ಮೈಸೂರು, ಆ.೨೬(ವೈಡಿಎಸ್)- ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಸಂಜೆ ನಡೆದ ವಿದ್ಯಾರ್ಥಿನಿ ಮೇಲಿನ ಗ್ಯಾಂಗ್‌ರೇಪ್ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ವಿದ್ದರೆ ಸ್ಥಳೀಯ ಮಟ್ಟದಲ್ಲಿ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಲಲಿತ್‌ಮಹಲ್ ಹೋಟೆಲ್‌ನ ಶತಮಾನೋತ್ಸವ ಹಿನ್ನೆಲೆ ಹೋಟೆಲ್‌ನಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಅವರು, ಈ ಘಟನೆ ನಡೆಯಲು ಪೊಲೀಸ್ ಇಲಾಖೆಯ ವೈಫಲ್ಯ ಕಾರಣ ಎಂದು ಸಾರ್ವಜನಿಕರು ತೀರ್ಮಾನಿಸಿದ್ದರೆ ಅದಕ್ಕೆ ಸರ್ಕಾರವೂ ಸ್ಪಂದಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ…
ನಿರಂಜನ ಮಠದ ಆವರಣದಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ನಾವು ಅವಕಾಶ ನೀಡುವುದಿಲ್ಲ
August 27, 2021ಮೈಸೂರು,ಆ.೨೬(ಪಿಎಂ)-ಶ್ರೀ ನಿರಂಜನ ಮಠದ ಯಾವುದೇ ಒಂದು ಮೂಲೆಯಲ್ಲಿಯೂ ವಿವೇಕ ಸ್ಮಾರಕ ನಿರ್ಮಿಸಲು ಅವಕಾಶ ಕೊಡುವುದಿಲ್ಲ. ಸ್ಮಾರಕ ನಿರ್ಮಿಸಲು ನಮ್ಮ ವಿರೋಧ ವಿಲ್ಲ. ಆದರೆ ನಮ್ಮ ಜಾಗದಲ್ಲಿ ನಿರ್ಮಿಸುವುದಕ್ಕೆ ವಿರೋಧ ವಿದೆ ಎಂದು ಗದಗ ಜಿಲ್ಲೆಯ ಬಾಳೇಹೊಸೂರು ಶ್ರೀ ದಿಂಗಾ ಲೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು. ಮಠದ ಆವರಣದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಗುರುವಾರ ಪಾಲ್ಗೊಂಡು ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರನ್ನು ದೇವರ ಸಮಾನವಾಗಿ ಕಾಣುತ್ತೇವೆ. ಆದರೆ ಅವರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಟ್ಟ ಈ ಮಠವನ್ನೇ ಹಗಲು…
ಮೈತ್ರಿ ಧರ್ಮ ಪಾಲಿಸದೇ ವಚನ ಭ್ರಷ್ಟವಾದ ಜೆಡಿಎಸ್
August 27, 2021ಮೈಸೂರು,ಆ.೨೬(ಪಿಎಂ)-ಕಾAಗ್ರೆಸ್ ಹಿಡಿದಿರುವ ಹಾಲಿ ಉಪ ಮೇಯರ್ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ನಿಮಗೇ ಬಿಟ್ಟು ಕೊಡುತ್ತೇವೆ ಎಂದರೂ ಜೆಡಿಎಸ್‌ನವರು ಒಳ ಒಪ್ಪಂದ ಮಾಡಿಕೊಂಡು ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಮೇಯರ್ ಸ್ಥಾನ ಅಲಂಕರಿಸಲು ಅವಕಾಶ ಕಲ್ಪಿಸಿದ್ದಾರೆ. ಆ ಮೂಲಕ ಮೈತ್ರಿ ಒಪ್ಪಂದ ಪಾಲಿಸದೇ ಜೆಡಿಎಸ್ ವಚನ ಭ್ರಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂ ಡರು ವಾಗ್ದಾಳಿ ನಡೆಸಿದರು. ಮೈಸೂರು ಕಾಂಗ್ರೆಸ್ ಭವನದಲ್ಲಿ ಗುರು ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಮತ್ತು ಪಾಲಿಕೆ ಸದಸ್ಯ ಅಯೂಬ್ ಖಾನ್,…
ಸಾಧಕರಿಗೆ ಶ್ರೀ ಶಂಕರಾಚಾರ್ಯ ಸೇವಾ ರತ್ನ ಪ್ರಶಸ್ತಿ
