ ಭರದಲ್ಲಿ ಅವರು ಆಡಿ…
ಮೈಸೂರಲ್ಲಿ ಚೇತರಿಸಿಕೊಳ್ಳುತ್ತಿದೆ ಹೋಟೆಲ್ ಉದ್ಯಮ
September 22, 2021ಮೈಸೂರು,ಸೆ.21(ಆರ್‍ಕೆ)-ಕೊರೊನಾ ವೈರಸ್ ಮಹಾಮಾರಿ ಸೋಂಕಿನಿಂದಾಗಿ ನೆಲ ಕಚ್ಚಿದ್ದ ಹೋಟೆಲ್ ಉದ್ಯಮ ಲಾಕ್‍ಡೌನ್ ನಿರ್ಬಂ ಧದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. 2020ರ ಫೆಬ್ರವರಿ ಮಾಹೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಅಂತರ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವುದು ಕಡಿಮೆಯಾ ಯಿತು. ಸೋಂಕು ಉತ್ತುಂಗಕ್ಕೇರಿದ ಸಂದರ್ಭ ಇಡೀ ದೇಶದಲ್ಲಿ ಲಾಕ್‍ಡೌನ್ ನಿರ್ಬಂಧ ವಿಧಿಸಿ ದ್ದರಿಂದ ಎಲ್ಲಾ ವಹಿವಾಟು ಸ್ಥಗಿತಗೊಂಡಿತ್ತು. ಅದೇ ರೀತಿ ಎರಡನೇ ಅಲೆಯಲ್ಲಿ ರೂಪಾಂ ತರಿ ಕೊರೊನಾ ಹಲವರನ್ನು ಬಲಿ ತೆಗೆದು ಕೊಂಡ ಮೇಲಂತೂ…
ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ವಿಶ್ವಾಸ್‍ಕುಮಾರ್‍ಗೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನ
September 21, 2021ಮೈಸೂರು,ಸೆ.20(ಪಿಎಂ)-ಉನ್ನತ ದರ್ಜೆಯಲ್ಲಿ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ವಿಶ್ವಾಸ್ ಕುಮಾರ್ ಅವರನ್ನು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಶಾಸಕ ಎಲ್.ನಾಗೇಂದ್ರ ಸೋಮವಾರ ಸನ್ಮಾನಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪ ಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು, ವಿಶ್ವಾಸ್ ಕುಮಾರ್ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಮಾತನಾ ಡಿದ ಶಾಸಕರು, ಚಿಕ್ಕ ವಯಸ್ಸಿನಲ್ಲೇ ವಿಶ್ವಾಸ್‍ಕುಮಾರ್ ಇಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಮೈಸೂ ರಿನ ಜನತೆ ಪರವಾಗಿ ಅಭಿನಂದಿಸುತ್ತೇನೆ. ಇವರನ್ನು…
ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಅಂತರಶಾಲಾ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ-3
September 21, 2021ಮೈಸೂರು, ಸೆ.20-ಮೈಸೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯು ‘ಕಾರ್ಡಿ ಯಾಲಜಿ ಸೊಸೈಟಿ ಆಫ್ ಇಂಡಿಯಾ’ ಸಹಯೋಗದಲ್ಲಿ ಮೂರನೆಯ ಬಾರಿಗೆ ಅಂತರಶಾಲಾ ‘ಆನ್‍ಲೈನ್ ರಸ ಪ್ರಶ್ನೆ ಸ್ಪರ್ಧೆ-3’ ಆಯೋಜಿ ಸಲಾಗಿತ್ತು. ಮೈಸೂರಿನಲ್ಲಿ ಆನ್ ಲೈನ್ ಮೂಲಕ ನಡೆದ ಮೊದಲ ರಸಪ್ರಶ್ನೆ ಕಾರ್ಯಕ್ರಮ ಇದಾ ಗಿದ್ದು, ಸ್ಪರ್ಧೆಯಲ್ಲಿ ಒಟ್ಟು 37 ತಂಡಗಳು, 74 ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಕ್ವಿಜ್‍ನಿಂದಾಗಿ ಮಕ್ಕಳು ಮನುಷ್ಯನ ದೇಹರಚನೆ, ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಬದಲಾಗುತ್ತಿರುವ ಜೀವನಶೈಲಿಯ ಬಗ್ಗೆ ತಿಳಿದುಕೊಂಡರು. ಮನೋರಂಜನೆಯ ಜೊತೆಗೆ ಸಾಕಷ್ಟು…
ಜಾನಪದ ಕಲಾವಿದರಿಗೆ ಶೀಘ್ರ ಬಾಕಿ ಮಾಸಾಶನ ಬಿಡುಗಡೆ
September 21, 2021ಮೈಸೂರು,ಸೆ.20(ಪಿಎಂ)- ಮಾಸಾಶನ ಬಾಕಿ ಇರುವ ಜಾನಪದ ಕಲಾವಿದರ ವಿವರಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ನೀಡಲಾಗಿದೆ. ಶೀಘ್ರದಲ್ಲಿ ಹಣ ಬಿಡುಗಡೆಯಾಗಲಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ತಿಳಿಸಿದರು. ನಗರದಲ್ಲಿ ಇತ್ತೀಚೆಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲೆಗಳ ಬಗ್ಗೆ ವಿಶೇಷ ಆಸಕ್ತಿಯುಳ್ಳ ಕನ್ನಡ ಮತ್ತು ಸಂಸ್ಕøತಿ ಸಚಿವ ವಿ.ಸುನೀಲ್‍ಕುಮಾರ್, ಶೀಘ್ರ ಮಾಸಾಶನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು. 300 ಲೈಂಗಿಕ ಅಲ್ಪಸಂಖ್ಯಾತರಿಗೆ ಜನಪದ ಕಲೆ ತರಬೇತಿ, ಜನಪದ ಕಲೆಗಳಿಗೆ ಸಂಬಂಧಿಸಿದಂತೆ ಅಖಿಲ ಭಾರತ…
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಕಲಚೇತನರ ಪ್ರತಿಭಟನೆ
September 21, 2021ಮೈಸೂರು, ಸೆ.20(ಆರ್‍ಕೆಬಿ)- 2016 ರಲ್ಲಿ ಕೇಂದ್ರ ಸರ್ಕಾರವು ಜಾರಿಗೆ ತಂದಿ ರುವ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ಕಾಯಿದೆ ಕರ್ನಾಟಕದಲ್ಲೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಬೇಕು. ವಿಕಲಚೇತನರಿಗಾಗಿಯೇ ಪ್ರತ್ಯೇಕ ಸಚಿ ವಾಲಯ ಸ್ಥಾಪಿಸಬೇಕು. ವಿಕಲಚೇತನ ರಿಗೆ ಮೀಸಲಿಟ್ಟ ಶೇ.5 ಅನುದಾನ ಸ್ಥಳೀಯ ಸಂಸ್ಥೆಗಳು ಹಾಗೂ ನಿಗಮ ಮಂಡಳಿ ಗಳು ಮತ್ತು ವಿವಿಧ ಇಲಾಖೆಗಳಿಂದ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಈ ಅನುದಾನವನ್ನು ವಿಕಲಚೇತನ ಅರ್ಹ ಫಲಾನುಭವಿಗಳಿಗಾಗಿ ಬಳಸಲು ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂಬಿ ತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ವಿಕಲಚೇತನ…