August 27, 2021ಮೈಸೂರು,ಆ.೨೬(ಆರ್‌ಕೆಬಿ)-ಶ್ರೀ ಶಂಕರ ಜಯಂತಿ ಅಂಗವಾಗಿ ಕರ್ನಾಟಕ ಸೇನಾ ಪಡೆ ಜಿಲ್ಲಾ ಘಟಕದ ವತಿಯಿಂದ ಮೈಸೂ ರಿನ ಶಂಕರ ಮಠದಲ್ಲಿ ತತ್ವಜ್ಞಾನಿಗಳ ದಿನವನ್ನು ಆಚರಿಸಲಾಯಿತು. ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಂಕರಾಚಾರ್ಯರು ಮೇಧಾವಿ, ತತ್ವಶಾಸ್ತç, ಹಿಂದೂ ಧರ್ಮ ಪುನರುತ್ಥಾನ ಮಾಡಿದವರು. ಅವನತಿಯತ್ತ ಸಾಗಿದ್ದ ಹಿಂದೂ ಧರ್ಮವನ್ನು ಸಂರಕ್ಷಿಸಿದವರು. ದೇಶ ಪರ್ಯಟನೆ ಮೂಲಕ ಹಿಂದೂ ಧರ್ಮ ಪ್ರಚಾರ ಮಾಡಿದವರು ಎಂದರು. ಈ ಮಹಾತ್ಮರ ದಿನಾಚರಣೆಯನ್ನು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದಿರುವವರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ…
ಚಾ.ಬೆಟ್ಟ ತಪ್ಪಲಲ್ಲಿ ಪುಂಡರ ಹಾವಳಿ: ಸಾರ್ವಜನಿಕರ ಬೇಸರ
August 27, 2021ಮೈಸೂರು, ಆ.೨೬(ಎಂಕೆ)- ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಧಾರ್ಮಿಕ ತಾಣ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಪುಂಡರ ಹಾವಳಿ ದಿನೇದಿನೆ ಹೆಚ್ಚಾಗುತ್ತಿದ್ದು, ಭಕ್ತರು, ವಾಯುವಿಹಾರಿಗಳಲ್ಲಿ ಆತಂಕ ಹೆಚ್ಚಿಸಿದೆ. ಸ್ವಚ್ಛ ಮತ್ತು ಸಂಸ್ಕೃತಿಯಲ್ಲಿ ವಿಶ್ವದ ಗಮನ ಸೆಳೆದಿರುವ ಮೈಸೂರಿನಲ್ಲಿ ಭಯದ ವಾತಾ ವರಣ ನಿರ್ಮಾಣವಾಗುತ್ತಿದೆ. ನಗರದ ಸುಪ್ರಸಿದ್ಧ ಯಾತ್ರಾ ಸ್ಥಳ ಎಂದೆಲ್ಲಾ ಕರೆ ಯುವ ಚಾಮುಂಡಿಬೆಟ್ಟದ ತಪ್ಪಲು ಪ್ರದೇಶ ದಲ್ಲಿ ಭಯ-ಆತಂಕ ಹೆಚ್ಚಾಗುತ್ತಿದ್ದು, ಪೊಲೀ ಸರ ಏನು ಮಾಡುತ್ತಿದ್ದಾರೆ ಎಂದು ಮೈಸೂ ರಿನ ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ-ಸಂಜೆಯ ವೇಳೆ…
ಕೇಂದ್ರದ ಎನ್‍ಎಂಪಿ ಗುಲಾಮಗಿರಿ ವ್ಯವಸ್ಥೆಗೆ ಮುನ್ನುಡಿ
August 26, 2021ಮೈಸೂರು,ಆ.25(ಪಿಎಂ)-ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 6 ಲಕ್ಷ ಕೋಟಿ ರೂ. ಮೊತ್ತದ ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ (ಎನ್‍ಎಂಪಿ) ಮೂಲಕ ಖಾಸಗಿ ಯವರಿಗೆ ದೇಶ ಮಾರಲು ಮುಂದಾಗಿದ್ದು, ಆ ಮೂಲಕ ದೇಶದಲ್ಲಿ ಗುಲಾಮಗಿರಿ ವ್ಯವಸ್ಥೆ ಜಾರಿಗೆ ಮುನ್ನುಡಿ ಬರೆದಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಟೀಕಾಪ್ರಹಾರ ನಡೆಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಮೂಲಸೌಕರ್ಯ ಯೋಜನೆಗೆ ಅನುದಾನ ಒದಗಿಸುವ ನೆಪದಲ್ಲಿ ಕೇಂದ್ರ ಸರ್ಕಾರ ದೇಶದ ಸಾರ್ವಜನಿಕ…
ಮುಂದುವರೆದ `ಎನ್‍ಟಿಎಂ ಶಾಲೆ ಉಳಿಸಿ’ ಹೋರಾಟಕ್ಕೆ ಎಐಡಿಎಸ್‍ಓ ಸಂಘಟನೆ ಬೆಂಬಲ
August 26, 2021ಮೈಸೂರು,ಆ.25(ಪಿಎಂ)- ಮೈಸೂ ರಿನ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಮಹಾರಾಣಿಯವರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಎನ್‍ಟಿಎಂಎಸ್) ಉಳಿಸಿಕೊಂಡೇ, ವಿವೇಕ ಸ್ಮಾರಕ ನಿರ್ಮಿಸಬಹುದೆಂಬ ಜಿಲ್ಲಾಡಳಿತದ ವರದಿಯಂತೆ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಶಾಲೆ ಎದುರು ಜಮಾಯಿಸಿದ ಪ್ರತಿ ಭಟನಾಕಾರರು, ಈ ಹಿಂದೆ ಜಿಲ್ಲಾಧಿಕಾರಿ ಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿ ಶೀಲಿಸಿ ಶಾಲಾ ಜಾಗವನ್ನು ಹೊರತು ಪಡಿಸಿ, ಉಳಿದ ಜಾಗದಲ್ಲಿ ಸ್ಮಾರಕ ನಿರ್ಮಿಸಬಹುದೆಂದು ವರದಿ ನೀಡಿದ್ದಾರೆ. ಅದರಂತೆಯೇ…
ಕಡಕೊಳದಲ್ಲಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪನೆಗೆ ಮನವಿ
August 26, 2021ಮೈಸೂರು, ಆ.25 (ಪಿಎಂ)- ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕಡಕೊಳ ಗ್ರಾಮದಲ್ಲಿ ಕೆಪಿಟಿಸಿಎಲ್‍ನಿಂದ 400/220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಸ್ಥಾಪಿಸುವಂತೆ, ಖಾಸಗಿ ಬಡಾವಣೆ, ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿ ಬೀದಿ ದೀಪಗಳ ವಿದ್ಯುತ್ ಶುಲ್ಕ ಪಾವತಿಗೆ 6 ತಿಂಗಳು ಕಾಲಾವಕಾಶ ಕೋರಿ ಹಾಗೂ ಕಡಕೊಳ ಪಪಂಗೆ ಹೊಸ ಕಚೇರಿ ನಿರ್ಮಾಣಕ್ಕೆ ಕೆಪಿಟಿಸಿಎಲ್ ಸ್ವಾಧೀನದಲ್ಲಿ ರುವ ನಿವೇಶನ ಒದಗಿಸುವಂತೆ ಕೋರಿ ಇಂಧನ ಸಚಿವ ಸುನೀಲ್ ಕುಮಾರ್ ಅವರಿಗೆ ಶಾಸಕ ಜಿ.ಟಿ.ದೇವೇಗೌಡ ಬುಧವಾರ ಪ್ರತ್ಯೇಕ ಮನವಿ ಸಲ್ಲಿಸಿದರು. ಮೈಸೂರಿನ…
ಗೃಹ ನಿರ್ಮಾಣ ಕಾಯ್ದೆಗೆ ತಿದ್ದುಪಡಿ ಅಗತ್ಯವಿದ್ದರೆ ಪ್ರಸ್ತಾವನೆ ಸಲ್ಲಿಸಿ: ಉಸ್ತುವಾರಿ ಸಚಿವ ಎಸ್‍ಟಿಎಸ್
August 26, 2021ಮೈಸೂರು, ಆ.25(ಎಂಕೆ)- ಗೃಹ ನಿರ್ಮಾಣಕ್ಕೆ ಸಂಬಂಧಪಟ್ಟ ಕಾನೂನು ಗಳಲ್ಲಿ ತಿದ್ದುಪಡಿಯ ಅಗತ್ಯವಿದ್ದರೆ ಸೂಕ್ತ ಪ್ರಸ್ತಾವನೆ ಸಲ್ಲಿಸಿ. ಗೃಹ ನಿರ್ಮಾಣ ಸಹ ಕಾರ ಸಂಘಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಭರವಸೆ ನೀಡಿದರು. ಮೈಸೂರಿನ ಬನ್ನೂರು ಮುಖ್ಯ ರಸ್ತೆ ಯಲ್ಲಿರುವ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಭಾಂಗಣದಲ್ಲಿ ಬುಧವಾರ ನಡೆದ ಮೈಸೂರು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘಗಳ ಸಭೆ ನಡೆಸಿದ ಅವರು, ಒಂದೆರಡು ಗೃಹ ನಿರ್ಮಾಣ ಸಂಘಗಳು…
15 ತಿಂಗಳಲ್ಲಿ 10 ಲಕ್ಷ `ಸ್ವಂತ ಸೂರು’ ನಿರ್ಮಾಣ: ಸಚಿವ ಸೋಮಣ್ಣ
August 26, 2021ಮೈಸೂರು, ಆ.25(ವೈಡಿಎಸ್)- ಪ್ರತಿ ಯೊಬ್ಬರಿಗೂ ಸ್ವಂತ ಸೂರು ಒದಗಿಸ ಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ರಾಜ್ಯದಲ್ಲಿ 2 ವರ್ಷಗಳಿಂದ 3 ಲಕ್ಷಕ್ಕೂ ಹೆಚ್ಚಿನ ಮನೆ ಗಳನ್ನು ನಿರ್ಮಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಬುಧವಾರ ಸಂಜೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಇನ್ನು 15-16 ತಿಂಗಳಲ್ಲಿ ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮನೆ ನಿರ್ಮಿಸಲು…