ಸೆ.27ರ ಭಾರತ್ ಬಂದ್ ಯಶಸ್ಸಿಗೆ ಕರೆ
September 21, 2021ಮೈಸೂರು, ಸೆ.20 (ಆರ್‍ಕೆಬಿ)- ಕೇಂದ್ರ ಸರ್ಕಾರದ ರೈತ ವಿರೋಧಿ ಧೋರಣೆ ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಸೆ.27ರ ಭಾರತ್ ಬಂದ್ ಯಶಸ್ಸಿಗೆ ಸಹಕರಿಸುವಂತೆ ರೈತ, ಕಾರ್ಮಿಕ, ದಲಿತ ಸಂಯುಕ್ತ ಹೋರಾಟ ಸಮಿತಿ, ಮೈಸೂರು ನಗರ ಮತ್ತು ಜಿಲ್ಲೆಯ ಜನರಲ್ಲಿ ಮನವಿ ಮಾಡಿದೆ. ಸಂಯುಕ್ತ ಹೋರಾಟ ಸಮಿತಿಯ ಮುಖಂಡರಾದ ಪ.ಮಲ್ಲೇಶ್, ಸ್ವರಾಜ್ ಇಂಡಿಯಾದ ಜಿಲ್ಲಾಧ್ಯಕ್ಷ ಉಗ್ರನರಸಿಂಹೇ ಗೌಡ, ಎಐಟಿಯುಸಿ ಜಿಲ್ಲಾಧ್ಯಕ್ಷ ಜಗ ದೀಶ್ ಸೂರ್ಯ, ಐಎನ್‍ಟಿಯುಸಿ ಜಿಲ್ಲಾ ಧ್ಯಕ್ಷ ಜಿ.ಜಯರಾಂ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ…
ಕೋವಿಡ್ ಪ್ರೋತ್ಸಾಹ ಧನವೂ ಸೇರಿದಂತೆ ಮೂರು ತಿಂಗಳ ವೇತನಕ್ಕೆ ಆಗ್ರಹಿಸಿ ಕಿರಿಯ ವೈದ್ಯರ ಪ್ರತಿಭಟನೆ
September 21, 2021ಮೈಸೂರು,ಸೆ.20(ಆರ್‍ಕೆಬಿ)- ಸರ್ಕಾ ರದ ಆದೇಶದ ಮೇರೆಗೆ ತುರ್ತು ಪರಿಸ್ಥಿತಿ ಒಳಗೊಂಡಂತೆ ದಿನದ 24 ಗಂಟೆಯೂ ಕೋವಿಡ್ ಕರ್ತವ್ಯ ನಿರ್ವಹಣೆ ಮಾಡಿದ ತಮಗೆ ಮೂರು ತಿಂಗಳಿಂದ ವೇತನ, ಪ್ರೋತ್ಸಾಹ ಧನ ನೀಡಿಲ್ಲ ಎಂದು ಆರೋ ಪಿಸಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂ ಸಿಆರ್‍ಐ)ಗೆ ಸೇರಿದ 50ಕ್ಕೂ ಅಧಿಕ ಕಿರಿಯ ವೈದ್ಯರು ಸೋಮವಾರ ಎಂಎಂಸಿಆರ್‍ಐ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಕಿರಿಯ ವೈದ್ಯರು ಎಂಎಂಸಿ ಆರ್‍ಐ ಡೀನ್ ಮತ್ತು ನಿರ್ದೇಶಕರ ಕಚೇರಿ…
ಪ್ರಜಾಪ್ರತಿನಿಧಿ ಗ್ರಾಪಂ ವಾರ್ಡ್ ಸಮಿತಿಗೆ ಕೆ.ಮರೀಗೌಡ ಚಾಲನೆ
September 21, 2021ಮೈಸೂರು, ಸೆ.20(ಎಸ್‍ಪಿಎನ್)- ಪಕ್ಷದ ಸಂಘಟನೆ ದೃಷ್ಟಿಯಿಂದ ಗ್ರಾಪಂ ಮಟ್ಟದಲ್ಲ್ಲಿ ಮುಖಂಡರು ಮತ್ತು ಕಾರ್ಯಕರ್ತರನ್ನೊಳಗೊಂಡ 60 ಜನರ ಪ್ರಜಾ ಪ್ರತಿನಿಧಿ ಗ್ರಾಮ ಪಂಚಾಯ್ತಿ ವಾರ್ಡ್ ಸಮಿತಿ ರಚನೆಗೆ ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮೈಸೂರು ಹೊರವಲಯದಲ್ಲಿ ಚಾಲನೆ ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರ್ದೇ ಶನದಂತೆ ಪಕ್ಷ ಸಂಘಟನೆ ಮಾಡುವ ದೃಷ್ಟಿಯಿಂದ ಗ್ರಾಪಂ ವ್ಯಾಪ್ತಿಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನೊಳಗೊಂಡ 60 ಜನರ ಸಮಿತಿ ರಚನೆಗೆ ಚಾಲನೆ ನೀಡಿದ್ದಾರೆ. ಈ ವೇಳೆ ಮೈಸೂರು ತಾಲೂಕಿನ…










